Wednesday, June 15, 2011

ಪ್ರೀತಿಯ ಪರಿ

"ಇನ್ನು ಮೇಲೆ ಅವನ ಮುಖವನ್ನೂ ನೋಡೋದಿಲ್ಲ. ಹ್ಮ್ಮ್ "ರೂಮಿಗೆ ಬಂದವಳೇ ವ್ಯಾನಿಟಿ ಬ್ಯಾಗನ್ನು ಎಸೆದು ಉರಿದುರಿದು ಬೀಳುತ್ತಿದ್ದಳು ಚಿತ್ರ
"ಹೇ ಯಾಕೆ ಚಿತ್ರ ಏನಾಯ್ತು? ಕಾಮ್ ಡೌನ್" ಸಮಾಧಾನ ಮಾಡಿದರೂ ಏನಾಯ್ತೆಂಬ ಕುತೂಹಲ ತಣಿಸಿಕೊಳ್ಳುವ ಪ್ರಯತ್ನ ನನ್ನದಾಗಿತ್ತು
"ಏನಂದುಕೊಂಡಿದಾನೆ ಅವನು ನನ್ನ ಅವನು ಹೇಳಿದ ಹಾಗೆಲ್ಲ ಕುಣಿಯೋಕೆ ಆಗಲ್ಲ. ಅದಕ್ಕೆ ಗುಡ್ ಬೈ ಫ಼ಾರೆವರ್ ಅಂತ ಮೆಸೇಜ್ ಕಳ್ಸಿಬಿಟ್ಟೆ" ಕೊನೆಯ ವಾಕ್ಯ ಹೇಳುವಾಗ ಒಮ್ಮೆ ತಡೆದದ್ದು ಗಮನಕ್ಕೆ ಬಂತು
" ಚಿತ್ರಾ ಯಾಕೆ? ಅವನಿಗೆ ಆ ಫ಼ಂಕ್ಷನ್‌ಗೆ ಬರೋದಿಕೆ ಇಷ್ಟ ಇಲ್ಲ ಅಂದ್ರೆ ನೀನ್ಯಾಕೆ ಬಲವಂತ ಮಾಡ್ತೀಯ ?"
" ಇಲ್ಲ ಪವಿ ಅವನು ನನ್ನ ಅವನ ಫ್ರೆಂಡ್ ಪಾರ್ಟಿಗೆ ಬರೋಕೆ ಹೇಳಿದ . ನಂಗೆ ಇಷ್ಟ ಇಲ್ಲ. ಅವನು ಮಾಡಿದ್ದು ಏನು ಫೋರ್ಸ್ ಮಾಡ್ತಾನೆ. ಸಾಲದು ಅಂತ ನಾನು ಅಟೆಂಡ್ ಮಾಡೋ ಫ಼ಂಕ್ಷನ್ಸ್ ಎಲ್ಲಾ ಚೀಪ್ ಇಂಟರೆಸ್ಟ್ ಅಂತೆ. ಕೆಲಸಕ್ಕೆ ಬಾರದವು ಅಂತೆ.ಈಡಿಯಟ್"
"ನಂಗೂ ಅವನಿಗೂ ಆಗಿ ಬರಲ್ಲ. ನಾನು ಇನ್ನುಮುಂದುವರೆಯಲ್ಲ . ಐ ಹೇಟ್ ಹಿಮ್"
"ಆಗಿನಿಂದ ಕಾಲ್ ಮಾಡ್ತಾನೆ ಇದ್ದಾನೆ. ನಾನು ರಿಸೀವ್ ಮಾಡಲ್ಲ"
ಬೈದುಕೊಂಡಳು
ಮೊಬೈಲ್ ರಿಂಗ್ ಆಗುತ್ತಲೆ ಇತ್ತು
ಜೊತೆ ಜೊತೆಗೆ ಮೆಸೇಜ್ ಬಂದ ಟೋನ್ ಗಳು
ಕಿವಿಗೆ ಹತ್ತಿ ಇಟ್ಟು ಕೊಂಡು ಮಲಗಿದೆ

