Monday, July 16, 2012

ಅವಳೇಕೆ ಅವಳೇಕೆ ಹೀಗೆ? ಅರಿಯಿರಿ ಅವಳಿರುವುದೇ ಹಾಗೆ ಹೀಗೆ? ಅರಿಯಿರಿ ಅವಳಿರುವುದೇ ಹಾಗೆ



ಹೆಣ್ಣಿನ ಮನಸು ಒಂದು ಸಂಕೀರ್ಣ ಕಗ್ಗಂಟು. ಒಂದು ವೈಜ್ನಾನಿಕ ಅಧ್ಯಯನದ ಪ್ರಕಾರ ಗಂಡಸರ ಮೆದುಳು ಹೆಂಗಸರ ಮೆದುಳಿಗಿಂತ ಶೇ ಹತ್ತು  ದೊಡ್ಡದು ಮತ್ತು ಹೆಂಗಸರ ಮೆದುಳಿಗಿಂತ ಶೇ ನಾಲ್ಕಷ್ಟು ಹೆಚ್ಚು ನರಗಳನ್ನು ಹೊಂದಿವೆಯಾದರೂ ಹೆಣ್ಣಿನ ಮೆದುಳು ಗಂಡಿಗಿಂತ ಹೆಚ್ಚು ವಿಷಯಗಳನ್ನ ಹೊಂದುವಂತಹ ಸಾಮರ್ಥ್ಯವನ್ನ ಹೊಂದಿದೆ. ಹಾಗಾಗಿ ಅವಳುಒಮ್ಮೆಗೆ ಸಾವಿರ ವಿಷಯಗಳನ್ನು ಯೋಚಿಸಬಲ್ಲಳು, ಅವಳ ಪ್ರತಿಚಲನೆಗೂ ಮಾತಿಗೂ ಭಾವನೆಗೂ ವಿವಿಧ ಅರ್ಥವಿರುತ್ತದೆ
ಆದರೆ ಆಕೆಯ ಗಂಡ/ಪ್ರೇಮಿಗೆ ಮಾತ್ರ ಅವುಗಳು ಅರ್ಥಹೀನ ಅನ್ನಿಸುತ್ತದೆ. ಈ ನಡೆ ನುಡಿ ಚಲನೆ ಮತ್ತು ಅವಳ ಮನಸನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾದಲ್ಲಿ ಮುಕ್ಕಾಲ್ಲು ಪಾಲು ಅವಳನ್ನು ಗೆದ್ದಂತೆ. ಅಂತಹ ಕೆಲವು ಟಿಪ್ಸ್ ಇಲ್ಲಿವೆ

೧. ಗಂಡಿನ ಮೆದುಳು ಎಡಗಡೆಯ ಆದೇಶದಂತೆ ಮಾಡಲು ಮುಂದಾಗುತ್ತದೆ. ಎಡಬದಿಯ ಮೆದುಳು ತಾರ್ಕಿಕತೆಗೆ ಹೆಚ್ಚು ಒತ್ತು ನೀಡುತ್ತದೆ. ಆದರೆ ಹೆಣ್ಣಿನ ಮೆದುಳು ಎರೆಡೂ ಬದಿಯ ಆದೇಶವನ್ನೂ ಸ್ವೀಕರಿಸುವದಲ್ಲದೆ ಅವುಗಳ ನಡುವೆ ಸಂವಹನ ಕ್ರಿಯೆ ಬಹಳ ಬೇಗ ನಡೆಯುತ್ತದೆ. ಆದ್ದರಿಂದಲೇ ಆಕೆ ಬಲು ಬೇಗ ಯೋಚಿಸಬಲ್ಲಳು, ಮತ್ತು ಬೇಗ ನಿರ್ಧಾರ ಕೈಗೊಳ್ಳುತ್ತಾಳೆ. 
