Sunday, May 8, 2011

ಶಾಪ ವಿಮೋಚನೆಯಾಗದ ಅಹಲ್ಯೆಯರು

ರಾಮಾಯಣದ ಸೀತಾ ಸ್ವಯಂವರದ ನಾಟಕದ ತಾಲೀಮು ನಡೆಯುತ್ತಿತ್ತು.
ಅದರಲ್ಲಿ ಬರುವ ಅಹಲ್ಯಾ ಶಾಪ ವಿಮೋಚನೆಯ ಪ್ರಸಂಗವನ್ನೂ ವೇದಿಕೆಯಮೇಲೆ ತರೋಣ ಎಂದು ಮೇಡಮ್ ಹೇಳಿದ್ದರು, ಜೊತೆಗೆ ನಾಟಕದ ಪಾತ್ರಗಳಿಗೆ ಆಯ್ಕೆ ನಡೆಯುತ್ತಿತ್ತು.

"ಗೀತಾ ಅಹಲ್ಯಾ ಪಾತ್ರ ನೀನೇ ಮಾಡಬೇಕು ." ಮೇಡಂ ನನ್ನನ್ನು ಈ ಪಾತ್ರಕ್ಕೆ ಕರೆದಾಗ ನಾನು ಕಕ್ಕಾಬಿಕ್ಕಿ, ಜೊತೆಗೆ ಒಮ್ಮೆಗೆ . ಮಾಡಬಾರದೆನಿಸಿತು
"ಮೇಡಂ ನಾ.............ನು ............ಈ ಪಾರ್ಟ್ ಮಾಡಲ್ಲ. ........." ಹಿಂಜರಿಕೆಯಿಂದಲೇ ನುಡಿದೆ.

"ಯಾಕೆ ಗೀತಾ "? ನನ್ನತ್ತಲೇ ತೀಕ್ಷ್ಣವಾಗಿ ನೋಡುತ್ತಾ

"ಮೇಡಂ iam not happy with Ahalya's charactor. ತುಂಬಾ ಸಲ ಅನ್ಕೂಂಡಿದ್ದೀನಿ ಯಾಕೆ ಈ ಪಂಚ ಮಹಾ ಕನ್ನಿಕೆಯರ ಹೆಸರಲ್ಲಿ ಅಹಲ್ಯಾ ಹೆಸರು ಸೇರಿದೆ ಅಂತ?"
"ಯಾಕಮ್ಮಾ"? ಮತ್ತೆ ಪ್ರಶ್ನೆ ಎಸೆದರು.
" ಹಾಗಲ್ಲ ಮೇಡಂ ಗಂಡ ಇರದಿದ್ದಾಗ ಮತ್ತೊಬ್ಬನ ಜೊತೆ ಸಂಬಂಧ ಹೊಂದಿದವಳು. ಅಸಲಿಗೆ ಆ ಕಥೆಯೇ ಬೇಕಿರಲಿಲ್ಲ .ರಾಮನ

ಔನ್ನತೆಯನ್ನ ಎತ್ತಿ ತೋರೋದಿಕ್ಕೆ ಈ ಕತೆ ಸೇರಿಸಿದ್ದಾರೆ ಅಷ್ಟೆ.
"ಸರಿ . ಆಯ್ತು, ನಿನಗೆ ಯಾವ ಪಾತ್ರ ಬೇಕೋ ಅದನ್ನೇ ಚೂಸ್ ಮಾಡು ಆದರೂ ಪಾತ್ರಕ್ಕಿಂತ ಪಾತ್ರಧಾರಿಯ ಆ ಪಾತ್ರದಲ್ಲಿ ಹೇಗೆ ಇನ್‌ವಾಲ್ವ್ ಆಗ್ರಾನೆ ಅನ್ನೋದು ಮುಖ್ಯ. ಮತ್ತೆ ಪುರಾಣದಲ್ಲಿ ಕೇಳಿದ ಕಥೆಯನ್ನ ಆ ನೆಲೆಯಲ್ಲಿಯೇ ನೋಡುವುದಕ್ಕಿಂತ ಒಂದು ವಿಭಿನ್ನ ನೆಲೆಯಲ್ಲಿ ನೋಡಿದರೆ ಪಾತ್ರ ಇಂಟರೆಸ್ಟಿಂಗ್ ಆಗಿರುತ್ತೆ. ಅಹಲ್ಯಾ ಜೀವನದಲ್ಲಿ ನಿಜಕ್ಕೂ ಏನು ನಡೆದಿರಬಹುದು ಅನ್ನೋದನ್ನ ಯೋಚಿಸಿದರೆ ಆ ಪಾತ್ರ ನಿಜಕ್ಕೂ ತುಂಬಾ ಕಾಂಪ್ಲಿಕೇಟೆಡ್ ಅನ್ಸುತ್ತೆ. "ಮೇಡ್ಂ ಒಂದೇ ಸಲಕ್ಕೆ ಒಪ್ಪಿ ಜೊತೆಗೇ ನನ್ನ ಮನಸಲ್ಲಿ ಅಲೆಯನ್ನು ಎಬ್ಬಿಸಿದರು.

