ಎಲ್ಲಿ ನೋಡಿದರೂ ಆವರಣ ಪುಸ್ತಕದ ಬಗ್ಗೆಯೇ ಚರ್ಚೆ . ಬಹಳ ದಿನದಿಂದ ಓದಬೇಕೆಂದು ಅನಿಸಿದ್ದರೂ ಸಮಯದ ಕೊರತೆಯಿಂದಲೋ ಅಥವ ಅದೊಂದು ಬಗೆಯ ಪೂರ್ವಗ್ರಹಪೀಡಿತ ಲೇಖನವಿರಬಹುದೆಂಬ ಭಾವನೆಯೋ ಅದನ್ನು ಅಲ್ಲಲ್ಲೇ ತಡೆಯುತ್ತಿತ್ತು.
ಭೈರಪ್ಪನವರ ಮಂದ್ರ ಓದಿದಾಗಿನಿಂದ ಅವರ ಲೇಖನದ ಬಗ್ಗೆ ಅಂತಹ ನಿರೀಕ್ಷೆ ಏನಿರಲಿಲ್ಲ.
ಹೀಗೆ ಶನಿವಾರ ಸಪ್ನ ಬುಕ್ ಸ್ಟಾಲ್‌ಗೆ ಹೋಗಿ ಬ್ರೌಸ್ ಮಾಡುತ್ತಿದ್ದಾಗ ಕಣ್ಣಿಗೆ ಬಿತ್ತು. ತೆಗೆದು ಮೊದಲೆರೆಡು ಪುಟಗಳನ್ನು ತೆರೆದು ಓದಿದೆ. ಅಮೀರನ ಮನಸ್ಥಿತಿಯಿಂದ ಶುರುವಾಗಿದ್ದು ರಜಿಯಾ ಮೂಲತ್: ಹಿಂದೂವಾಗಿದ್ದು ಕುತೂಹಲ ಹುಟ್ಟಿಸಿತು. ಕೊನೆಯ ಪುಟಗಳಲ್ಲಿ ಆಧಾರಿತ ಪುಸ್ತಕಗಳನ್ನು ಪಾತ್ರದ ಮೂಲಕವೇ ಹೇಳಿಸುವ ರೀತಿಯಂತೂ ಮನ ಸೆಳೆಯಿತು. ಆಗಲೆ ಕೊಂಡು ಕೊಂಡೆ
ಎರೆಡು ದಿನದಿಂದ ಎರೆಡೆರೆಡು ಸಲ ಓದಿದ್ದೇನೆ.
ಇನ್ನೂ ಅರ್ಥವಾಗದ ಸಂಗತಿಗಳಿವೆ.
ಮನಸಿಗ್ಗೆ ಆಘಾತಕಾರಿಯಾಗುವ ಸಂಗತಿಗಳನ್ನು ಭೈರಪ್ಪನವರು ತಮ್ಮ ಕಥಾನಾಯಕಿಯಿಂದ ಬರೆಸುವ ಕಾದಂಬರಿಯ ಕಥಾನಾಯಕನಿಂದ ಹೇಳಿಸುವ ರೀತಿಯಂತೂ ಅದ್ಭುತ
ಓದುತ್ತಿದ್ದಂತೆ ಕೆಲವೊಮ್ಮೆ ಕಣ್ಣಲ್ಲಿ ನೀರು ಬಂತು. ಜೊತೆಗೆ ಬುದ್ದಿ ಜೀವಿಗಳೆಂದು ಹೇಳಿಕೊಂಡು ಇತಿಹಾಸವನ್ನು ತಿರುಚಿ ವಿಕೃತ ವಾಗಿ ನಲಿಯುವ ಪ್ರೊಫೆಸರ್ ಶಾಸ್ತ್ರಿಗಳಂತಹವರು ಈಗ ಎಲ್ಲೆಡೆ ಕಾಣುತ್ತಿದ್ದಾರೆ ಎಂಬುದು ನೆನಪಿಗೆ ಬಂದರಂತೂ ಕೋಪ ಉಕ್ಕೇರುತ್ತದೆ.
ಮುಸ್ಲಿಂ ಮೂಲಭೂತವಾದಿಯಾದರೂ ಸತ್ಯದ ಬೆಳಕಿಗೆ ತಲೆಯೊಡ್ಡುವ ಅಮೀರ ಕೆಲವೊಮ್ಮೆ ಉತ್ತಮವಾಗಿ ಕಾಣುತ್ತಾನೆ.
