Monday, December 17, 2012

ಹಿತ-ವಚನಗಳು


ನುಡಿಗಳಿಗಂಜಿ ನಡೆದೊಡೆ
ಮೂಕನ ಮಾಡಿ ನಡು ಹಿಡಿದು
ಬಗ್ಗಿಸುವರಯ್ಯ , ನುಡಿಯಬೇಕು
ನುಡಿಗಳಿಗೆ ಬೆದರದೆ
ಮತ್ತೊರ್ವರ  ಮನ ನೋಯಿಸದೆ

ಕತ್ತಲೆಂದು ಕಣ್ಮುಚ್ಚಿ ಕೂತಿರೆ
ಸುತ್ತ ಬೆಳಕ ಸುರಿಮಳೆಯಾದರೂ
ನೀ ಬೆಳಕಿಗೆಂದೂ ಕುರುಡೇ

ಅರಿಯಲಾರೆನೆಂದು ಹಟ ಹಿಡಿದರೆ
ಹರಿ ಕೂಡ ಉರಿಸಲಾರೆನು
ನಿನ್ನೆದೆಯ ಜ್ನಾನದ ದೀಪವ

ಸುರಿವ ಸಿರಿಯ ಮದದಿ
ಹಳಿಯೇ ಉಳಿದವರ ನೋಡಿ.
ಅಳಿದೀತು ಸಂಬಂಧ.
ಮುಂದೆ
ಸಿರಿ ಕರಗೀತು
ನಂಟಲ್ಲ

3 comments:

  1. ಸುಂದರವೆಂದರೆ ಕ್ಲೀಷೆ ಯಾದೀತು

    ReplyDelete
  2. ಹೋ! ತುಂಂಬಾ ಓಳ್ಳೆಯ ಪ್ರತಿಭೆ ಮೇಡಂಂ

    ReplyDelete

ರವರು ನುಡಿಯುತ್ತಾರೆ