ನಂಗೆ ಆ ದಿನವೇ ಅನ್ನಿಸಿತ್ತು ಈ ಮುದುಕನ ನೋಟದಲ್ಲಿ ಅದೇನೋ ಇದೆ ಅಂತ.
ಇಲ್ಲವಾದರೆ ಅವತ್ತು ಇಂಟರ್‌ವ್ಯೂನಲ್ಲಿ ಯಾವ ಪ್ರಶ್ನೇನು ಕೇಳದೆ "ಯು ಆರ್ ಸೆಲೆಕ್ಟೆಡ್ " ಅಂತ ಕೈಕುಲಕಲು ಬರುತ್ತಿದ್ದನಾ?
ನಾನೇನು ತ್ರಿಪುರ ಸುಂದರಿ ಅಲ್ಲ . ಆದರೂ ನನ್ನನ್ನೇ ಅವನ ಸೆಕ್ರೆಟರಿ ಪೋಸ್ಟ್‌ಗೆ ತಗೊಂಡ, ಇವನ ವಯಸ್ಸಿಗೆ, ದೃಷ್ಟಿಗೆ ಹೇವರಿಕೆ ಅದರೂ ಯಾವುದೋ ಒಂದು ಕೆಲಸ ಸಿಕ್ಕರೆ ಸಾಕು ಅನ್ನೋ ಪರಿಸ್ಥಿತಿ ಇದ್ದಿದ್ದರಿಂದ ಒಪ್ಕೊಂಡೆ
ಏನೇ ತಪ್ಪು ಮಾಡಿದರೂ ಒಂದೂ ಮಾತು ಹೇಳುತ್ತಿರಲಿಲ್ಲ , ಬದಲಿಗೆ ನಗ್ತಾನೇ ಮಾತಾಡ್ತಿದ್ದ. ಅವನು ಹೇಳ್ಕೊಡ್ವೇಕು ಅಂದ್ರೂ ಅದೇನು ಅಷ್ಟೊಂದು ಹತ್ರ ಬರ್ತಾನೆ, ಥೂ ಒಮ್ಮೊಮ್ಮೆ ಈ ಬದುಕೇ ಬೇಡ ಅಂತನ್ನಿಸುತ್ತೆ, ಎಲ್ಲಾ ಹೋಗ್ಲಿ ಇವತ್ತು ಇವನ ಮನೆಗೆ ಬಾ ಅದೇನೋ ಫಂಕ್ಷನ್ ಇದೆ ಅಂತ ಹೇಳಿ ನನ್ನನ್ನ ಮನೆಗೆ ಕರೆದ, ನಾನೂ ಬಂದ್ರೆ ಇಲ್ಲಿ ಯಾರೂ ಇಲ್ಲ , ಇವನಿಗೇನು ಹೆಂಡತಿ ಮಕ್ಳು ಇದಾರ ಅಥವ ಇಲ್ಲವಾ ಅದೂ ಗೊತ್ತಿಲ್ಲ, ಆಫೀಸಿನವರೆಲ್ಲಾ ಅವನು ಹೆಂಡತಿ ಮಕ್ಕಳನ್ನು ಬಿಟ್ಟು ಬಂದಿದಾನೆ ಅಂತ ಆಡ್ಕೋತಾರೆ.
ನನ್ಕರ್ಮ ಏನು ಮಾಡೋದು
ಅವನ್ಯಾಕೆ ಹೀಗೆ ನೋಡ್ತಾ ಇದಾನೆ ಯಾವುದಕ್ಕೂ ಕೈನಲ್ಲಿ ಚಾಕು ತಗೋಳೋದು ಒಳ್ಲೆಯದು
ನೋಡೋಣ ಏನಾಗುತ್ತೆ ಅಂತ ಹೇಗಿದ್ದರೂ ಕರಾಟೆ ಕಲ್ತಿದೀನಲ್ಲ
ಓ ಇವನೇ ಊಟ ಬಡಿಸ್ತಾನಂತೆ , ಬಡಿಸಲಿ , ಮೋಸ್ಟ್ ಲಿ ಊಟದಲ್ಲಿ ಏನಾದರೂ ಬೆರೆಸೋ ಐಡಿಯ ಇರ್ಬೇಕು .
ಸುಮ್ಮನೆ ಏನು ಬೇಡ ಅಂತ ಹೇಳಿಬಿಡೋದೆ ವಾಸಿ.
ನೀನು ತಿನ್ನಲೇಬೇಕು ಅಟ್ಲೀಸ್ಟ್ ಈ ಸ್ವೀಟ್ಸ್ ಅಂತಿದಾನೆ
ಏನ್ಮಾಡೋದು ಹೋಗ್ಲಿ ತಿಂದ ಹಾಗೆ ನಟಿಸೋದು
ಅಬ್ಬಾ ಎಷ್ಟು ಚೆನ್ನಾಗಿರೋ ನೆಕ್ಲೇಸ್ ಕೊಡ್ತಿದಾನೆ, ನೆಕ್ಲೇಸ್ ಕೊಟ್ಟು ಬುಟ್ಟಿಗೆ ಹಾಕೊಳ್ಲೋ ಉಪಾಯ ಮಾಡಿದಾನೆ
ಇದನ್ನ ಬೇಡ ಅನ್ನೋಕೆ ಮನಸೇ ಬರ್ತಿಲ್ಲ
ಆದರೂ ಬೇಡ ಬೇಡ ಇದೆಲ್ಲಾ ನನ್ನ ಹೊಡ್ಕೊಳ್ಲೋದಿಕ್ಕೆ ಹೆಜ್ಜೆ ಹೆಜ್ಜೆಗೂ ಹೊನ್ನೇ ಸುರಿಯಲಿ ಗೆಜ್ಜೆ ಪೂಜೆಯ ಉರುಳಿಗೆ ಕೊರಳನೆಂದೂ ನೀಡೆನು ಅಂತ ಹಾಡು ಬೇರೆ ಬರ್ತಾ ಇದೆ ಬಾಯಿಗೆ.
ಇನ್ನೆಷ್ಟು ಕೊಬ್ಬು ಇದ್ರೆ ನನ್ನ ಆ ರೂಮಿಗೆ ಕರೀತಾ ಇದಾನೆ ಇವನು ನನಗೋಸ್ಕರ ಅಂತಾನೇ ಆ ರೂಂ ತುಂಬಾ ದಿನದಿಂದ ಕಾಯುತ್ತಿತ್ತಂತೆ. ಅದಕ್ಕೆ ಇಷ್ಟು ದಿನದಿಂದ ಬಾಗಿಲು ತೆಗೀದೆ ಹಾಕಿಬಿಟ್ಟಿದ್ದನಂತೆ
ಇರಲಿ ಇವನ ಹೆಣ ಉರುಳಿಸಿ ಇಲ್ಲಿಂದ ಹೋಗ್ತೀನಿ
ಹಾಗೂ ಹೀಗೂ ರೂಮಿಗೆ ಧೈರ್ಯ ಮಾಡಿ ಬಂದು ಬಿಟ್ಟಿದೀನಿ ಇವನ್ಯಾಕೆ ನನ್ನ ಹೀಗೆ ನೋಡ್ತಾ ಇದಾನೆ ? ಹೆಣ್ಣನ್ನ ಯಾವತ್ತೂ ನೋಡದ ಹಾಗೆ .
ಅಬ್ಬ ದಿವಾನ್ ಮೇಲೆ ಕೂತ್ಕೊಳೋದಿಕ್ಕೆ ಬೇರೆ ಹೇಳ್ತಿದ್ದಾನೆ, ವ್ಯಾನಿಟಿಬ್ಯಾಗ್ನಲ್ಲಿರೋ ಚಾಕು ಯಾವಾಗ ಮೇಲೆ ಬರುತ್ತೋ ಗೊತ್ತಿಲ್ಲ.
ಅಯ್ಯೋ ಕಿಟಕಿ ಬಾಗಿಲು ಹಾಕಿದ, ಟಿವಿ ಬೇರೆ ಆನ್ ಮಾಡ್ತಿದಾನೆ, ಡಿವಿಡಿ ಪ್ಲೇಯರ್ ಸಹಾ ಆನ್ ಮಾಡ್ತಾ ಇದಾನೆ, ಏನು ಪಾರ್ನ್ ಫಿಲಮ್ ಹಾಕ್ತಾನ ?
