Friday, April 25, 2008

ಸಾಯಬೇಕು ಅನ್ನಿಸಿದ ಆ ಕ್ಶಣ

ಇದು ಏಳು ವರ್ಷದ ಹಿಂದಿನ ಮಾತು ಆಗ ತಾನೆ ಡಿಪ್ಲಮೋ ಮುಗಿಸಿದ್ದೆ. ನನ್ನ ಸಹಪಾಠಿಗಳಿಗಿಂತ ಮುಂಚೆ ಸಾಫ್ಟ್ವೇರ್ ಕಂಪೆನಿಯ ಡಾಟ್ ಕಾಂ ಶಾಖೆಯಲ್ಲಿ ಸಿಕ್ಕಿತು. 2000 ದಲ್ಲಿ ನನ್ನ ಅದೃಷ್ಟವೋ ಏನೊ ಐದಂಕಿಯ ಸಂಬಳ ಅದೂ ಬರೀ ಡಿಪ್ಲೊಮಾಗೆ . ಹದಿ ವಯಸು ನನ್ನ ಅಹಂ ಮೇರೆ ಮೀರಿತ್ತು. ಅದೃಷ್ಟ, ವಿಧಿ, ದೇವರಿಗಿಂತ ನನ್ನ ಸ್ವಯಂ ಶಕ್ತಿಯ ಮೇಲೆ ಅತಿಯಾದ ಆತ್ಮ ವಿಶ್ವಾಸ. ಹೀಗೆ ಸಾಗಿತ್ತು ಬದುಕು. ಸಾಫ್ಟ್ವೇರ್ ಉದ್ಯೋಗ ಅಂದ ಮೇಲ್ ಅದಕ್ಕೆ ತಕ್ಕ ಹಾಗೆ ಮನೆ ಬದಲಾಯಿಸಿದ್ದೆ. ಅಮ್ಮನ್ನ ಟ್ಯೂಶನ್ ಮಾಡಬೇಡ ಇಲ್ಲಿಯವರೆಗೆ ಪಟ್ಟ ಕಷ್ಟಾ ಸಾಕು ಅಂಟ ಹೇಳಿ ನಿಲ್ಲಿಸಿದ್ದೆ.ಕೆಲಸ ಸಿಕ್ಕಿ 8 ತಿಂಗಳ ಮೇಲೆ ಅಕ್ಕನಿಗ್ಗೊಂದು ಗಂಡೂ ಸಿಕ್ಕಿ ಅವಳ ಮದುವೆಗೆ ದುಡ್ಡು ಹೊಂಚುವ ಜವಾಬ್ದಾರಿ . ಮದುವೆ 2001 ಆಗಸ್ಟ ಅಂತ ನಿಷ್ಕ್ಲರ್ಶೆ ಯಾಯಿತು. ಜೋರಾಗೇ ನಡೆಯುತ್ತಿತು ನನ್ನ ದರ್ಬಾರು.
ಜನವರಿ 2001ಅದ್ಯಾರ ಕಣ್ಣು ಬಿತ್ತೋ . ನಮ್ಮ ಕಂಪೆನಿಯೂ (ಅದೀಗ ಕಾಲ್ ಸೆಂಟರ್ ಬಿಪಿಒ ಅಗಿ ಬದಲಾಗಿದೆ) ರೆಸೆಶನ್ ಪಿರಿಯಡ್ಗೆ ಈಡಾಯಿತು. ಹಾಗಾಗಿ ಸುಮಾರು ೪ ಬ್ಯಾಚ್ ನ ಜನರನ್ನು ಲೇ ಆಫ್ ಮಾಡುತ್ತಾರೆ ಎಂಬ ಮಾಹಿತಿ ಸಿಕ್ಕಿತು . ಹೆಚ್ಚು ಪ್ರಾಜೆಕ್ಟ್ ಸಿಗುತ್ತೆ ಎಂದು ಜಾಸ್ತಿ ಜನರನ್ನು ತೆಗೆದುಕೊಂಡ ಪರಿಣಾಮ ಕಂಪೆನಿಗೆ ಅಲ್ಲಿಂದ ಪ್ರಾಜೆಕ್ಟ್ ಕಡಿಮೆಯಾದಾಗ ನಾವೆಲ್ಲ ಹೊರೆ ಎನಿಸಿದೆವು.ಆ ಬ್ಯಾಚ್ ನಲ್ಲಿ ನನ್ನ್ ಬ್ಯಾಚ್ ಒಂದು . ಆದರೂ ನನಗೆ ನನ್ನ ಸಾಮರ್ಥ್ಯದ ಮೇಲೆ ಅತಿಯಾದ ನಂಬಿಕೆ . ಹಾಗಾಗಿ ನಾನು ಆ ಲಿಸ್ಟನಲ್ಲಿ ಸೇರುವುದಿಲ್ಲ ಎಂಬುದೇ ನನ್ನ ನಂಬಿಕೆ ಯಾಗಿತ್ತು. ಕೊನೆ ಕ್ಷಣ್ದದವರೆಗೂ ನನಗೆ ಮೈಲ್ ಬರುವವರೆಗೂ . " you are requested to attend a meeting at the down stair assemble hall " ಅಂತ .
