Wednesday, June 3, 2009

ಪ್ರೇಮವೊಂದು ಹುಚ್ಚು ಹೊಳೆ- ಕೊನೆಯ ಕಂತು

ಮರು ದಿನ ರಾಜೀವನ ಕರೆ ಬಂತು . ರಾಜೀವನ ಮನೆಗೆ ಹೋದ.
ರಾಜೀವ ಆಗಲೇ ಪ್ಲಾನ್ ಮಾಡಿದ್ದ . ಅವನ ಪ್ಲಾನ್ ಕೇಳುತ್ತಿದ್ದಂತೆ ಹರೀಶ್ ದಂಗಾಗಿ ಹೋದ .
. ಆವನ ಪ್ಲಾನ್ ಪ್ರಕಾರ ಮೇ ಹದಿನಾಲ್ಕು ಸ್ಮಿತಾ ಹಾಗು ಅಮರ್ ತಮಿಳುನಾಡಿನ ಏಲಗಿರಿ ಹಿಲ್ಸ್‌ನಲ್ಲಿ ಯಾವುದೋ ಪಾರ್ಟಿ ಅಟೆಂಡ್ ಮಾಡಲು ಹೋಗುತ್ತಿದ್ದಾರೆ . ಆಗ ಅಮರ್ ಪಾಲನನ್ನು ಕಣಿವೆಯಿಂದ ಕೆಳಗೆ ನೂಕಿಬಿಡುವುದು.ನಂತರ ಕಾರ್ ಅಪಘಾತವಾದಂತೆ ನಟಿಸುವುದು .
ಅಬ್ಬಾ ಈ ಪೆಕರನಿಗೆ ಇಂತಹ ತಲೆ ಇದೆಯೇ? ಯಾಕೋ ಮನಸ್ಸು ಹಿಂಜರಿಯಿತು ಆದರೆ ಮತ್ತೆ ಸ್ಮಿತಾಳ ನೆನಪಾಯ್ತು. ಅವಳಿಗಾಗಿ ಯಾವ ರಿಸ್ಕ್ ತೆಗೆದುಕೊಳ್ಳೋದಕ್ಕೂ ಅವನು ಸಿದ್ದನಾಗಿದ್ದ.
ಎಂದೋ ಬೇಕಾಗುತ್ತದೆ ಎಂದು ಕಲಿತಿದ್ದ ಕಾರ್ ಡ್ರೈವಿಂಗ್ ಈಗ ಉಪಯೋಗವಾಯ್ತು ಸ್ಮಿತಾಳ ಹೊಸ ಕಾರ್‌ಗೆ ಅವನೇ ಡ್ರೈವರ್ . ಪ್ಲಾನ್ ಸ್ಮಿತಾಗೂ ಗೊತ್ತಿತ್ತು.
ಎಲ್ಲವೂ ಪ್ಲಾನ್ ಪ್ರಕಾರವೇ ನಡೆಯುತ್ತಿತ್ತು
ಅಮರ್ ಪಾಲ್ ಸ್ವಲ್ಪ ಸ್ವಲ್ಪ ಕನ್ನಡ ಕಲಿತಿದ್ದ ಆಗೀಗ ಇವನ ಬಳಿ ಪ್ರೀತಿಯಿಂದ ಮಾತಾಡುತ್ತಿದ್ದ . ಅವನ ವಿಶ್ವಾಸ ಗಳಿಸಿಕೊಂಡಿದ್ದ. .ಅದು ಅವರ ಪ್ಲಾನ್‌ನ ಒಂದು ಅಂಗವೇ ಆಗಿತ್ತು ಮಧ್ಯ ಮಧ್ಯ ದಲ್ಲಿ ಸ್ಮಿತಾಳ ಪ್ರೀತಿ ಪೂರ್ವಕ ಮಾತುಗಳು. ರಾಜೀವ ಹುರಿದುಂಬಿಸುವಿಕೆ. ಜೊತೆಯಲ್ಲೇ ಅಮ್ಮ್ಮ ಹಾಗು ತಂಗಿಗೆ ಹಣದ ಹೊಳೆ ಹರಿಯುತ್ತಿದ್ದುದರಿಂದ ಹರೀಶ್‌ನ ಪೂರ್ತಿ ಗಮನ ಗುರಿಯ ಮೇಲಿತ್ತು.
ಅವನು ಮೇ ಹದಿನಾಲ್ಕನೇ ತಾರೀಖಿಗಾಗಿ ಕಾಯುತ್ತಿದ್ದ.
ಅಂದಿನ ದಿನವೇ ಅಮರ್ ಪಾಲ್‍ನ ಅಂತ್ಯ ಹಾಗು ತಮ್ಮಿಬ್ಬರ ಹೊಸ ಜೀವನದ ಆರಂಭವಾಗಬೇಕಿತ್ತು.
ಸ್ಮಿತಾ ಮತ್ತು ರಾಜೀವರ ಮನಸಲ್ಲೂ ಆತಂಕ . ತಮ್ಮ ಪ್ಲಾನ್ ಪ್ರಕಾರವೇ ನಡೆದರೆ ಸಾಕು ಎಂದು ಇಬ್ಬರೂ ಬೇಡಿಕೊಳ್ಳುತ್ತಿದ್ದರು .
ಕೊನೆಗೂ ಮೇ ಹದಿನಾಲ್ಕು ಬಂತು ಬೆಳಗ್ಗೆ ಎಲ್ಲಾ ಕೆಲಸಗಳನ್ನು ಮುಗಿಸಿ ಸಾಯಂಕಾಲದ ಹೊತ್ತಿಗೆ ಮೂರುಜನ ಹೊರಟರು. ರಾಜೀವ ಮತ್ತೊಂದು ಕಾರ್‌ನಲ್ಲಿ ಹಿಂಬಾಲಿಸುವುದಾಗಿ ಹೇಳಿದ.
