ಬೆಂಗಳೂರು ಬೆಚ್ಚೆದ್ದು
ಹುಚ್ಚೆದ್ದು ಬೀಳುತಿದೆ
ಚಿಗುರು ಮೀಸೆಯ ಪಡ್ಡೆಗಳು
ಗಡಸು ದನಿಯ ಪುಂಡರು
ಒಗರೊಗರು ಮೊಗದೋರು
ಪುಡಿ ಮರಿ ರೌಡಿಗಳು
ಧಾವಿಸಿ ಬರುತಿರಲು ತನ್ನತ್ತ
ಬೆಂಗಳೂರು ಬೆಚ್ಚೆದ್ದು
ಬೀಳುತಿದೆ
ಉದ್ದ ಜಡೆಯ ಲಲನೆಯರು
ಸುಂದರ ಸಖಿಯರು
ಸುಮಧುರ ವಾಣಿಯರು
ಶಾಂತ ಕನ್ಯೆಯರು
ತನ್ನೊಡಲಿಗೆ ಬಂದಿಳಿವುದ ನೋಡಿ
ಹುಚ್ಚೆದ್ದು ಕುಣಿಯುತಿದೆ
ಜಗದೆಲ್ಲಾ ಮೋಟಾರು ಕಾರುಗಳು
ಮನೆಗೆರೆಡು ಬೋರುವೆಲ್ಲುಗಳು
ದಾರಿಗತ್ತು ಬಾರುಗಳು
ಅಲ್ಲಲ್ಲಿ ಮಚ್ಚ ಮಾಮಗಳು
ತನ್ನಲ್ಲಿ ನೆಲೆಸಿರುವುದ ನೋಡಿ
ಗಾಬರಿಯಾಗುತಿದೆ
ಅಮ್ಮ ಅಕ್ಕ ಆಂಟಿ ಎಂಬೆಲ್ಲ
ಬೈಗುಳಗಳು
ಅಂಟಿ ಕೂತ ಹೆಣ್ಣು
ಗಂಡುಗಳು
ಟಿವಿ ಬಿಟ್ಟಿರದ ಮುದ್ದು
ಕಂದಮ್ಮಗಳು
ಪಾರ್ಲರ್ ದಾರಿ ಹಿಡಿದ
ಎಲ್ಲ್ಲಾ ಲಿಂಗಗಳು
,ತನ್ನೊಳಗೊಂದಾದ ಪರಿಗೆ
ಅಚ್ಚರಿ ಪಡುತಲಿದೆ
ಹುಚ್ಚರಾದ ಮೊಬೈಲ್ ಮಂದಿಗಳು
ಇನ್ನೂ ಸರಿಯಾಗದ ರಸ್ತೆ ಬಿರುಕುಗಳು
ಗಗನ ಚುಂಬಿಸೊ ಕಟ್ಟಡಗಳು.
ಕಟ್ಟಡದೊಳಗಿನ ಬಿಳಿ ಅಂಗಿಗಳು
ಅಂಗಿಯೊಳಗಿನ ಕರಿಮನಸುಗಳು
ತಾನೇ ಆಗಿ ಹೋದ ಪರಿಗೆ
ನಜ್ಜು ಗೊಜ್ಜಾಗಿದೆ ಬೆಂಗಳೂರು
ಸಾಲ ಕೊಡುವ ಬ್ಯಾಂಕ್ಗಳು
ಹಣ ಕೊಡುವ ಎಟಿಎಂಗಳು
ಅಲ್ಲಿಂದಲೆ ದೋಚುವ ಕರಗಳು
ಸಾಲ ವಸೂಲಾತಿಯ ಗೂಂಡಾಗಳು
ಕಿರಿಕಿರಿ ಟೆಲಿಕಾಲರ್ಗಳು
ದಾರಿಯಲಿ ತಡೆವ 'ಹೊಯ್ಸಳ'ರು
ಹಣ ಕೀಳುವ ಮಂಗಳೆಯರು
ತನ್ನಲ್ಲಿ ನೆಲೆಸಿರುವುದ ನೋಡಿ
ಗಾಬರಿಯಾಗುತಿದೆ
ಅಪರಿಚಿತ ದನಿಗೆ ಬೆರಗಾಗಿ
ಕರಗುವ ಹದಿಹರೆಯದವರು
ಪರಿಚಿತರನ್ನೂ ಅಪರಿಚಿತರಾಗಿಸೊ
ಫೇಸ್ ಬುಕ್ ಇ ಮೇಲ್ ಕಮಾಲುಗಳು
ಎಫ್ ಬಿ ಚಾಟುಗಳು ಕಾಫಿ ಡೇ
ಮೀಟುಗಳು, ಡೇಟಿಂಗ್ಗಳು ,
ಕೊನೆಗೆ ಬ್ರೇಕ್ ಆಗುವ
ಹಾರ್ಟುಗಳು
ಹೆಚಾಗಿ ,ಹಾರ್ಟು
ಕಳೆದುಕೊಳ್ಳುತ್ತಿದೆ ಬೆಂಗಳೂರು
ಮನಸಿನ ಮಾತು ಹೊರಗೆ ಬಂದರೆ ಮನದ ದುಗುಡ ಕಡಿಮೆಯಾಗುತ್ತದೆ. ಸಂತೋಷ ಹೆಚ್ಚಾಗುತ್ತದೆ ಎಂದು ನಂಬಿರುವಳು ನಾನು ಹಾಗಾಗಿ ನನ್ನ ಮನದಲ್ಲಿ ಮೂಡಿದ ಭಾವನೆಗಳು ಇಲ್ಲಿ ಪ್ರತ್ಯಕ್ಷವಾಗುತ್ತವೆ
Wednesday, December 4, 2013
Wednesday, October 23, 2013
ಸವಕಲಾದವು
ಏನೆನ್ನಲಿ ಗೆಳೆಯ ...
