Saturday, April 26, 2008

ಗೆಳೆಯನಲ್ಲದ ಗೆಳೆಯನಿಗೆ

ಗೆಳೆಯನಲ್ಲದ ಗೆಳೆಯನಿಗೆ

ಬಾಳಿನುದ್ದಕ್ಕೂ ನಿನ್ನ ಜೊತೆಗಿರುವೆ
ಎಂದ ನೀ ಈಗ ಎಲ್ಲಿರುವೆ
ಬಾಳ ಎಲ್ಲೆಯಲಿ ನನ್ನ ಕಾವಲಾಗಿ
ಜೀವನದ ಆಸರೆಯಾಗಿ
ಹೃದಯದ ಮಾತಾಗಿ
ಜೊತೆ ಹೆಜ್ಜೆ ಹಾಕುವೆ ಎಂದ ನೀ
ಹೇಗಿರುವೆ ಈಗ ಬೇರಾಗಿ

ಪ್ರತಿ ಹೆಜ್ಜೆಗೂ ನಿನ್ನ ಹಿತ ನುಡಿ
ಕಾವಲಾಗಿತ್ತು ನನ್ನ ದಿನವಿಡೀ

ಹೊರಟೆ ನೀ ಹೇಳದೆ
ಭವಬಂಧನ ಬೇಡೆಂದೆ
ನನ್ನೊಂದು ಮಾತು ಕೇಳದೆ

Friday, April 25, 2008

ಸಾಯಬೇಕು ಅನ್ನಿಸಿದ ಆ ಕ್ಶಣ

ಇದು ಏಳು ವರ್ಷದ ಹಿಂದಿನ ಮಾತು ಆಗ ತಾನೆ ಡಿಪ್ಲಮೋ ಮುಗಿಸಿದ್ದೆ. ನನ್ನ ಸಹಪಾಠಿಗಳಿಗಿಂತ ಮುಂಚೆ ಸಾಫ್ಟ್ವೇರ್ ಕಂಪೆನಿಯ ಡಾಟ್ ಕಾಂ ಶಾಖೆಯಲ್ಲಿ ಸಿಕ್ಕಿತು. 2000 ದಲ್ಲಿ ನನ್ನ ಅದೃಷ್ಟವೋ ಏನೊ ಐದಂಕಿಯ ಸಂಬಳ ಅದೂ ಬರೀ ಡಿಪ್ಲೊಮಾಗೆ . ಹದಿ ವಯಸು ನನ್ನ ಅಹಂ ಮೇರೆ ಮೀರಿತ್ತು. ಅದೃಷ್ಟ, ವಿಧಿ, ದೇವರಿಗಿಂತ ನನ್ನ ಸ್ವಯಂ ಶಕ್ತಿಯ ಮೇಲೆ ಅತಿಯಾದ ಆತ್ಮ ವಿಶ್ವಾಸ. ಹೀಗೆ ಸಾಗಿತ್ತು ಬದುಕು. ಸಾಫ್ಟ್ವೇರ್ ಉದ್ಯೋಗ ಅಂದ ಮೇಲ್ ಅದಕ್ಕೆ ತಕ್ಕ ಹಾಗೆ ಮನೆ ಬದಲಾಯಿಸಿದ್ದೆ. ಅಮ್ಮನ್ನ ಟ್ಯೂಶನ್ ಮಾಡಬೇಡ ಇಲ್ಲಿಯವರೆಗೆ ಪಟ್ಟ ಕಷ್ಟಾ ಸಾಕು ಅಂಟ ಹೇಳಿ ನಿಲ್ಲಿಸಿದ್ದೆ.ಕೆಲಸ ಸಿಕ್ಕಿ 8 ತಿಂಗಳ ಮೇಲೆ ಅಕ್ಕನಿಗ್ಗೊಂದು ಗಂಡೂ ಸಿಕ್ಕಿ ಅವಳ ಮದುವೆಗೆ ದುಡ್ಡು ಹೊಂಚುವ ಜವಾಬ್ದಾರಿ . ಮದುವೆ 2001 ಆಗಸ್ಟ ಅಂತ ನಿಷ್ಕ್ಲರ್ಶೆ ಯಾಯಿತು. ಜೋರಾಗೇ ನಡೆಯುತ್ತಿತು ನನ್ನ ದರ್ಬಾರು.
