ಈ ಸುಂದರ ಸಂಜೆಯಲ್ಲಿ, ನಿನ್ನೊಲವಿನ ಮಂಜಿನಲ್ಲಿ
ಮುಳುಗೆದ್ದ , ಹೂವಿನ ದಳದಳದಲ್ಲಿ
ನಿನ್ನ ಪ್ರೀತಿಯ ಜೇನಿನ ಹನಿ ಹನಿಯ ಚಿತ್ತಾರ.......
ನೀ ನುಡಿದ ಮಾತುಗಳೆಲ್ಲಾ ಪನ್ನೀರ ಪದಗಳಾಗಿ
ಮುದುಡಿದ ಮನಸಿಗೀಗ ಅಹ್ಲಾದದ ಸಿಂಚನ
ಈ ಮನದಲಿ ನೀನೊತ್ತಿದ ಭಾವಗಳ ಸಿಂಧೂರಕೆ
ಈ ನನ್ನ ಸವಿ ಪ್ರೀತಿಯೊಂದೆ ಮರು ಕಾಣಿಕೆ
ಹೆಸರಿಡದ ಪ್ರೀತಿಯ ಬಂಧದಲಿ
ನಾ ಬಂದು ಸೇರಿದ್ದು ಹೇಗೆಂದು
ಅರಿವಾಗುವ ಮುನ್ನವೇ ಈ
ವರ್ಷಧಾರೆಯ ಅನುಭೂತಿ
ನೀ ಕೊಟ್ಟ ಈ ಕ್ಷಣಗಳ ಸಂತಸವನು
ಮರೆತೂ ಕೂಡ ಮರೆಯಲಾರೆನು
ಮತ್ತದೇ ಕೇಳುತ್ತಿದ್ದೆ ಮನ ನಿನ್ನನ್ನು
ಮತ್ತೆಂದು ಬರುವೆ ನೀನು?