ಬೆಳಗಾಯ್ತು
ಇವಳು ಏಳೋದೆ ಅವನ ಗುಡ್ ಮಾರ್ನಿಂಗ್ ಮೆಸೇಜ್ ಬಂದನಂತರ
ಆದರೆ ಈ ದಿನ ಮೆಸೇಜ್ ಬರಲಿಲ್ಲ
ಈಕೆಯೂ ಏಳಲಿಲ್ಲ
"ಆಫೀಸಿಗೆ ಹೋಗೋ ಸಮಯ ವಾಯ್ತು ಏಳೇ ತಾಯಿ" ಎಂದೆ
"ಇಲ್ಲ ಕಣೇ, ನಾನು ಬರಲ್ಲ, ಅವನು ನೋಡು ಒಂದು ಮೆಸೇಜೂ ಕಳಿಸ್ತಾ ಇಲ್ಲ" ಮುಖ ಉಬ್ಬಿಸಿಕೊಂಡು ಮೊಬೈಲ್ ಅನ್ನೇ ನೋಡುತ್ತಾ ನುಡಿದಳು
" ಏ ಬಿಡೆ ನೀನೆ ಅವನಿಗೆ ಗುಡ್ ಬೈ ಫಾರೆವರ್ ಹೇಳಿದೆಯಲ್ಲಾ...." ಅವಳನ್ನ ಕೆರಳಿಸಿದೆ ಅನ್ನಿಸುತ್ತೆ
"ನಿಜ ಕಣೇ ಆದರೆ ಅವನೂ ಒಂದು ಸಲ ಹಾಗೆ ಹೇಳಿ ಸುಮ್ಮನಾದರೆ ಸರಿ ಅಲ್ವಾ ನಂಗೂ ನಿರಾಳವಾಗುತ್ತೆ. ಹಾಗೂ ಮಾಡಲ್ಲ"ಮುಸುಗು ಹೊದ್ದುಕೊಂಡಳು
ಚಿತ್ರ ಸ್ವಲ್ಪ ಹಟಮಾರಿಯೇ . ಅವಳಿಗೆ ಬುದ್ದಿ ಹೇಳಿ ಫಲವಿಲ್ಲ ಎಂದುಕೊಂಡು ಆಫೀಸಿಗೆ ಹೋಗಲು ರೆಡಿ ಆಗುತ್ತಿದ್ದೆ.
ಅಷ್ತ್ರ್ರಲ್ಲಾಗಲೇ ಎದ್ದು ಕೂತಿದ್ದಳು
ಮತ್ತೆ ಕೈನಲ್ಲಿದ್ದ ಮೊಬೈಲ್ ಅನ್ನೇ ನೋಡುತ್ತಿದ್ದಳು
"ಹೇ ಪವಿ ಅವನು ನನ್ನನನ್ ಮರೆತುಬಿಡ್ತಿದಾನೆ ಅನ್ಸುತ್ತೆ " ಅವಳ ಕಣ್ಣಲ್ಲೆಲ್ಲಾ ನೀರು
"ನೀನೆ ಹೇಳಿದೆಯಲ್ಲಾ..................."
"ಹುಷ್: " ನನ್ನ ಬಾಯಿಯ ಮೇಲೆಕೈ ಇಟ್ಟು ನುಡಿದಳು
"ಇಲ್ಲ ಪವಿ ನಾನು ಕೋಪದಲ್ಲಿ ಹೇಳಿದ್ದು ಅದನ್ನೆ ದೊಡ್ಡದು ಮಾಡಿಕೊಂಡಿದ್ದಾನೆ ಇವನು, ಹುಡುಗಿ ಅಂತ ಸ್ವಲ್ಪಾನೂ ಕನಿಕರ ಇಲ್ಲ. "
"ಸರಿ ನೀನೆ ಮೆಸೇಜ್ ಮಾಡು ಸಾರಿ ಅಂತ"
" ಹೇ ಅದ್ ಹೇಗೆ ಆಗುತ್ತೆ ನಾನ್ಯಾಕೆ ಸೋಲಲಿ . ಅವನಿಗೆ ನನ್ನಮೇಲೆ ಪ್ರೀತಿ ಇದ್ದರೆ ಅವನು ಖಂಡಿತಾ ಮೆಸೇಜ್ ಮಾಡ್ತಾನೆ"
"ಅಕಸ್ಮಾತ್ ಅವನೂ ನಿನ್ನಹಾಗೆ ಕಾದಿದ್ದರೆ?"
ನನ್ನಪ್ರಶ್ನೆ ತಾಕಿತೇನೋ ಒಂದು ಕ್ಷಣ ವಿಚಲಿತಳಾದಳು
ಮತ್ತೆ
ಇಲ್ಲವೆಂಬಂತೆ ತಲೆ ಆಡಿಸಿದಳು
"ನಾನು ಸೋಲಲ್ಲ ಕಣೇ. ನಾನ್ಯಾಕೆ ಸೋಲಲಿ?"
ಏಕೋ ಆಫೀಸಿಗೆ ಹೋಗಲು ನನಗೂ ಮನಸಾಗಲಿಲ್ಲ . ಚಿತ್ರ ನನ್ನ ಜೀವದ ಗೆಳತಿ