ಜನವರಿ 2001ಅದ್ಯಾರ ಕಣ್ಣು ಬಿತ್ತೋ . ನಮ್ಮ ಕಂಪೆನಿಯೂ (ಅದೀಗ ಕಾಲ್ ಸೆಂಟರ್ ಬಿಪಿಒ ಅಗಿ ಬದಲಾಗಿದೆ) ರೆಸೆಶನ್ ಪಿರಿಯಡ್ಗೆ ಈಡಾಯಿತು. ಹಾಗಾಗಿ ಸುಮಾರು ೪ ಬ್ಯಾಚ್ ನ ಜನರನ್ನು ಲೇ ಆಫ್ ಮಾಡುತ್ತಾರೆ ಎಂಬ ಮಾಹಿತಿ ಸಿಕ್ಕಿತು . ಹೆಚ್ಚು ಪ್ರಾಜೆಕ್ಟ್ ಸಿಗುತ್ತೆ ಎಂದು ಜಾಸ್ತಿ ಜನರನ್ನು ತೆಗೆದುಕೊಂಡ ಪರಿಣಾಮ ಕಂಪೆನಿಗೆ ಅಲ್ಲಿಂದ ಪ್ರಾಜೆಕ್ಟ್ ಕಡಿಮೆಯಾದಾಗ ನಾವೆಲ್ಲ ಹೊರೆ ಎನಿಸಿದೆವು.ಆ ಬ್ಯಾಚ್ ನಲ್ಲಿ ನನ್ನ್ ಬ್ಯಾಚ್ ಒಂದು . ಆದರೂ ನನಗೆ ನನ್ನ ಸಾಮರ್ಥ್ಯದ ಮೇಲೆ ಅತಿಯಾದ ನಂಬಿಕೆ . ಹಾಗಾಗಿ ನಾನು ಆ ಲಿಸ್ಟನಲ್ಲಿ ಸೇರುವುದಿಲ್ಲ ಎಂಬುದೇ ನನ್ನ ನಂಬಿಕೆ ಯಾಗಿತ್ತು. ಕೊನೆ ಕ್ಷಣ್ದದವರೆಗೂ ನನಗೆ ಮೈಲ್ ಬರುವವರೆಗೂ . " you are requested to attend a meeting at the down stair assemble hall " ಅಂತ .
ಮನೆಯ ಸ್ಠಿತಿ , ಸಾಲ , ಕೆಲಸ ಹುಡುಕುವ ಕಷ್ಟ, ಅಕ್ಕನ ಮದುವೆ ಗೆ ಇನೂ ೮ ತಿಂಗಳು. ದುಡ್ಡು ಹೊಂಚುವ ಬಗೆ ನೆನೆಸಿಕೊಂದರೆ ಕಣ್ಣು ಕತ್ತಲೆಯಾಗುತಿತ್ತು. ಹಾಗೂ ಹೀಗೂ ಮೀಟೀಂಗ್ಗೆ ಹೋದೆ. ಒಂದಷ್ಟು ಜನ ಮ್ಯಾನೇಜಮೆಂಟ್ನ ಜೊತೆ ಜಗಳ ವಾಡುತ್ತ್ತಿದ್ದರು. ಏನೋ ಮಾತು ಕತೆ. ಕೊನೆಗೆ ಏನೋ ಉಪಕಾರ ಮಾಡುವಂತೆ ಎರೆಡು ತಿಂಗಳ ಸಂಬಳವನ್ನು ಪರಿಹಾರವಾಗಿ ಕೊಡುವ ಮತು ನಡೆಯುತ್ತಿತು.ಮಾತು ಮುಗಿಯುತ್ತಿದ್ದಂತೆ ನಾನು ಅಲ್ಲಿಂದ ಸೀದ ೫ ನೇ ಅಂತಸ್ತಿಗೆ ಬಂದೆ. ಹ್ಯಾಗೆ ಮುಂದೆ ಏನು ಮಾಡಬೇಕು ಎಂದು ತೋಚಲಿಲ್ಲ. ಅಕ್ಕನ ಮದುವೆಗೆ ಸಾಲ ಈಗ ಯಾರು ಕೊಡುತ್ತಾರೆ . ಅಮ್ಮನಿಗೆ ಹೇಗೆ ಮುಖ ತೋರಿಸುವುದು. ಬರೀ ಪ್ರಶ್ನೆಗಳೆ ಕಣ್ಣ ಮುಂದೆ . ಮೊದಲ ಬಾರಿ ನನ್ನ ಸಾಮರ್ಥ್ಯದ ಮೇಲೆ ನಂಬಿಕೆ ಹೊರಟು ಹೋಗಿತ್ತು. ನಾನು ಅಪ್ರಯೋಜಕಳು . ಹಾಗಿಲ್ಲದಿದ್ದಲ್ಲಿ ನನ್ನನ್ನು ಕೆಲಸದಲ್ಲಿ ಮುಂದುವರೆಸುತಿದ್ದರುನನ್ನಂಥವಳು ಭೂಮಿಯ ಮೇಲೆ ಯಾಕಿರಬೇಕು ಎಂಬ ಅನಿಸಿಕೆ ಬಂದ ಕೂಡಲೆ ನನಗೆ ಹೊಳೆದಿದ್ದು ಇಲ್ಲಿಂದ ಜಿಗಿದು ಪ್ರಾಣ ಬಿಡುವ ಯೋಚನೆ.ಅದನ್ನು ಕಾರ್ಯರೂಪಕ್ಕೆ ಇಳಿಸಲು ಕಟ್ಟೆಯ ಹತ್ತಿರ ಬಂದೆ ಸುತ್ತ ಯಾರೂ ಇರಲಿಲ್ಲ . ಸಾವಿನ ಭಯ ಆ ಕ್ಷಣ ಕಾಡಲೇ ಇಲ್ಲ. ಇನ್ನೆನು ಜಿಗಿಯಬೇಕು ಎಂದು ಗಟ್ಟ್ ಮನಸ್ಸು ಮಾಡಿಕೊಂಡೆ ಎನ್ನುವಾಗ .................ಹೆಗಲ ಮೇಲೆ ಕೈ ಒಂದು ಬಿತ್ತು . ಅದು ನನ್ನ ಸಹೋದ್ಯೋಗಿ ಅನೂ ಳದ್ದು."hey roopa what ru doing here. . come let us go down" ಎಂದಳು" ನೊ ಅನು ನಂಗೆ ಬದುಕಿರೋಕೆ ಇಷ್ಟ ಇಲ್ಲ . ಇವರು ಇದ್ದಕಿದ್ದಂತೆ ಹೀಗೆ ಮಾಡಿದರೆ ಹ್ಯಾಗೆ. ಒಂದೆ ಸಲ ಅಕಾಶಕ್ಕೇರಿಸಿ ಅಲ್ಲಿಂದ ಕೆಳಗೆ ತಳ್ಲಿಬಿಬಟ್ಟರಲ್ಲ ಪಾತಾಳಕ್ಕೆ" ಎಂದೆ"ಏ ರೂಪ ನಿಂಗೆ ಹುಚ್ಚು ಹಿಡಿದಿದೆಯಾ . ನಾನು ಒಂದು ಮಾತು ಕೇಳ್ತೀನಿ ಅದಕ್ಕೆ ಉತ್ತರ ಹೇಳಿ ನೀನು ಸಾಯಿ ಅಥವ ಬದುಕು ನಿನ್ನಿಷ್ಟ "ಎಂದಳು" ನೀನು ಅಮ್ಮನ ಹೊಟ್ಟೇಲಿ ಇದ್ದಾಗ ನಿಂಗೆ ಗೊತ್ತಿತ್ತ *** ಕಂಪೆನಿ ಇದೆ ಅಂತ? ನೀನು ಇದನ್ನೆ ನಂಬಿಕೊಂಡು ಹುಟ್ಟಿದ್ಯಾ? ಕಷ್ಟ ಎಲ್ಲರಿಗೂ ಇದ್ದದ್ದೇ .ಆದರೆ ಅದಕ್ಕೆ ಈ ರೀತಿಯ ಕೊನೆ ಬೇಕಾಗಿಲ್ಲ . ನನ್ನನ್ನೇ ನೋಡು ೩೦ ವರ್ಷ ಆಯ್ತು ಮದುವೆ ಇಲ್ಲ ಬಂದೋರೆಲ್ಲಾ ನಾನು ಚೆನಾಗಿಲ್ಲ ಅಂತ ಹೇಳಿ ದೂರ ಹೋಗ್ತಿದ್ದಾರೆ. ಹಾಗಂತ ನಾನು ಸಾಯೋದಿಲ್ಲ ಅಲ್ಲವಾ? ನಿಂಗೆ ಇನೂ ಚಿಕ್ಕ ವಯಸ್ಸು ನಿಮ್ಮ ಅಮ್ಮ ನಿನ್ನ ಮೇಲೆ ಏನೇನೂ ಆಸೆ ಇಟಿದ್ದಾರೆ ಅವ್ರೆಲ್ಲಾ ಏನು ಮಾಡಬೇಕು ಹೇಳು ?