ಯಾಕೋ ಅವರ ಮನಸು ಸ್ವಲ್ಪ ಗಂಭೀರವಾಯ್ತೆನಿಸಿತು.
ಅವರಿಗೆ ಹಾಗೆಯೇ ಪಾತ್ರಗಳಲ್ಲಿ ತಲ್ಲೀನರಾಗುವ ಮನಸು..

"ರೇವತಿ ಯಾರ್ ಯಾರಿಗೆ ಯಾವ ಯಾವ ಪಾರ್ಟ್ ಬೇಕು ಅನ್ನೋದನ್ನ ನೀನೆ ಪಟ್ಟಿ ಮಾಡಿ ನನಗೆ ತಂದುಕೊಡು. ನಾನೀಗ ಹೊರಡ್ತೀನಿ"
ಮೇಡಮ್ ಮತ್ತೊಮ್ಮೆ ನನ್ನತ್ತ ನೋಡಿ ಹೊರಟೇ ಹೋದರು.

ಯಾವ ಬೇರೆ ನೆಲೆಯಲ್ಲಿ ಯೋಚಿಸಲೂ ಸಾಧ್ಯವಾಗಲಿಲ್ಲ. ನಿಜಕ್ಕೂ ಅಹಲ್ಯಾ ನನ್ನನ್ನ ಕಾಡತೊಡಗಿದಳು.
ಕಾಲೇಜಿನ ಅವಧಿ ಮುಗಿದ ಮೇಲೆ ಮೇಡಮ್ ಅನ್ನೇ ಕೇಳಲು ಸ್ಟಾಫ್ ರೂಮಿಗೇ ನಡೆದೆ.
"ಮೇಡಮ್ ನಾನು ಮತ್ತೆ ತೊಂದರೆ ಕೊಡ್ತಾ ಇದ್ದೇನೆ. ಸಾರಿ"
"ಇಲ್ಲ ಹೇಳು ಗೀತಾ............"
"ನನಗೆ ಮತ್ತೆ ಯಾವ ಹಿನ್ನೆಲಯಲ್ಲಿ ಯೋಚಿಸಲೂ ಸಾದ್ಯವಾಗ್ತಿಲ್ಲ. ಆದರೆ ಈ ಪಾತ್ರಾನ ಅರ್ಥ ಮಾಡಿಕೊಂಡ ನಂತರ ನನಗೆ ಇಷ್ಟವಾದಲ್ಲಿ ಆ ಪಾತ್ರಕ್ಕೆ ನ್ಯಾಯ ಒದಗಿಸಲು ಸಾಧ್ಯ ಅನ್ಸುತ್ತೆ. ಅದನ್ನ ಅರ್ಥ ಮಾಡಿಸೋಕೆ ನಿಮ್ಮಿಂದ ಮಾತ್ರ ಅದು ಸಾಧ್ಯಾ"

