ಕಣ್ಣ ಹನಿಗಳು ಕೆನ್ನೆಯ ಮೇಲೆ ಜಾರುತಿಲ್ಲ
ಕಣ್ಣ ಬಿಡಲೊಲ್ಲದ ಆ ಪ್ರೀತಿ ನಿನಗೇಕೆ ಇಲ್ಲ ?
ಕೆನ್ನೆಗಳವು ತೋಯದೇ ಬಾಡುತಿವೆ
ಬಾಡದ ಪ್ರೀತಿಗೆ ಈ ತಿರಸ್ಕಾರ ತರವೇ
ತುಟಿಯ ಕೊಂಕಲಿ ನೋವು ಮಿಡಿಯುತಿದೆ
ಕೊಂಕಿರದ ಒಲವಿಗೆ ನೀನೇಕೆ ಬೆನ್ನಾದೆ
ಮುಂಗುರುಳು ಹಣೆಯ ಮೇಲೆಯೇ ಎಂದೆಂದೂ
ಪಾಪದ ಈ ಮನಸು ಮುಡಿಪು ನಿನಗೆಂದೂ
ಮನಸಿನ ಮಾತು ಹೊರಗೆ ಬಂದರೆ ಮನದ ದುಗುಡ ಕಡಿಮೆಯಾಗುತ್ತದೆ. ಸಂತೋಷ ಹೆಚ್ಚಾಗುತ್ತದೆ ಎಂದು ನಂಬಿರುವಳು ನಾನು ಹಾಗಾಗಿ ನನ್ನ ಮನದಲ್ಲಿ ಮೂಡಿದ ಭಾವನೆಗಳು ಇಲ್ಲಿ ಪ್ರತ್ಯಕ್ಷವಾಗುತ್ತವೆ
Saturday, March 2, 2013
ನನಗೂ ಒಂದು ತಪರಾಕಿ ಸಾಂಗ್ ಬರೆಯೋಕೆ ಬರುತ್ತಾ ಅಂತ ಒಂದು ಟೆಸ್ಟ್
ನನಗೂ ಒಂದು ತಪರಾಕಿ ಸಾಂಗ್ ಬರೆಯೋಕೆ ಬರುತ್ತಾ ಅಂತ ಒಂದು ಟೆಸ್ಟ್
ಏನೋ ಹುಡುಗ ಕಣ್ಣಲ್ಲಿ ಗಲಿಬಿಲಿ
ನಗುವೇ ಏಕೆ ಇಡದೆ ಕಚಗುಳಿ
ಥೈ ಥಕ್ ಎನಿಸುತಾ ಆಡಿಸಲೇ ಕಥಕಳಿ
ಇದು ಮೆಂಟಲ್ ಹಾಸ್ಪಿಟಲ್ ಕೇಸಾ
ನಿನ್ ಬ್ರೈನ್ ಒಳಗೆ ಲೂಸಾ?
ನಡೆಯೋಲ್ಲ ನಿನ್ನ ಆಟ ಜಾ ಜಾ
ಕೆದರಿದ ತಲೆಯೋ ಕೆಂಪೋ ಕಣ್ಣೋ
ಅಯ್ಯೋ ರಾಮ ನೋಡೆ ನಾ ಅಣ್ಣೋ
ರಾತ್ರಿಯೂ ನಿದಿರೆ ಇಲ್ಲವೇ
ಹಗಲೂ ಮದಿರೆ ಬೇಕೇ?
ತರಳೆ ತರಲೆ ಸಾಕಾಯ್ತೇ?
ಪೀಸು ಫಿಗರು ಅಂದುಕೊಂಡು
ಅಲೆದಾಡಿ ನೀನಾದೆ ಪುಂಡು
ನೀ ಮಾಡಿದ್ದು ಸಾಕು ಎಂ ಬಿ ಬಿ ಎಸ್
ಮನೆ ಬಿಟ್ಟು ಬೀದಿ ಸುತ್ತಿ ಟೈಮ್ ವೇಸ್ಟ್
ಇನ್ನಾದರೂ ಆಗು ಎಲ್ಲರಿಗೂ ನೈಸ್ ನೈಸ್
Subscribe to:
Posts (Atom)