ಅಷ್ಟು ಹೊತ್ತಿಗೆ ನನ್ನ ಆವೇಶ ಕುಗ್ಗಿತು ಏನಾದರೂ ಆಗಲಿ ಎಂದು ಕೆಳಗೆ ಬಂದೆ. ಅವಳ ಆ ಹೊತ್ತಿಗೆ ಬರದಿದ್ದರೆ ಇದನ್ನು ಹೇಳಲು ನಾನು ಬದುಕಿಯೇ ಇರುತ್ತಿರಲಿಲ್ಲ. ಅವಳು ಈಗ ಹೇಗಿದ್ದಾಳೋ ಎಲ್ಲಿದ್ದಾಳೋ ಗೊತ್ತಿಲ್ಲ .ಆದರೆ ಅವಳನ್ನಂತೂ ಮರೆಯಲಾಗುವುದಿಲ್ಲಹಾಗೂ ಹೀಗೂ ನಮ್ಮಕ್ಕನ ಮದುವೆಗೂ ಸುಸ್ಸೊತ್ರವಾಗಿ ನಡೆಯಿತು ಅದೇ ಆಗಸ್ಟನಲ್ಲಿ .
ಆದರೆ ಅಲ್ಲಿಂದ ಹೊರಗೆ ಬಂದ ಮೇಲೆ ನಾನನುಭವಿಸಿದ ಕಷ್ಟ ವಿದೆಯಲ್ಲ ಅದೇ ಇನ್ನೊಂದು ಕತೆ. ಅದನ್ನು ಇನ್ನೊಮ್ಮೆ ಬರೆಯುತ್ತೇನೆ
ನೆನ್ನೆ ಡೈರಿ ತೆಗೆದು ಓದಿದಾಗ ನಾನು ಅಟೆಂಡ್ ಮಾಡಿದ ಇಂಟರ್ ವ್ಯೂ ಗಳು ಅವಗಳ ಅಡ್ರೆಸ್ ನೋಡಿದಾಗ ಎಲ್ಲಾ ನೆನಪಾಯಿತು.