ಹೊಸೂರು ದಾಟುವಷ್ಟರಲ್ಲಿ ಕತ್ತಲೆಯಾಗಿತ್ತು. ಅಲ್ಲಿಂದ ಕಾವೇರಿ ಪಟ್ಟಣಮ್ ದಾಟ ಕ್ರಿಷ್ಣ ಗಿರಿಯ ಕಡೆಯಿಂದ ಏಲಗಿರಿ ಹಿಲ್ಸ್ ಕಡೆ ತಿರುಗಿಸಿದ .ಹರೀಶ್ ಅದು ಕಡಿದಾದ ಬೆಟ್ಟ . ಹಗಲಲ್ಲೆ ಜನ ಸಂಚಾರ ಕಡಿಮೆ ಕೇವಲ ವಾಹನಗಳಷ್ಟೆ ಬಂದು ಹೋಗುತ್ತಿದ್ದವು. ಅದೂ ರಾತ್ರಿಯಾದ್ದರಿಂದ ಅವುಗಳೂ ಇರಲಿಲ್ಲ. ಕೊಂಚ ಎಚ್ಚರ ತಪ್ಪಿದರೂ ಮರಣ ಖಂಡಿತಾ.
ಎಷ್ಟೋ ತಿರುವುಗಳು .
ಹಿಂದೆ ನಸು ಕತ್ತಲಲ್ಲಿ ಅಮರ್ ಪಾಲ್ ಮತ್ತು ಸ್ಮಿತಾರ ಆಟ ಸಾಗುತ್ತಿತ್ತು.
ಒಮ್ಮೆ ಕನ್ನಡಿಯಲ್ಲಿ ಸ್ಮಿತಾಳ ಮುಖ ನೋಡಿದ . ಅದು ಅವರ ಪ್ಲಾನ್ ಪ್ರಕಾರವೇ ಆಗಿತ್ತು
ಸ್ಮಿತಾ ಅಮರ್ ಪಾಲ್ ಕಿವಿಯಲ್ಲಿ ಹರೀಶನ ಕಡೆ ಕೈ ತೋರುತ್ತಾ ಏನೋ ಹೇಳಿದಳು. ಅಮರ್ ಪಾಲ್‌ನ್ ಮುಖ ಕೋಪದಿಂದ ಕಪ್ಪ್ಪಾಯಿತು. "ಸುವ್ವರ್ ಕಾರ್ ಸ್ಟಾಪ್ ಕರ್ " ಗುಡುಗಿನ ಧ್ವನಿಯಲ್ಲಿ ನುಡಿದ.
ಕಾರನ್ನು ಕೂಡಲೆ ನಿಲ್ಲಿಸಿ ಸ್ಮಿತಾ ಮುಖ ನೋಡಿದ ಹರೀಶ. ಅವಳು ಕಿರು ನಗೆ ನಕ್ಕು ಮತ್ತೆ ಆತಂಕದಿಂದ ಎಂಬಂತೆ ಅಮರ್ ಪಾಲನೆಡೆ ನೋಡಿದಳು.
ಅಮರ್ ಪಾಲ್ ಕೆಳಗಿಳಿದು ಹರೀಶ್‌ನ ಕುತ್ತಿಗೆಪಟ್ಟಿ ಹಿಡಿದು ಕಾರಿನಿಂದೆಳೆದ
"ಕ್ಯೂರೆ ತುಮ್ ಕೋ ಕೋಯಿ ಔರ್ ನೈ ಮಿಲಾ ಕ್ಯಾ . ಸ್ಮಿತಾ ಮೇರಿ ಹೈಅಗರ್ ತುಮ್ ಉಸ್ಕೆ ತರಫ್ ಮುಡ್ಕೆ ಭೀ ದೇಖೆ ತೋ ತುಮ್ ಜಿಂದಾ ನೈ ಬಚೋಗೆ. ಮರ್ ಜಾವೋಗೆ ತುಮ್"
ಹಿಂದಿಯಲ್ಲಿ ಬೈಯ್ಯುತ್ತಾ ಕೆನ್ನೆಗೆರೆಡು ಬಿಗಿಯುತ್ತಿದ್ದಂತೆ ಹರೀಶ್ ಆ ಮುದಿಯನನ್ನು ಒಂದೇ ಏಟಿಗೆ ಕೆಳಗೆ ನೂಕಿದ.
ಅಮರ್ ಪಾಲ್ ಬಿದ್ದವನೇ ಬೈಯ್ಯುತಾ ತನ್ನ ಬೆಲ್ಟಿನ ಸಂದಿಯಲ್ಲಿದ್ದ ಗನ್ ತೆಗೆದು ಹರೀಶ್‍ನನ್ನು ಹೆದರಿಸಿದ.
ಇದು ಹರೀಶ್‌ನಿಗೆ ಗೊತ್ತಿದ್ದ ನಡೆಯೇ. ಹೇಗಿದ್ದರೂ ಗನ್‌ನಲ್ಲಿ ಇದ್ದ ಬುಲೆಟ್‌ಗಳನ್ನೆಲ್ಲಾ ತೆಗೆದುಬಿಡುತ್ತೇನೆಂದು ಸ್ಮಿತಾ ಹೇಳಿದ್ದಳು. ಆದ್ದರಿಂದ ಧೈರ್ಯವಾಗಿ ಅವನ ಮೇಲ್ ಹಾರಿ ಗನ್ ಕಿತ್ತುಕೊಂಡ ಅವನೆಡೆ ಗುರಿ ಇಟ್ಟ.
ಅದು ಅವನನ್ನು ಹೆದರಿಸುವುದಕ್ಕಾಗಿ ಅಮರ್ ಪಾಲ್‌ಗೆ ಇದು ಊಹಿಸದಂತಹ ಘಟನೆ.
