ಸೋತಾಗಲೆ ಗೆಲುವಿನ ರುಚಿ ಚೆನ್ನಾಗಿ ಗೊತ್ತಾಗುತ್ತದೆ.ಈ ಮಾತನ್ನು ನನಗೆ ಹೈಸ್ಕೂಲಿನಲ್ಲಿದ್ದಾಗ ನಮ್ಮ ಜಿ ಪಿ ಆರ್ ಸಾರ್ ಹೇಳುತ್ತಿದ್ದರು.ಗೆಲುವೆಂಬ ಸೋಪಾನದಲ್ಲೇ ತೇಲಬಯಸುತ್ತಿದ್ದ ನಾನು ಸೋಲೋ ಮಾತಿಗೆ ಅಪವಾದವಾಗಿದ್ದೆ. ಆದರೆ ಎರೆಡನೇ ಸ್ಥಾನದಲ್ಲೇ ಇರುತ್ತಿದ್ದೆಹೊಟ್ಟೆಕಿಚ್ಚಿನ ಶ್ರೀದೇವಿಯನ್ನ ಮಣಿಸಬೇಕೆಂಬ ಹಂಬಲ ಈಡೇರುತ್ತಲೇ ಇರಲಿಲ್ಲ . ಮೊದಲ ಸ್ಥಾನ ಅವಳದೇ ಯಾವಾಗಲೂಅವಳು ಓದಿನಲ್ಲಿ ಆಟದಲ್ಲಿ ನನ್ನನ್ನು ಮಣಿಸಿ ಸಂತಸ ಪಡುತ್ತಿದ್ದಳು.ಅವಳು ಮಣಿಸಿದಾಗಲೆಲ್ಲಾ ಅವಳ ಕಣ್ಣಲ್ಲಿ ವಿಜಯದ ನಗೆ,ನನ್ನ ಮನದಲ್ಲಿ ದ್ವೇಷ ತುಂಬಿ ತುಳುಕುತಿತ್ತು.ನಾನೂ ಜಾಣನೇ ಆದರೆ ಅದೇನೋ ನನಗಿಂತ ಶ್ರೀದೇವಿ ಯಾವಾಗಲೂ ಹೆಚ್ಚು ಅಂಕ ತೆಗೆದುಕೊಳ್ಳುತ್ತಿದ್ದಳು.ನಮ್ಮಿಬ್ಬರ ದ್ವೇಷ ಹೀಗೆ ಕಾಲೇಜಲ್ಲಿ ಮುಂದುವರೀತುಪ್ರತಿಸಲ ಅವಳು ಗೆದ್ದಾಗೆಲ್ಲಾ ಅವಳನ್ನು ಸೋಲಿನ ದವಡೆಗೆ ನೂಕಬೇಕೆಂಬ ಹಂಬಲ ಜೋರಾಗುತ್ತಿತ್ತು. ಕೆಲವು ಸಲ ಅವಳನ್ನು ಕೊಂದು ಬಿಡಲೇ ಎಂಬ ಭಾವನೆಯೂ ಮೂಡಿ ಬಂದಿತ್ತೆಂದರೆ ಸುಳ್ಳಾಗಲಾರದುಕಾಲೇಜಲ್ಲಿ ನಾನು ಪ್ರೇಮಿಸಿದ್ದು ಶ್ವೇತಾನ ಅವಳು ಸಾಗರ್‌ನ ಪ್ರೀತಿಸಿದಳು. ಅದರಲ್ಲೂ ಮೊದಲ ಮುಂದುವರಿಕೆ ಅವಳದೇ ಆಗಿತ್ತು.ಅವರಿಬ್ಬರೂ ಅಣ್ಣ ತಂಗಿಯರುಆದರೆ ನಾವಿಬ್ಬರೂ ಆ ಸಂಬಂಧದಿಂದ ಬಂಧುಗಳಾಗಬಹುದು ಎಂದು ಆ ಪ್ರೀತಿಯನ್ನೇ ದೂರ ಮಾಡಿದೆವುಹಾಡಿನ ಸ್ಪರ್ಧೆಯಲ್ಲಿ ಅನಾರೋಗ್ಯದ ಕಾರಣದಿಂದ ಅವಳು ಭಾಗವಹಿಸಲಾಗದೆ ಮೊದಲ ಬಹುಮಾನ ನನಗೆ ಬಂತು. ಆ ಸ್ಪರ್ಧೆಯಲ್ಲಿ ಅವಳಿರಲಿಲ್ಲ ಎಂಬ ಕಾರಣಕ್ಕೆಬಹುಮಾನವನ್ನೇ ತಿರಸ್ಕರಿಸಿದ್ದೆ.