Thursday, April 24, 2008

ಅನಾಮಿಕ

ಹೆಸರಿಲ್ಲದವನಿಗೆನಾನು ನೆನ್ನೆ ನಿನ್ನ ನೋಡಿದೆ ೧೦ ವರ್ಷಗಳ ಈ ಸುಧೀರ್ಘ ಅವಧಿಯ ನಂತರ. ಸಮಯ ನನ್ನಲ್ಲೂ, ನನ್ನ್ ಜೀವನದಲ್ಲೂ ಏನೇನೋ ಬದಲಾವಣೆ ಮಾಡಿದೆ. ಹಾಗೆಯೆ ನಿನ್ನ ಮುಖದಲ್ಲೂ .ಹಿಂದಿನ ಆ ದಿನಗಳನ್ನು ಮತ್ತೊಮ್ಮೆ ನೆನಪಿಸಿಕೊಂಡರೆ ಈಗಲೂ ಕಿರುನಗೆ ಬರುತ್ತದೆ.ನನ್ನ ಜೀವನದಲ್ಲಿ ಆಗಷ್ಟೆ ವಸಂತ ಕಾಲ . ಸ್ಕೂಲಿಗೆ ಹೋಗುವುದು , ಹರಟೆ ಹೊಡೆಯುವುದು, ಜಗಳ ಮಾಡುವುದು ಇವಿಷ್ಟೆ ಪ್ರಪಂಚ ನಮಗೆಲ್ಲಾ.ಆ ದಿನ ಬಸ್ ಕೆಟ್ಟು ನಿಂತು ಹೋಗಿತ್ತು ಅದೇ ಗೋವರ್ಧನ ಸ್ಟಾಪ್ ನಲ್ಲಿ .ನಮಗೆಲ್ಲ ಮನೆಗೆ ಲೇಟ್ ಆಗಿ ಹೋಗಬಹುದಲ್ಲ ಎಂಬ ಖುಷಿ .ಆಗಲೆ ಗೆಳತಿಯೊಬ್ಬಳು "ಏಯ್ ನೋಡೆ ಅಲ್ಲಿ ಯಾರೊ ಹ್ಯಾಗೆ ತಿನ್ನೋ ಹಾಗೆ ನೋಡ್ತಾ ಇದಾನೆ " ಅಂದಳು .ಇನ್ನೊಬ್ಬಳು " ಅಯ್ಯೊ ಬಿಡ್ರೆ ಅವರಿರೋದೆ ನೋಡೋಕೆ " ಅಂತ ಹೇಳಿದಳುಆದರೂ ಕಳ್ಳ ಮನಸ್ಸು ನೋಡೆ ಬಿಡುವ ಎಂದು ತಿರುಗಿದೆ. ಅದನ್ನೆ ಕಾಯುತ್ತಿರುವ್ವನಂತೆ ನೀನು ಕಣ್ಣು ಮಿಟುಕಿಸಿದೆ (ಹೊಡೆದೆ). ಕೋಪದಿಂದ ರಾಸ್ಕಲ್ ಎಂದು ಅಂದಿದ್ದನ್ನು ನೀನು ಕೇಳಿಸಿಕೋಡೆಯೇನೂ . ಸೀದಾ ನನ್ನ ಬಳಿಯೇ ಬರುವುದೇ?ನನ್ನ ಸ್ನೇಹಿತೆ" ಯಾಕೆ ಏನಾದ್ರೂ ಚಪ್ಪಲೀಲಿ ಬೇಕಿತ್ತಾ " ಅಂತ ಕೇಳಿದಾಗ ,"ಓ ಅವರು ಕೊಟ್ಟರೆ ತಗೋಳಕ್ಕೆ ರೆಡಿ " ಆಂತ ಹೇಳಿದೆ ನನ್ನತ್ತ ಕೈ ತೋರಿ.ನಾನ್ಯಾಕೆ ಅಲ್ಲಿ ನಿಂತಿರಬೇಕು? ಸ್ನೇಹಿತೆಯ ಕೈ ಹಿಡಿದು ಕೊಂಡು ಸಿಕ್ಕ ಬಸ್ ಹತ್ತಿದೆ.ಅದರೆ ನೀನು ಮತ್ತೆ ಮತ್ತೆ ನನ್ನ ಹಿಂದೆ ಬಂದು ನಿಂತೆ ಹಿಂದೆ ತಿರುಗಿದಾಗಲೆಲ್ಲಾ ಒಂದು ಸ್ಮೈಲ್ ಕೊಡುತ್ತಿದ್ದ್ದೆ
ಅಷ್ಟೆ ಅಲ್ಲ ನಾನಿಳಿಯುವ ಸ್ಟಾಪ್ ನಲ್ಲೇ ಇಳಿದೆ .