ಉಸಿರು ಬಿಗಿ ಹಿಡಿದು ಕುಳಿತಿದ್ದೆ, ಇನ್ನೇನು ನೋಡುವುದರಲ್ಲಿದೆಯೋ , ಡವಡವ ಎನ್ನುವ ಎದೆಯೊಂದಿಗೆ ಚಾಕುವನ್ನು ಭದ್ರವಾಗಿ ಹಿಡಿದು ಕುಳಿತಿದ್ದೆ,
ಟಿವಿಯಲ್ಲಿ ಬಟನ್ ಒತ್ತಿದ ತಕ್ಷಣ ಶುರುವಾಯಿತು
ಲೋಡಿಂಗ್
ನಂತರ
ಪ್ಲೇ
ನನ್ನ ಬಾಯಿ ಹಾಗೆ ತೆರೆದು ಕೊಂಡಿತು
ಅಲ್ಲಿ ಒಬ್ಬ ಹದಿನೆಂಟರ ಬಾಲೆಯ ಹುಟ್ಟಿದ ಹಬ್ಬದ ಸಡಗರ
ಆ ಹುಡುಗಿಯ ಪಕ್ಕದಲ್ಲಿ ಈ ಬಾಸ್
ಆ ಹುಡುಗಿಯನ್ನು ಎಲ್ಲೋ ನೋಡಿದಂತಿದೆಯಲ್ಲ.
ಅರೆ ಆ ಹುಡುಗಿ ಥೇಟ್ ನನ್ನ ಪಡಿಯಚ್ಚು, ನನ್ನ ಹಾಗೆ ಇದ್ದಾಳಲ್ಲ
ಹುಟ್ಟಿದ ಹಬ್ಬದ ಸಡಗರದ ಮದ್ಯದಲ್ಲಿಯೇ ಇದೇನಿದುಆ ಬಾಲೆಯ ಲಂಗಕ್ಕೆ ಕ್ಯಾಂಡೆಲ್ ಬಿದ್ದು ಅರೆ ಒಂದರೆಕ್ಷಣದಲ್ಲಿ ಮೈಗೆಲ್ಲಾ ಬೆಂಕಿಹಚ್ಚಿಕೊಂಡಿತು.
ಅಷ್ಟೆ ಅದಾದ ನಂತರ ದೃಶ್ಯಗಳು ಇರಲಿಲ್ಲ
ಪ್ರಶ್ನಾರ್ಥಕವಾಗಿ ಬಾಸ್‍ನ ಮುಖ ನೋಡಿದೆ
ಕಣ್ಣುಗಳ್ಲಲಿ ನೀರು
"ಅವಳೇ ನನ್ನ ಮಗಳು ಆರು ವರ್ಷದ ಹಿಂದೆ ಬೆಂಕಿಗೆ ಸಿಲುಕಿ ಸುಟ್ಟು ಹೋದವಳು
ನಾನು ದಂಗಾದೆ
ಆತ ಹೇಳುತ್ತಾ ಹೋದರು
"ಜೀವನದಲ್ಲಿ ಗುರಿ, ಮೇಲೆ ಬರಬೇಕೆಂಬ ಹಟ, ಹಣದ ಹುಚ್ಚು ಇವುಗಳಿಂದ ನನ್ನ ಹಾಗು ನನ್ನ ಹೆಂಡತಿಯ ನಡುವೆ ಜಗಳ ಶುರುವಾಯಿತು, ನನ್ನ ಸಾಧನೆಗೆ ಅವಳು ಸಾಥ್ ನೀಡುತ್ತಾಳೆಂದು ಭಾವಿಸಿದ್ದೆ, ಆದರೆ ಅವಳು ಮುಳ್ಳ್ಳಾಗತೊಡಗಿದಳು, ನನ್ನಿಂದ ಬಯಸಿದ ಪ್ರೀತಿ ಸಿಗದ ಅವಳು ಬೇರೆ ಕಡೆ ಹುಡುಕತೊಡಗಿದಳು, ಅದರಿಂದ ಕೊನೆಗೆ ನನ್ನಿಂದ ಬೇರೆಯೂ ಆದಳು . ಜೊತೆಗೆ ನನ್ನಮಗಳೂ ನನಗೆ ಅವಳ ಮೇಲೆ ಅಪಾರ ಪ್ರೀತಿ, ಅವಳಿಗೂ ಅಷ್ಟೇ ನಾನೆಂದರೆ ಪ್ರಾಣ,
ಇಬ್ಬರೂ ಎಲ್ಲಿ ಹೋದರೋ ತಿಳಿಯಲಿಲ್ಲ. ನಾನು ನನ್ನ ಗುರಿಯ ಸಾಧನೆಯಲ್ಲಿ, ಹಸಿವು, ಪ್ರೇಮ, ಪ್ರೀತಿ, ಕಾಮ ಇವೆಲ್ಲವನ್ನೂ ಮೀರಿ ಬೆಳೆದೆ
ಸುಮಾರು ಹನ್ನೆರೆಡು ವರ್ಷಗಳಾದ ಮೇಲೆ ನನ್ನ ಮಗಳು ನನಗೆ ಸಿಕ್ಕಳು, ಆದರೆ ನನ್ನ ಹೆಂಡತಿ ಸಿಗಲಿಲ್ಲ, ಅವಳಾಗಲೇ ಬೇರೊಬ್ಬನ ಮಡದಿಯಾಗಿ ಹಾಗು ಮತ್ತೆರೆಡು ಮಕ್ಕಳ ತಾಯಾಗಿ ಹಾಯಾಗಿದ್ದಳು, ಅವಳ ಹೊಸ ಗಂಡನನ್ನು ಮೆಚ್ಚಿಸಲು ಅವಳ ಕುಡಿಯನ್ನು ಹಾಸ್ಟೆಲ್‍ನಲಿ ಬೆಳೆಸಿದ್ದಳು
ಕೊನೆಗೂ ನನ್ನ ಮಗಳು ನನ್ನನ್ನ ಹುಡುಕಿಕೊಂಡು ಬಂದಳು. ನನ್ನ ಮಗಳ ಜೊತೆ ಆರು ದಿನ ಕೇವಲ ಆರೇ ದಿನ ಖುಷಿಯಾಗಿದ್ದೆ
ಇದುವರೆಗೂ ಏನೇನು ಕಳೆದುಕೊಂಡಿದ್ದೆ ಎನ್ನುವುದು ಅರ್ಥವಾಗಿ ಅದನ್ನು ಮತ್ತೆ ಪಡೆಯುವದರ ಒಳಗಾಗಿ ನನ್ನ ಮಗಳ ಜನ್ಮದಿನಾಂಕ ಬಂತು , ಎಂದೂ ಇಲ್ಲದಷ್ಟು ಆದ್ಧೂರಿಯಾಗಿ ಸಮಾರಂಭ ಮಾಡಿದೆ
ನನ್ನ ಮಗಳ ಜನ್ಮ ದಿನವೇ ಅವಳ ಮರಣದಿನವಾಗುತ್ತದೆ ಎಂದು ತಿಳಿದಿದ್ದರೆ ಖಂಡಿತಾ ಅದನ್ನು ಸೆಲೆಬ್ರೇಟ್ ಮಾಡ್ತಿರಲಿಲ್ಲ.
ಅವಳ ಸಾವಿಗೆ ನಾನೆ ಕಾರಣ ಅಂತ ಅನ್ನಿಸಿದಾಗಲೆಲ್ಲಾ ಯಾರೊಂದಿಗೂ ಮಾತಾಗಲಿ ಕತೆಯಾಗಲಿ ಬೇಡ ಅನ್ನಿಸುತ್ತದೆ
ಈಗ ಯಾರಿಗಾಗಿ ಈ ಆಸ್ತಿ , ಹಣ
ಹೀಗೆ ಎಲ್ಲಾ ಕಳೆದುಕೊಂಡಿದ್ದ ನಾನು
ಎರೆಡು ತಿಂಗಳ ಹಿಂದೆ ಕೆಲಸಕ್ಕಾಗಿ ಹುಡುಕುತ್ತಿದ್ದ ನಿನ್ನನ್ನು ನೋಡಿದೆ, ನೀನು ಅವತ್ತು ನನ್ನ ಸ್ನೇಹಿತನೊಬ್ಬನ ಕಂಪೆನಿಯಲ್ಲಿ ಅಳುತ್ತಾ ಹೋಗುತ್ತಿದ್ದೆ, ನಿನ್ನನ್ನು ನೋಡಿದ ಕೂಡಲೆ ದಂಗಾದೆ ನಾನು ಏಕೆಂದರೆ ನೀನು ನನ್ನ ಮಗಳ ಪಡಿಯಚ್ಚು,
ಹಾಗಾಗಿಯೇ ನಿನ್ನ ಕರೆಸಿ ಕೆಲಸಕ್ಕೆ ಕರೆದದ್ದು
ಇವತ್ತು ಅವಳ ಹುಟ್ತಿದ ಹಬ್ಬ , ನನ್ನ ಮಗಳು ನನ್ನಿಂದ ದೂರವಾದ ದಿನ, ಇವತ್ತು ನಿನ್ನ ಹತ್ತಿರ ಒಂದು ಬೇಡಿಕೆ
ನನ್ನ ಮಗಳನ್ನು ನಿನ್ನಲ್ಲಿ ಕಾಣಲು ಅನುಮತಿ ನೀಡುತ್ತೀಯಾ"
ಆತನ ಮಾತು ಕೇಳುತ್ತಿದ್ದಂತೆ ಇಲ್ಲ ಸಲ್ಲದ್ದನ್ನು ಊಹಿಸಿಕೊಂಡ ನನ್ನ ಮೇಲೆ ಜಿಗುಪ್ಸೆ ಹುಟ್ಟಿತು, ಪ್ರಪಂಚದಲ್ಲಿ ಗಂಡಸರೆಂದರೆ ಎಲ್ಲರೂ ಮೋಸಗಾರರೇ ಎಂಬ ನನ್ನ ಅನುಭವವೇ ಇದಕ್ಕೆ ಕಾರಣವಾಗಿರಬಹುದು
ಅಪ್ಪ ಎಂಬ ವ್ಯಕ್ತಿ ಅಮ್ಮನಿಗೆ ನನ್ನ ಕೊಟ್ಟು ಕೈಕೊಟ್ಟ ಹಾಗಾಗಿ ಅಪ್ಪ ಎನ್ನುವ ಪದವೇ ನನಗೆ ಅಸಹ್ಯವಾಗಿತ್ತು, ಅಲ್ಲಿಂದ ಗಂಡಸರನ್ನು ದ್ವೇಷಿಸಿಕೊಂಡೇ ಬೆಳೆದೆ.