ಡಿಗ್ರೀ ಮುಗಿಸಿದಾಗ ಕೆಲಸವೂ ನನಗಿಂತ ಮೊದಲೇ ಸಿಕ್ಕಿತು. ನನಗೆ ನಂತರ.ಆದರೆ ಅಲ್ಲಿಗೆ ನಮ್ಮಿಬ್ಬರ ಸ್ಪರ್ಧೆ ಮುಗಿದಿತ್ತು.ಅವಳ ಮದುವೆಯೂ ನನಗಿಂತ ಮೊದಲು ನಡೆದಿತ್ತುನಂತರ ಅವಳು ಹೊರಟೇ ಹೋದಳು ಗಂಡನ ಊರಿಗೆಸ್ಪರ್ದೆಯೊಂದರಲ್ಲಿ ಗೆಲ್ಲಲು ಎದುರಾಳಿ ಇರಬೇಕಲ್ಲವೇಎದುರಾಳಿ ಇಲ್ಲದೆ ನನ್ನ ಸ್ಪರ್ಧಾಮನೋಭಾವ ಕುಂಠಿತವಾಗಿತ್ತು.ಶ್ರೀದೇವಿ ಇರಬೇಕಿನಿಸುತ್ತಿತ್ತಾದರೂ ಅದು ಸಾಧ್ಯವಾಗಲಿಲ್ಲ. ಒಮ್ಮೆಯಾದರೂ ಅವಳನ್ನು ಸೋಲಿಸಿ ನಾನೂ ವಿಜಯದ ನಗೆ ನಗಲೇ ಬೇಕೆನಿಸುತ್ತಿತ್ತು. ಆದರೆ ಅವಳೇ ಸಿಗಲಿಲ್ಲಅದಾಗಿ ಮುವ್ವತ್ತು ವರ್ಷಗಳಾಗಿವೆ. ನನಗೂ ಮದುವೆಯಾಗಿ ಮಗ ರಾಕೇಶ್ ಹುಟ್ಟಿದ. ಅವನಲ್ಲೂ ಹೀಗೆ ಗೆಲುವಿನ ಬೀಜವನ್ನೇ ಬಿತ್ತಿದ್ದೆ. ನನ್ನ ಮಗ ಈಗ ಲಾಯರ್ .ನ್ಯಾಯವೋ ಅನ್ಯಾಯವೋ ಗೆಲುವುಂದೇ ಗುರಿ ಎಂಬಂತೆ ಬೆಳೆದಿದ್ದ. ಅವನ ಗೆಲುವು ನನ್ನದೂ ಆಗಬೇಕಿತು. ನನ್ನ ಸೋಲಿನ ನೆರಳು ಅವನನ್ನು ಕಾಡದಂತೆ ಕಾದಿದ್ದೆಇತ್ತೀಚಿಗೆ ರಾಕೇಶ್‍ನನ್ನು ನೋಡಲು ಇಬ್ಬರು ದೊಡ್ಡ ಕುಳಗಳು ಬಂದಿದ್ದರುಅತ್ಯಾಚಾರಕ್ಕೆ ಸಂಬಂಧ ಪಟ್ಟ ಕೇಸ್ ಅದು . ಅವರಿಬ್ಬರ ಮಕ್ಕಳು ಯಾರನ್ನೋ ಅತ್ಯಾಚಾರ ಮಾಡಿದ್ದರಂತೆಆರೋಪಿಯ ಪರವಾಗಿ ಕೇಸ್ ತೆಗೆದುಕೊಳ್ಳಲು ಅವರು ರಾಕೇಶನನ್ನು ಒತ್ತಾಯಿಸುತ್ತಿದ್ದರು . ರಾಕೇಶ ಸಾರಾ ಸಗಟಾಗಿ ತಿರಸ್ಕರಿಸಿದ.ನಾನೂ ಸುಮ್ಮನೆ ಫೈಲ್ ತೆಗೆದು ನೋಡುತ್ತಿದ್ದಾಗ ಕಾಣಿಸಿದ್ದು ಶ್ರೀದೇವಿಯ ಫೋಟೋ. ಎಷ್ಟೊಂದು ಬದಲಾಗಿ ಹೋಗಿದ್ದಾಳೆ .