ಅಂದು ರಾತ್ರಿ ತೇಜು ಮನೆಗೆ ಬಂದಾಗ ಒಂದು ಘಂಟೆಯಾಗಿತ್ತು . ಎಲ್ಲರೂ ಮಲಗಿದರು
. ಕೆಲಸದಾಕೆ ಕದ ತೆರೆದಳು. ಗೊತ್ತು ಅಮ್ಮನಾಗಲಿ ಅಪ್ಪನಾಗಲಿ ತನ್ನನ್ನು ಕಾಯುತ್ತಾ ಕೂರುವುದಿಲ್ಲ.
ಕೂರುವವರು ಒಬ್ಬರೇ ತಾತ, ಹೋದರೆ ಉಪದೇಶ, ಅಭಿ ಆಗಲೆ ಬಂದಿದ್ದಾನೆ ಎಂದು ಅಂಗಳದಲ್ಲಿ
ನಿಂತಿದ್ದ ಅವನ ಕಾರ್ ಹೇಳಿತ್ತು.
ಮೊದಲೇ ಮನಸು ರೋಸಿತ್ತು ಬೆಳಗಿನ ಘಟನೆಯಿಂದ ... ರೂಮಿಗೆ ಬಂದವಳೇ ಹಾಸಿಗೆಯ ಮೇಲುರುಳಿದಳು ತೇಜು.
ಕಣ್ಣ ಮುಂದೆ ಪಿವಿಆರ್ ನ ಬಳಿಯ ಘಟನೆಯೇ .
"ಹಲ್ಲೋ ವಾಟ್ ಡು ಯು ಥಿಂಕ್ ಆಫ್ ಯುವರ್ ಸೆಲ್ಫ್?ಪ್ರಪಂಚದಲ್ಲಿರೋ ಹುಡುಗರೆಲ್ಲಾ ನಿಮ್ ಹಿಂದೆ ಜೊಲ್ಲು ಬಿಟ್ಟುಕೊಂಡು ಬರ್ತಾರೆ ಅಂತ ಅನ್ಕೊಂಡಿದ್ದೀರಾ?ಹೇಗೆ,ನೀವೇನು ಮಿಸ್ ಯೂನಿವರ್ಸ್ ಆ ಅಥವ ಮಿಸ್ ವರ್ಡ್?
ಏನು . ಲಾಲ್ ಭಾಗ್ ಚೆನ್ನಾಗಿದೆ ಅಂತ ನೋಡ್ತೀವಿ ಹಾಗಂತ .....ಲಾಲ್ ಬಾಗ್ ನೇ ಕೊಂಡ್ಕೊಳ್ಳೋದಿಲ್ಲಮ್ಮ
.ಸಾಕು ಏನೂ ಮಾತಾಡ್ಬೇಡಿ . ಐ ಹೇಟ್ ಯು ಬ್ಲಡಿ ಮಡ್ದಿ
ಗರ್ಲ್ಸ್. "
ಆ ಹುಡುಗ ಬಡಬಡಿಸುತ್ತಲೇ ಇದ್ದ, ತೇಜುವಿನ ಮೊಗ ಕೆಂಪಗಾಗಿತ್ತು. ಮಾತನಾಡಲೂ ಆಗದಷ್ಟು ಶಾಕ್ ಆಗಿದ್ದಳು, ಈಗ ತಾನೆ ಹಾಯ್ ಹೇಳಿದ್ದ, ಎಲ್ಲಾ ಗಂಡು ಮಿಕಗಳಂತೆ ಇವನೂ ಬಲೆಗೆ ಬಿದ್ದಂತೆಯೇ ಎಂದುಕೊಂಡು ಸ್ನೇಹಿತೆಯರ
ಜೊತೆಯಲ್ಲಿ ಅವನೊಡನೆ ಕಾಫೀ ಡೇಗೆ ನುಗ್ಗಿದ್ದಳು.
ಎಂದಿನಂತೆ ಹುಡುಗರನ್ನು ರೇಗಿಸಿ, ಮಜ ತೆಗೆದುಕೊಳ್ಳುವ ಶೈಲಿಯಲ್ಲಿಯೇ ಮಾತು
ಶುರುಮಾಡಿದ್ದಳು.
"ನಿಮ್ಮನ್ನ ನೆನ್ನೆ ನಮ್ ಮನೆ ಹತ್ತಿರ ನೋಡಿದ್ದೆ" ಕಾಫಿ ಕಪ್
ಅನ್ನು ತುಟಿಗೆ ಸೋಕಿಸುತ್ತಾ ನುಡಿದಳು.