ಆತ ಕಕ್ಕಾಬಿಕ್ಕಿಯಾದ. ಸ್ಮಿತಾಳ ಕಡೆಗೆ ಸಹಾಯಕ್ಕಾಗಿ ನೋಡಿದ ಸ್ಮಿತಾ ಗೆಲುವಿನ ನಗೆ ಬೀರಿದ್ದಳು. ಅಮರ್ ಪಾಲ್ ಈಗ ಅಕ್ಷರಶ: ಅಸಹಾಯಕನಾಗಿದ್ದ. ಅವನ ಸ್ಮಿತಾಳ ಮೇಲಿನ ಅತೀ ಪ್ರೀತಿಯೇ ಅವನ ಈ ಸ್ಥಿತಿಗೆ ಕಾರಣವಾಗಿತ್ತು. ಯಾರಿಗಾಗಿ ಹೆಂಡತಿ ,ಮಕ್ಕಳನ್ನು ಬಿಟ್ಟು , ತನ್ನ ನಂತರದ ಸಮಸ್ತ ಆಸ್ತಿಯನ್ನೆಲ್ಲಾ ಬರೆದಿದ್ದನೋ ಇಂದು ಅವಳು ತನ್ನ ಸಾವಿಗೆ ಮುನ್ನುಡಿ ಬರೆದಿದ್ದಾಳೆ. ರೋಷ ಬಂದರೂ ಏನೂಮಾಡುವಂತಿರಲಿಲ್ಲ
ಹರೀಶ್ ಕೈನಲ್ಲಿದ್ದ ಗನ್ ಕೆಳಗೆ ಹಾಕಿದ ಅಮರ್ ಪಾಲ್‌ಗೆ ಅಚ್ಚರಿಯ ಜೊತೆಗೆ ಧೈರ್ಯವೂ ಬಂತು
ದೇಖೋ ತುಂ ದೋನೋಂಕೋ ನೈ ಚೋಡೂಂಗ .ಸ್ಮಿತಾ ಕ್ಯೋ ಕೀ ತುಮ್ನೆ ಐಸೆ
ಎಂದನ್ನುತಿದ್ದಂತೆ ಹರೀಶ ಅವನ ಬಳಿ ಹೋಗಿ ಅವನನ್ನು ದರ ದರ ಎಳೆದುಕೊಂಡು ಆ ಕಣಿವೆಯ ಕೆಳಗೆ ಹಾಕಬೇಕಿತ್ತು ಆ ಕಣಿವೆ ಸುಮಾರು ನೂರು ಅಡಿಗಳಿಗಿಂತ ಜಾಸ್ತಿ . ಅಲ್ಲಿ ಬಿದ್ದವನ ಕಳೇಬರವೂ ಸಿಗುವುದಿಲ್ಲ. ಅಲ್ಲಿಂದ ಅವನನ್ನು ನೂಕಬೇಕೆನ್ನುವಷ್ಟರಲ್ಲೇ
ಅಮರ್ ಪಾಲ್ ಕುಸಿದು ಬಿದ್ದ ಅವನ ಹಣೆ ಇಂದ ರಕ್ತ ಸುರಿಯತೊಡಗಿತು .
ಎದುರಿನಿಂದ ಬಂದ ಬುಲೆಟ್ ಅವನ ಹಣೆಯನ್ನು ಸೀಳಿತ್ತು. ಆದರೆ ಬುಲೆಟ್ ಎಲ್ಲೀಂದ ಬಂತು?
ಹರೀಶ್ ಅಚ್ಚರಿಯಿಂದ ಹಿಂದೆ ತಿರುಗಿದ. ಅಲ್ಲಿ ರಾಜೀವ್ ಗನ್ ಗುರಿ ಮಾಡಿ ನಿಂತಿದ್ದ.
ಅಮರ್ ಪಾಲ್‍ನ ಜೀವ ಒಂದೇ ಏಟಿಗೆ ಹಾರಿ ಹೋಗಿತ್ತು. ಅವನ ಕಳೆಬರ ಅಲ್ಲೇ ಬಿಟ್ಟು ರಾಜೀವನ ಹತ್ತಿರ ಓಡಿದ "ರಾಜೀವ್ ಇದೇನು ಮಾಡಿದ್ರಿ . ಇನ್ನೇನು ನಾನೆ ನೂಕುತ್ತಾಇದ್ದೆ" ಎಂದನ್ನುತಿದ್ದಂತೆ ರಾಜೀವನ ಕೈನಿಂದ ಗನ್ ಕಿತ್ತುಕೊಂಡ ಸ್ಮಿತಾ ರಾಜೀವನ ಕಾಲಿಗೆ ಗುಂಡು ಹಾರಿಸಿದಳು
ಹರೀಶನಿಗೆ ಅಯೋಮಯ. ಮಾತುಗಳೇ ಬರಲಿಲ್ಲ "ಸ್ಮಿತಾ ?ಏನಿದು"?ಅವಳತ್ತ ಕೇಳುತ್ತಿದ್ದಂತೆ ಗನ್ ಅವನ ಮೇಲೆ ಎಸೆದಳು .
ಹರೀಶ್ ಗನ್ ಕೈಲಿ ಕ್ಯಾಚ್ ಹಿಡಿದ
ಇದರಲ್ಲಿ ಬುಲೆಟ್ ಇಲ್ಲ ಎಂದು ಹೇಳಿದ್ದಳಲ್ಲ
ರಾಜೀವ ಆ ನೋವಿನಲ್ಲೂ ನಗುತ್ತಿದ್ದ . ಸ್ಮಿತಾಳ ಮೊಗದಲ್ಲ್ಕಿ ಪೈಶಾಚಿಕ ನಗೆ ಕಾಣಿಸಿತು ತನ್ನ ಹಾಗು ರಾಜೀವನ ಕೈನಲ್ಲಿದ್ದ ಗ್ಲೌಸ್ ಕಿತ್ತು ಆ ಕಣಿವೆಯಿಂದ ದೂರ ಎಸೆದಳು. ಬಟ್ಟೆಯನ್ನು ಹರಿದುಕೊಂಡಳು, ತನ್ನ ಕೂದಲನ್ನೆಲ್ಲಾ ಕಿತ್ತುಕೊಂಡಳು .
"ಸ್ಮಿತಾ ಏನಿದು . ಯಾಕೆ ಹೀಗೆ ಮಾಡ್ತಾ ಇದ್ದೀರಾ " ಎಂದು ಅವಳನ್ನು ಗಟ್ಟಿಯಾಗಿ ಹಿಡಿದು ಆಡಿಸಿದ . ಆಕೆ ಬಲವಂತವಾಗಿ ಅವನನ್ನು ನೂಕುತ್ತಿದ್ದಂತೆ