ಆದರೆ ಮಗಳ ಮೇಲೆ ಅಪಾರ ಪ್ರೀತಿ ಇಟ್ಟಿದ್ದ ಈ ವ್ಯಕ್ತಿ ಆ ಭಾವನೆಯನ್ನು ದೂರ ಮಾಡಿದ್ದ.
ಏನೂ ಹೇಳಲೂ ತೋಚಲಿಲ್ಲ
ಅಪ್ಪಾ ಎಂದು ಅಪ್ಪುವುದು, ಕಾಲಿಗೆ ಬೀಳುವುದು ಎಲ್ಲವೂ ಸಿನಿಮೀಯಾವಾಗುವುದು ಎನ್ನಿಸಿತು.
"ಸಾರ್ ನೀವು ನನಗೆಂದು ಬಾಸೇ, ಆದರೆ ನಾನು ನಿಮಗೆ ಮಗಳಂತೆ ಕಂಡು ನಿಮ್ಮ ಮನಸಿಗೆ ಕೊಂಚ ನೆಮ್ಮದಿಯಾಗುವುದಾದರೇ ನನ್ನ್ನ ಅಭ್ಯಂತರವೇನಿಲ್ಲ. ಆದರೂ ನಾನು ನಿಮ್ಮನ್ನ ಅಪ್ಪ ಎಂದು ಒಪ್ಪಲು ಸಾಧ್ಯವಿಲ್ಲ , ಏಕೆಂದರೆ ನಾನು ಅಂದುಕೊಂಡ ಅಪ್ಪ ಎನ್ನುವ ಪದಕ್ಕೂ ನಿಮ್ಮ ವ್ಯಕ್ತಿತ್ವಕ್ಕೂ ಬಹಳ ದೂರ, ನನ್ನ ಹೃದಯದಲ್ಲಿ ನಿಮಗಾಗಿ ವಾತ್ಸಲ್ಯ ಗೌರವ ಖಂಡಿತಾ ಇರುತ್ತದೆ ಆದರೆ ಅಪ್ಪನಿಗಾಗಿ ಅಲ್ಲ ನನ್ನ ಭಾವನೆಯನ್ನು ಬದಲಿಸಿದ ನಿಮ್ಮ ಮೇರು ವ್ಯಕ್ತಿತ್ವಕ್ಕಾಗಿ"
ಇನ್ನೇನು ಹೇಳಲು ಮನಸ್ಸು ಬರಲಿಲ್ಲ.
ಆತ ನೋಡುತ್ತಲೇ ನಿಂತರು
ಸುಮ್ಮನೆ ಬಾಗಿಲು ಹಾಕಿಕೊಂಡು ಹೊರಗಡೆ ಬಂದೆ
ಮನಸಿನ ಮಾತು ಹೊರಗೆ ಬಂದರೆ ಮನದ ದುಗುಡ ಕಡಿಮೆಯಾಗುತ್ತದೆ. ಸಂತೋಷ ಹೆಚ್ಚಾಗುತ್ತದೆ ಎಂದು ನಂಬಿರುವಳು ನಾನು ಹಾಗಾಗಿ ನನ್ನ ಮನದಲ್ಲಿ ಮೂಡಿದ ಭಾವನೆಗಳು ಇಲ್ಲಿ ಪ್ರತ್ಯಕ್ಷವಾಗುತ್ತವೆ
Friday, January 9, 2009
Thursday, January 8, 2009
ಆಸರೆ
"ಮದುವೆ? ಮತ್ತೆ ನಾನು? ಗಾಡ್ ಸೇವ್ ಮಿ "
"ಯಾಕಮ್ಮ ಹಾಗೆ ಮಾತಾಡ್ತೀಯಾ"
"ಆಂಟಿ ನಂಗೆ ಮದುವೆ ಈ ಬಸಿರು , ಬಾಣಂತನ , ಗಂಡನ ಚಾಕರಿ ಇವೆಲ್ಲಾ ಬೇಡ . ಮೊದಲಿಗೆ ನಿಮ್ಮ ಹೆಣ್ಣು ಮದುವೆಯಾಗಬೇಕು ಅನ್ನೋ ಸಂಪ್ರದಾಯಾನೆ ಹಿಡಿಸಿಲ್ಲ."
"ನೋಡು ದಿವ್ಯ ನಿನ್ನ ಕಾಲ ಮೇಲೆ ನಿಂತ್ಕೊಂಡ ಮೇಲಾದಾರೂ ಮದುವೆಯಾಗೊ ಮನಸು ಬರುತ್ತೆ ಅನ್ಕೊಂಡ್ರೆ ಏನಮ್ಮ ಹೀಗೆ ಮಾತಾಡ್ತೀತಿದೀಯಾ? ನಿನ್ನನ್ನ ನಿಮ್ಮ ಅಮ್ಮ ಸಾಯುವಾಗ ಜೋಪಾನ ಮಾಡು ಅಂತ ಹೇಳಿ ಹೋದಳು ನಾನು ಇನ್ನೆಷ್ಟು ದಿನಾ ಬದುಕಿರ್ತೀನೋ"
"ಆಂಟಿ ಅಮ್ಮ ಸತ್ತಿದ್ದು ಹೇಗೆ ಅಂತ ನಂಗೆ ಗೊತ್ತು. ಅಪ್ಪನ ಚಾಕರಿ ಮಾಡಿ, ಮಾಡಿ ಅವನ ಬೈಗುಳಕ್ಕೆ, ಏಟಿಗೆ ಗುರಿಯಾಗಿ ನರಳಿ ನರಳಿ ಸತ್ತಳಲ್ಲಾ ಅದು ನಿಮಗೂ ಗೊತ್ತು. ಅಮ್ಮ ಸತ್ತ ಮೇಲೆ ಹೆತ್ತಪ್ಪ್ಪ ನನ್ನನ್ನು ಮಗಳೇ ಅಂತ ಒಂದು ಬಾರಿ ಸಹಾ ಪ್ರೀತಿಸಲಿಲ್ಲ. ಅವನಿಗೆ ಅವನ ತೀಟೆ ಮುಖ್ಯವಾಯ್ತು. ಬೇರೊಬ್ಬಳನ್ನು ಮದುವೆಯಾದ. ಅಮ್ಮ ಮದುವೆಯಾಗಿ ಯಾವ ಸುಖ ಪಡೆದಳು?ಇನ್ನು ನಿಮ್ಮ ಜೀವನ ತರ್ತಿದ್ದ ಸಂಬಳಾನೆಲ್ಲಾ ಮೇಲೆ ಸುರಿಯುತ್ತಿದ್ದರೂ ಸಮಾಧಾನವಾಗದ ನಿಮ್ಮ ಗಂಡ ಕೊನೆಗೆ ಇನ್ನಷ್ಟಿ ದುಡ್ಡು ಬೇಕು ಅಂತ ನಿಮ್ಮನ್ನ ನೀವಿರೋ ಈ ನರಕ ಕೂಪಕ್ಕೆ ತಳ್ಳಿದನಲ್ಲಾ. ಸಾಲದು ಅಂತ ಅಮ್ಮ ಸತ್ತಾಗ ಇನ್ನೂ ಹದಿನಾಲ್ಕರ ಹರೆಯದ ಹುಡುಗಿ ನಾನು ನನ್ನನ್ನು ಮನೆಗೆ ಕರೆದುಕೊಂಡು ಬಂದಾಗ ನನ್ನ ಮೇಲೆ ಕಣ್ಣು ಹಾಕಿದನಲ್ಲ. ನೀವ್ಯಾವ ಸಂತೋಷ ಅನುಭವಿಸಿದೀರಾ ಹೇಳಿ ಆಂಟಿ?"