"ಹೌದಾ ಎಲ್ಲಿದೆ ನಿಮ್ ಮನೆ?"ಆತ ಕೇಳಿದಾಗ ಒಂದು ಕ್ಷಣ ತಬ್ಬಿಬ್ಬಾದಳು
"ನೆನ್ನೆ ಸಾಯಂಕಾಲ ಏಳು ಘಂಟೆಗೆ . ನಾನು ಹೊರಗಡೆ ಹೋಗ್ತಾ ಇದ್ದಾಗ
ಯು ಸಾ ಮಿ" ಮೋಹಕ ನಗೆ ನಕ್ಕಳು
"ಮೇ ಬಿ, ದಾರೀಲಿ ಹೋಗ್ತಾ ಇದ್ದಾಗ ಎಷ್ಟೊಂದು ಜನರನ್ನ ನೋಡಿರ್ತೀನಿ ಹೌ ಕ್ಯಾನ್ ಐ ರಿಮೆಂಬರ್
" ಉಡಾಫೆ ಇಂದ ಹೇಳಿದ
ಅವನ ಉಡಾಫೆ ಕೆಣಕಿತು
"ಯಾಕೆ ಸುಳ್ಳು ಹೇಳ್ತಿದೀರಾ? ನೆನ್ನೆ ಮಾತ್ರ ಅಲ್ಲ ಮೂರು ದಿನದಿಂದ ನನ್ನನ್ನೆ ಫಾಲೋ
ಮಾಡ್ತಿದೀರ. ಡು ಯು ಥಿಂಕ್ ಯು ಆರ್ ಟೂ ಸ್ಮಾರ್ಟ್?"
ಆತನಿಗೇನನಿಸಿತು. ಇದಕ್ಕಾಗಿಯೇ ಕಾದವನಂತೆ ಎಲ್ಲರ ಮುಂದೆಯೂ ಬಡಬಡಿಸಿದ್ದ. ಇದೆಲ್ಲಾ ತನ್ನದೇ ಮಾತುಗಳು. ಹಿಂದೆ ಇದೇ ಜಾಗದಲ್ಲಿ
ಹುಡುಗರಿಗೆ ಬೈಯ್ಯುತಿದ್ದ ಮಾತುಗಳು ನೆನಪಾದವು.
"ಹಲ್ಲೋ ವಾಟ್ ಡು ಯು ಥಿಂಕ್ ಆಫ್ ಯುವರ್ ಸೆಲ್ಫ್? ನನ್ ಹಿಂದೆ ಇಡೀ ಪ್ರಪಂಚಾನೆ ಇದೆ, ಅವರನ್ನೆಲ್ಲಾ ಬಿಟ್ಟು ಹೌ
ಕ್ಯಾನ್ ಯು ಥಿಂಕ್ ಐ ಕ್ಯಾನ್ ಈವನ್ ಲುಕ್ ಅಟ್ ಯು? ದಾರೀಲಿ ಹೋಗ್ತಾ ತಾಜ್
ಮಹಲ್ ನೋಡಿ ಅದು ನಂಗೆ ಬೇಕು ಅನ್ನೋಹಾಗೆ ಮಾತಾಡಬೇಡ. ನಿನ್ ಪೊಸಿಶನ್ ಏನು ತಿಳ್ಕೋ ಸಾಕು ಈಡಿಯಟ್"
ಅವಮಾನವಾಗಿತ್ತು , ಮೈ ಉರಿಯುತ್ತಿತ್ತು . ಯಾರ ಜೊತೆಯಲ್ಲಿಯೂ ಮಾತನಾಡದೆ ತನ್ನ ಆಫೀಸಿನ ಕ್ಯಾಬಿನ್ ಅಲ್ಲಿ ಕೂತಿದ್ದಳು
ಎಷ್ಟು ಹೊತ್ತು ಕೂತಿದ್ದಳೋ. ಗೊತ್ತಿಲ್ಲ ತಾತನ ಕಾಲ್ ಬಂದಾಗ ಎಚ್ಚರವಾಗಿತ್ತು. ಆಗ ಎದ್ದು ಬಂದದ್ದು.
ಸೇಡು ಅದೇ ಕಾಫಿ ಡೇ ಯಲ್ಲಿ ಅವನನ್ನು ತುಚ್ಚೀಕರಿಸದೆ ಇದ್ದಲ್ಲಿ ತಾನು
ತೇಜಸ್ವಿನಿ ಅಲ್ಲ. ಹಲ್ಲು ಕಡಿದಳು. ಕಣ್ಣುಗಳು ನಿದ್ದೆ ಮಾಡದೆ ಮುಷ್ಕರ ಹೂಡಿದವು.
ಅದೇ ಸಮಯಕ್ಕೆ ಅವಳ ರೂಮಿನ ಪಕ್ಕದಲ್ಲಿಯೇ ಮತ್ತೊಂದು ಹೃದಯ ಯೋಚಿಸುತ್ತಿತ್ತು ನಿದ್ರಿಸದೆ.
ಅದು ಅಭಿಯದ್ದು
"ಯಾರಿರಬಹುದು ಆ ಅನಾರ್ಕಲಿ? ಚಕೋರಿನಾ ಅಥವ ಫ್ರೆಂಡ್ಸಾ? ಅಥವ ಬೆಳದಿಂಗಳ ಬಾಲೆಯೇ
ಒಟ್ಟಿನಲ್ಲಿ ಅಣ್ಣ ತಂಗಿಯರ ಮನದಲ್ಲಿ ಒಂದೊಂದು ರೀತಿಯ ಕೋಲಾಹಲ .
(ಮುಂದುವರೆಯುವುದು)