ಪೋಲೀಸ್ ಜೀಪ್ ಬಂತು. ದಡ ದಡ ಪೋಲಿಸರು ಇಳಿದರು . ಅವರ ಜೊತೆ ಎಸ್ ಐ ಪ್ರೀತಮ್ ಸಹಾ ಅವನನ್ನು ಸ್ಮಿತಾಳ ಮನೆಯಲ್ಲಿ ನೋಡಿದ್ದ.ನೆನಪಿಗೆ ಬಂತು. ತಾನ್ಯಾವುದೋ ಸುಳಿಯಲಿ ಸಿಕ್ಕಿರುವೆನೆಂಬ ಅರಿವು ಆಗತೊಡಗಿತು. ಗನ್ ಹಿಡಿದಿದ್ದವನನ್ನು ಪೋಲಿಸರು ಸುತ್ತುವರೆದರು. ಸ್ಮಿತಾ ಎಸ್ ಐ ಪಕ್ಕ ಓಡಿ ಹೋಗಿ ನಿಂತಳು ಆಗಲೇ ಸ್ಮಿತಾ ಅಳಲಾರಂಭಿಸಿದಳು ಅರೆ ಇದ್ದಕಿದ್ದ ಹಾಗೆ ಕಣ್ಣೆಲ್ಲಾ ಕೆಂಪಗಾಗಿತ್ತು. ಕಣ್ಣಿಗೇನು ಹಚ್ಚಿಕೊಂಡಳೋ. ಇತ್ತ ರಾಜೀವ ಸಹಾ ನೋವಿನಿಂದ ನರಳುತ್ತಾ ಕೆಳಗೆ ಬಿದ್ದಿದ್ದ " ಪ್ಲೀಸ್ ಅರೆಸ್ಟ್ ಹಿಮ್" ಸ್ಮಿತಾ ಆತಂಕದಿಂದ ಹರೀಶನ ಕಡೆ ಕೈ ತೋರುತ್ತಾ ಕೂಗಿದಳು ಹರೀಶ್ ಕಕ್ಕಾಬಿಕ್ಕಿಯಾದ . ಮಾತುಗಳೇ ಹೊರಬರಲಿಲ್ಲ.
"ಹಿ ಟ್ರೈಡ್ ಟು ರೇಪ್ ಮಿ. ಅಡ್ಡ ಬಂದ ಅಮರ್‌ನ ಸಹ ಕೊಂದುಬಿಟ್ಟ. ನೋಡಿ ರಾಜೀವ್ಗೂ ಗುಂಡು ಹಾರಿಸಿದ್ದಾನೆ" ಸ್ಮಿತಾಳಾ ಆರೋಪದಿಂದ ದಂಗಾಗಿ ನಿಂತಿದ್ದ ಹರೀಶ್.
ಪ್ರೀತಮ್ ಅವನಕೈಗೆ ಬೇಡಿ ತೊಡಿಸಿದ.
"ಪ್ರೀತಮ್ ....".. ರಾಜೀವನ ಬಳಿ ಓಡಿದರು
ತೀವ್ರ ನೋವಾದವನಂತೆ ಮುಖವನ್ನು ಹಿಂಡಿದ "ಮೇಡಮ್ ಮೇಲೆ ಇವನಿಗೆ ಕಣ್ಣಿದೆ ಅಂತ ಇವತ್ತು ಅವನ ರೂಮಿಗೆ ಗೊತ್ತಾಯ್ತು. ಮೇಡಮ್ ಮುಖದ ಫೋಟೋಗೆ ಯಾವ್ಯಾವುದೋ ಬೆತ್ತಲೆ ದೇಹಾನ ಅಂಟಿಸಿದ್ದ. ಜೊತೆಗೆ ಅವನ ರೂಮಲ್ಲಿ ಈ ಏಲಗಿರಿ ಹಿಲ್ಸ್‌ನ ಮ್ಯಾಪ್ ಇತ್ತು ಈ ಸ್ಪಾಟ್ ಗುರಿಯಾಗಿಸಿದ್ದ. ಅದನ್ನ ಗಮನಿಸಿ ನಾನುನಿಮಗೆ ಕಾಲ್ ಮಾಡಿ ಕೂಡಲೆ ಇವರನ್ನ ಫಾಲೋ ಮಾಡಿಕೊಂಡು ಬಂದೆ ಆದರೆ ಬರೋ ಅಷ್ಟರಲ್ಲಿ ಸಾರ್‌ನ ಕೊಂದುಬಿಟ್ಟಿದ್ದಾ.
ಜೊತೆಗೆ ಮೇಡಮ್ ಮೇಲೆ ಬೀಳುತ್ತಿದ್ದ ಇವನನ್ನ ತಡೆಯಲು ಹೋಗಿದ್ದಕ್ಕೆ ನನ್ನ ಮೇಲೂ ಗುಂಡು ಹಾರಿಸಿದ ಆದರೆ ನಾನುಹೇಗೋ ತಪ್ಪಿಸಿಕೊಂಡೆ.ಅದು ಕಾಲಿಗೆ ಬಿತ್ತು. ದಯವಿಟ್ಟು ಇಂತಹವರನ್ನ ಬಿಡಬೇಡಿ"
ಹರೀಶನ ಗುಂಡಿಗೆ ಒಡೆಯಿತು "ಸಾರ್ ಇದೆಲ್ಲಾ ಇವರದೇ ಕುತಂತ್ರ ಬೇಕಾದರೆ ನೋಡಿ ನನ್ನ ಮೊಬೈಲ್ನಲ್ಲಿ ಈ ಮೇಡಮ್ ಕಾಲ್ಸ್ ಇದೆ ಅವರದೇ ನಂಬರ್ ಇದು"
ತನ್ನ ಮೊಬೈಲ್ ತೆಗೆದುಕೊಂಡು ತೋರಿಸಿದ ಯಾರೂ ಯಾವುದನ್ನೂ ನೋಡಲಿಲ್ಲ.
" ನನ್ನ ತಪ್ಪಿಲ್ಲ ತಪ್ಪಿಲ್ಲ " ಎಂಬ ಅವನ ಕೂಗಿಗೆ ಬೆಲೆಯೇ ಇರಲಿಲ್ಲ.