ಸರೋಜಾಗೆ ಹಿಂದಿನ ವಿಷಯಗಳನ್ನು ಕೇಳಿಸಿಕೊಂಡು ಅಳುವೇ ಬರತೊಡಗಿತು.
"ನಾನು ಇಲ್ಲಿಗೆ ಬಂದಿದ್ದು ಮದುವೆಯ ವಿಷಯಕ್ಕಾಗಲಿ ಅಥವ ಹಿಂದಿನದೆಲ್ಲಾ ಕೆದುಕಲಾಗಲಿ ಅಲ್ಲ . ನನ್ನ ಓದಿಗಾಗಿ ನೀವು ಮಾಡಿದ ತ್ಯಾಗ ಹೆತ್ತಮ್ಮನೂ ಮಾಡಲಾಗದಂತಹದು. ನನಗೆ ಈಗ ಒಳ್ಲೇ ಸಂಬಳ ಬರುವ ಕೆಲಸ ಸಿಕ್ಕಿದೆ. ಇನ್ನೂ ನೀವು ಈ ನರಕದಲ್ಲಿ ಇರಬೇಡಿ . ನನ್ನ ಜೊತೆ ಬೆಂಗಳೂರಿಗೆ ಬಂದು ಬಿಡಿ. ಹಿಂದಿನ ವಿಷಯಗಳೆಲ್ಲಾ ರಹಸ್ಯವಾಗೆ ಇರಲಿ. ಇನ್ನು ನಾನೆ ನಿಮ್ಮ ಮಗಳು, ನೀವೆ ನನ್ನ ತಾಯಿ"
" ನೋಡು ದಿವ್ಯ . ನಾನು ಈಗಲೋ ಆಗಲೋ ಉರುಳುವ ಮರ. ರೋಗಗಳು ನನ್ನನ್ನ ತಿಂದು ಹಾಕಿವೆ. ಇನ್ನು ಬದುಕಿದರೂ ಸತ್ತರೂ ಒಂದೇ . ನನಗೆ ಇಲ್ಲಿಂದ ಬಂದು ನಿನ್ನ ಜೀವನಾನ ಹಾಳು ಮಾಡಲು ಇಷ್ಟ ಇಲ್ಲ "ಸಾಯುವುದಕ್ಕೆ ಮುಂಚೆ ನಿನ್ನನ್ನ ಯಾರ ಕೈಗಾದರೂ ಇಟ್ಟು ಸಾಯುತ್ತೇನೆ . ನಾನು ಸತ್ತ ಮೇಲೆ ನಿನಗೆ ಯಾರು ಗತಿ ? ಸಮಾಜ ಒಳ್ಳೆಯದಲ್ಲ ಒಂಟಿ ಹೆಣ್ಣು ಬದುಕುವುದು ತುಂಬಾ ಕಷ್ಟ. ತಿಳಿಯಮ್ಮ"
"ಒಂಟಿ ಹೆಣ್ಣು, ಅಬಲೆ , ಇವೆಲ್ಲಾ ನಿಮ್ಮಂಥ ಹೆಂಗಸರಿಂದ ಹುಟ್ಟಿಕೊಂಡ ಪದಗಳು. ಈಗ ಬೆಂಗಳೂರಲ್ಲಿ ಕೈನಲ್ಲಿ ಕಾಸು , ಎದುರಲ್ಲಿ ಗುರಿ ಇದ್ದರೆ ಬದಕುವುದು ತುಂಬಾ ಸುಲಭ. "
ದಿವ್ಯ ಕೊಂಚ ಹಟಮಾರಿ, ಗಂಡಸರೆಂದರೆ ಕೊಂದು ಬಿಡುವಷ್ಟು ಕೋಪ .ಅದಕ್ಕೆ ಕಾರಣ ಅವಳ ಅಪ್ಪ, ಹಾಗು ತನ್ನ ಆಂಟಿಯನ್ನು ವೈಶ್ಯಾವಾಟಿಕೆಗೆ ದೂಡಿದ ಆಂಟಿಯ ಗಂಡ . ಇಬ್ಬರೂ ಈಗ ಬದುಕಿಲ್ಲವಾದರೂ ಅವಳಿಗೆ ಪ್ರತಿ ಗಂಡಸರಲ್ಲೂ ಅವರ ಬಿಂಬವೇ ಕಾಣಿಸಿದಂತಾಗಿ ಮೃಗದಂತಾಗಿದ್ದಳು. ಸಮಯ ಸಿಕ್ಕಿದರೆ ಪ್ರಪಂಚದ ಗಂಡಸರನ್ನೆಲ್ಲಾ ಸುಟ್ಟುಬಿಡಲೂ ಅವಳು ತಯಾರಿದ್ದಳು.
ಅವಳ ಓದಿಗಾಗಿ ಸರೋಜಾ ಪಟ್ಟ ಕಷ್ಟ ಅಷ್ಟಿಷ್ಟಿಲ್ಲ. ದಿವ್ಯಾಳ ಹಾಕಿದ ಗಂಡನನ್ನು ತೊರೆದು ಬೇರೆ ಊರಿಗೆ ಬಂದಿದ್ದಳು.ಮನೆ ಚಾಕರಿಗಾಗಿ ಹೋದಾಗ ಅವಳನ್ನು ಅವಳ ಊರಲ್ಲಿ ಭೇಟಿ ಮಾಡಿದ್ದ ಗಂಡಸರು ಮತ್ತೆ ಅವಳನ್ನು ಅದೇ ಕೂಪಕ್ಕೆ ದೂಡಿದರು. ಸರೋಜಾ ದಿವ್ಯಾಳನ್ನು ಹಾಸ್ಟೆಲ್‍ನಲ್ಲಿ ಇಟ್ಟೇ ಬೆಳೆಸತೊಡಗಿದಳು.
ಚುರುಕು ದಿವ್ಯಾ ಚೆನ್ನಾಗಿ ಓದಿದಳು ಕೆಲಸವೂ ಸಿಕ್ಕಿತು.
ದಿವ್ಯಾಳ ಯಾವುದೇ ಅನುನಯಕ್ಕೂ ಸರೋಜಾ ಒಪ್ಪಲಿಲ್ಲ. ಒಬ್ಬ ಬೆಲೆವೆಣ್ಣಾಗಿ ತಾನು ದಿವ್ಯಾಳ ಜೊತೆ ಇರುವುದರ ಪರಿಣಾಮ ಅವಳಿಗೆ ತಿಳಿದಿತ್ತು . ಹಾಗಾಗಿ ಅವಳು ಯಾವ ಕಾರಣಕ್ಕೂ ದಿವ್ಯಾಳ ಜೊತೆ ಬರಲು ಒಪ್ಪಲಿಲ್ಲ.
ದಿವ್ಯಾ ಮದುವೆಯಾಗಲು ಒಪ್ಪಲೇ ಇಲ್ಲ.
ಅದೆಲ್ಲಾ ಆಗಿ ಐದು ವರ್ಷಗಳೇ ಕಳೆದಿವೆ. ಸರೋಜಾ ಯಾವುದೋ ರೋಗಕ್ಕೆ ಬಲಿಯಾಗಿ ಕಾಲವಾದಳು
ದಿವ್ಯಾ ತನ್ನ nouqariyಲ್ಲಿ ಬಹಳವೇ ಮುಂದೆ ಬರತೊಡಗಿದಳು.
ಅವಳ ಸಿಡುಕು ಮಾತಿಗೆ, ಅವಳ ಚಾಟಿ ಏಟಿನ ವ್ಯಂಗ್ಯಕ್ಕೆ ಸಿಲುಕಲು ಯಾವ ಗಂಡಸರೂ ಇಷ್ಟ ಪಡಲಿಲ್ಲ. ಹಾಗಾಗಿ ಅವಳು ಸೇಫ್ ಆಗಿದ್ದಳು.
ಒಂಟಿ ಹೆಣ್ಣು ಬೆಂಗಳೂರಲ್ಲಿ ಬದುಕುವುದು ಕಷ್ಟ ಎಂಬ ಮಾತಿಗೆ ಅಪವಾದವಾಗಿದ್ದಳು.