ನಂತರ ವಿಷಯ ತಿಳಿಯಿತುಶ್ರೀದೇವಿಯ ಮಗಳು ಅಂಬಿಕಾ ಕಾಲೇಜೊಂದರಲ್ಲಿ ಉಪನ್ಯಾಸಕಿಯಾಗಿದ್ದಳು. ಅವಳ ಮೇಲೆ ಅವಳ ಇಬ್ಬರು ವಿದ್ಯಾರ್ಥಿಗಳಿಂದಲೇ ಅತ್ಯಾಚಾರವಾಗಿತ್ತು.ಶ್ರೀದೇವಿ ಧೈರ್ಯವಂತೆ ಹಾಗೆಲ್ಲಾ ಎದೆಗುಂದುವುದಿಲ್ಲ . ಅದು ನನಗೆ ಗೊತ್ತು. ಅದಕ್ಕಾಗಿ ಆ ಆರೋಪಿಗಳಿಗೆ ಶಿಕ್ಷೆ ಸಿಗಬೇಕೆಂದು ಪೋಲೀಸರಿಗೆ ದೂರು ಕೊಟ್ಟು ನ್ಯಾಯಕ್ಕಾಗಿ ಓಡಾಡುತ್ತಿದ್ದಾಳೆಗಂಡ ಮೂರು ವರ್ಷದ ಹಿಂದೆ ತೀರಿಕೊಂಡಿದ್ದಾನಂತೆ.ಶ್ರೀದೇವಿಯನ್ನು ಸೋಲಿಸಲು ಒಂದು ಒಳ್ಳೆಯ ಅವಕಾಶ. ನನ್ನೊಳಗಿನ ಮಾನವ ಎಲ್ಲೋಮಾಯವಾಗಿದ್ದ ಇದ್ದುದೊಬ್ಬನೇ, ಹೈಸ್ಕೂಲು , ಕಾಲೇಜುಗಳಲ್ಲಿ ಅವಳಿಂದಸೋತು ಸುಣ್ಣವಾಗಿದ್ದ ಆ ಜೋಲು ಮುಖದ ಹುಡುಗನ ಅಹಂ.ರಾಕೇಶನಿಗೆ ಕೇಸ್ ತೆಗೆದುಕೊಳ್ಳಲು ಒತ್ತಾಯಿಸಿದೆ. ಇದು ನನ್ನ ಗೆಲುವು ಎಂದೆರಾಕೇಶ ಅಚ್ಚರಿ ಪಟ್ಟ ಕೊನೆಗೆ ಒಪ್ಪಿಕೊಂಡ.ಕೋರ್ಟಿಗೆ ಮಗನ ಜೊತೆ ನಾನೂ ಹೋದೆಅಂಬಿಕಾ ಕಟಕಟೆಯಲ್ಲಿ ನಿಂತಿದ್ದಳುಮಗನ ವಾದಸರಣಿ ಶುರುವಾಯ್ತುಅವನ ವಾದಕ್ಕೆ ತಲೆ ದೂಗಲಾರಂಭಿಸಿದೆಪಕ್ಕದ ಸಾಲಿನಲ್ಲಿ ನನ್ನ ಪ್ರತಿ ಸ್ಪರ್ಧಿ ಕೂತಿದ್ದಳು. ಅವಳೇ ಶ್ರೀದೇವಿಅವಳ ಸೋಲು ಸನ್ನಿಹಿತವಾಗಿತ್ತುಅವಳಿಗೂ ಗೊತ್ತಾಗಿತ್ತೆನಿಸುತ್ತದೆ. ಒಮ್ಮೆಯೂ ನನ್ನೆಡೆ ನೋಡಲಿಲ್ಲಮಗನ ವಾದ ತೀರ ಗುಪ್ತ ಸಂಗತಿಯ ಕಡೆಗೆ ಹರಿಯಲಾರಂಭಿಸಿತು. ಅಶ್ಲೀಲವೆನಿಸುವ ಪ್ರಶ್ನೆಗಳು ದಾಳಿ ಮಾಡಲಾರಂಭಿಸಿದವುಅಂಬಿಕಾ ಉತ್ತರಿಸಲಾಗದೆ ಅಮ್ಮನನ್ನು ನೋಡುತ್ತಿದ್ದಳು. ಶ್ರೀದೇವಿ ಚಡಪಡಿಸುತ್ತಿದ್ದಳು.