ಅವನ ಮೊಬೈಲ್‌ ಅನ್ನು ತನ್ನ ವಶಕ್ಕೆ ತೆಗೆದುಕೊಂಡ ಪ್ರೀತಮ್ ಅವನಿಗೊಂದು ಗನ್ನಿನ್ನಲ್ಲೆ ಹೊಡೆದು ಜೀಪ್ನಲ್ಲಿ ಕೂರಿಸಿದ. ಹಾಸ್ಪಿಟಲ್‌ಗೆ ಫೋನ್ ಮಾಡಿದ ಪ್ರೀತಮ್ ಹೆಣದ ಬಗ್ಗೆ ಮಾಹಿತಿ ನೀಡಿದ ಹರೀಶ್ ಜೀಪಿಂದ ಸ್ಮಿತಾ ಮುಖವನ್ನೇ ನೋಡುತ್ತಿದ್ದ ಸ್ಮಿತಾ ರಾಜೀವನಿಗೆ ಹೆಗಲು ನೀಡಿದಳು. "ಮೇಡಮ್ ನೀವು ಹೋಗಿ ಮೇಡಮ್ . ಆಮೇಲೆ ಸ್ಟೇಷನಗೆ ಒಂದು ಕಂಪ್ಲೆಂಟ್ ಬರೆದುಕೊಡಿ ಸಾಕು. ಈ ಮಗನ್ನ ಜೀವಮಾನ ಪೂರ್ತಿ ಒಳಗೆ ಕೊಳೆಯೋ ಹಾಗೆ ಮಾಡ್ತೀನಿ" ಪ್ರೀತಮ್ ಹೇಳಿದ ಹರೀಶ್‌ನತ್ತ ನೋಡಿದ ಸ್ಮಿತಾ ರಾಜೀವನನ್ನ ಕಾರಿನಲ್ಲಿ ಕೂರಿಸಿಕೊಂಡಳು.
ಕಾರ್ ಅನ್ನು ಡ್ರೈವಮಾಡುತ್ತಲೆ ಕಣ್ಣೀರನ್ನು ಒರೆಸಿಕೊಂಡಳು. ರಾಜೀವನತ್ತ ನೋಡಿ ನಕ್ಕಳು
ರಾಜೀವ ಆ ನೋವಿನಲ್ಲೂ ನಕ್ಕ
"ಕೊನೆಗೂ ಗೆದ್ದು ಬಿಟ್ಟೆವಲ್ಲ ಸ್ಮಿತಾ" ಅವಳ ಕೆನ್ನೆ ಸವರಿ ನುಡಿದ
"ಹೇಗಿತ್ತು ನನ್ನ ನಟನೆ?"
"ನಿನ್ನ ನಟನೆ ಬಗ್ಗೆ ಕೇಳೋದೇ ಬೇಡ. ಇಲ್ದಿದ್ದರೆ ಆ ಬಕರ ಹಂಗೆ ನಂಬ್ತಿದ್ನಾ ನಿನ್ನ? ಅದೇನು ಮೋಡಿ ಮಾಡ್ತೀಯ ಸ್ಮಿತಾ ಬರೀ ಫೋನಲ್ಲೇ ಮಾತಾಡಿ ಕೆಲ್ಸಸಾಧಿಸಿಕೊಂಡೆಯಲ್ಲಾ ಗ್ರೇಟ್"
"ಮತ್ತೆ ಇನ್ನೇನು ಆ ಮುದುಕ ಬದುಕಿರೋ ವರೆಗೂ ಅವನ ಆಸ್ತಿ ನಂದಾಗ್ತಿರಲಿಲ್ಲ .ನಿಮ್ಮನ್ನ ಬಿಟ್ಟು ಅವನ ಜೊತೆ ಬದುಕೋಕೆ ಆಗ್ಲಿಲ್ಲ. ನಾವಂದುಕೊಂಡ ಹಾಗೆಒಬ್ಬ ಬಕರ ಸಿಕ್ಕ್ದ ಆದರೆ ಇಷ್ಟು ಬೇಗ ಕೆಲಸ ಆಗುತ್ತೆ ಅಂತ ಅಂದುಕೊಳ್ಳಲಿಲ್ಲ."
"ಮೊಬೈಲ್ ಪ್ಲಾನ್ ಹೇಗಿತ್ತು . ಅದು ನಂದೇ ಐಡಿಯಾ ಅಲ್ಲವಾ? ಅವನು ಕೆಲ್ಸಕ್ಕೆ ಸೇರಿಕೊಂಡಾಗ ಅವನ ಹತ್ರಾನೆ ಸೈನ್ ಮಾಡಿಸಿಕೊಂಡು ಅವನ ಹೆಸರಲ್ಲೇ ಮೊಬೈಲ್ ತೆಗೆದುಕೊಂಡಿದ್ದು. ಅದೀಗ ಅವನ್ ರೂಮಲ್ಲೇ ಇದೆ ಮತ್ತೆ ಅವನಿಗೆ ತೊಂದರೆ " ರಾಜೀವ ಕಾಲರ್ ಏರಿಸಿಕೊಂಡ.
ಸ್ಮಿತಾ ನಕ್ಕು ಅವನ ಕೈನಲ್ಲಿ ತನ್ನ ಕೈ ಇಟ್ಟಳು.
"ನಾಳಿನ ನಾಟಕಕ್ಕೆ ಶುರು ಮಾಡಬೇಕು ಅಳ್ಬೇಕು ಆಮೇಲೆ ಜನ ಮರೀತಾರೆ ನಂತರ ಒಂದಾರು ತಿಂಗಳು ಇಲ್ಲ ವರ್ಷ ಕಳೆದ ಮೇಲೆ ನಮ್ಮಿಬ್ಬರ ಮದುವೆ " ಹಿಗ್ಗಿನಿಂದ ನುಡಿದಳು
ಇತ್ತ ಪ್ರೇಮದ ಹುಚ್ಚು ಹೊಳೆಯಲ್ಲಿ ಬೀಳಲು ಹೋಗಿ ಅವರಿಬ್ಬರ ಆಟಕ್ಕೆ ದಾಳವಾಗಿದ್ದ ಹರೀಶ ಸರಪಳಿಯ ಹಿಂದಿನ ವಾಸಿಯಾಗುವತ್ತ ನಡೆದಿದ್ದ. (ಮುಗಿಯಿತು)

