Sunday, February 24, 2008

ಈ ಹುಡುಗರೇಕೆ ಹೀಗೆ

ಇದು ಎಲ್ಲಾ ಕಡೆಗೂ ಸರ್ವ ಕಾಲಕ್ಕೂ ಸಲ್ಲಬೇಕಾದ ಪ್ರಶ್ನೆ
ನಮ್ಮ ಸಂಸ್ಥೆಯಲ್ಲಿ ಕಲಿಯುವದಕ್ಕೆಂದು ಸುಮಾರು ಹುಡುಗರು ಹುಡುಗಿಯರು ಬರುತ್ತಾರೆ. ಅವರಲ್ಲಿ ಒಬ್ಬ ಹುಡುಗ ಮಾತ್ರ ಸುಮಾರು 23 ವರ್ಷದವನಿರಬಹುದು . ಮಾತಿನಲ್ಲಿ ಬಹಳ ಚುರುಕು . ಮಂಡ್ಯನವನಿರಬೇಕು. ಬಹಳ ಜೋರು ಮಾತಿನವನು. ಓದಿನಲ್ಲಿ ಮಾತ್ರ ಬಹಳ ಹಿಂದೆ . ಯಾವುದೋ ಕಂಪನಿಯಲ್ಲಿ ದಿನಗೂಲಿ ನೌಕರ ಆದರೂ ಅವನ ಅಕ್ಕರೆಯ ಮಾತಿಗೆ ನಾವೆಲ್ಲ ಸ್ಪಂದಿಸುತಿದ್ದೆವು . ನಮ್ಮೆಲ್ಲರನ್ನೂ ಮಾತಿನಲ್ಲೇ ನಗಿಸುತಿದ್ದನುಅಂತಹವನು 3 ತಿಂಗಳಿಂದ ಯಾಕೊ ಸರಿ ಇರಲಿಲ್ಲ ಮಾತು ಕಡಿಮೆಯಾಗಿತ್ತು . ಕ್ಲಾಸ್‍ಗೂ ಸರಿಯಾಗಿ ಬರುತ್ತಿರಲಿಲ್ಲ. ನಾನು ನನ್ನ ಕೆಲಸಗಳ ಮಧ್ಯ ಇದಕ್ಕೆ ತಲೆ ಕೆಡಿಸಿಕೊಳ್ಳಲಿಲ್ಲ .ಒಮ್ಮೆ ಆತ ಸೀದ ನನ್ನ ಮನೆಗೆ ಬಂದ."ಮೇಡಮ್ ನಾನೊಂದು ವಿಷಯ ಹೇಳಬೇಕು . ""ಏನಪ್ಪ ಪರ್ಸನಲ್ ಅಥವ ಅಫ್ಫಿಶಿಯಲ್"" ಪರ್ಸನಲ್ ಮೇಡಮ್ " ಎಂದ ಎಲ್ಲೊ ಏನೊ ಎಡವಟ್ಟಾಗಿದೆ ಅನಿಸಿತು."ಏನು ಏನಾದ್ರೂ ಲವ್ ಗಿವ್ " ಎಂದು ಕೇಳಿದೆ." ಹೌದು ಮೇಡಮ್ , ನಂದೇನು ತಪ್ಪಿಲ್ಲ . ಅವಳೆ ಫಸ್ಟ್ ನಂಜೊತೆ ಚೆನ್ನಾಗಿದ್ದು ಈಗ ನೀನು ನನ್ನ ಬ್ರದರ್ ಥರ್ ಅಂತಾ ಇದಾಳೆ. ನಂಗೆ ಸಾಯೊ ಅಷ್ಟು ಬೇಸರವಾಗಿದೆ"ಅಷ್ಟರಲ್ಲಿ ಇವರೂ ಬಂದರು.ಯಾರಪ್ಪ ಅದು ಎಂದಿದ್ದಕ್ಕೆ ಆತ ಹೆಸರು ಹೇಳಿದನಂಗೆ ಶಾಕ್ಆ ಹುಡುಗಿ ನಮ್ಮ ಸಂಸ್ಥೆಯಲ್ಲಿ ಬಹಳ ಒಳ್ಳೆಯ ನಡುವಳಿಕೆಗೆ ಹೆಸರಾದವಳು. ಮೇಲಾಗಿ ಒಳ್ಳೆಯ ಕಂಪನಿಯೊಂದರಲ್ಲಿ ದೊಡ್ಡಾ ಹುದ್ದೆಯಲ್ಲಿ ಇದ್ದವಳು ಹಾಗೆ ಅಷ್ಟೆ ಒಳ್ಳೆಯ ಸಂಬಳ ಪಡೆಯುತಿದ್ದವಳು.ಅವಳನ್ನು ಅನುಮಾನಿಸಲು ಕಾರಣವೇ ಇರಲಿಲ್ಲಅವನನ್ನು ಸಮಾಧಾನಗೊಳಿಸಿ ಹಾಗು ಹೀಗು ಸಾಗ ಹಾಕಿದೆವು.