ಮನೆಯ ಸ್ಠಿತಿ , ಸಾಲ , ಕೆಲಸ ಹುಡುಕುವ ಕಷ್ಟ, ಅಕ್ಕನ ಮದುವೆ ಗೆ ಇನೂ ೮ ತಿಂಗಳು. ದುಡ್ಡು ಹೊಂಚುವ ಬಗೆ ನೆನೆಸಿಕೊಂದರೆ ಕಣ್ಣು ಕತ್ತಲೆಯಾಗುತಿತ್ತು. ಹಾಗೂ ಹೀಗೂ ಮೀಟೀಂಗ್ಗೆ ಹೋದೆ. ಒಂದಷ್ಟು ಜನ ಮ್ಯಾನೇಜಮೆಂಟ್ನ ಜೊತೆ ಜಗಳ ವಾಡುತ್ತ್ತಿದ್ದರು. ಏನೋ ಮಾತು ಕತೆ. ಕೊನೆಗೆ ಏನೋ ಉಪಕಾರ ಮಾಡುವಂತೆ ಎರೆಡು ತಿಂಗಳ ಸಂಬಳವನ್ನು ಪರಿಹಾರವಾಗಿ ಕೊಡುವ ಮತು ನಡೆಯುತ್ತಿತು.ಮಾತು ಮುಗಿಯುತ್ತಿದ್ದಂತೆ ನಾನು ಅಲ್ಲಿಂದ ಸೀದ ೫ ನೇ ಅಂತಸ್ತಿಗೆ ಬಂದೆ. ಹ್ಯಾಗೆ ಮುಂದೆ ಏನು ಮಾಡಬೇಕು ಎಂದು ತೋಚಲಿಲ್ಲ. ಅಕ್ಕನ ಮದುವೆಗೆ ಸಾಲ ಈಗ ಯಾರು ಕೊಡುತ್ತಾರೆ . ಅಮ್ಮನಿಗೆ ಹೇಗೆ ಮುಖ ತೋರಿಸುವುದು. ಬರೀ ಪ್ರಶ್ನೆಗಳೆ ಕಣ್ಣ ಮುಂದೆ . ಮೊದಲ ಬಾರಿ ನನ್ನ ಸಾಮರ್ಥ್ಯದ ಮೇಲೆ ನಂಬಿಕೆ ಹೊರಟು ಹೋಗಿತ್ತು. ನಾನು ಅಪ್ರಯೋಜಕಳು . ಹಾಗಿಲ್ಲದಿದ್ದಲ್ಲಿ ನನ್ನನ್ನು ಕೆಲಸದಲ್ಲಿ ಮುಂದುವರೆಸುತಿದ್ದರುನನ್ನಂಥವಳು ಭೂಮಿಯ ಮೇಲೆ ಯಾಕಿರಬೇಕು ಎಂಬ ಅನಿಸಿಕೆ ಬಂದ ಕೂಡಲೆ ನನಗೆ ಹೊಳೆದಿದ್ದು ಇಲ್ಲಿಂದ ಜಿಗಿದು ಪ್ರಾಣ ಬಿಡುವ ಯೋಚನೆ.ಅದನ್ನು ಕಾರ್ಯರೂಪಕ್ಕೆ ಇಳಿಸಲು ಕಟ್ಟೆಯ ಹತ್ತಿರ ಬಂದೆ ಸುತ್ತ ಯಾರೂ ಇರಲಿಲ್ಲ . ಸಾವಿನ ಭಯ ಆ ಕ್ಷಣ ಕಾಡಲೇ ಇಲ್ಲ. ಇನ್ನೆನು ಜಿಗಿಯಬೇಕು ಎಂದು ಗಟ್ಟ್ ಮನಸ್ಸು ಮಾಡಿಕೊಂಡೆ ಎನ್ನುವಾಗ .................