೨.ಮತ್ತೊಂದು ಹೆಣ್ಣು ಭಾವನಾ ಜೀವಿಯಾಗಿರೋದಿಕ್ಕೆ ಆಕೆಯ ನರಮಂಡಲ ರಚನೆಯೂ ಒಂದು ಕಾರಣ, ನರಮಂಡಲದ ಲಿಂಬಿಕ್ ಎಂಬ ವ್ಯವಸ್ಥೆ ಈ ಅನುಬಂಧ, ಮತ್ತು ಭಾವಗಳಿಗೆ ಕಾರಣ, ಸರಾಸರಿ ಮಹಿಳೆಯರು ಗಂಡಸರಿಗಿಂತ ಆಳವಾದ ಲಿಂಬಿಕ್ ವ್ಯವಸ್ಥೆಯನ್ನುಹೊಂದಿರುತ್ತಾಳ್ಳೆ . ಆದ್ದರಿಂದಲೇ ಆಕೆ ಬಹಳ ಬೇಗ ತನ್ನ ಭಾವನೆಯನ್ನ ವ್ಯಕ್ತ ಪಡಿಸುತ್ತಾಳೆ. ಮತ್ತು ಗಂಡಿಗಿಂತ ಹೆಚ್ಚು ಭಾಂಧವ್ಯಕ್ಕೆ ಒತ್ತು ನೀಡುತ್ತಾಳೆ
೩. ಹೆಣ್ಣು ಯಾವುದನ್ನೂ ನೇರವಾಗಿ ಬಾಯಿ ಬಿಟ್ಟು ಹೇಳಲಾರಳು ಅದರಲ್ಲೂ ಪ್ರೀತಿ ಪ್ರೇಮದ ವಿಷಯಗಳಲ್ಲಿ ಅವಳು ತುಂಬಾ ರಿಸರ್ವ್ಡ್.ಹೇಳಬೇಕಾದ್ದನ್ನು ನೇರವಾಗಿ ಹೇಳಿದರೆ ಎಲ್ಲಿ ತನ್ನ ಅರಿಕೆ ತಿರಸ್ಕೃತವಾಗುತ್ತದೋ ಎಂಬ ಸಂಕೋಚ, ಆದ್ದರಿಂದಲೇ ನಾಳೆ ಮೀಟ್ ಮಾಡೋಣ ಎಂದು ಹೇಳುವ ಬದಲು ನಾಳೆ ನಂಗೆ ಕ್ಲಾಸ್ ಇಲ್ಲ, ಅಥವ ವರ್ಕ್ ರಜಾ ಎನ್ನುತ್ತಾಳೆ, ನೀನು ನಾಳೆ ಎಷ್ಟು ಹೊತ್ತಿಗೆ ಕೆಲಸದಿಂದ ಮನೆಗೆ ಬರ್ತೀಯ ಎನ್ನುವಾಗ ಎಲ್ಲಿಯಾದರೂ ಕರೆದೊಯ್ಯಲು ಸಾಧ್ಯವೇ ಎನ್ನುವ ಇಂಗಿತವಿರುತ್ತೆ. ಅವಳ ಮಾತಿನ ನೇರ ಅರ್ಥಕ್ಕಿಂತ ಅದರ ಹಿಂದಿನ ಉದ್ದೇಶ ಅರಿತುಕೊಳ್ಳುವ ಪ್ರಯತ್ನ ಮಾಡಿ.
೪.ಹೆಣ್ಣು ಎಷ್ಟೇ ಬುದ್ದಿವಂತಳಾಗಿದ್ದರೂ ಪ್ರೀತಿ ಪ್ರೇಮ ಮತ್ತು ಕಾಳಜಿಗೆ ಸೋಲುತ್ತಾಳೆ, ಮುನಿದ  ಹೆಣ್ಣಿನ ಮನಸನ್ನು ಗೆಲ್ಲೋಕೆ ನಿಮ್ಮ ಒಂದೇ ಒಂದು ಪ್ರೀತಿಯ ನುಡಿ ಸಾಕು
೫.ನೀವು ಲಕ್ಷ ರೂ ಕೊಟ್ಟು ಕೊಡಿಸಿದ ವಜ್ರಕ್ಕಿಂತ, ಸಾವಿರ ರೂ ಕೊಟ್ಟು ಕೊಡಿಸಿದ ಸೀರೆ ಉಟ್ಟಾಗ ಈ ಸೀರೆ ನಿನಗಿಂತ ಬೇರೆಯಾರಿಗೂ ಚೆಂದ ಕಾಣಲು ಸಾಧ್ಯವಿಲ್ಲ .ಅಥವ ನಿನ್ನಿಂದ ಈ ಸೀರೆಗೆ ಮೆರಗು ಬಂದಿದೆ ಅನ್ನಿ, ಅವಳ ಮುಖ ವಜ್ರಕ್ಕಿಂತ ಹೊಳಪು ಪಡೆಯುತ್ತದೆ. 