ಬಸ್ ಸ್ಟಾಪ್ ನಿಂದ ನಮ್ಮ ಮನೆಯ ವರೆಗೂ ನನ್ನ ಹಿಂದೆ ಹಿಂದೆಯೆ ಬರುತ್ತಿದ್ದಾ ಗ ಹೆದರಿಕೆ ಜಾಸ್ತಿಯೇ ಆಗಿತ್ತು.ಆದರೆ ನೀನು ನಮ್ಮ ಮನೆಯ ಮುಂದೆಯೇ ಹೋಗಿ ಇನ್ನೂ ಕೆಳಗಡೆ ಹೋದಾಗ ತಿಳಿಯಿತು ನಿಮ್ಮ ಮನೆಯೂ ಅಲ್ಲೇ ಎಂದು .ಅಂದಿನಿಂದ ಶುರು ನಿನ್ನ ಕೀಟಲೆ ನಾನು ಸ್ಕೂಲಿಗೆ ಹೊರಡುವ ಸಮಯಕ್ಕೆ ನೀನೂ ಹಾಜಾರ್ ಮನೆಯ ಮುಂದೆ . ಕಲರ್ ಡ್ರೆಸ್ ಹಾಕಿದಾಗ ನಾನ್ಯಾವ ಬಟ್ಟೆ ಹಾಕುತ್ತಿದ್ದೇನೊ ನೀನೂ ಅದೇ ಕಲರ್ ಬಟ್ಟೆ ಹಾಕುತ್ತಿದ್ದೆ. ವಾಪಸ್ ಬರುವ ಸಮಯಕ್ಕೆ ನೀನು ಬರುತ್ತಿದೆ ಹಿಂದೆಯೇ. ಕಾಲೇಜ್ ಅಟೆಂಡ್ ಮಾಡುತ್ತಿದ್ದೆಯೋ ಇಲ್ಲವೋ. ನನ್ನ ಬರ್ತ್ ಡೆ ದಿನ ದೂರದಿಂದಲೆ ನನ್ನ ಉಡುಗೆಯ ಬಗ್ಗೆ ಬೊಂಬಾಟ್ ಎಂಬ ಸನ್ನೆ ಮಾಡಿದ್ದೆ.ಗೆಳತಿಯರ ರೇಗಿಸುವಿಕೆಯಿಂದ ನಾನು ನಿನ್ನನ್ನು ಇಷ್ಟ ಪಡುತ್ತಿದ್ದ್ದೇನೆಂದು ಅಂದುಕೊಂಡೆ. ನಾವೆಲ್ಲಾ ನಿನಗೆ ಲಾಲ್ ಅಂತ ಹೆಸರಿಟ್ಟಿದ್ದೆವು (ಲಾಲ್ ಅಂದರೆ ಕೆಂಪು ಅಂತ. ನೀನು ಕೆಂಪು ಬಟ್ಟೆ ಹಾಕಿದ್ದೆ ಅಂದು ಮೊದಲ ದಿನ).ಹೀಗೆ ಗೊತ್ತಿಲ್ಲದೆ ನೀನು ನನ್ನ ನಾನು ನಿನ್ನ ಕಾಯಲು ಶುರು ಮಾಡಲಾರಂಭಿಸಿದೆವು . ಒಮ್ಮೆಯೂ ನಿನ್ನೊಡನೆ ಮಾತಾಡಿರಲಿಲ್ಲ ನಾನು. ನೀನು ಮಾತಾಡಲು ಬಂದಾಗಲೆಲ್ಲಾ ಓಡಿ ಹೋಗುತ್ತಿದ್ದೆ ನಾನು. ಮನೆಯ ಪರಿಸ್ಥಿತಿ ನನ್ನನ್ನು ದುಡುಕದಂತೆ ತಡೆದಿತ್ತು.