ಹೆಗಲ ಮೇಲೆ ಕೈ ಒಂದು ಬಿತ್ತು . ಅದು ನನ್ನ ಸಹೋದ್ಯೋಗಿ ಅನೂ ಳದ್ದು."hey roopa what ru doing here. . come let us go down" ಎಂದಳು" ನೊ ಅನು ನಂಗೆ ಬದುಕಿರೋಕೆ ಇಷ್ಟ ಇಲ್ಲ . ಇವರು ಇದ್ದಕಿದ್ದಂತೆ ಹೀಗೆ ಮಾಡಿದರೆ ಹ್ಯಾಗೆ. ಒಂದೆ ಸಲ ಅಕಾಶಕ್ಕೇರಿಸಿ ಅಲ್ಲಿಂದ ಕೆಳಗೆ ತಳ್ಲಿಬಿಬಟ್ಟರಲ್ಲ ಪಾತಾಳಕ್ಕೆ" ಎಂದೆ"ಏ ರೂಪ ನಿಂಗೆ ಹುಚ್ಚು ಹಿಡಿದಿದೆಯಾ . ನಾನು ಒಂದು ಮಾತು ಕೇಳ್ತೀನಿ ಅದಕ್ಕೆ ಉತ್ತರ ಹೇಳಿ ನೀನು ಸಾಯಿ ಅಥವ ಬದುಕು ನಿನ್ನಿಷ್ಟ "ಎಂದಳು" ನೀನು ಅಮ್ಮನ ಹೊಟ್ಟೇಲಿ ಇದ್ದಾಗ ನಿಂಗೆ ಗೊತ್ತಿತ್ತ *** ಕಂಪೆನಿ ಇದೆ ಅಂತ? ನೀನು ಇದನ್ನೆ ನಂಬಿಕೊಂಡು ಹುಟ್ಟಿದ್ಯಾ? ಕಷ್ಟ ಎಲ್ಲರಿಗೂ ಇದ್ದದ್ದೇ .ಆದರೆ ಅದಕ್ಕೆ ಈ ರೀತಿಯ ಕೊನೆ ಬೇಕಾಗಿಲ್ಲ . ನನ್ನನ್ನೇ ನೋಡು ೩೦ ವರ್ಷ ಆಯ್ತು ಮದುವೆ ಇಲ್ಲ ಬಂದೋರೆಲ್ಲಾ ನಾನು ಚೆನಾಗಿಲ್ಲ ಅಂತ ಹೇಳಿ ದೂರ ಹೋಗ್ತಿದ್ದಾರೆ. ಹಾಗಂತ ನಾನು ಸಾಯೋದಿಲ್ಲ ಅಲ್ಲವಾ? ನಿಂಗೆ ಇನೂ ಚಿಕ್ಕ ವಯಸ್ಸು ನಿಮ್ಮ ಅಮ್ಮ ನಿನ್ನ ಮೇಲೆ ಏನೇನೂ ಆಸೆ ಇಟಿದ್ದಾರೆ ಅವ್ರೆಲ್ಲಾ ಏನು ಮಾಡಬೇಕು ಹೇಳು ?
ಅಷ್ಟು ಹೊತ್ತಿಗೆ ನನ್ನ ಆವೇಶ ಕುಗ್ಗಿತು ಏನಾದರೂ ಆಗಲಿ ಎಂದು ಕೆಳಗೆ ಬಂದೆ. ಅವಳ ಆ ಹೊತ್ತಿಗೆ ಬರದಿದ್ದರೆ ಇದನ್ನು ಹೇಳಲು ನಾನು ಬದುಕಿಯೇ ಇರುತ್ತಿರಲಿಲ್ಲ. ಅವಳು ಈಗ ಹೇಗಿದ್ದಾಳೋ ಎಲ್ಲಿದ್ದಾಳೋ ಗೊತ್ತಿಲ್ಲ .ಆದರೆ ಅವಳನ್ನಂತೂ ಮರೆಯಲಾಗುವುದಿಲ್ಲಹಾಗೂ ಹೀಗೂ ನಮ್ಮಕ್ಕನ ಮದುವೆಗೂ ಸುಸ್ಸೊತ್ರವಾಗಿ ನಡೆಯಿತು ಅದೇ ಆಗಸ್ಟನಲ್ಲಿ .
ಆದರೆ ಅಲ್ಲಿಂದ ಹೊರಗೆ ಬಂದ ಮೇಲೆ ನಾನನುಭವಿಸಿದ ಕಷ್ಟ ವಿದೆಯಲ್ಲ ಅದೇ ಇನ್ನೊಂದು ಕತೆ. ಅದನ್ನು ಇನ್ನೊಮ್ಮೆ ಬರೆಯುತ್ತೇನೆ
ನೆನ್ನೆ ಡೈರಿ ತೆಗೆದು ಓದಿದಾಗ ನಾನು ಅಟೆಂಡ್ ಮಾಡಿದ ಇಂಟರ್ ವ್ಯೂ ಗಳು ಅವಗಳ ಅಡ್ರೆಸ್ ನೋಡಿದಾಗ ಎಲ್ಲಾ ನೆನಪಾಯಿತು.