೧೧ ಘಂಟೆ ಆಯ್ತು.
ಚಿತ್ರ ಲಾಕ್ ಆಗುತ್ತಿದ್ದ ಮೊಬೈಲ್ ಅನ್ನ ಅನ್ ಲಾಕ್ ಮಾಡುತ್ತಲೇ ಇದ್ದಳು

ಪ್ರೀತಿಯ ಗುಂಗದು
ಹೇಳಲು ಬಾರದು
ಪದಗಳಲ್ಲಿ ಬಂಧಿಸಲಾಗದು
ಅನುಭವಕ್ಕೆ ನಿಲುಕುವಂತಹದ್ದು

ಅಂತಹ ಗುಂಗಿನಲ್ಲಿ ಚಿತ್ರ ಇದ್ದಳು

ಬಾಚಿರದ ತಲೆ , ಕಣ್ಣ ನೀರಿನಿಂದ ಹರಡಿದ ಕಾಡಿಗೆ, ಆದರೂ ಎಲ್ಲೋ ತಲ್ಲೀನ ಳಾಗಿ ಹೋಗಿದ್ದಳು
ಅವಳ ಸ್ಥಿತಿ ನನಗೇ ಕಣ್ಣಲ್ಲಿ ನೀರು ತರಿಸಲಾರಂಭಿಸಿತು
" ಚಿತ್ರಾ ನಾನೆ ಅವನಿಗೆ ಹೇಳಲಾ?"
"ಬೇಡ" .........

ಬೆಳಗಿನಿಂದ ಅವಳೂ ಏನೂ ತಿಂದಿಲ್ಲ ಅವಳ ಜೊತೆಗೂ ನಾನೂ
ಮದ್ಯಾಹ್ನ ವಾಯ್ತು
ಹೊಟ್ಟೆ ನಿಜಕ್ಕೂ ಹಸಿಯುತ್ತಿತ್ತು
"ಬಾರೆ ಚಿತ್ರ ಊಟ ಮಾಡೋಣ . ಆಮೇಲೆ ಆಂಟಿ ಊಟ ಎಲ್ಲಾ ಖಾಲಿ ಅಂತಾರೆ"
" ನೀನು ಹೋಗು ಪವಿ, ನಂಗೆ ಬೇಡ"