ಆದರೂ ಆಗಾಗ ಒಂಟಿ ತನ ಎದ್ದು ಕಾಡುತ್ತಿತ್ತು
ರಾತ್ರಿ ನೀರವತೆಯಲ್ಲಿ ಬೆಚ್ಚಿದ್ದಾಗ ,ಏನೋ ನೆನಸಿಕೊಂಡು ಅತ್ತಾಗ, ಸಮಾಧಾನಿಸಲು ಯಾರಾದರೂ ಬೇಕೆನಿಸುತ್ತಿತ್ತು. ಚಿತ್ರಗಳಲ್ಲಿ ಹೀರೋನ ಜೊತೆ ಕುಣಿವ ಹೀರೋಯಿನ್‌ಗಳನ್ನು, ತಮ್ಮ ಗಂಡ ತಮಡನೆ ಹೀಗೆ ಮಾತಾಡಿದ ಎಂಬ ಸಹೋದ್ಯೋಗಿಗಳ ಮಾತನ್ನು ಕೇಳಿದಾಗ ತನಗೂ ಒಬ್ಬ ಗಂಡನಿರಬೇಕೆಂಬ ಭಾವನೆ ಬರುತ್ತಿತ್ತಾದರೂ ಆ ಗಂಡ ಗಂಡಸೆಂಬ ನೆನೆಪು ಬರುತ್ತಿದ್ದಂತೆ ಮುಷ್ಟಿ ಬಿಗಿಯಾಗುತಿದ್ದವು, ಹುಬ್ಬು ಗಂಟಾಗುತ್ತಿತ್ತು, ಹಲ್ಲುಗಳು ಕದನವಾಡಲು ಆರಂಭಿಸುತ್ತಿದ್ದವು.
ಅವಳ ಜೊತೆಗಾರ್ತಿಯರೆಲ್ಲಾ ಮದುವೆ ಎಂಬ ಬಂಧನಕ್ಕೆ ಬೀಳುತ್ತಿದ್ದಂತೆ ಅವಳ ಅಕ್ಕ ಪಕ್ಕದ ಸ್ಥಾನಗಳು ಖಾಲಿಯಾಗತೊಡಗಿದವು.
ಗೆಳತಿಯರ ಸಲಹೆಗಳ ಮಹಾಪೂರವೇ ಬಂದರೂ ತನ್ನ ನಿರ್ಧಾರದಿಂದ ಹಿಂದೆ ಸರಿಯದಾದಳು ದಿವ್ಯಾ.
ವರ್ಷಗಳುರುಳಿದವು. ಮುಂದಿನ ದಿನಗಳು ಬಲು ನೀರಸವಾಗಿದ್ದವು, ಯಾರಿಗಾಗಿ ಈ ದುಡಿತ ಆಸ್ತಿ . ಮನೆಗೆ ಬಂದರೆ ಗೋಡೆ, ಕಂಪ್ಯೂಟರ್, ಟಿವಿಗಳು ಅವಳ ಸ್ನೇಹಿತರಾಗುತ್ತಿದ್ದವು. ಅಕ್ಕಪಕ್ಕದ ಮಕ್ಕಳ ಜೊತೆ ಆಟವಾಡಿದರೂ ಅದೇನೋ ಒಂಟಿತನ ಕಾಡುತ್ತಲೇ ಇತ್ತು.
ಅಂದೊಮ್ಮೆ ಅವಳ್ ಆಶ್ರಮದ ಗೆಳತಿ ಪ್ರೀತಿ ಸಿಕ್ಕಳು. ಪ್ರೀತಿ ತುಂಬಾ ಪ್ರೀತಿಯ ಗೆಳತಿ . ಅವಳೂ ಒಂದು ಬಗೆಯಲ್ಲಿ ಅನಾಥಳೇ ತಂದೆ ಇದ್ದೂ ತಂದೆ ಬೇರೆ ಮದುವೆಯಾಗಿದ್ದರಿಂದ ಪ್ರೀತಿಯನ್ನು ಆಶ್ರಮಕ್ಕೆ ಸೇರಿಸಿದ್ದ. ಪಿಯುಸಿ ಓದುತ್ತಿದ್ದಾಗ ಅವಳ ತಂದೆ ಹೃದಯಾಘಾತದಿಂದ ಸತ್ತಾಗ ಪ್ರೀತಿಗೆ ಯಾವ ದಿಕ್ಕೂ ಇರಲ್ಲಿಲ್ಲ . ಹಣ ಕೊಡಲಿಲ್ಲವಾದ್ದ್ದರಿಂದ ಪ್ರೀತಿಯನ್ನು ಆಶ್ರಮದಿಂದ ಹೊರಹಾಕಬೇಕೆನ್ನುವಾಗ ಅವಳ ಅಂದಕ್ಕೆ ಮಾರು ಹೋಗಿದ್ದ ವಿಕಾಸ್ ಎಂಬ ಯುವಕನೊಬ್ಬ ಅವಳನ್ನು ಮದುವೆಯಾಗಿದ್ದ.
ಅದಾದ ಮೇಲೆ ಅವಳ ಯಾವ ವಿಚಾರವೂ ತಿಳಿದಿರಲಿಲ್ಲ.
ಪ್ರೀತಿಯ ಜೀವನ ಸುಖಕರವಾಗಿತ್ತು. ಅವಳು ಅನಾಥಾಶ್ರಮವೊಂದನ್ನು ನಡೆಸುತ್ತಿದ್ದಳು ವಿಕಾಸ್ ಒತ್ತಾಸೆಯಾಗಿಯೇ ನಿಂತಿದ್ದ
ಎಲ್ಲಾ ರೀತಿಯ ಮಾತುಕತೆಗಳಾದ ಬಳಿಕ "ದಿವ್ಯ ನೀನು ಅಂದುಕೊಂಡಿರುವ ಹಾಗೆ ಎಲ್ಲಾ ಗಂಡಸರೂ ಇಲ್ಲ. ಹೆಂಗಸರಲ್ಲಿ ಕೆಟ್ಟವರಿರುವ ಹಾಗೆ ಅವರಲ್ಲೂ ಒಳ್ಳೆಯ ಕೆಟ್ಟ ಎಂಬ ಮನಸ್ಸು ಇರುತ್ತದೆ. ನೀನು ಇಲ್ಲಿಯವರೆಗೆ ಎಷ್ಟು ಮಂದಿ ಗಂಡ್ಸರನ್ನು ನೋಡಿಲ್ಲ ಅವರೆಲ್ಲಾ ಕೆಟ್ಟವರೇ ? ಒಂಟಿ ಬದುಕು ಬಲು ಹೀನಾಯ, ಯಾರಿಗಾಗಿ ಇಷ್ಟು ಹಣ ಸಂಪಾದಿಸುತ್ತೀಯಾ? ನಿನಗೂ ನಿನ್ನದೇ ಆದ ಮನೆ, ಸಂಸಾರ ಗಂಡಾ ಮಗು ಬೇಡವೇ? ವಿಕಾಸ್ ನೋಡು ನನ್ನ ಮಾತಿಗೆ ಎದುರಾಡದೆ ನನ್ನ anaathaashram ಕಟ್ಟಬೇಕೆಂಬ ಕನಸಿಗೆ ನೀರೆರೆದು ಪೋಷಿಸುತ್ತಿದ್ದಾರೆ. ಅವತ್ತು ನನ್ನ ಹಾಸ್ಟೆಲ್‌ನಿಂದ ಹಣವಿಲ್ಲವೆಂದು ಹೊರಗೆ ಕಳಿಸಿದಾಗಲೆ ನಿರ್ಧರಿಸಿದ್ದೆ ನಾನು ಒಂದು ಅನಾಥಾಶ್ರಮ್ ಕಟ್ಟಿ ಬಡಮಕ್ಕಳಿಗೆ ಅನಾಥರಿಗೆ ಹಣ ತೆಗೆದುಕೊಳ್ಳದೆ ವಿದ್ಯೆ, ವಸತಿ, ಊಟ ಕೊಡಬೇಕೆಂದು . ಅದು ನನ್ನೂಬ್ಬಳಿಂದ ಆಗ್ತಿರಲಿಲ್ಲ. ಅದಕ್ಕೆ ಕಾರಣಾನೆ ವಿಕಾಸ್ .ನೀನು ನಿಮ್ಮ ಆಫೀಸಲ್ಲಿ ಇರೋರನ್ನು ಕಣ್ಣು ಬಿಟ್ಟು ನೋಡು ನಿನಗೆ ತಕ್ಕ ಗಂಡು ಸಿಕ್ಕೇ ಸಿಗುತ್ತಾನೆ"
ಪ್ರೀತಿ ಅಡ್ರೆಸ್ ಕೊಟ್ಟು ಹೊರಟು ಹೋದಳು.