15 comments:

 1. ರೂಪಾ, ಒಳ್ಳೆಯ twist ಕಥೆಗೆ, ನನಗೇ ನಿನ್ನೆ ಸ್ವಲ್ಪ ಅನುಮಾನವಿತ್ತು..ಏನಿದು anticlimax ? ಅಂತ..ಮತ್ತೆ ನೋಡೋಣ ಎನ್ಮಾಡ್ತೀರೋ ಆಂತಾನೂ ಬರೆದಿದ್ದಕ್ಕೆ ಆ ಅನುಮಾನಾನೇ ಕಾರಣ...ಆದರೆ ನನ್ನ ನಿರೀಕ್ಷೆ ಬೇರೆ ಇತ್ತು...ಇವನೇ ಸಾಯ್ತಾನೋ ಎಂದು...grate...ಅದಕ್ಕೇ..ನನ್ನ ಮೊದಲ ಪ್ರತಿಕ್ರಿಯೆ ನೋಡಿ ಏನು ಹೇಳಿದ್ದೇನೆ ಅಂತ...ಸಿನಿಮಾ ಇಲ್ಲ ಟಿ.ವಿ. ಸೀರಿಯಲ್ ಗೆ ಕಥೆ ಬರಿಯಬಹುದು ಅಂತ..!!!
  Nice Story