ಸರಿ ಎಂದು ಬಾಗಿಲ ಬಳಿ ಹೋಗುತ್ತಿದ್ದಂತೆ
ಅವಳ ಮೊಬೈಲ್ ಬಾರಿಸಲಾರಂಭಿಸಿತು
ಅವಳ ಕಣ್ಣಲ್ಲಿ ಸಂತಸ
ಇನ್ನು ನಾನು ಅಲ್ಲಿರುವುದ್ ಸರಿ ಎಲ್ಲ ಎಂದನಿಸಿ ಹೊರಗಡೆ ಬಂದೆ
ಊಟ ಮುಗಿಸಿ ನಾನು ಎದ್ದೇಳುವುದಕ್ಕೂ ಚಿತ್ರಾ ನನ್ನಜೊತೆ ಬಂದು ಕೂರುವುದಕ್ಕೂ ಸರಿ ಆಯ್ತು
" ಪವಿ ಪಾಪ ಅವನು ಬೆಳಗ್ಗೆ ಮೊಬೈಲ್ ನ್ನ ಬೇರೆ ಕಡೆ ಇಟ್ತು ಮರೆತುಬಿಟ್ಟಿದ್ದನಂತೆ . ನನ್ನ ನಂಬರ್ ಕೂಡ ಇರಲಿಲ್ಲವಂತೆ
ತುಂಬಾ ಸಾರಿ ಕೇಳಿದ. ಪಾಪ ಅವನಿಗೆ ನಾನು ತುಂಬಾ ಬೇಜಾರು ಮಾಡಿಬಿಟ್ಟೆ...................................ಇವತ್ತು ಸಾಯಂಕಾಲ ನಾವಿಬ್ಬರೂ ಮೀಟ್ ಆಗ್ತಾ ಇದ್ದೀವಿ............................................"ಅವಳ ಮಾತು ಮುಂದುವರೆಯುತ್ತಲೇ ಇತ್ತು
ಬೆಳಗಿನ ಆ ರೋಧಿಸುತ್ತಿದ್ದ ಚಿತ್ರ ಈಗ ಲವಲವಿಕೆ ಇಂದ ಕುಣಿಯುತ್ತಿದ್ದಳು

ಮನುಷ್ಯರನ್ನೇ ಆಟವಾಡಿಸುವ ಪ್ರೀತಿಯ ಪರಿಗೆ ನಾನು ಅಚ್ಚರಿಗೊಂಡು ಅವಳನ್ನೇನೋಡುತ್ತಿದ್ದೆ

6 comments:

 1. ರೂಪಾರವರೆ..

  ಬಹಳ ಸುಂದರವಾದ ಕಥೆ..

  ಹುಸಿ ಕೋಪ..
  ತುಸು ಮುನಿಸು..
  ಪ್ರೀತಿ ಹುಟ್ಟಿ ಅರಳುವ ಸಂದರ್ಭಗಳು.. ಬಲು ಸುಂದರ..!

  ಸಣ್ಣ ತಪ್ಪುತಿಳುವಳಿಕೆ ದೂರವಾದ ಚಿತ್ರಣ ಸೊಗಸಾಗಿದೆ..

  ಅಭಿನಂದನೆಗಳು ಚಂದದ ಕಥೆಗೆ...

  ReplyDelete
 2. nice.....
  koneya tamma ondu vaakya iidee kathege sukta vyakyana needide.

  ReplyDelete
 3. ಸೀತಾರಾಮ ಸರ್ ಹೇಳಿದ್ದನ್ನು ಮರುಕಳಿಸುತ್ತೇನೆ, ಶುಭಾಶಯಗಳು

  ReplyDelete
 4. nice..

  visit my blog @ http://ragat-paradise.blogspot.com

  RAGHU

  ReplyDelete
 5. ಪುಟ್ಟ ಕಥೆ ಚೆನ್ನಾಗಿದೆ. ಪ್ರೀತಿಯ ಗುಂಗು-ಸೆಳೆತವೇ ಅಂಥದ್ದು........

  ReplyDelete

ರವರು ನುಡಿಯುತ್ತಾರೆ