ಎಲ್ಲಕ್ಕಿಂತಲೂ ರಜಿಯಾ ಆದ ಲಕ್ಷ್ಮಿಗೆ ತನ್ನ ಮೂಲ ಧರ್ಮದ ಅನ್ವೇಷಣೆಗೆ ತೊಡಗುವುದು ಅಚ್ಚರಿಯಾಗಿ ಕಾಣುತ್ತದೆ. ಕಾದಂಬರಿಯ ಉದ್ದಕ್ಕೂ ಆವರಿಸಿಕೊಂಡು ಲಕ್ಷ್ಮಿ ನನ್ನಲ್ಲಿ ಒಂದಾಗಿ ನಾನೇ ಈ ಎಲ್ಲ ಘಟನೆಗಳಿಗೆ ಸಾಕ್ಶಿಯಾದನೇನೋ ಅನ್ನಿಸುವಷ್ಟು ನೈಜವಾಗಿ ಭೈರಪ್ಪನವರು ಬರೆದಿದ್ದಾರೆ.
ಇತಿಹಾಸ ಕುರಿತ ಲೇಖನ ಎಂದರೆ ಅದು ಬೇಜಾರಿನ ಸರಕು ಎನ್ನುವ ನನ್ನನಿಸಿಕೆ ಆವರಣ ಓದಿ ಸುಳ್ಳಾಯಿತು. ಜೊತೆಗೆ ಇನ್ನಷ್ಟು ಈ ಬಗ್ಗೆ ಓದಬೇಕೆಂಬ ಹಂಬಲವೂ ತುಂಬಿಸಿತು
ಈ ಬಗ್ಗೆ ಇನ್ನೂ ಬರೆಯುವುದಿದೆ.
ಕಥಾವಸ್ತುವಿನ ಬಗ್ಗೆ. ಬಾದಶಾಹರ ಗುಲಾಮರ ಬಗ್ಗೆ.
ಮನಸಿನ ಮಾತು ಹೊರಗೆ ಬಂದರೆ ಮನದ ದುಗುಡ ಕಡಿಮೆಯಾಗುತ್ತದೆ. ಸಂತೋಷ ಹೆಚ್ಚಾಗುತ್ತದೆ ಎಂದು ನಂಬಿರುವಳು ನಾನು ಹಾಗಾಗಿ ನನ್ನ ಮನದಲ್ಲಿ ಮೂಡಿದ ಭಾವನೆಗಳು ಇಲ್ಲಿ ಪ್ರತ್ಯಕ್ಷವಾಗುತ್ತವೆ
Monday, May 11, 2009
ಶ್ರುತಿಯಾದಳೇ ಅಪಶೃತಿ
ಅವಳು ನನಗಿಂತ ಸುಮಾರು ವರ್ಷ ಹಿರಿಯವಳಾದಳೂ ಮೊದಲಿನಿಂದ ಅಂದರೆ ಅವಳ ಶೃತಿ ಚಿತ್ರದ ನಂತರದಿಂದ ಅವಳೊಂಥರ ಪಕ್ಕದ ಮನೆ ಹುಡುಗಿಯಾಗಿಯೇ ನಾನು ಕಲ್ಪಿಸಿಕೊಂಡಿದ್ದೆ
ನನಗೆ ಮಾತ್ರವಲ್ಲ ನಮ್ಮನೆಯಲ್ಲಿ ಎಲ್ಲರಿಗೂ . ಆಸೆಗೊಬ್ಬ ಮೀಸೆಗೊಬ್ಬ ಚಿತ್ರ ಬಂದಿತ್ತು .ಶಿವಣ್ಣನ ತಂಗಿಯ ಪಾತ್ರ ಮಾಡಿದ್ದಳು ಈಕೆ. ಅವಳ ನಟನೆ ನೋಡಿ ಅಮ್ಮ ನಮ್ಮೊಡನೆ ಹೇಳಿದ್ದರು . ಇವಳು ತುಂಬಾ ಬೇಗ ಬೆಳೆಯುತ್ತಾಳೆ. ನಮಗೇನೂ ಅರ್ಥ ಆಗಿರಲಿಲ್ಲ.
ಆಮೇಲೆ ಶೃತಿ ನೋಡಿ ಸ್ನೇಹಕ್ಕಾಗಿ ಮದುವೆಯನ್ನು ಧಿಕ್ಕರಿಸುವ ಅವಳ ಪಾತ್ರದಿಂದ ತುಂಬಾ ಪ್ರಭಾವಿತಳಾಗಿದ್ದೆ.
ನಂತರ ಅವಳ ಪ್ರತಿಯೊಂದು ಚಿತ್ರದಲ್ಲೂ ಅವಳ ನಟನೆ ಮೆಚ್ಚುತ್ತಿದ್ದೆ
ನಂತರ ಸ್ತ್ರೀ ಚಿತ್ರ ನೋಡಿದಾಗ ಅವಳೂ ಕೇವಲ ಆ ಚಿತ್ರದ ಪಾತ್ರವಾಗದೆ ನನ್ನೊಳಗಿನ ಮನದ ತುಡಿತವಾದಳೋ ಕೆಲವೊಮ್ಮೆ ನಾನು ಆ ಪಾತ್ರವಾಗಿ ಬದಲಾಗುತ್ತಿದ್ದೇನೇನೋ ಅನ್ನಿಸುತ್ತಿತ್ತು.