ಮೇಡಂ ಕೈಲಿದ್ದ ಪೆನ್ನನ್ನೇ ನೋಡತೊಡಗಿದರು. ಸ್ವಲ್ಪ ಹೊತ್ತು. ............. ಹಾಗೆ ಕುರ್ಚಿಯಮೇಲೆ ಒರಗಿದವರು ಕಣ್ಣುಮುಚ್ಚಿದರು"ಗೀತಾ ಅಹಲ್ಯಾ ಅನುಪಮ ಚೆಲುವೆ. ಬ್ರಹ್ಮನ ಮಾನಸ ಪುತ್ರಿ ಅಂತಾರೆ. ಆದರೆ ಅದನ್ನ ಪುರಾಣದ ಹಿನ್ನೆಲೆ ಬಿಟ್ಟು ಬೇರೆಯಾಗಿ ನೋಡಿದರೆ ಅವಳು ಖಂಡಿತಾ ರಾಜ ಪುತ್ರಿನೆ ಆಗಿರುತ್ತಾಳೆ. ಅಂತಹ ಚೆಲುವೆ ಈ ಗೌತಮ ಮುನಿಯ ಕಣ್ನಿಗೆ ಬಿದ್ದಿರ್ತಾಳೆ. ಮುನಿಗಳಾದರೇನು ಅವರೂ ಗಂಡಸರಲ್ಲವೇ. ಚೆಲುವಿನದೆಲ್ಲಾ ತನಗೆ ಬೇಕೆಂಬ ಅಹ್ಂ. ಡಿಮ್ಯಾಂಡ್ ಮಾಡುತ್ತಾನೆ
ಮೊದಲೇ ಮುನಿ . ಮುನಿದರೆ ಶಾಪ ಕೊಟ್ಟಾನೆಂಬ ಭಯದಲ್ಲಿ ರಾಜ ಈ ಅರಗಿಣಿಯನ್ನ ಆ ಸದಾ ಕಾಡಲ್ಲಿ ಅಲೆದಾಡುವ ಈ ಗೌತಮರಿಗೆ ಕೊಡುತ್ತಾನೆ.ಮಗಳನ್ನು ನಿನಗೆ ಇಷ್ಟಾ ಇದೆಯಾ ಇಲ್ಲವೇ? ಅನ್ನೋದು ಊಹೂ ........... ಕೇಳಿರೊಲ್ಲ........................"

ಒಂದು ಕ್ಷ್ಗಣ ಮೇಡಮ್‌ನ ವಾಯ್ಸ್ ಅರ್ಥವಾಗದಂತೆ ಬದಲಾಯ್ತು. ಆದರೆ ಅದಕ್ಕಿಂತ ಮೊದಲು ನಾನು ಆ ಕಥೆಯಲ್ಲಿ ತೇಲುತ್ತಿದ್ದೆ

ಅಹಲ್ಯಾಳ ಸ್ಥ್ತಿತಿ ಯನ್ನು ಕಲ್ಪಿಸಿಕೊಳ್ಳತೊಡಗಿದೆ, ಸುಂದರಿ ಸುಕುಮಾರಿ ಈ ಒರಟು ಮುಖದ ಗಡ್ಡದಾರಿ ಜೊತೆ ಸಂಸಾರ ನಡೆಸುವ ಸ್ಥಿತಿಯನ್ನು ನೆನೆಸಿಕೊಂಡು ನಡುಗುವುದನ್ನ ಚಿತ್ರಿಸಿಕೊಳ್ಳತೊಡಗಿದೆ.

