ನಾ ಮಾತುಗಾತಿಯಲ್ಲ ನೀ ಮಾತು ಕಲಿಸಲಿಲ್ಲ
ಆದರೂ ನಿನ್ನೊಡನೆ ನನ್ನ ಮಾತು ನಿಲ್ಲುವುದೇ ಇಲ್ಲ
ನಾ ಕನಸುಗಾತಿಯಲ್ಲ , ನೀ ಕನಸಲ್ಲಿ ಬರುವುದಿಲ್ಲ
ಆದರೂ ನನ್ನ ಕನಸು ನಿನ್ನ ಬಿಟ್ಟು ಮುಂದೆ ಸಾಗುವುದೇ ಇಲ್ಲ
ನಾ ಪ್ರೀತಿಗಾಗಿ ಅಲ್ಲ, ನೀ ನನ್ನ ಪ್ರೀತಿಸಲೇ ಇಲ್ಲ
ಆದರೂ ಈ ಮನ ನಿನಪ್ರೀತಿಗಾಗಿ ಮಿಡಿಯುತಿದೆಯಲ್ಲ
ನಾ ಅಳುವವಳಲ್ಲ , ನೀ ನನ್ನ ಅಳಿಸಲೇ ಇಲ್ಲ
ಆದರೂ ನಿನಗಾಗಿ ನಾನತ್ತ ಇರುಳಿಗೆ ಲೆಕ್ಕವೇ ಇಲ್ಲ
ನಾ ನಿನಗೇನೂ ಅಲ್ಲ , ನೀ ನನಗಾಗಿ ಅಲ್ಲ
ಆದರೂ ಜೀವವಿದು ನಿನಗಾಗಿ ಕಾದಿದೆಯಲ್ಲ