೬ಪ್ರತಿ ಹೆಣ್ಣಿ ತನ್ನವ ಬೇರೆ ಯಾರನ್ನೂ ಹೊಗಳಬಾರದು , ನೋಡಬಾರದು ಎಂದು ಬಯಸುತ್ತಾಳೆ. ಅಪ್ಪಿ ತಪ್ಪಿಯೂ ಅವಳ ಮುಂದೆ ಮತ್ತೊಂದು ಹೆಣ್ಣನ್ನ ಹೊಗಳಬೇಡಿ. ಅಕಸ್ಮಾತ ಅಪ್ಪಿ ತಪ್ಪಿ ಎದುರಿಗೆ ಸಿಕ್ಕವಳನ್ನ ನೀವು ನೋಡಿದ್ದು ಅವಳ ಗಮನಕ್ಕೆ ಬಂದರೆ ಖಿನ್ನಗೊಂಡ ಮನಸನ್ನ ಹೀಗೆಂದು ಸಮಾಧಾನಿಸಿ,   ಅವಳುಟ್ಟ ಬಟ್ಟೆ ನಿನಗೆ ಹೇಗೆ ಕಾಣುತ್ತೆ ಅಂತ ಯೋಚಿಸುತ್ತಿದ್ದೆ. ಅಷ್ಟೆ ಮತ್ತೆ ಅರಳುತ್ತಾಳೆ
೭.ಅವಳೊಡನಿದ್ದಾಗ ಆದಷ್ಟೂ ಮೊಬೈಲ್ ಫೋನ್ ಅಟೆಂಡ್ ಮಾಡಬೇಡಿ ಪದೇ ಪದೆ ಎಸ್ ಎಮ್ ಎಸ್ ಕಳಿಸದಿರಿ,ಏನೂ ಇಲ್ಲದಿದ್ದರೇ  ಸುಮ್ಮನೆ ಮೊಬೈಲ್ ಕೀಲಿ ಪ್ರೆಸ್ ಮಾಡುತ್ತಾ ಕೂತಿರಬೇಡಿ. ತನ್ನ ಇರುವಿಕೆ ಅವನಿಗೆ ಪ್ರಮುಖವಲ್ಲ ಅಂತ ತಿಳಿದುಕೊಳ್ಳುತ್ತಾಳೆ
೮ನಿಮ್ಮಿಂದ ತಪ್ಪಾಗಿದೆ ಎಂದಲ್ಲಿ ತುಂಬು ಹೃದಯದಿಂದ ಕ್ಷಮೆ ಕೇಳಿ, ಎಂತಹುದೇ ತಪ್ಪಾದರೂ ನಿಮ್ಮದು ನೈಜ ತಪ್ಪೊಪ್ಪಿಗೆಯಾದಲ್ಲಿ  ಕ್ಷಮಿಸಿಬಿಡುತ್ತಾಳೆ, ಹಾಗೆಯೇ ಅವಳಿಂದ ತಪ್ಪಾದಲ್ಲಿ ಅವಳು ಕ್ಷಮೆ ಕೇಳಿದಲ್ಲಿ ಕ್ಷಮಿಸಿಬಿಡಿ. ಹೀಯಾಳಿಕೆಯ, ಮನ ನೋಯುವ ಮಾತುಗಳು ಬೇಡ
೯ಅವಳಿಗೆ ನೋವಾಗಿದ್ದಲಿ ಸಾಂತ್ವಾನಿಸಿ. ಕೋಪದಲ್ಲಿ ಹೇಳಿದ ಮಾತುಗಳನ್ನ ಕಿವಿಗೆ ಹಾಕಿಕೊಳ್ಳದಿರಿ, ಹೆಣ್ಣಿಗೆ ನೋವನ್ನು ಹೊರಹಾಕುವ ಏಕೈಕ ಸಾಧನ ಮಾತು, ಕೂಗು, ಅಳು, ಅವು ಪ್ರಕಟಗೊಳ್ಳಲಿ ಬಿಟುಬಿಡಿ,