  ReplyDelete
 2. ಜಲನಯನ ಸಾರ್
  ಈ ಕಥೆ ಮನಸಿಗೆ ಹೊಳೆದದ್ದು ಇಂದು ನೆನ್ನೆಯಲ್ಲ ಇದು ನಾನು ಕಾಲೇಜಲ್ಲಿ ಇದ್ದಾಗಲೆ . ಆದರೆ ಕಥೆಗೆ ಒಂದು ರೂಪು ರೇಖೆ ಕೊಡಲು ನನ್ನಿಂದ ಆಗಲಿಲ್ಲ ಆಗ. ಅದೂ ಅಲ್ಲದೆ ಸಸ್ಪೆನ್ಸ್ ಸ್ಟೋರಿ ಅಂದರೆ ಬರೆಯೋದು ತುಂಬಾ ಕಷ್ಟ. ಅದಕ್ಕೆ ಈಗ ಕೊನೆಗೆ ಒಂದು ಪ್ರಯತ್ನ ಮಾಡಿದ್ದೇನೆ.
  ಒಳ್ಳೆಯ ಮಾತು ಹೇಳಿ ಪ್ರೋತ್ಸಾಹಿಸಿದ್ದೀರಿ
  ಧನ್ಯವಾದಗಳು

  ReplyDelete
 3. ಮೇಡಂ,

  ಕಥೆಯ ಶೀರ್ಷಿಕೆಯೇ ಕಥೆಯನ್ನು ಓದುವಂತೆ ಮಾಡುವಲ್ಲಿ ಸಫಲವಾಗಿದೆ ಮತ್ತು ಚೆನ್ನಾಗಿದೆ. ಆದರೆ, ಕಥಾನಾಯಕನ ಕಥೆ ಈ ವಿಧದಲ್ಲಿ ತಿರುವು ಪಡೆಯುತ್ತದೆ ಎಂಬ ಅನಿಸಿಕೆ ಇರಲಿಲ್ಲ. ಜೊತೆಗೆ ಜನರು ಸ್ವಾರ್ಥಕ್ಕಾಗಿ ಏನೆಲ್ಲಾ ನಟನೆ, ಕಸರತ್ತು ಮಾಡುತ್ತಾರೆ ಮತ್ತು ಮುಗ್ಧರನ್ನು ವಂಚಿಸುವಲ್ಲಿ ಯಾವ ಯಾವ ವೇಷ ಹಾಕುತ್ತಾರೆ ಮತ್ತು ಅದರಲ್ಲಿ ಯಶಸ್ವಿಯೂ ಆಗುತ್ತಾರೆ ಎಂಬುದನ್ನು ಸೂಕ್ಷ್ಮವಾಗಿ ನಿರೂಪಿಸಿದ್ದೀರಿ.

  ವಿಶ್ವಾಸದೊಂದಿಗೆ,

  ReplyDelete
 4. ರೂಪ,

  ಕತೆಯ ಅಂತ್ಯ ನಾನು ಈ ರೀತಿ ನಿರೀಕ್ಷಿಸಿರಲಿಲ್ಲ. ಬೇರೆ ಅಂದುಕೊಂಡಿದ್ದೆ..ಚೆನ್ನಾಗಿ ಕುತೂಹಲ ಕಾಯ್ದುಕೊಳ್ಳುವುದಲ್ಲದೇ ಅಂತ್ಯ ವಿಭಿನ್ನವೆನಿಸಿತು.

  ReplyDelete
 5. ರೂಪ ಅವರೇ,
  ಕಥೆ ಮೊದಲಿನಿಂದ ಕೊನೆಯವರೆಗೂ ಓದಿದೆ. ಕಥೆ ಓದುವಾಗ ಆಸಕ್ತಿ ಹೆಚ್ಚುವಂತೆ ಮಾಡಿದ್ದೀರ! ಒಟ್ಟಾರೆ ಕಥೆ ತುಂಬಾ ಚೆನ್ನಾಗಿ ಮೂಡಿ ಬಂದಿದೆ. ಇನ್ನಷ್ಟು ಕಥೆಗಳನ್ನು ಬರೆಯಿರಿ!

  ReplyDelete
 6. ರೂಪ, ಕಥೆಯ ಜನ್ಮ ಮೊದಲೇ ಆಗಿದ್ರೂ (ನಿಮ್ಮ ಮನಸಿನಲ್ಲಿ) ಅದಕೆ ರೂಪ (ನಿಮ್ಮ ಹೆಸರನ್ನ) ಕೊಟ್ಟಿದ್ದೀರ...ಚನ್ನಾಗಿ ಸಸ್ಪೆನ್ಸ್ ಕಾದುಕೊಂಡು ಓದಿಸಿಕೊಂಡೊ ಹೋಗುತ್ತೆ...ಅನಿರೀಕ್ಷಿತ ಅಂತ್ಯ (ಶಿವು ಗೂ ಅನಿರೀಕ್ಷಿತ) ಕೊಟ್ಟಿದ್ದೀರ....ಅಲ್ಲ ರೀ..ತಮಾಷೆಗಲ್ಲಾ..ಯಾಕೆ ನೀವು ಸಿನಿಮಾಗೆ ಬರೆದು ಒಂದು ಕೈ ನೋಡ್ಬಾರ್ದು...??