ದಿವ್ಯಾ ಆ ಬಗ್ಗೆಯೇ ಯೋಚಿಸಿ ಕೊನೆಗೊಂದು ನಿರ್ಧಾರಕ್ಕೆ ಬಂದಳು . ತನ್ನ ಆಪೀಸಲ್ಲೇ ಇದ್ದ ಆಕಾಶ್ ಎಂಬ ಸಹೋದ್ಯೋಗಿ ಮೆಲು ಮಾತಿದ ಹುಡುಗ ದಿವ್ಯಾಳನ್ನು ಮದುವೆಯಾಗುವ ಕನಸು ಹೊತ್ತೆ ಜೀವಿಸುತ್ತಿದ್ದ . ಅವಳಿಂದ ಒಮ್ಮೆ ಕೆನ್ನೆಗೂ ಹೊಡೆಸಿಕೊಂಡಿದ್ದ . ನಂತರವೂ ಅವಳನ್ನೇ ಮದುವೆಯಾಗುವುದಾಗಿ ಕನಸು ಹೊತ್ತಿದ್ದ
ಆಕಾಶ ತನಗೆ ತಕ್ಕ ಜೋಡಿಯಾಗಬಲ್ಲ ಎಂದು ಅವಳಿಗೆ ಅನ್ನಿಸಿತು .
ತನ್ನ ಭಾವನೆಯನ್ನು ಅರುಹಿದಳು
ಆತನೋ ಖುಷಿಯಿಂದ ಕುಣಿದಾಡಿದ.
ಅವನ ಮನೆಯವರೂ ಒಪ್ಪಿದರು. ಮದುವೆಯ ಆಹ್ವಾನ ಪತ್ರಿಕೆ ಸಿದ್ದವಾಯಿತು. ತನಗೆ ಮದುವೆಯಾಗುವ ಪ್ರೇರಣೆ ನೀಡಿದ ಪ್ರೀತಿಗೆ ಮೊದಲ ಆಹ್ವಾನ ಪತ್ರಿಕೆ ಎಂದು ಮೊದಲೇ ನಿರ್ಧರಿಸಿದ್ದಳು .
ಅಂತೆಯೇ ಆಕಾಶ್‌ನ ಜೊತೆ ಅನಾಥಾಶ್ರಮಕ್ಕೆ ಬಂದಳು.
ಪ್ರೀತಿಯ ಆಶ್ರಮವನ್ನೆಲ್ಲ್ಲಾ ಸುತ್ತಾಡುತ್ತಾ ಕಾಫೀ ಕುಡಿಯುತ್ತಾ ಬಂದು ನಿಂತವಳಿಗೆ ಊರುಗೋಲಿನ ಸಹಾಯದಿಂದ ಕಷ್ಟ ಪಟ್ಟು ನಡೆಯುತ್ತಿದ್ದ ಆ ಮಗು ಕಾಣಿಸಿತು
ಸುಮಾರು ಐದಾರು ವರ್ಷಗಳಿರಬಹುದೇನೋ .
ಮುದ್ದು ಮುದ್ದಾದ ಹೆಣ್ಣುಮಗು ಆದರೆ ಅದರ ಒಂದು ಕಾಲು ತಿರುಗಿಕೊಂಡಿತ್ತು.
"ಯಾರೆ ಈ ಮಗು ?"
ಪಾಪ ಕಣೆ ಮಗು ಹುಟ್ಟಿದ ತಕ್ಷಣ ತಾಯಿಯನ್ನು ಕಳೆದುಕೊಂಡಿತಂತೆ. ಆ ಮಗುವಿನ ಕಾಲು ಸರಿ ಇಲ್ಲ
ಯಾರೋ ಅವಳ ತಾಯಿಯ ಸ್ನೇಹಿತೆ ಅಂತೆ ತಂದು ಇಲ್ಲಿ ಬಿಟ್ಟರು
ತುಂಬಾ ಚುರುಕು
ಹೆಸರ್ನ ಭೂಮಿಕಾ ಅಂತ ಇಟ್ಟಿದೀವಿ. "
" ಹಲ್ಲೋ ಭೂಮಿಕಾ. " ಮುಂಚೆಯೇ ತಂದಿದ್ದ ಚಾಕ್ಲೇಟ್ ಕೊಟ್ಟಳು
ಮಗು ಥ್ಯಾಂಕ್ಸ್ ಹೇಳಿ ತೆಗೆದುಕೊಂಡಿತು
"ಹೌದು ಈ ಮಗು ಅಪ್ಪ ಎಲ್ಲಿ. ನೋಡಿದ್ಯಾ ಪ್ರೀತಿ ಇವಳ ಅಪ್ಪಾ ಇವಳನ್ನು ಬಿಟ್ಟು ಹೋಗಿದ್ದನಲ್ಲ. ನಾನು ನೋಡಿದ ಮೂರನೆಯ ಕೆಟ್ಟ ಗಂಡು" ದಿವ್ಯಾ ಪ್ರಶ್ನೆ ಎಸೆದಳು" ಏ ಮಗೂಗೆ ಅಪ್ಪ ಯಾರೂ ಅಂತ ಹೇಗೆ ಹೇಳೊಕಾಗುತ್ತೆ. ಅವಳ ಅಮ್ಮ ಒಬ್ಬ ಪ್ರಾಸ್ಟ್ಯೂಟ್ ಅಂದರೆ ವೇಶ್ಯೆ"
ದಿವ್ಯಾ ಪ್ರೀತಿಯ ಮಾತಿನಿಂದ ದಂಗಾದಳು.
ಅವರ್ಯಾರಿಗೂ ತನ್ನನ್ನ ಬೆಳೆಸಿದವಳೂ ಒಬ್ಬ ವೇಶ್ಯೆ ಎಂಬ ಸತ್ಯ ಹೇಳಿರಲಿಲ್ಲ. ಅದು ಅಂತಹ ಮಹತ್ವ್ದದ್ದೂ ಎಂದೊ ಅನ್ನಿಸಲಿಲ್ಲ. ಹಾಗಾಗಿ ಹೇಳಿರಲಿಲ್ಲ.
ಯಾವುದೋ ಅಕ್ಕರೆಯಿಂದ ಮಗುವನ್ನು ಮುದ್ದಿಸಿದಳು.
"ಪ್ರೀತಿ ಇದರ ತಾಯಿ ಹೆಸರೇನಾದರೂ ಗೊತ್ತಿದೆಯಾ ನಿಂಗೆ?"
"ನೋಡಿ ಹೇಳ್ತೀನಿ ಇರು"
ಪ್ರೀತಿ ರೆಕಾರ್ಡ್ಸ್ ತೆಗೆದು ನೋಡಿ ಹೆಸರು ಹೇಳಿದಳು
ಕಿವಿಗೆ ಬಿಡಿಬಿಡಿಯಾಗಿ ಕೇಳಿಸಿತು
"ಸ ರೋ ಜಾ" ಅಂತ
"ಏನಂದೆ ಸರೋಜಾನ ?"
"ಯಾವ ಊರು ಅಂತ ಕೊಟ್ಟಿದ್ದಾರೆ?"
ಪ್ರೀತಿ ಹೆಸರು ಹೇಳಿದಳು.ಅದು ಅವಳ ಆಂಟಿ ಸರೋಜಾ ಇದ್ದ ಊರು.
ಇದು ಹೇಗೆ ಸಾಧ್ಯ?
ಸರೋಜಾ ಸತ್ತು ಈಗ ಸರಿಯಗಿ ಐದು ವರ್ಷಗಳಾಗಿದ್ದವು .
ಅಂದರೆ ಮಗು ಹುಟ್ಟಿದ ವರ್ಷವೂ ಅದೇ ಆಗಿತ್ತು
ತನಗೆ ತಿಳಿಯದೆ ಇದು ಹೇಗಾಯ್ತು?
ನಂತರ ನೆನೆಪಾಯ್ತು ಎರೆಡು ವರ್ಷ ಯು. ಎಸ್ ಪ್ರಾಜೆಕ್ಟ್ ಮೇಲೆ ಹೋಗಿದ್ದಳು.
ಅಲ್ಲಿಂದ ಹಣವನ್ನೇನೋ ಕಳಿಸುತ್ತಿದ್ದಳು
ಆದರೆ ಸರೋಜಾ ಬಗ್ಗೆ ವಿಷಯ ತಿಳಿದಿರಲಿಲ್ಲ.
ತಾನು ಊರಿನಿಂದ ಬರುವ ದಿನವೆ ಸರೋಜಾ ಹಾಸಿಗೆಯ ಮೇಲೆ ಕಾಯಿಲೆ ಇಂದ ಮಲಗಿದ್ದಳು.
