Friday, April 3, 2009

ಹೀಗೊಂದಷ್ಟು ಹನಿಗಳು-೨

ಅಂದು ನಿನ್ನ ಹಾಗೆ ಯಾರೂ ಇಲ್ಲ ಕಣೆ ಎಂದು ಚುಂಬಿಸಿದ ಹುಡುಗ ಇಂದೂ ನಿನ್ನ ಹಾಗೆ ಯಾರೂ ಇಲ್ಲ ಕಣೆ ಎಂದು ದೂರ ಓಡುತ್ತಿದ್ದಾನೆ. ಹೆಂಡತಿ ಕಾಳಿಯಾಗಿದ್ದಾಳೆ
------------------------------------------------------------------------------------------------
ನಿಂಗೇನು ಬೇಕಾದ್ರೂ ಕೇಳು ಕೊಡಿಸ್ತೀನಿ ಅಂತಿದ್ದ ಅಪ್ಪ ಮಗಳು ಕೇಳಿದ ಹುಡುಗನ್ನ ಕೊಡಿಸಲಾಗದೆ ಸಿಡಿಮಿಡಿಯಾಗಿದ್ದಾನೆ
-------------------------------------------------------------------------------------------------
ನನ್ನ ಹತ್ರ ಬೇಕಾದಷ್ಟು ದುಡ್ಡಿದೆ ಅಂತ ಕುಣೀತಿದ್ದ ನಮ್ಮೂರ ಜಿಪುಣ ತಾತ ಇಂದು ಮಲಗಿದ್ದಾನೆ ಹೆಣವಾಗಿ ದುಡ್ಡೆಲ್ಲಾ ಅವನ ಮಗನ ಕೈ ಸೇರಿದೆ
---------------------------------------------------------------------------------------------
ಅಮ್ಮನ ದಿನದಂದು ಅಮ್ಮನ ಬಗ್ಗೆ ಉದ್ದದ ಭಾಷಣ ಬಿಗಿದು ಎಲ್ಲರ ಕಣ್ಣಲ್ಲಿ ನೀರು ತರಿಸಿದ ಸಮಾಜ ಸೇವಕನ ಅಮ್ಮ ಅವನನ್ನು ವೃದ್ದಾಶ್ರಮದ ಟಿ.ವಿಯಲ್ಲಿ ನೋಡಿ ನಿಟ್ಟುಸಿರು ಬಿಟ್ಟಳು
----------------------------------------------------------------------------------------------

ನೀವು ಬರೆಯೋ ಕತೆಯಲ್ಲೆಲ್ಲಾ ನಾಯಕಿಯರು ಯಾವಾಗ್ಲೂ ಸಾಯ್ತಾರೇಕೆ ಎಂದು ಪ್ರಶ್ನಿಸಿದವನ ಮುಖ ನೋಡಿ ನಕ್ಕ ಆ ಕತೆಗಾರ. ಈಗ ತಾನೆ ತನ್ನ ಮೂರನೇ ಪ್ರೇಯಸಿಯನ್ನೂ ಕೊಂದದ್ದು ನೆನಪಾಗಿರಬೇಕು.
------------------------------------------------------------------------------------------------
ಅತ್ತೆ ಹೆಂಡತಿ ಬಹಳ ಹೊತ್ತಾದರೂ ಬಾರದಿದ್ದುದ್ದನ್ನು ಕಂಡು ಬ್ಯೂಟಿ ಪಾರ್ಲರ್ ಬಾಗಿಲ ಬಳಿಯಲ್ಲಿ ನಿಂತವನಿಗೆ ಮುಂದೆ ಇದ್ದ ಇಬ್ಬರಲ್ಲಿ ಹೆಂಡತಿ ಯಾರು ಎಂಬುದು ಸಮಸ್ಯೆಯಾಯಿತು
-------------------------------------------------------------------------------------------------
ಗೆಳೆಯ ನನಗೆ ನಿನ್ನ ಅಸ್ತಿ ಬೇಡ ಬ್ಯಾಂಕ್ ಬ್ಯಾಲೆನ್ಸ್ ಬೇಡ ನೀನೊಬ್ಬನಿದ್ದರೆ ಸಾಕು ಎಂದು ಹಾಡುತ್ತಿದ್ದ ಹುಡುಗಿ ಇಂದು ಸಾರಿ ಗೆಳೆಯ ನನಗೆ ನೀನೂ ಬೇಡ ಎಂದು ಕೂಗುತ್ತಿದ್ದಾಳೆ. ಅವಳ ಹೊಸ ಬಾಯಫ್ರೆಂಡ್ ಮರ್ಸಿಡೀಸ್ ಬೆಂಜ್ ಕೊಡಿಸಿದ್ದಾನಂತೆ
-------------------------------------------------------------------------------------

No comments:

Post a Comment

ರವರು ನುಡಿಯುತ್ತಾರೆ