  ReplyDelete
 7. ಇನ್ನೊಂದು ಕಡೆಯಿಂದ ಪ್ರತಿಕ್ರಿಯೆ ನಿಮಗೆ...ಈ ಸೈಟಿಗೂ ಬನ್ನಿ ಒಮ್ಮೆ,,,

  ReplyDelete
 8. sorry here is the link

  http://bhava-manthana.blogspot.com/

  ReplyDelete
 9. tumba channagide...
  ಆಸೆ ದುಃಖಕ್ಕೆ ಮೂಲ

  ReplyDelete
 10. ನಿಮ್ಮ ಬರವಣಿಗೆ ತುಂಬ ಇಷ್ಟವಾಗುತ್ತದೆ...
  ಸರಾಗವಾಗಿ ಓದಿಸಿಕೊಂಡು ಹೋಗುತ್ತದೆ...

  ನೀವು ಕಥೆ ಹೇಳುವ ರೀತಿ, ನಿರೂಪಣೆ ಕೂಡ ಚೆನ್ನಾಗಿದೆ....

  ಅಂತ್ಯ ಕೂಡ ಚೆನ್ನಾಗಿದೆ....

  ನಾನೇ ಬರೆದಿದ್ದರೆ ಸ್ವಲ್ಪ ಬೇರೆ ಮಾಡಿರುತ್ತಿದ್ದೆ....

  ಚಂದದ ಸಸ್ಪೆನ್ಸ್ ಕಥೆಗೆ ಅಭಿನಂದನೆಗಳು.....

  ಇದೇ ಕಥೆಯನ್ನಿಟ್ಟುಕೊಂಡು ...
  ಇನ್ನಷ್ಟು ಅಂತ್ಯ ಕೊಡಬಲ್ಲಿರಾ...?

  ಮಜವಾಗಿರುತ್ತದೆ....

  ReplyDelete
 11. ಕಥೆಗೆ ಬಹಳ ಅನಿರೀಕ್ಷಿತ ಅಂತ್ಯ ಕೊಟ್ಟಿದ್ದೀರಿ, ರಾಜೀವನ ಪಾತ್ರ ಸ್ವಲ್ಪ್ ಅನುಮಾನಕ್ಕೆ ಎಡೆ ಮಾಡಿಕೊಡುವಂತಿತ್ತಾದರೂ, ಸ್ಮಿತ ಪಾತ್ರ ಅದನ್ನ ಎಲ್ಲೂ ತೋರಗೊಡಲಿಲ್ಲ. ಕಥೆ ಓದಿದ ಮೇಲೆ ಹರೀಶನಿಗಿಂತ ಸ್ಮಿತಾ ಮೇಲೆ ಪಾಪ ಅನ್ನಿಸಿತು ಯಾಕೆಂದ್ರೆ ಕೈ ಮುಂದೆ ಅಂತ ಚೆಂದದ ಹುಡುಗನ ನಿಸ್ವಾರ್ಥ್ ಪ್ರೀತಿ ಇದ್ದರೂ(ತನ್ನಲ್ಲೇ ಜೀವಮಾನ ಕೂತು ತಿನ್ನುವ ಆಸ್ತಿ ಇದ್ದಾರೂ) ಆ ರಾಜೀವನ ಬೆನ್ನು ಹತ್ತಿ ಹೋಗಿದ್ದಕ್ಕೆ, ಇಂದು ಇವಳ ರಾಜೀವ ಪ್ರೀತಿಸುತ್ತಿರುವುದು ಅವಳ ಆಸ್ತಿಗೆ ಮಾತ್ರ. ಈ ಸಿನಿಮಾ ಹೀರೊಯಿನ್ನುಗಳಿಗೆ ನಾಟಕ ಯಾವುದು ಅಂತ ತಿಳಿಯೋದೆ ಇಲ್ಲ, ಹುಚ್ಚು ಕುದುರೆ ಬೆನ್ನೇರಿ ಹೊರಟು ಬಿಡುತ್ತಾರೆ.

  ReplyDelete
 12. ತಡವಾಗಿ ಓದಿದೆ, ಚೆನ್ನಾಗಿದೆ ಕಥೆ

  ReplyDelete
 13. ಕತೆ ತುಂಬಾ ಚೆನ್ನಾಗಿದೆ...

  ReplyDelete
 14. ಕತೆ ಓದಿಸಿಕೊಂಡು ಹೋಗತ್ತೆ. ಕತೆ ನೈಜ, ವಾಸ್ತವಕ್ಕೆ ಹತ್ತಿರವಾಗಿದೆ. ತೀರಾ ಕಾಲ್ಪನಿಕವಾದ ಭಾವನೆಗಳೆನಿಲ್ಲ.

  ReplyDelete
 15. ಸುಪ್ರಸನ್ನFebruary 6, 2011 at 5:00 AM

  GOOD

  ReplyDelete

ರವರು ನುಡಿಯುತ್ತಾರೆ