ಕರ್ಪೂರದ ಗೊಂಬೆ ನೋಡಿದಾಗಲಂತೂ ಕಣ್ಣೀರು ಕರಗಿ ಕೋಡಿಯಾಗಿ ಹರಿದು ಹೋಗಿತ್ತು.
ನಂತರದ ಚಿತ್ರಗಳಲ್ಲಿಯೂ ಅಕ್ಕನಾಗಿ, ಅಮ್ಮನಾಗಿ, ತಂಗಿಯಾಗಿ ಅಭಿನಯಿಸುತ್ತಿದ್ದ ಅವಳಿಂದ ಇಂತಹ ಒಂದು ನಡೆ ನಿರಿಕ್ಷಿಸಿರಲಿಲ್ಲ . ನಿಜ ಒಬ್ಬರ ಖಾಸಗಿ ಜೀವನದಲ್ಲಿ ಇಣುಕಿ ನೋಡುವ , ಕಸ ಹುಡುಕುವ ಅಧಿಕಾರ ಯಾರಿಗೂ ಇಲ್ಲ . ಆದರೂ ಆದರೆ ನಮ್ಮ ಮನೆಯ ಹುಡುಗಿಯಂತೆ ನಮ್ಮ ಮನದಲ್ಲಿ ನೆಟ್ಟು ನಿಂತಿದ್ದ ಶೃತಿ ಡೈವೋರ್ಸ್ ಪಡೆಯುತ್ತಿದ್ದಾರೆಂದಾಗ ಸಹಜವಾಗಿಯೇ ಕೋಪ ಮಹೇಂದರ್ ಮೇಲೆ ತಿರುಗಿತು. ಶೃತಿ ಒಳ್ಳೆಯವಳು ಈ ಮಹೇಂದರ್ ಏನೋ ಮಾಡಿದ್ದಾನೆಂಬ ಮಾತು ಮನೆಯಲ್ಲಿ ಹರಿಯಿತು. ಹಿಂದೆಯೇ ಶೃತಿ ನೀಡಿದ್ದ ಕಾರಣ ಡೈವೋರ್ಸ್‌ಗೆ ಅಂಥ ಬಲವಾದ ಕಾರಣವಾಗಿರಲಾರದೆಂಬ ನುಡಿಯೂ ಕೇಳಿಬಂತು.
ಆದರೆ ಅದರ ನಂತರ ಮರು ಮದುವೆಯಾಗಲು ಈ ವಿಚ್ಚೇದನ ಅದೂಈಗಾಗಲೇ ಸಂಸಾರ ಹೊಂದಿರುವವನೊಂದಿಗೆ ಎಂದು ಕೇಳಿ ಬಂದಾಗ ಶೃತಿ ಎಂಬ ಆದರ್ಶ ಕುಸಿದುಬಿತ್ತು.
ಕೇವಲ ಆರ್ಥಿಕ ಪರಿಸ್ಥಿತಿ ಸರಿ ಇರಲಿಲ್ಲ ಎಂಬ ಕಾರಣ ಕೊಟ್ಟು ಗಂಡನಿಂದ ಬೇರೆಯಾಗಿ ಮತ್ತೊಂದು ಸಂಸಾರ ಒಡೆದು
ಮದುವೆಯಾಗುತ್ತಿರುವ ಶೃತಿ ಬಗ್ಗೆ ಇನ್ನಾವ ನವಿರು ಭಾವನೆಯೂ ಹುಟ್ಟುತ್ತಾ ಇಲ್ಲ. ಇನ್ನೆಂದು ಶ್ರುತಿ ಮನೆ ಮಗಳಾಗಿ ನಮ್ಮ ಕಲ್ಪನೆಯಲ್ಲಿಯೂ ಬರುವುದಿಲ್ಲ ಎಂದನಿಸುತ್ತದೆ.
ಸಿನಿಮಾ ಮಠಧೀಶರು ರಾಜಕೀಯದಲ್ಲಿರುವವರು, ಸಾರ್ವಜನಿಕರೊಂದಿಗೆ ಸದಾ ಒಡನಾಟದಲ್ಲಿರುವವರು ಯಾವಾಗಲೂ ಬಹಳ ಹುಷಾರಾಗಿ ಹೆಜ್ಜೆ ಇಡಬೇಕು . ಏಕೆಂದರೆ .ಇವರ ಹೆಜ್ಜೆಯನ್ನು ಗಮನಿಸಿತ್ತಿರುವವರ ಜೊತೆ ಅವರ ಹೆಜ್ಜೆಯ ಮೇಲೆ ಹೆಜ್ಜೆ ಇಡುವ ಜನರೂ ಇದ್ದಾರೆ. ಇದು ತಿಳಿಯದ ಸತ್ಯವೇನಲ್ಲ ಆದರೂ ಇದೇಕೆ ಹೀಗೆ ಎಂಬುದೇ ಪ್ರಶ್ನೆಯಾಗಿದೆ

Subscribe to:
Posts (Atom)