ಆಗಲೆ ಮೇಡ್ಂ ಮಾತು ನಿಲ್ಲಿಸಿದ್ದು ಗೊತ್ತಾಯ್ತು

"ಮೇಡಂ..................."
ಎಚ್ಚರಿಸಿದೆ

"ಹೌದು ಗೀತ ........ಈ ದೇಶದಲ್ಲಿ .......................... ಹೆಣ್ಣಿಗೆ ಪೂಜ್ಯ ಸ್ಥಾನ ಕೊಟ್ಟಿದ್ದಾರೆ ನಿಜ ಆದರೆ ಅವಳ ಭಾವನೆಗಳನ್ನು ಗೌರವಿಸುವುದಿಲ್ಲ, ಅನಿಸಿಕೆಗೆ ಬೆಲೆಯೂ ಇಲ್ಲ. ಇಂತಹ ದೇಶದಲ್ಲಿ ಹುಟ್ಟಿದ್ದ ... ಆಹಲ್ಯಾ ಳಾನ್ನು ಒಂದು ಆಶ್ರಮಕ್ಕೆ ತಂದು ಬಿಡುತ್ತಾನೆ ಗೌತಮ. ಕಾಡಲ್ಲಿ ಸದಾ ಇದ್ದು, ಹೆಣ್ನಿನ ನವಿರು ಭಾವನೆಗಳಿಗಿಂತ ತನ್ನ ಅಗತ್ಯಗಳನ್ನು ತಣಿಸಿಕೊಳ್ಳುವುದರಲ್ಲಿಯೇ ತೊಡಗಿರೋ ಆ ಗೌತಮನಿಂದ ಹೆಣ್ಣಿಗೆ ಸಹಜವಾಗಿ ಬೇಕಾದ ಮೆಚ್ಚುಗೆ, ಗೌರವ, ಕಾಳಜಿ, ಪ್ರೇಮ ಇವುಗಳನ್ನ ಹೇಗಾದರೂ ನಿರೀಕ್ಷಿಸಿಕೊಳ್ಳುತ್ತಾಳೆ ಹೇಳು ಆ ಅಹಲ್ಯಾ?
ಒಂಟಿಯಾಗಿ ಇರಬೇಕು ಇದ್ದಕ್ಕಿದ್ದಂತೆಯೇ ಎಲ್ಲೋ ಹೋಗಿಬಿಡುವ ಗಂಡ, ವಾರಾನುಗಟ್ಟಲೇ ಒಬ್ಬಳೇ, ಪುಂಡರಿಂದ ರಕ್ಸಿಸಿಕೊಳ್ಳಬೇಕು,
ಜೊತೆಗೇ ಒಂಟಿತನ.......................... ನಿನಗೆ ಅರ್ಥವಾಗಲ್ಲ ಗೀತ ಅದು ಬಹಳ ಕ್ರೂರ . ಅದರಲ್ಲೂ ಹೆಣ್ಣಿಗೆ ಮಾತು ತನ್ನ ಭಾವನೆಗಳನ್ನ ದುಗುಡಾನ, ಹತಾಶೆನಾ ಕೋಪಾನ ಪ್ರಕಟಿಸೋ ಸಾಧನ
ಅಂತಹ ಮಾತು ಆವಳಿಗೆ ಸಿಗಲಿಲ್ಲ ಭಾವನೆಗಳನ್ನುಹಂಚಿಕೊಳ್ಳಲು ಅವಳಾದರು ಯಾರ ಮೊರೆ ಹೋಗುತ್ತಾಳೆ ಹೇಳು.
ಕಿವಿಯಾಗಬೇಕಾದ ಗಂಡ ಕಿವಿ ಇದ್ದೂ ಕಿವುಡಾಗಿದ್ದ, ಅಂತಹ ಸುಂದರ ಹೆಣ್ಣನ್ನು ಹೊಗಳಲಾಗದೆ ಬಾಯಿದ್ದ್ಡೂ ಮೂಕನ ಸಮನಾಗಿದ್ದೆ.
ಹೆಣ್ಣನ್ನು ಪಂಜರದ ಗಿಣಿಯಂತೆ ಕೂಡಿಹಾಕಿಹೋಗುವುದಷ್ಟೇ ಅಲ್ಲ ಅವಳ ಮಾತಿಗೆ ಕಿವಿಯಾಗಿ,ಪ್ರತಿಮಾತಿಗೆ ಪ್ರೀತಿ ಸುರಿಸಬೇಕು ಎನ್ನುವ ಆ ಹೆಣ್ಣು ಮನಸು ಆ ಗೌತಮನ ಗಂಡು ಬುದ್ದಿಗೆ ಅರ್ಥವಾಗಲೇ ಇಲ್ಲ"

ಮೇಡಮ್ ತುಂಬಾ ಭಾವುಕರಾಗಿದ್ದಂತೆ ಕಂಡು ಬಂದರು.
ವಯಸಿನ ಪ್ರಭಾವವೋ ಏನೋ ಸುಸ್ತಾದಂತೆ ಕಂಡು ಬಂದರು. ಕುರ್ಚಿಯಿಂದ ಎದ್ದು ಕಿಟಕಿಯತ್ತ ನೋಡತೊಡಗಿದರು