ಶ್ರೀದೇವಿಯ ತಳಮಳ, ಕಣ್ಣಲ್ಲಿ ನೀರು ನೋಡಿ ನನಗೆ ಸಂತಸ ವಾಗುತ್ತಿತ್ತು.. ಇದು ವಿಕೃತಿ ಎನಿಸಿದರೂ ಮನಸ್ಸು ಅದನ್ನೆ ಬಯಸುತ್ತಿತ್ತುಕೇಸ್ ವಿಚಾರಣೆಯನ್ನು ಮಾರನೆಯ ದಿನಕ್ಕೆ ಮುಂದೂಡಿದರು.ಕೋರ್ಟ್‌ನ ಆವರಣದಲ್ಲಿ ಬರುತ್ತಿದ್ದಂತೆಶ್ರೀದೇವಿ ನನ್ನೆದುರು ಬಂದು ನಿಂತಳು"ಶ್ರೀಕಾಂತ್ . ನೀನು ಸೋಲಿಸುತ್ತಿರುವುದು ನನ್ನನ್ನಲ್ಲ . ನಿನ್ನ ಅಂತರಾತ್ಮಾನ. ನಿನ್ನ ನೀತೀನ, ನಿನ್ನ ಒಳ್ಳೇಯತನಾನ, ನಾನು ಕೇವಲ ನಾನು ಸೋತರೂ ಅದು ನನಗೆ ಗೆಲುವೇ ಆಗಿರುತ್ತದೆಏಕೆಂದ್ರೆ ನಿನ್ನನ್ನ ನೈತಿಕವಾಗಿ, ಮಾನಸಿಕವಾಗಿ, ನಾನು ಸೋಲಿಸ್ತಾ ಇದ್ದೇನೆ.ನಾನು ಸೋಲಲ್ಲೂ ಗೆಲುವು ಕಾಣ್ತೀನಿ. ನೀನು ಗೆಲುವಲ್ಲೂ ಸೋಲೇ ಕಾಣುತ್ತೀಯ ಇದು ಮಾತ್ರ ಸತ್ಯನೀನು ನಿನ್ನಮಗನ್ನ ಅನ್ಯಾಯದ ಗೂಡಿಗೆ ದೂಡ್ತಿದ್ದೀಯಾ. ಆದರೆ ನಾನು ನನ್ನ ಮಗಳನ್ನು ನ್ಯಾಯ ನೀತಿ ಗೂಡಿಗೆ ಸೇರಿಸ್ತೀನಿ. ಇನ್ನು ಮೇಲೆ ನಿನ್ನಿಷ್ಟ .ನೀನು ನಿನ್ನ ಮಗನ್ನ ಒಳ್ಳೇ ಲಾಯರ್ ಮಾಡಿದ್ದೀಯಾ .ಚೆನ್ನಾಗಿ ವಾದ ಮಾಡ್ತಾನೆ. ಅವನಿಗೆ ಒಳ್ಳ್ಳೇದಾಗಲಿ " ಹೇಳಿ ಮುಂದೆ ಹೊರಟಳುನಾನು ಬೆಪ್ಪಾಗಿ ನಿಂತಿದ್ದೆ.----------------------**********************-----
[ಮೂರು ತಿಂಗಳಲ್ಲಿ ಏನೇನಾಯ್ತು ಎಂದು ಹೇಳುವ ಅಗತ್ಯವಿಲ್ಲ ಎನಿಸುತ್ತದೆ. ಬೇಕು ಎನಿಸಿದರೆ ದಯವಿಟ್ಟು ಹೇಳಿ . ಅದನ್ನೂ ಬರೆಯುತ್ತೇನೆ)----------------------------------ಈ ಮೂರು ತಿಂಗಳಲ್ಲಿ----------------------------------------------