ನಂತರ ಅವಳನ್ನು ಕರೆದು ಕೇಳಿದಾಗ ತಿಳಿದಿದ್ದುಆ ಹುಡುಗ ಇಂಗ್ಲೀಶ್ ನಲ್ಲಿ ವೀಕ್ . ಹಾಗಾಗಿ ಇವಳು ಅವನಿಗೆ ಸಹಾಯ ಮಾಡುತಿದ್ದಳಂತೆ. ಅದನ್ನು ತಪ್ಪಾಗಿ ಅರ್ಥ ಮಾಡಿಕೊಂಡ ಅವನು ಹೀಗೆ ಆಡುತಿದ್ದಾನೆ.ಅವನ ಕಾಟ ಅಧಿಕವಾಗತೊಡಗಿತು . ಆಕೆ ಎಲ್ಲಿ ಹೋದರೂ ಹಿಂಬಾಲಿಸುವುದು. ಕ್ಲಾಸ್ನಲ್ಲಿ ತೊಂದರೆ ಕೊಡುವುದು ಅತಿಯಾಗತೊಡಗಿತು.ಹುಚ್ಚನಂತೆ ಆಡತೊಡಗಿದ.ನಂತರ ಅವನನ್ನು ಕೆಲಸದಿಂದ ತೆಗೆದು ಹಾಕಿದರು. ನಾವು ನಮ್ಮ ಸಂಸ್ಥೆಯಿಂದ ಅವನ್ನನ್ನು ಬಿಡಿಸಿದೆವು.ಒಮ್ಮೆ ಆ ಹುಡುಗನ ಅಮ್ಮ ನಮ್ಗೆ ಫೋನ್ ಮಾಡಿದ್ದರು. ಆ ಹುಡುಗನಿಗೆ ತಂದೆ ಇಲ್ಲ ಹಾಗು ಅವನೇ ಮನೆ ಪೂರ್ತಿ ನೋಡಿಕೊಳ್ಳಬೇಕು.ಇಷ್ಟೊಂದು ಜವಾಬ್ದಾರಿಯಿದ್ದ ಹುಡುಗ ಯಾಕೆ ಹೀಗೆ ಮಾಡಿದ ಅನ್ನುವುದು ನಮ್ಗೆ ಅರಿವಾಗಲಿಲ್ಲ.ಅವನು ಊರಿಗೂ ಹೋಗಲಿಲ್ಲವಂತೆ. ನಮ್ಮ ಸುತ್ತ ಮುತ್ತ ಎಲ್ಲ್ಲೂ ಕಾಣಲಿಲ್ಲ
ಒಮ್ಮೆ ಅವನನ್ನ ನಮ್ಮೆಜಮಾನರು ಎಲ್ಲೋ ಮಲ್ಲೇಶ್ವರಂ ನಲ್ಲಿ ನೋಡಿದರಂತೆ ತಿನ್ನಲೂ ಏನೂ ಇರದಂತಹ ಸ್ತಿತಿಯಲ್ಲಿ ಇದ್ದನಂತೆ ಅವನಿಗೆ ಊಟಕ್ಕೆ ಹಾಗು ಊರಿಗೆ ಹೋಗಲು ಹಣ ಕೊಟ್ಟು ಬುದ್ದಿ ಮಾತು ಹೇಳಿ ಬಂದರಂತೆ. ನಂತರ ಏನಾಯಿತೋ ತಿಳಿಯಲ್ಲಿಲ
ಇದು ಆ ಹುಡುಗನೊಬ್ಬನದೆ ವಿಷಯವಲ್ಲ. ಸಾಮಾನ್ಯ ವಾಗಿ ಇಂತಹ ರಿಯಲ್ ಕತೆಗಳು ಎಲ್ಲೆಡೆ ಇರುತ್ತವೆ. ಎಲ್ಲಾ ಕಾಲಕ್ಕೂ ಸಲ್ಲುತ್ತವೆಆದರೆ ನನಗೆ ಒಂದು ವಿಷಯ ಅರಿವಾಗಲಿಲ್ಲ. ಈ ಹುಡುಗರೇಕೆ ಹುಡುಗಿಯರು ಸಹಾಯ ಮಾಡಿದರೆ ತಮ್ಮನ್ನ ಲವ್ ಮಾಡುತಿದ್ದಾರೆ ಎಂದು ತಿಳಿಯುತ್ತಾರೆ.?
ಅವರೂ ಅವರಂತೆ ಮತ್ತೊಬ ಮನುಷ್ಯ ಜೀವಿ ಎಂದೇಕೆ ತಿಳಿಯುವುದಿಲ್ಲ. ಮನುಷ್ಯ ಮನುಶ್ಯನಿಗೆ ಸಹಾಯ ಮಾಡುವುದು ಸಾಮಾನ್ಯ ಅಲ್ಲವೇ ?

2 comments:

  1. Saamanyavagi maneli akka tangi ilde ,beliyo hudgur taleli eetara yochne gal barute..................

    Chenagi blog baritira eege barita iri................

    ReplyDelete
  2. yes some times it happens, namma samaajada todakugale kaarana...aa hudugana tappenilla, saariyaagi marga torisidare...yella artha agutte. time beku...reality gottagoke..

    ReplyDelete

ರವರು ನುಡಿಯುತ್ತಾರೆ