ಅವಳು ಏನೋ ಉಸುರುವ ಮೊದಲೇ ಉಸಿರು ಹೋಗಿತ್ತು.
ಯಾಕೋ ಎಲ್ಲಾ ಗೊಂದಲವಾಗಿತ್ತು.
ಆಕಾಶ್ ಕೇಳುತ್ತಿದ್ದ ಯಾವ ಪ್ರಶ್ನೆಗೂ ಉತ್ತರ ಹೇಳುವ ಸಾವಾಧಾನ ಅವಳಲ್ಲಿರಲಿಲ್ಲ
ಕೂಡಲೆ ಸರೋಜಾಳ ಊರಿಗೆ ಪ್ರಯಾಣ ನಡೆಸಿದಳು
ಇದ್ದ ಏಕೈ ಕ ಕೊಂಡಿ ನಂಜಮ್ಮ ಅವಳೇ ಮಗುವನ್ನು ಇಲ್ಲಿ ತಂದು ಬಿಟ್ಟಿದ್ದು.
ಆದರೆ ನಂಜಮ್ಮ ಸತ್ತು ಮೂರು ವರ್ಷಗಳಾಗಿದ್ದವು.
ನಂಜಮ್ಮನ ಮಗನೊಬ್ಬ ಅವಳಿಗೆ ಕೊಟ್ಟಮಾಹಿತಿಯ ಪ್ರಕಾರ ಸರೋಜಾ ಆ ವರ್ಷಗಳಲ್ಲಿ ದುರುಳರಿಬ್ಬರ ಅತ್ಯಾಚಾರಕ್ಕೆ ಬಲಿಯಾಗಿ ಗರ್ಭಿಣಿಯಾಗಿದ್ದಳು ಏನಾದರೂ ಮಾಡಿಕೊಳ್ಳುವುದಕ್ಕೊ ಸಮಯ ಜಾಸ್ತಿಯಾಗಿತ್ತು.
ಯು.ಎಸ್‌ನಲ್ಲಿದ್ದ ದಿವ್ಯಾಗೆ ಈ ವಿಷಯ ತಿಳಿಸುವುದಕ್ಕೆ ಸರೋಜಾ ಮನಸ್ಸು ಒಪ್ಪಲಿಲ್ಲವೇನೋ ಕೊನೆಗೊಮ್ಮೆ ಮಗು ಹುಟ್ಟಿತು . ನಂಜಮ್ಮನೇ ಸೂಲಗಿತ್ತಿಯಾಗಿದ್ದಳು
ಆದರೆ ಮುದ್ದು ಮುದ್ದ್ದಗಿದ್ದ ಮಗುವನ್ನುನೋಡಿ ಹೆಣ್ಣುಮಕ್ಕಳಿಲ್ಲದ ನಂಜಮ್ಮ ಮಗು ಹುಟ್ಟುತ್ತಲೇ ಬೇರೆಡೆಗೆ ಎತ್ತಿಕೊಂಡು ಬಂದು ಮನೆಯಲ್ಲಿ ಮಗುವನ್ನು ಬಿಟ್ಟು ಬಂದು ಮಗು ಸತ್ತಿದೆ ಎಂದು ಸುಳ್ಳು ಹೇಳಿದಳು.
ಆದರೆ ಮನೆಗೆ ಬಂದ ನಂತರ ಆ ಮಗುವಿನ ಕಾಲು ತಿರುಗಿದ್ದು ಕಂಡು ಅನಾಥಾಶ್ರಮವೊಂದಕ್ಕೆ ಬಿಟ್ಟು ಬಂದಳು

Monday, January 5, 2009
ಹೂ ತೋಟ
"ಅಬ್ಬಾ ಏನೋ ಇದು ಇಷ್ಟು ಚೆನ್ನಾಗಿದೆ ಈ ಗಾರ್ಡನ್" ರವಿ ಉದ್ಗರಿಸಿದ , ಕಣ್ಣನ್ನು ಅಲ್ಲಿಂದ ಕೀಳಲಾಗಲಿಲ್ಲ.
ಅದೊಂದು ಸುಂದರ ತೋಟ , ಎಂಥ ತೋಟವೆಂದರೆ ನೋಡಿದ ಕಣ್ಣು ಕಾಲಿಗೆ ಮುಂದೆ ಹೋಗದಂತೆ ಆದೇಶ ನೀಡುತ್ತಿತ್ತು.. ತೋಟದ ತುಂಬೆಲ್ಲಾ ಹೂವಿನ ಘಮಘಮ , ಚೆಲುವಾದ ಗುಲಾಬಿಯಿಂದ ಹಿಡಿದು ಎಲ್ಲಾ ರೀತಿಯ ಹೂಗಳು ಅರಳಿದ್ದವು.
"ಒಂದ್ಸಲ ಈ ತೋಟದಲ್ಲಿ ಅಡ್ಡಾಡಿ ಬರೋಣ ಬಾರೋ " ಸುರೇಶನ ಕೈ ಹಿಡಿದು ಜಗ್ಗಿದ
" ಏ ಬೇಡ ಕಣೋ. ಹಾಗೆಲ್ಲಾ ಬೇರೆಯವರ ಪರ್ಮೀಶನ್ ಇಲ್ಲದೆ ಹೋಗಬಾರದು" ಸುರೇಶ ಬುದ್ದಿವಾದ ಹೇಳಿದ
"ಸರಿ ಅವರ ಪರ್ಮೀಶನ್ ತಗೊಂಡೇ ಹೋಗೋಣ ಬಾ"
ರವಿ ತೋಟದಲ್ಲಿದ್ದ ಮನೆ ಬಾಗಿಲು ತಟ್ಟಿದ
ಒಂದು ಹೆಂಗಸು ಬಾಗಿಲು ತೆರೆದಳು ಹಿಂದೆಯೇ ಚೆಲುವಾದ ಈಗಷ್ಟೆ ಅರಳಿದ ಹೂವಿನ ತಾಜಾತನದ ಹುಡುಗಿಯೂಬ್ಬಳುರವಿ "ಅದೂ ಈ ತೋಟ ತುಂಬಾ ಚೆನ್ನಾಗಿದೆ . ಒಂದಷ್ಟು ಹೊತ್ತು ನೋಡಿ ಹೋಗೋಣಾ ಅಂತ""ಅಯ್ಯೋ ಅದಕ್ಕೇನಪ್ಪ ನೋಡಿ ."
ಸ್ವಲ್ಪ ಹೊತ್ತಿನಲ್ಲಿ ರವಿ ತನ್ನ ಮಾತಿನಿಂದ ಆಪ್ತನಾದ, ರವಿಯ ಕಣ್ಣು ಆ ಚೆಲುವಾದ ಹೂವಂಥ ಹುಡುಗಿಯ ಮೇಲೆ ಹರಿಯುತ್ತಿತ್ತು. ಆ ನೋಟಕ್ಕೆ ಆ ಹುಡುಗಿ ಕರಗಿ ನೆಲ ನೋಡುತ್ತಿದ್ದಳು
ರವಿ ಲವಲವಿಕೆಯ ಹುಡುಗ, ಸುರೇಶ ಸ್ನೇಹಿತ, ಇಬ್ಬರೂ ಒಂದೇ ಕಾಲೇಜಿನಲ್ಲಿ ಓದಿ ಬೇರೆ ಬೇರೆ ಕಡೆಗಳಲ್ಲಿ ಕೆಲಸ ಮಾಡುತಿದ್ದರು. ಪಿಕ್ನಿಕ್ಗೆಂದು ಬಂದಾಗ ಆ ತೋಟ ಕಂಡಿತ್ತು.
ಹಾಗೆ ಆ ತೋಟದ ಒಡತಿಯ ಬಗ್ಗೆಯೂ ಮಾಹಿತಿ ಸಿಕ್ಕಿತು
ಆ ತೋಟದ ಒಡತಿ ಸರೋಜಾ ಒಬ್ಬ ವಿಧವೆ. ಗಂಡ ಗತಿಸಿ ಮೂರ್ನಾಲ್ಕು ತಿಂಗಳಷ್ಟೆ ಉರುಳಿದ್ದವೇನೋ. ಪ್ರಾಯಕ್ಕೆ ಬಂದ ಮುದ್ದು ಮುದ್ದು ಮಗಳು ಕಮಲ ಜೊತೆಗೆ , ಇಬ್ಬರೇ ಆ ತೋಟದಲ್ಲೊಂದು ಮನೆ ಮಾಡಿಕೊಂಡು ವಾಸವಾಗಿದರು.ಆದರೂ ತುಂಬಾ ದಿನ ಆ ತೋಟದಲ್ಲಿ ವಾಸವಿರುವುದು ಅಪಾಯ ಎಂದು ಅನ್ನಿಸಿದ್ದರಿಂದ ಸರೋಜಾ ಆ ತೋಟವನ್ನು ಮಾರಿ ಅದರಿಂದ ಬಂದ ಹಣದಲ್ಲಿ ಬೇರೆ ಎಲ್ಲಾದರೂ ಜನರಿರುವ ಕಡೆ ಬದುಕುವ ಆಸೆ ಹೊಂದಿದ್ದಳು.
