Friday, April 3, 2009

ಹೀಗೊಬ್ಬ ಸ್ಯಾಡಿಸ್ಟ್ ಪ್ರೇಮಿಗೆ

ಲೋ
ಯಾಕೋ ಮತ್ತೆ ಬಂದೆ ಜೀವನದಲ್ಲಿ. ಕಾಲೇಜಿನ ದಿನಗಳು ಒಂಬು ಗೋಲ್ಡನ್ ಎರಾ ಇದ್ದ ಹಾಗೆ ಅವು ಮತ್ತೆ ಬರಬಾರದು . ಬಂದರೆ ಜೀವನ ಹಳೇ ಕಬ್ಬಿಣಕ್ಕೆ ಹಾಕೋಕೂ ಲಾಯಕ್ಕಿರಲ್ಲ ಕಣೋ ಹಂಗಾಗಿ ಬಿಡುತ್ತೆ.
ಈ ಲಡಕಾಸಿ ಕೆಲಸದ ಸಮಯದಲ್ಲೂ ಒಂದೂದ್ಸಲ ನೀನು ನನ್ನಕಾಲೇಜ್ ಎಲ್ಲಾ ನೆನಪಾಗುತ್ತೆ ಕಣೋ ಆದ್ರೇನು ಮಾಡೋದು ಜೀವನಾನೆ ಹಂಗೆ . ಕೆಲವೊಂದು ನೆನಪಾದ್ರೂ ಮರೀಲೇಬೇಕಾಗುತ್ತೆ. ಮರೆವೇ ಕೆಲವು ಬಾರಿ ಅನಾಹುತಾನ ತಪ್ಪಿಸುತ್ತೆ
ಆದರೂ ಈಗ ನೆನಪು ಮಾಡ್ಕೋಳ್ತೀನಿ ನಂಗಾಗಿ
ಕಾಲೇಜ್ ಡೇಸ್‌ನಲ್ಲಿ ನೀನು ನಂಗೆ ಪ್ರಪೋಸ್ ಮಾಡಿದ್ದು. ಪ್ರಪೋಸ್ ನಂಗೆ ಇಷ್ಟ ಆಗಿ ಒಪ್ಪಿದ್ದು . ಮೊದಲ ಭೇಟಿ, ನಂತರ ಮೊದಲ ಸಿನಿಮಾ ಆ ಕತ್ತಲ್ಲಲ್ಲಿ ಮೊದಲ ಚುಂಬನ ಜಾಮೂನು ಸಹಾ ಹಿಂಗಿರುತ್ತೋ ಇಲ್ವೋ ಅಂದೆಯಲ್ಲ, ನಾಚಿ ನೀರಾಗಿ ಎದ್ದು ಬಂದಿದ್ದೆ ನಾನು. ಸೆಂಟ್ರಲ್ ಕಾಲೇಜಿನ ಬಳಿಯಲ್ಲಿ ಸಾಯಂಕಾಲದ ಹನಿ ಹನಿ ಮಳೆಯಲ್ಲಿ ಕೈ ಕೈ ಸೇರಿಸಿಕೊಂಡು ಒತ್ತಿಕೊಂಡು ನಡೆಯುತ್ತಿದ್ದಾಗ ಇದೇ ಏನೋ ಪ್ರಪಂಚ ಅಂತನ್ನಿಸಿ ಸ್ವರ್ಗಾನೆ ಧರೆಗಿಳೀತು ಅನ್ಕೊಂಡೆ ಕಣೋ.
ಹಿಂಗೆ ಪ್ರೇಮ ಪರಾಕಾಷ್ಟೆ ಮುಟ್ಟಿತು ಅನ್ಕೊಂಡಾಗ್ಲೇ ಬಂತು ನೋಡು ಎಕ್ಸಾಮ್ ಭೂತ
ಪ್ರೇಮದ ಎಲ್ಲಾ ನಶೇನೂ ಒಂದೇ ಸಲ ಆಚೆ ದೂಡಿಬಿಡ್ತು
ಎಲ್ಲರ ದೃಷ್ಟೀಲೂ ಜಾಣ ಹುಡುಗಿಯಾಗಿದ್ದ ನಾನು ಪರೀಕ್ಷೇಲಿ ಏನೂ ಬರೀದೆ ಇದ್ದಾಗ ಇಷ್ಟೆಲ್ಲಾ ಆಗಿದ್ದು ನಿನ್ನ ಪ್ರೀತಿ ಇಂದಾನೆ ಅನ್ನಿಸ್ತು. ನಿನ್ನ ದೂರಮಾಡಲಾರಂಭಿಸಿದೆ
ನಿಜ ಕಣೋ ನಾನುಮಾಡಿದ್ದು ತಪ್ಪು
ನಾನು ಬರೀ ಪ್ರೇಮಾನ ಬೇಕೆಂದಾಗ ಬೇಕು ಬೇಡ ಎಂದಾಗ ಬೇಡ ಅನ್ಕೊಂಡೋಳು
ಆದ್ರೆ ನೀನು ಪ್ರೇಮಾನೆ ಉಸಿರು, ಪ್ರೀತಿನೆ ಬದುಕು ಅನ್ಕೊಂಡಿದ್ದು ಗೊತ್ತೇ ಆಗಲಿಲ್ಲ
ನೀನು ವಿಷ ಕುಡಿದೆ ಅಂದಾಗಲೂ ನಂಗೆ ನಿನ್ನ ಮೇಲೆ ಜಿಗುಪ್ಸೆ ಅಸಹ್ಯ ಆಯ್ತು ಹೊರತು ಆ ಪ್ರೀತಿ ಮತ್ತೆ ಚಿಗುರಲಿಲ್ಲ.
ನೀನು ದೇವದಾಸ್ ಅದೆ. ಕುಡಿಯಲಾರಂಭಿಸಿದೆ.
ನಿನ್ನ ಪ್ರೀತಿ ದ್ವೇಷವಾಗಿ ಬದಲಾಯ್ತೇನೊ . ಸುಮ್ಮನೆ ಚಿಂದಿ ಚಿಂದಿ ಕಾಗದಗಳನ್ನು ಮನೆಗೆ ಪೋಸ್ಟ್ ಮಾಡಿದೆ . ನಾನುಕೇರ್ ಮಾಡಲಿಲ್ಲ.
ನಮ್ಮ ಮನೆಯವರು ನಿಂಗೆ ಪ್ರಾಣ ಬೆದರಿಕೆ ಹಾಕಿದ್ರು ಅಂತಾನೂ ಗೊತ್ತಾಯ್ತು
ನಂಗೆ ಮನಸು ಕರಗಲಿಲ್ಲ
ಅದಾಗಿ ವರ್ಷಗಳೇ ಕಳೆಯಿತೇನೋ
ಈಗ ಎಲ್ಲಾ ಆದಮೇಲೆ ಓದು ಮುಗೀತು ಒಂದ್ಕಡೆ ಕೆಲಸ ಮಾಡಿಕೊಂಡು ಹಾಯಾಗಿರೋಣ ಅನ್ಕೊಂಡ್ರೆ ನೀನು ಮತ್ತೆ ವಕ್ಕರಿಸಿದೆಯಲ್ಲ.
ಬೇಡ ಕಣೋ ಸುಮ್ನೆ ಅನ್ಯಾಯವಾಗಿ ಸಾಯ್ತೀಯ ನಾನು ಮದುವೆಯಾಗಲಿರೋ ಹುಡುಗ ಪೋಲಿಸ್ ಡಿಪಾರ್ಟ್ಮೆಂಟ್ನಲ್ಲಿ ಇರೋನು ಖಂಡಿತಾ ಸಾಯ್ತೀಯ.
ಈ ಪ್ರೇಮಪ್ರೀತಿ ಎಲ್ಲಾ ಸಿನಿಮಾಗೆ ಸರಿ. ನೀನು ನಿನ್ನ ಲೆವೆಲ್‌ಲ್ಲಿ ಇರೊ ಅಂತ ಹುಡುಗೀನ ಮದುವೆಯಾಗಿ ಸುಖವಾಗಿರು.
ನಾನು ಈಗ ಸಾಫ್ಟ್‌ವೇರ್ ಇಂಜಿನಿಯರ್ ನೀನೋ ನಿನ್ನ ಎಜುಕೇಶನ್ ಕಂಪ್ಲೀಟ್ ಮಾಡಿಲ್ಲ ನಿನ್ನ ಮತ್ತೆ ಪ್ರೀತಿಸಿ ನಾನು ಸುಖವಾಗಿರ್ತೀನಾ ಹೇಳು?
ಅದಕ್ಕೆ ಹೇಳೋದು ಕಾಲೇಜಿನ ದಿನಗಳು ಮತ್ತೆ ಬರಬಾರದು ಅಂತ
ಸಾಕು ಕಣೋ ಇಲ್ಲಿಗೆ