"ಅಂತ ಆಹಲ್ಯೆಗೆ , ಚೈತನ್ಯದ ಚಿಲುಮೆಯಂತಹ ಇಂದ್ರ ಬೆಳಕಾಗಿ ಕಂಡಿದ್ದರಲ್ಲಿ ಆಶ್ಚರ್ಯವೇನಿರಲಿಲ್ಲ. ಆತನೂ ತನ್ನ ಕಾರ್ಯ ಸಾಧ್ಯಕ್ಕಾಗಿಯೇ ಬಂದಿದ್ದರೂ ಅವನಪ್ರೇಮ ಸುಳ್ಳಾಗಿದ್ದರೂ ಅವನ ನಡೆ ನುಡಿಯಲ್ಲಿ ಪ್ರೀತಿಯನ್ನ ತೋರಿಸಿದ, ಅವಳನ್ನು ಹೆಣ್ಣಾಗಿಸಿದ, ಮೆಚ್ದುಗೆಯ ಹೊನಲುಹರಿಸಿದ, ಅಹಲ್ಯೆ ಕರಗಿದಳು............. ಅವಳ ಸ್ಥಾನದಲ್ಲಿ ಯಾವುದೇ ಸಾಮಾನ್ಯ ಹೆಣ್ಣಿದ್ದರೂ ಹೀಗೆ ಆಗುತ್ತಿತ್ತು................... ಅಂತಹ ವ್ಯಕ್ತಿಯಿಂದ ಅಲ್ಪ ಸಮಯವಾದರೂ ನೆಮ್ಮಧಿ ಸುಖ ಸಿಗುತ್ತಿತ್ತು......................... "
ಯಾಕೋ ಮಾತಾಡಿ ಆ ಮಾತಿನ ಓಘವನ್ನು ಕೆಡಿಸಲು ಮನಸು ಬರಲಿಲ್ಲ
"ಆದರೆ ಕೊನೆಗೆ ಗೌತಮನಿಗೆ ಇದು ತಿಳಿದೇ ಹೋಯ್ತು. ಯಾವ ಗಂಡನಾದರೂ ಸುಮ್ಮನೆ ಇರುವುದಿಲ್ಲ ಶಾಪ ಕೊಟ್ಟ. ಕಲ್ಲಾಗಿ ಹೋಗು ಅಂತ ಅದು ಕಥೆಯ ಪ್ರಕಾರ. ನನ್ ಪ್ರಕಾರ ಅಹಲ್ಯೆಯೇ ಕಲ್ಲಿನಂತಾಗಿಹೋದಳು, ಗಂಡನಿಗೆ ಮೋಸ ಮಾಡಿದ ಗಿಲ್ಟ್ ಅವಳನ್ನುಕಾಡತೊಡಗಿದೆ. ಹಾಗಾಗಿ ನಿರ್ಲಿಪ್ತಳಂತೆ ಇದ್ದುಬಿಟ್ಟಿದ್ದಾಳೆ. ಅವಳನ್ನು ಸರಿ ಮಾಡಲು ರಾಮನೇ ಬರಬೇಕಾಯ್ತು"
ನನ್ನೆಡೆಗೆ ತಿರುಗಿದರು.
" ನಿಜ ಹೇಳಲಾ ನಮ್ ಸುತ್ತಾ ಮುತ್ತಾನೆ ಎಷ್ಟೊಂದು ಅಹಲ್ಯೆರಿದ್ದಾರೆ. ಕಲ್ಲಾಗಿ ಹೋಗಿದ್ದಾರೆ. ಆದರೆ ಅವರಿಗೆ ಜೀವ ಕೊಡಲು ರಾಮ ಬರಲೇ ಇಲ್ಲ, ರಾಮ ಬರುವುದೇ ಇಲ್ಲ. ಹಾಗಾಗಿ ಆ ಅಹಲ್ಯೆಯರ ಪ್ರತಿಮೆಗಳು ಸಜೀವಗೊಳ್ಳುತ್ತಲೆ ಇಲ್ಲ......................... ಅವರೆಲ್ಲಾ ಶಾಪವಿಮೋಚನೆಯಾಗದ ಅಹಲ್ಯೆಯರು. ಅಹಲ್ಯೆಯೇ ನಮ್ಮ ದೇಶ ಹೆಣ್ಣಿನ ಭಾವಾಭಿವ್ಯಕ್ತಿಗೆ ಒಂದು ಪ್ರತಿಮೆಯಾಗಿದ್ದಾಳೆ ............... "ಮೇಡಮ್ ಕಣ್ಣಿನ ಅಂಚಿನಲ್ಲಿ ನೀರು ಜಿನುಗುತ್ತಿತ್ತು.
ಯಾವುದೋ ಪ್ರಪಂಚದಲ್ಲಿ ಮುಳುಗಿದರು ಎಂದೆನಿಸುತ್ತದೆ. ಅವರನ್ನು ಡಿಸ್ಟರ್ಬ್ ಮಾಡಲು ಹೋಗಲಿಲ್ಲ

ಏನೂ ಮಾತಾಡದೆ ಹೊರಗಡೆ ಬಂದೆ. ರೇವತಿಗೆ ಕರೆ ಮಾಡಿದೆ,
"ರೇವತಿ. ಅಹಲ್ಯಾ ಪಾತ್ರಕ್ಕೆ ನಾನು ರೆಡಿ" ಅಂದೆ

ಮೇಡಮ್‌ನ ಮೊಗ ನೆನೆಸಿಕೊಳ್ಳಲು ಪ್ರಯತ್ನಿಸಿದೆ, ಏಕೋ ಅವರ ಮೊಗ ಶಿಲಾಪ್ರತಿಮೆಯಾದ ಅಹಲ್ಯಾಳಂತೆ ಮೂಡತೊಡಗಿತು................