ಕೊಂಚ ಹೊತ್ತು ತೋಟ ಹಾಗು ಅದಕ್ಕಿಂತಲೂ ಸುಂದರಿ ಕಮಲಾಳ ಚೆಲುವನ್ನೆಲ್ಲಾ ಕಣ್ನಲ್ಲೇ ಹೀರಿಕೊಂಡು ರೂಮಿಗೆ ಬಂದ ರವಿ."ಸುರೇಶ ನಾನು ಇನ್ನೊಂದೆರೆಡು ದಿನ ಇಲ್ಲೇ ಇರೋಣ ಅಂದ್ಕೊಂಡೀದೀನಿ"
"ಯಾಕೋ? ರಜಾ ಬೇರೆ ಮುಗೀತಲ್ಲ" "ಇಲ್ಲ ಕಣೋ ತೋಟ ತುಂಬಾ ಚೆನ್ನಾಗಿದೆ , ನಾಳೇನೂ ಹೋಗೋಣ ಅನ್ನಿಸ್ತಿದೆ"
" ತೋಟ ಮಾತ್ರಾನಾ ಆ ಹುಡುಗೀನೂನಾ?" "ಛೆ ಛೇ ಅಂಥಾ ಚೀಪೇನೋ ನಾನು?"
ಮರುದಿನವೂ ರವಿ ಸುರೇಶನ ಜೊತೆ ಸರೋಜಾರ ಮನೆಗೆ ಬಂದ . " ಆಂಟಿ , ನಮ್ತಂದೆ ಹತ್ರ ಮಾತಾಡಿದ್ದೇನೆ , ಈ ತೋಟಾನ ನೀವು ಕೊಟ್ರೆ ನಾನೆ ಕೊಂಡ್ಕೊಳೋದು ಅಂತ ಅಂದ್ಕೊಂಡೀದೀನಿ"
ಸರೋಜಾಗೆ ಪರಮಾನಂದವಾಯಿತು"ಅಲ್ಲ ನಿಮಗ್ಯಾಕೆ ಈ ತೋಟ ಇದನ್ನ ನೋಡಿಕೊಳ್ಲೋಕೆ ಆಗತ್ತಾ"
" ಅಯ್ಯೋ ನಮ್ತಂದೆ ಜನಾನ ಇಡ್ತಾರೆ , ನಮ್ತಂದೆಗೂ ತೋಟ ಬೆಳೆಸುವುದರಲ್ಲಿ ಆಸಕ್ತಿ ಜಾಸ್ತಿ , ಇದರ ಬೆಲೆ ಏನು ಹೇಳಿದರೆ ನಂಗೆ ಹಣ ಹೊಂದಿಸೋಕೆ ಸುಲಭ ಆಗುತ್ತೆ"
ಸರೋಜಾ ಹೇಳಿದರು
"ಸರಿ ಒಂದ್ಸಲ ತೋಟ ಸುತ್ತಾಡಿಕೊಂಡು ಬರ್ತೀನಿ, ನಂತರ ಬೆಲೆ ನೋಡೋಣ"
"ಆಯ್ತಪ್ಪ "ರವಿ ತೋಟ ಪೂರ್ತಿ ಸುತ್ತಾಡಿದ
ಆ ಹುಡುಗಿಯ ಕಣ್ಣು ಇವನನ್ನೇ ಗಮನಿಸುತ್ತಿತ್ತು. ರವಿಯೂ ಅವಳನ್ನು ನಿಟ್ಟಿಸಿ ನೋಡಿದ,
"ಏ ಇದೇನೋ ಇಷ್ಟು ಹೊತ್ತಿಗೆ ಎಲ್ಲೋ ಹೋಗ್ತೀದೀಯಾ" ಸುರೇಶ್ ಕೇಳಿದ
" ಯಾಕೋ ಬೋರ್ ಆಗಿದೆ ಹೊರಗಡೆ ಸುತ್ತಾಡಿಕೊಂಡು ಬರೋಣ , ನಾಳೆ ಊರಿಗೆ ಹೋಗೋಣ"
ಸ್ವಲ್ಪ ಹೊತ್ತಾದ ಮೇಲೆ ರವಿ ಬಂದ
"ಈಗಲೆ ಊರಿಗೆ ಹೋಗೋದು ಅನ್ಕೊಂಡಿದೀನಿ"
"ಯಾಕಪ್ಪ , ನಾಳೆ ಹೋಗೋಣ ಅಂದಿದ್ದೆ"
"ಊರಿನಿಂದ ಫೋನ್ ಬಂದಿತ್ತು , ಅಪ್ಪನಿಗೆ ಹುಶಾರಿಲ್ಲವಂತೆ"
"ಸರಿ ಕಣೋ "
ವ್ಯಾನ್ ಹೊರಡುತ್ತ್ದಿದ್ದಂತೆ
" ಏ ರವಿ ನೀನು ಆ ತೋಟ ಕೊಂಡ್ಕೊಳ್ತೀನಿ ಅಂತಿದ್ದ್ಯಲ್ಲ ಏನಾಯ್ತೋ?"
" ಏ ಸುಮ್ನೆ ಹೇಳ್ದೆ, ತೋಟ ಎಲ್ಲಾ ನೋಡೋಕೆ , ಎಂಜಾಯ್ ಮಾಡೋಕೆ, ಸುತ್ತಾಡೋಕೆ, ಅದನ್ನ ಮೈಂಟೇನ್ ಮಾಡಕ್ಕಾಗಲ್ಲ, ಕೊಂಡ್ಕೊಳೋಕೂ ಆಗಲ್ಲ, ಹಾಗ್ ಹೇಳಿಲ್ಲಾಂದ್ರೆ ಒಳಗಡೆ ಬಿಡ್ತಿದ್ದಳೇನೋ ಆ ಮುದ್ಕಿ "
"ಥೂ ಹಾಗೆಲ್ಲಾ ಮಾತಾಡಬಾರದು ಕಣೋ, ಆಸೆ ಹುಟ್ತಿಸಿ ಮೋಸ ಮಾಡಬಾರದು"
" ಹೋಗೋ ಹೋಗೋ, ಹಾಗಂದುಕೊಂಡ್ರೆ ಲಾಲಭಾಗ್, ಕಬ್ಬನ್ ಪಾರ್ಕ್, ನಾನು ಎಲ್ಲೆಲ್ಲಿ ಸುತ್ತಾಡಿದೀನೋ ಎಲ್ಲಾ ತಗೋಬೇಕಾಗುತ್ತೆ"
ವ್ಯಾನ್ ಸರೋಜಾರವರ ತೋಟದ ಬಳಿ ಬರುತ್ತಿದ್ದಂತೆ , ಸುರೇಶನಿಗೆ ದಂಗಾದಂತಾಯ್ತು
" ರವಿ ನೋಡೋ , ಏನಾಗಿದೆ ಅಲ್ಲಿ "
ತೋಟದ ಹೂಗಳೆಲ್ಲಾ ನೆಲಕ್ಕ ಬಿದ್ದಿದ್ದವು, ಗಿಡಗಳೆಲ್ಲಾ ನಜ್ಜು ಗುಜ್ಜಾಗಿದ್ದವು.
ಸುಂದರ ತೋಟ ಪಾಳು ಬಯಲಂತಾಗಿತ್ತು
"ಯಾವುದೋ ಪುಂಡು ದನ ನುಗ್ಗಿದ್ದಿರಬೇಕು , ಬೇಗ ಬೇಗ ಡ್ರೈವ್ ಮಾಡು ಹೋಗೋಣ" ರವಿ ಅವಸರಿಸಿದ
ವ್ಯಾನ್ ಮುಂದೆ ಹೋಯಿತು.
ಆದರೆ
ಆ ಪಾಳು ತೋಟದ ಮಧ್ಯದಿಂದ ಸೋತು ಬಸವಳಿದು ಬಿದ್ದಿದ್ದ ಆ ಹುಡುಗಿ ಬಿಕ್ಕಳಿಸುತ್ತಾ ಮೇಲೆದ್ದುದ್ದನ್ನು ಸುರೇಶ್ ಗಮನಿಸಲಿಲ್ಲ.

ಎರೆಡು ದಿನ ಬಿಟ್ಟು ಬರುವುದಾಗಿ ಹೇಳಿ ರೂಮಿಗೆ ವಾಪಸಾದ.

Subscribe to:
Posts (Atom)