3 comments:

  1. namaste,
    jeevana ennuvudu : belaka needuva putta hanatheyanthe: hanathe uridu belaka needabeeku aadare
    aari katthalu maadabaaradu" "rasave janana
    virasave marana"

    dhanyavaadagalu inthi nimma
    ravikumar.a

    ReplyDelete
  2. ರೂಪಾ,

    ಎಷ್ಟು ಚೆನ್ನಾಗಿ ಬರೆದಿದ್ದೀರೀ. ಇದಕ್ಕು ಮುಂಚಿನ ಬರಹಗಳನ್ನು ಓದಿದೆ. ಸುಳ್ಯಾಕೆ ಹೇಳಲಿ, ಅವು ಸಾಧಾರಣ ಅನ್ನಿಸಿದವು. ಆದರೆ ’ಸಾಯಬೇಕು ಅನ್ನಿಸಿದ ಆ ಕ್ಷಣ’ ಬರಹದ ತುಂಬ ನೀವೇ ಇದ್ದೀರಿ.

    ನಮಗೆ ಗೊತ್ತಿರುವುದು, ನಮ್ಮ ಅನುಭವ ಹೊಕ್ಕಿರುವುದು ಎಷ್ಟು ಚೆನ್ನಾಗಿ ಹೊರಬರುತ್ತದೆ ನೋಡಿದಿರಾ? ಇದನ್ನೇ ಕೊಂಚ ಕಾಳಜಿಯಿಂದ, ವೃತ್ತಿಪರತೆಯಿಂದ ಮಾಡಿದರೆ ಆ ಬರಹದಲ್ಲಿ ಸೊಗಸು ತಾನೇ ತಾನಾಗಿರುತ್ತದೆ.

    ನೋವಿನ ಕ್ಷಣದಲ್ಲಿ ಜೊತೆ ನಿಂತವರ ನೆನಪು ಎಂದಾದರೂ ಮಾಸೀತೆ? ಎಲ್ಲರಿಗೂ ಕೊಂಚ ನೆಮ್ಮದಿ, ಭರವಸೆ ಹಂಚುವಂತಾದರೆ, ಅದಕ್ಕಿಂತ ಖುಷಿ ಏನಿದೆ?

    ಮನ ಸೆಳೆಯುವ ಬರಹ. ಹೀಗೇ ಬರೆಯುತ್ತಿರಿ, ಆಕರ್ಷಕವಾಗಿ, ಆಸಕ್ತಿಕರವಾಗಿ.

    - ಪಲ್ಲವಿ ಎಸ್‌.

    ReplyDelete
  3. Nimma ’ಸಾಯಬೇಕು ಅನ್ನಿಸಿದ ಆ ಕ್ಷಣ’ nodidaga nanna jeevanada dinagalu nenapaythu.Nijavaglu nimma jeevanadalli nimage anisida adu pratiyobba manushyanigu ondalla ondu dina anisatteeno alva......Nimage dairya needalu a nimma ಸಹೋದ್ಯೋಗಿ bandante atmahatya madikolluvavara lifenallu bandidre yasto jeevagalu ulita ettu.Nimma ಸಹೋದ್ಯೋಗಿ avarige tumba thanks...

    ReplyDelete

ರವರು ನುಡಿಯುತ್ತಾರೆ