ಶ್ರೀದೇವಿಯ ಮಾತಿನಿಂದ ನಾನು ದಂಗಾಗಿ ಹೋಗಿದ್ದೆ.ಸೋಲಿನಲ್ಲೂ ಗೆಲುವು ನನ್ನದೇ ಎಂಬ ಅವಳ ಮಾತುಗಳು ನನ್ನನ್ನು ಅಧೀರನನ್ನಾಗಿಸಿತು."ರೀ ಯಾವುದೋ ಹೈಸ್ಕೂಲಿನ ಕಾಲೇಜಿನ ಘಟನೆಗಳಿಗೋಸ್ಕರ ಒಂದು ಅಸಹಾಯಕ ಹೆಣ್ಣಿನ ಜೀವನದ ಜೊತೆ ಸ್ಪರ್ಧೆಗಿಳಿಯುತ್ತಿದ್ದೀರಲ್ಲ .ನಾಚಿಕೆ ಆಗಲ್ವಾ . ಗೆಲ್ಲೋ ಅಂತೋರಾಗಿದ್ರೆ ಆಗಲೇ ಗೆಲ್ತಿದ್ರಿ ಈಗ ನಿಮ್ಮಗ ಕೇಸ್ ಗೆದ್ರೂ ಅದೂ ಅನ್ಯಾಯದ ಗೆಲುವು ಅಗಲ್ಲವಾ. ನೀವ್ಯಾಕೆ ಈಥರ ಯೋಚಿಸೋಕೆ ಶುರು ಮಾಡಿದ್ರಿ ನೀವು ನಿಮ್ಮ ಮಗ ಗೆದ್ರೂ ನನ್ನ ದೃಷ್ಟಿಯಲ್ಲೂ ನೀವಿಬ್ರೂ ಸೋಲ್ತೀರಾ" ಎಂದು ನನ್ನ ಕೈ ಹಿಡಿದಾಕೆ ಚುಚ್ಚಿದಳು ಅತ್ತ"ಅಪ್ಪ ನೀನೇನೂ ಹೆದರಬೇಡಾಪ್ಪ ಸೋಲಿನಲ್ಲಿ ಗೆಲುವು ಅಂತ ಹೇಳಿ ನಿಮ್ಮ ಮನಸನ್ನ ತಿರುಗಿಸೋ ಯೋಚನೆ ಮಾಡ್ತಾ ಇದಾಳೆ ಗೆಲ್ಲೋದು ನಾವೇ" ಎಂದ ಮಗ ಇತ್ತ.ದ್ವಂದ್ವದಲ್ಲಿ ತೇಲಾಡಿತುರಾತ್ರಿ ಎಲ್ಲಾ ನಿದ್ದೆ ಬರಲಿಲ್ಲ. ಕ್ಷಣ ಕ್ಷಣಕ್ಕೂ ಶ್ರೀದೇವಿಯ ಮಾತುಗಳು ಕಿವಿಯನ್ನು ಇರಿಯಲಾರಂಭಿಸಿದವು."ನಿನ್ನನ್ನ ನೈತಿಕವಾಗಿ, ಮಾನಸಿಕವಾಗಿ, ನಾನು ಸೋಲಿಸ್ತಾ ಇದ್ದೇನೆ .ನಾನು ಸೋಲಲ್ಲೂ ಗೆಲುವು ಕಾಣ್ತೀನಿ"ಅಂತರಾತ್ಮ ನಕ್ಕಿತು,ಅಹಂ ಹಲ್ಲು ಕಡಿಯಿತುರಾತ್ರಿ ಎಲ್ಲಾ ಇವುಗಳೆರೆಡರ ಕದನ ನಡೆಯುತ್ತಲೇ ಇತ್ತು.ಕೊನೆಗೂ ಗೆದ್ದದ್ದು ನನ್ನೊಳಗಿದ್ನ ಮಾನವ , ಅಹಂ ಗೆಲ್ಲಲಾಗದೆ ದೂರ ಓಡಿತ್ತುಮಗನಿಗೆ ಅವರುಗಳ ಪರ ಕೇಸ್ ಬಿಟ್ಟು ಬಿಡಲು ಹೇಳಿದೆ.