ನಾನೆಂದೂ ಇರಲಿಲ್ಲ ನಿನ್ನ ಪಾಲಿಗೆ
ನಿನ್ನ ನೆನಪೂ ಬೇಡ ನನ್ನ ಬಾಳಿಗೆ
ನಡೆಯುತ್ತಿರುವೆನಾ ಬಾಳ ಮತ್ತೊಂದು ತಿರುವಿಗೆ
ನೀ ಬಾರದಿರು ಮತ್ತೆಂದು ನನ್ನ ಹಾದಿಗೆ

2 comments:

  1. ತುಂಬಾ ಚೆನ್ನಾಗಿದೆ ನಿಮ್ಮ ಪ್ರೇಮಿಯ ಕಥೆ. ಎಗ್ಸ್ಯಾಮ್ ನಲ್ಲಿ ಸರಿಯಾಗಿ ಬರೆಯದಿದ್ದುದಕ್ಕೆ ಬರೀ ಅವನು ಮಾತ್ರ ಕಾರಣ. ಕಥಾನಾಯಕಿಯದು ಏನೂ ತಪ್ಪು ಇಲ್ಲ. ಅವಳು ಪಾಪ ಸುಮ್ಮನೇ ಟೈಮ್ ಪಾಸ್ ಮಾಡುತ್ತಿದ್ದಳು. ಇವನು ಅವಳಿಗೋಸ್ಕರ ದೇವದಾಸ್ ಆದರೆ ಅವಳೇನು ಮಾಡಬೇಕು. ಎಲ್ಲ ಅವಂದೇ ತಪ್ಪು. ಎಗ್ಸ್ಯಾಮ್ ನಲ್ಲಿ ಕಥಾನಾಯಕಿ ಮಾತ್ರ ಫೇಲ್. ಆತ ಅವಳಿಂದಾಗಿ ರ್ಯಾಂಕ್ ಬಂದ. ಅವನ ನೆನಪೇ ಬದುಕಾಗಿತ್ತು ಈಗ ಆ ನೆನಪೂ ಬೇಡ ಅವಳ ಬಾಳಿಗೆ.

    ಅವಳ ಬಾಳು ಹಾಸನಾಗುತ್ತಿದೆ. ಅವನಿಗೆ ಏನಾದರೇನು.

    ಭೇಷ್, ಸೂಪರ್!

    ReplyDelete
  2. ಹೀಗೂ ಇರಬಹುದಲ್ಲವೇ?

    ReplyDelete

ರವರು ನುಡಿಯುತ್ತಾರೆ