೧೦ ನಿಮ್ಮಿಷ್ಟದಂತೆ ಅವಳನ್ನ ಬಗ್ಗಿಸದಿರಿ, ಅವಳಾಗಿಯೇ ಒಲಿದು ಬರುವುದನ್ನ ಕಾಯುತ್ತಿರಿ, ಬಲವಂತವಾಗಿಯೋ, ಎಮೋಷನಲ್ ಬ್ಲಾಕ್ ಮೇಲ್ ಮಾಡಿಯೋ, ಬೆಳೆಸಿದ ನಂಟಿಗೆ ಆಯಸ್ಸು ಕಡಿಮೆ
೧೧ಅವಳ ಮಾತಿಗೆ ಕಿವಿ ಕೊಡಿ, ನಿಮ್ಮದೆಂತಹ ಕೆಲಸವಿದ್ದರೂ ಅವಳಿಗಾಗಿ ಕೆಲ ಸಮಯ ಮೀಸಲಿಡಿ. ಅವಳಿಗಾಗಿಯೇ. ಕೇವಲ ಅವಳೊಡನೆಯೇ ಮೀಸಲಿಡಿ
೧೨. ಹೆಣ್ಣಿನ ಮಾತಿಗೆ ನೂರು ಅರ್ಥವಿದ್ದಲ್ಲಿ ಮೌನಕ್ಕೆ ಸಾವಿರ ಅರ್ಥವಿರುತ್ತದೆ. ಮುಕ್ಕಾಲು ಭಾಗ ಅರ್ಥಗಳು ಕಣ್ಣಿನಲ್ಲಿ ಗೋಚರವಾಗುತ್ತದೆ. ಆದ್ದರಿಂದ ಪ್ರಿಯೆಯೊಡನೆ ಮಾತನಾಡುವಾಗ ಕಣ್ಣಲ್ಲಿ ಕಣ್ಣನಿಟ್ಟು ಮಾತಾಡಿ. ಇದರಿಂದ ನಿಮ್ಮ ಸಂಪೂರ್ಣ ಗಮನ ಆಕೆಯಮೇಲಿದೆ ಎಂಬ ನಿರಾಳತೆ ಆಕೆಯಲ್ಲಿರುತ್ತೆ
೧೩.ನಿಮ್ಮ ಹಳೆಯ ಪ್ರೇಮಿಯ ಬಗ್ಗೆ ಪುರಾಣ ಹೇಳಬೇಡಿ . ಇದು ಆಕೆಗೆ ನೋವು ತರುತ್ತದೆ
೧೪. ಹೆಣ್ಣಿನ ಕಡೆಯವರನ್ನಾಗಲಿ ಅವಳ ಹವ್ಯಾಸವನ್ನಾಗಲಿ ಹಳಿಯದಿರಿ. 
೧೫. ಅವಳ ಸೌಂದರ್ಯದ ಬಗ್ಗೆ ಕೊಂಕು ತೆಗೆಯದಿರಿ
ಇಷ್ಟೆಲ್ಲಾ ತಿಳ್ಕೋಬೇಕಾ ಎಂಬ ಉದ್ಗಾರ ಬೇಡ, ಇದು ಕೇವಲ ಮುಖ್ಯವಾದವುಗಳು. ಇನ್ನೂ ತುಂಬಾ ಇವೆ..............