Tuesday, April 2, 2013

ರಾಧೆ ನನ್ನ ಕಣ್ಣಲ್ಲಿ...........


ನೆನ್ನೆ ಒಬ್ಬರು ಕಳಿಸಿದ ರಾಧಾಕೃಷ್ಣರ ಚಿತ್ರವನ್ನ ನೋಡಿ ಅನಿಸಿದ್ದು
ಇಲ್ಲಿಯವರೆಗೂ ನನಗೆ ಕಗ್ಗಂಟಾಗಿರುವುದೇ ಈ ರಾಧಾ ಕೃಷ್ಣರ ಕಲ್ಪನೆ
ಕೇವಲ  ಕ್ರಿಷ್ಣನ ಗೋಕುಲ  ನಿರ್ಗಮನದವರೆಗೆ ಮಾತ್ರ ರಾಧೆ ಇರುತಾಳೆ . ನಂತರ ಆಕೆ ಏನಾದಳು . ಎಲ್ಲಿ ಹೋದಳು?
ಮದುವೆಯಾದ ಹೆಣ್ಣೊಬ್ಬಳು ತನಗಿಂತ ಕಿರಿಯನೊಬ್ಬನನ್ನು ಪ್ರೀತಿಸುತ್ತಾಳೆ ಅವರಿಬ್ಬರ  ನಡುವೆ ಇದ್ದಿದ್ದು ನಿಷ್ಕಾಮ ಪ್ರೀತಿಯೇ ಸ್ನೇಹವೇ? ರಾಧಾಕೃಷ್ಣರ ಪ್ರೇಮವನ್ನ ಅನುಪಮವೆಂದು ಕೊಂಡಾಡುವ ಲೋಕ ಅದೇ ಬಗೆಯ ಸಂಬಂಧಕ್ಕೆ ಅನೈತಿಕತೆ ಎಂಬ ಹೆಸರನ್ನು ಇಡುತ್ತೆ.
ಆತನನ್ನು ನೋಡಲು ಮಗುವನ್ನು ಪತಿಯನ್ನು ಬಿಟ್ಟು ಯಮುನೆಯ ತೀರಕ್ಕೆ ಬರುತ್ತಾಳೆ ಅದು ಕೃಷ್ಣನ ಮೇಲಿರುವ ಭಕ್ತಿ ಎನ್ನುತ್ತದೆ ಪುರಾಣ. ಅದೇ ಬಗೆಯಲ್ಲಿ ಮದುವೆಯಾದ ಹೆಣ್ಣೊಬ್ಬಳು  ತನಗಿಷ್ಟವಾದವರನ್ನ ಹುಡುಕುತ್ತಾ ಹೊರಟರೆ ಲೋಕ ಕಳಂಕಿನಿ ಎಂಬ ಪಟ್ಟ ಕಟ್ಟುತ್ತದೆ
ಒಂದು ಕಡೆ ವೈವಾಹಿಕ ಬಂಧಕ್ಕೆ  ಕಟ್ಟು ಪಾಡು ಎಸೆಯುವ  ಈ ಲೋಕ, ಅದೇ ವಿವಾಹಕ್ಕೆ ಹೊರತಾದ ಕಲ್ಪನೆಗಳಿಗೆ ಮಣೆ ಹಾಕುತ್ತದೆ.
ಆದರೂ ರಾಧೆ ನನಗೆ ಅಂತಲ್ಲ ಎಲ್ಲಾ ಹೆಂಗಸರಿಗೂ ಒಂದು ಬಗೆಯ ಕುತೂಹಲಭರಿತ ರಸಕಾವ್ಯ
ಆಕೆ ಏಕೆ ಮತ್ತು ಹೇಗೆ ಕೃಷ್ಣನಲ್ಲಿ ಅನುರಕ್ತೆಯಾದಳು
ಎಲ್ಲೂ ಆಕೆ ಪತಿಯಿಂದ ಬೇಸತ್ತ ಅಥವ ನೊಂದ ಸನ್ನಿವೇಶಗಳು ಉಲ್ಲೇಖವಾಗಿಲ್ಲ. ಆದರೂ ಆಕೆ ಅನುರಕ್ತೆಯಾದದ್ದು ಕೃಷ್ಣನ ಚೆಲುವಿಗೆ ಆತನ ತುಂಟಾಟಕ್ಕೆ ಮತ್ತು ಮುರಳಿಗಾನಕ್ಕೆ
ಇಂದಿಗೂ ರಾಧೆ ಕೃಷ್ಣರ ಸಂಬಂಧ ಅನುಪಮ  ಪ್ರೇಮಕ್ಕೆ ಸಾಕ್ಷಿಯಾಗಿದೆ ಅಂತಾರೆ
ಹಾಗಾದರೆ ಪರಿಶುದ್ದ ಪ್ರೇಮದ ಪರಿಕಲ್ಪನೆ ಏನು? ಸಂಬಂಧಗಳನ್ನು ಮೀರಿದ ಮೋಹವೇ, ಭಕ್ತಿಯೇ, ಅನುಬಂಧವೇ?
ಗೊತ್ತಿಲ್ಲ
ಆದರೂ ರಾಧೆ ನನ್ನನ್ನ ಸೆಳೆಯುತ್ತಾಳೆ ಕೃಷ್ಣನನ್ನ ಮೀರಿಸಿ
ಎಲ್ಲೋ ರಾಧೆ ಪ್ರತಿ ಮಹಿಳೆಯರ ಪ್ರತಿರೂಪವೇನೋ ಅನ್ನುವಂತೆ



2 comments:

  1. ರಾಧಾ ಕೃಷ್ಣರ ಸಂಬಂಧಗಳ ಸಮಚಿತ್ತ ವಿಶ್ಲೇಷಣೆ.

    ReplyDelete
  2. ನಿಮ್ಮ ಅನಿಸಿಕೆ ನಿಜ, ನನಗೂ ಹಾಗೆಯೇ ಅನ್ನಿಸುತ್ತದೆ, ರಾಧಾಕೃಷ್ಣ ರ ಪ್ರೀತಿ, ಪ್ರೇಮ ಕಾಮವನ್ನೂ ಮೀರಿದ್ದು, ನಿಷ್ಕಾಮ ಭಕ್ತಿ, ನಿಷ್ಕಾಮ ಪ್ರೇಮ, ಕೃಷ್ಣನಿಗೂ ರಾಧೇಯಲ್ಲಿ ಅಪಾರ ಸ್ನೇಹ ಪ್ರೀತಿ, ಎಲ್ಲೂ ಕಾಮದ ಪರಿಕಲ್ಪನೆಯೇ ಇಲ್ಲ...
    ನನ್ನ ಕವನಗಳು ಜಾಸ್ತಿ ರಾಧಾ ಕೃಷ್ಣರ ನಿಷ್ಕಲ್ಮಶ ಪ್ರೇಮವನ್ನು ಕುರಿತಾದದ್ದೇ ಆಗಿದೆ..
    ನಿತ್ಯ ಸತ್ಯ ಪ್ರೇಮದ ದ್ಯೋತಕ ರಾಧಾಕೃಷ್ಣರು...
    ಆ ನವಿರಾದ ಪ್ರೇಮ ಕಥೆಯನ್ನು ಕವಿತೆಯಲ್ಲಿ ಎಷ್ಟು ಹೆಣೆದರೂ ಸಾಲದು.....
    ಮತ್ತೆ ಮತ್ತೆ ಬರೀಬೇಕು ಅನ್ನಿಸುತ್ತೆ.

    ReplyDelete

ರವರು ನುಡಿಯುತ್ತಾರೆ