Wednesday, May 18, 2011

ನೀನಿಲ್ಲದಿದ್ದಲ್ಲಿ

ಗೆಳೆಯಾ
ನೀ ಸಿಗದಿದ್ದರೆ ಬಾಳೇನೂ ಬಾಡುತ್ತಿರಲಿಲ್ಲ
ಆದರೂ ಬದುಕಿನಾಸೆ ಇಷ್ಟೊಂದು ಇರುತ್ತಿರಲಿಲ್ಲ

ಗೆಳೆಯಾ
ನೀ ನನ್ನ ನೋಡದಿದ್ದಲ್ಲಿ ಈ ರೂಪವೇನೂ ಮುದುಡುತ್ತಿರಲಿಲ್ಲ
ಆದರೂ ಈ ತುಟಿಯ ಮಿಂಚಿನ ನಗೆ ಕಾಣುತ್ತಿರಲ್ಲಿಲ್ಲ

ಗೆಳೆಯಾ
ನೀ ನನ್ನ ಜೊತೆಗೆ ಮಾತಾಡಿರದಿದ್ದಲಿ, ನಾನೇನೂ ಮೂಕಿಯಾಗುತ್ತಿರಲಿಲ್ಲ
ಆದರೂ ಮಾತಿಗೆ ಇಷ್ಟೊಂದು ಶಕ್ತಿ ಇರುತ್ತಿರಲಿಲ್ಲ............

ಗೆಳೆಯಾ
ನೀ ನನ್ನ ಜೊತೆ ಹೆಜ್ಜೆ ಹಾಕದಿದ್ದಲ್ಲಿ , ನಾನೇನು ಮುಂದೆ ಸಾಗದಿರುತ್ತಿರಲಿಲ್ಲ
ಆದರೂ ಆ ನಡೆಗೆ ಇಂತಹ ಗುರಿ ಇದ್ದಿರಲಿಕ್ಕಿಲ್ಲ

ಗೆಳೆಯಾ
ನೀನಿಲ್ಲದೆಯೂ ನಿಜವಾಗಿಯೂ ನಡೆದೀತು ಜೀವನ
ಆದರೆ ಆ ಜೀವನಕೆ ಇಂತಹದೊಂದು ನೆಲೆ ಸಿಗುವುದಿಲ್ಲ