ಕೆಲವು ದಿನಗಳ ನಂತರ ಅಂದು ದಿನಸಿ ಅಂಗಡಿಯಲ್ಲಿ ಏನೂ ತೆಗೆದುಕೊಳಲು ಬಂದೆ ನಾನು . ಅಲ್ಲೆ ನೀನು ಕಾಣಿಸಿದೆ . ಹೆದರಿಕೆಯಿಂದ ಹೃದಯ ಹೊಡೆದುಕೊಂಡಿತು. ನಿನ್ನ ಜೊತೆಯಲ್ಲಿ ನಿಮ್ಮ ತಂದೆ ನಿಂತಿದ್ದರು. ಅವರಿಗೆ ಏನೂ ಹೇಳಿ ಓಡಿ ಬಂದವನೇ ." ನಮ್ಮ ಅಪ್ಪಂಗೆ ಬಾಂಬೆಗೆ ಟ್ರಾನ್ಸ್ಫೆರ್ ಆಗಿದೆ . ಇದು ಅಲ್ಲಿನ ಆಡ್ಡ್ರೆಸ್ . ನಾನು ಮಾತಾಡೋಕೆ ಬಂದಾಗಲೆಲ್ಲ ತುಂಬ ಹೆದರ್ಕೋತಿದ್ದ್ರಿ ನೀವು . ನಂಗೆ ನೀವಂದ್ರೆ ತುಂಬ ಇಷ್ಟ . ಐ ಲೌ ಯು " ಅಂತ ಹೇಳಿ ಯಾವುದೋ ಮಾಯ್ದಲ್ಲಿ ಕೈಗೆ ಆ ಚೀಟಿ ತುರುಕಿ ಓಡಿ ಹೋಗಿದ್ದೆ .ನಾನೋ ಹೆದರಿಕೆಇಂದ ಆ ಚೀಟಿಯನ್ನು ಅಲ್ಲೇ ಬೀಳಿಸಿ ಮನೆಗೆ ಓಡಿದ್ದೆ.ಅದಾದ ಮೇಲೆನೀನು ಕಾಣಲಿಲ್ಲನಾವೂ ಅಲ್ಲಿಂದ ಬೇರೆ ಊರಿಗೆ ಹೋದೆವು .ಅದಾದ ಮೇಲೆ ನನಗೆ ನಿನ್ನ ನೆನಪು ಬರಲೇ ಇಲ್ಲ. ಬಂದರೂ ಸಹಾ ಅದು ಕೇವಲ ಆಕರ್ಷಣೆ ಮಾತ್ರ ಅಂದುಕೊಂಡು ನನ್ನ ಗುರಿ ಸಾಧಿಸುವತ್ತ ಹೆಜ್ಜೆ ಹಾಕಿದೆ .ಈಗ ಮದುವೆಯೂ ಆಗಿದೆ ಮಗುವೂ ಇದೆ.
ಆದರೆ ನೆನ್ನೆ ನೀನು ಕಾಣಿಸಿದೆ . ಇವರಿಗೆ ನಿನ್ನ ವಿಷ್ಯ ಗೊತ್ತಿದೆ . ನಾನು ನಿನ್ನನ್ನು ತೋರಿಸಿದೆ.
ಅಷ್ಟರಲ್ಲಿ ನಿನ್ನ ಪಕ್ಕದಲ್ಲಿ ಮತ್ತೊಬ್ಬರು ಕಾಣಿಸಿಕೊಂಡಳು ಅವಳು ನಿನ್ನ ಹೆಂಡತಿ ಇರಬಹುದೆನಿಸಿತು.
ಅವಳ ಕಂಕುಳಲ್ಲೂ ಮಗು. ನಿನ್ನ ಮುಖದಲ್ಲಿ ನನ್ನನ್ನು ಕಂಡು ಗಲಿಬಿಲಿ. ಕೂಡಲೆ ಅಲ್ಲಿಂಡ ಓಟ ಕಿತ್ತೆ
ಜೀವನ ಎಷ್ಟು ವಿಚಿತ್ರ ಅಲ್ಲವೇ?
ಇತೀ ನಿನ್ನಒಂದು ಕಾಲದ ಸಹ ಪ್ರಯಾಣಿಕಳು
(ಇದು ವಿಕದ ಸಿಂಪ್ಲಿಸಿಟಿ ಪೇಜಿನ ಈ ಗುಲಾಬಿಯು ನಿನಗಾಗಿ ಯಿಂದ ಪ್ರೇರಿತ, ಇದು ಯಾರ ಕತೆ ಎಂದುದಕ್ಕೆ ಉತ್ತರ " ಎಲ್ಲರ ಕತೆ" )