ನಿನ್ನೊಂದಿಗಾಡಿದ ಮಾತುಗಳು
ಮರೆತು ಹೋದವು
ನನ್ನೊಳಗಿದ್ದ ಮುನಿಸು,ಬೇಸರ
ಕರಗಿಹೋದವು
ಇತ್ತ ಆಣೆಗಳು ಕೊಟ್ಟ ಭಾಷೆಗಳು
ಕೂಡಿಟ್ಟ ಸಿಟ್ಟಿನ ಸನ್ನಿವೇಶಗಳು
ಅಬ್ಬರಿಸಿ ದಡಕೊರಗಿ ನೀರಾದ
ಅಲೆಗಳಾದವು
ಅವನ ಮರೆಯಬೇಕೆಂದುಕೊಂಡ
ಮಾತುಗಳೇ ಸವಕಲಾದವು
ನಾ ನಾನಾಗಬೇಕೆಂಬ ಕನಸುಗಳು
ಗಾಳಿಗೆ ಜಾರಿಬಿದ್ದ ಎಲೆಗಳಾದವು
ಕಂಡ ಚಣ ಅವನ ಮನಸು
ಸಿಹಿ ಕಂಡ ಮಗುವಂತಾಯ್ತು
ಕಹಿಎಲ್ಲ ಮರೆತು ಕುದಿವ ಒಡಲು
ಶಾಂತ ಕಡಲಾಯ್ತು
ನಿನ್ನೊಂದಿಗಾಡಿದ ಮಾತುಗಳು
ಮರೆತು ಹೋದವು
ನನ್ನೊಳಗಿದ್ದ ಮುನಿಸು,ಬೇಸರ
ಕರಗಿಹೋದವು
ಇತ್ತ ಆಣೆಗಳು ಕೊಟ್ಟ ಭಾಷೆಗಳು
ಕೂಡಿಟ್ಟ ಸಿಟ್ಟಿನ ಸನ್ನಿವೇಶಗಳು
ಅಬ್ಬರಿಸಿ ದಡಕೊರಗಿ ನೀರಾದ
ಅಲೆಗಳಾದವು
ಅವನ ಮರೆಯಬೇಕೆಂದುಕೊಂಡ
ಮಾತುಗಳೇ ಸವಕಲಾದವು
ನಾ ನಾನಾಗಬೇಕೆಂಬ ಕನಸುಗಳು
ಗಾಳಿಗೆ ಜಾರಿಬಿದ್ದ ಎಲೆಗಳಾದವು
ಕಂಡ ಚಣ ಅವನ ಮನಸು
ಸಿಹಿ ಕಂಡ ಮಗುವಂತಾಯ್ತು
ಕಹಿಎಲ್ಲ ಮರೆತು ಕುದಿವ ಒಡಲು
ಶಾಂತ ಕಡಲಾಯ್ತು
Wednesday, September 18, 2013
ನಿದಿರೆಗೆ ರಜವನೀ
********************************
ನಿದಿರೆಗೆ ರಜವನೀ ಎಂದನಾತ ಕೇಳೇ
ಮದಿರೆಯ ನಿಶೆಯ ಸುರಿದನಾತ ಕಣೆ
[ಕುದಿವ ಕಡಲ ಕಲುಕಿದವನಾತ ಗೆಳತಿ
ಆಧರವ ತೋರ್ಬೆರಳಲಿ ಮೀಟಿದನೇ
ನಾಸಿಕದ ನಾಚಿಕೆಯಾ ತೊಲಗಿಸಿದನೇ
ಕಂಗಳಂಚಿಗೆ ತುಟಿಯ ಸಂಗವನೀಯ್ದ ಕಣೇ
ಕರಕೆ ಸಲ್ಲದ ಸಲುಗೆಯನಿತ್ತನವ
ನೆಲಕೆ ಮೆಲ್ಲಗೆ ಸೆರಗ ದೂಡಿದನವ
ಬಾಹುವಿಗೆ ನನ್ನ ಒಡ್ಡಿಕೊಂಡವ
ಆ ಕರಗದ ಆಸೆಗೆ ಸೋತೆನೇ ನಾ ಗೆಳತಿ
ಈ ಇಂಗದ ದಾಹಕೆ ನೀರಾದನೇ ಆವ ಗೆಳತಿ
ನಿದಿರೆಗೆ ರಜವನೀ ಎಂದನಾತ ಕೇಳೇ
ಮದಿರೆಯ ನಿಶೆಯ ಸುರಿದನಾತ ಕಣೆ
[ಕುದಿವ ಕಡಲ ಕಲುಕಿದವನಾತ ಗೆಳತಿ
ಆಧರವ ತೋರ್ಬೆರಳಲಿ ಮೀಟಿದನೇ
ನಾಸಿಕದ ನಾಚಿಕೆಯಾ ತೊಲಗಿಸಿದನೇ
ಕಂಗಳಂಚಿಗೆ ತುಟಿಯ ಸಂಗವನೀಯ್ದ ಕಣೇ
ಕರಕೆ ಸಲ್ಲದ ಸಲುಗೆಯನಿತ್ತನವ
ನೆಲಕೆ ಮೆಲ್ಲಗೆ ಸೆರಗ ದೂಡಿದನವ
ಬಾಹುವಿಗೆ ನನ್ನ ಒಡ್ಡಿಕೊಂಡವ
ಆ ಕರಗದ ಆಸೆಗೆ ಸೋತೆನೇ ನಾ ಗೆಳತಿ
ಈ ಇಂಗದ ದಾಹಕೆ ನೀರಾದನೇ ಆವ ಗೆಳತಿ
Subscribe to:
Posts (Atom)