ಯಾವ್ಯಾವುದೋ ರೂಲ್ಸ್ ಮಾತಾಡಿದ. ಅದು ಸಾಧ್ಯವಿಲ್ಲ ಕಷ್ಟ ಹಾಗೆ ಹೀಗೆ ಎಂದಅದೆಲ್ಲಾ ನನಗೆ ಗೊತ್ತಿಲ್ಲ. ನೀನು ಅಂಬಿಕಾ ಪರ ವಾದ ಮಾಡಬೇಕು ಎಂದೆನನ್ನಾಸೆಯಂತೆ ನಡೆಯಿತು.ಕೋರ್ಟಿನಲ್ಲಿ ರಾಕೇಶ ಅಂಬಿಕಾ ಪರ ವಕೀಲನಾದಆದರೆ ಒಂದು ಮಾತ್ರ ನನಗರಿವಿಲ್ಲದಂತೆ ಆಗಿತ್ತುಅದು ಅಂಬಿಕಾ ಹಾಗು ರಾಕೇಶನ ಪ್ರೇಮ . ಅಂಬಿಕಾಳ ಆ ಸ್ಥಿತಿಯಲ್ಲೂ ರಾಕೇಶ ಅವಳನ್ನು ಮದುವೆಯಾಗಬಯಸಿದ. ಜಾತಿ, ಅಂತಸ್ತು, ವಯಸ್ಸು ಯಾವುದೂ ಅಡ್ದ ಬರಲಿಲ್ಲ ಅವರ ಪ್ರೀತಿಗೆ .ನಾನಾಗಲಿ ನನ್ನ ಹೆಂಡತಿಯಾಗಲಿ ಇದನ್ನು ವಿರೋಧಿಸಲಿಲ್ಲ. ಶ್ರೀದೇವಿ ಕೃತಜ್ನತೆಯ ಕಣ್ಣೀರು ಹರಿಸಿದಳುಇಬ್ಬರೂ ಕೇಸ್ ಗೆದ್ದಮೇಲೆ ಮದುವೆಯಾಗುವುದಾಗಿ ಹೇಳಿದರುಮೂರು ತಿಂಗಳ ನಂತರ ರಾಕೇಶ ಕೇಸ್ ಗೆದ್ದಿದ್ದ.ಅವನ ಭಾವಿ ಹೆಂಡತಿ ಅಂಬಿಕಾ ಗೆಲುವಿನ ನಗೆ ಬೀರಿದ್ದಳು. ಆ ವಿದ್ಯಾರ್ಥಿಗಳಿಗೆ ಜೀವಾವಧಿ ಶಿಕ್ಷೆಯಾಗಿತ್ತು .ಇಬ್ಬರ ಮದುವೆಯ ದಿನದಂದು ಶ್ರೀದೇವಿ ಹೇಳಿದಳು"ಶ್ರೀಕಾಂತ್ ನೀನು ನಿಜವಾಗಲೂ ಈಗ ಗೆದ್ದೆ .ಗೆಲುವು ನಿನ್ನದಾಗಿದೆ""ಹೌದು ರೀ ನನ್ನನ್ನೂ ಈಗ ಗೆದ್ದುಬಿಟ್ಟಿರಿ ನೀವು " ಎಂದು ಕಿವಿಯಲ್ಲಿ ಪಿಸುನುಡಿದಳು ನನ್ನ ಹೆಂಡತಿನಾನು ಹೆಮ್ಮೆಯ ದೃಷ್ಟಿಯನ್ನು ನನ್ನ ಹೆಂಡತಿಯತ್ತ ಬೀರಿದೆ. ಅವಳು ಮೆಚ್ಚುಗೆಯಿಂದ ಕೈ ಹಿಡಿದಳು
ಒಂದೇ ಸವನೆ ಬರೆದುಕೊಂಡು ಹೋಗುತ್ತಿದ್ದೀರಿ. ಓದಲು ಸ್ವಲ್ಪ ಕಷ್ಟ. ಬರಹ ಚೆನ್ನಾಗಿದೆ.
ReplyDelete