ನನ್ನ ಮೊದಲ ಪ್ರೇಮಿಗೆ
ಆ ಅಂಗಡಿಗೆ ನಾನು ಬರುವುದಕ್ಕೂ ನೀನು ನನ್ನ ನೋಡುವುದಕ್ಕೂ ಸರಿ ಹೋಯಿತುನಾನು ನಿನ್ನನ್ನು ಗುರುತಿಸಿದೆ . ಆದರೆ ನೀನು ಇಲ್ಲ ಬಿಡು ನೀನೀಗ ನನ್ನನ್ನ ಗುರುತಿಸಲಾಗದಂತಹ ಪರಿಸ್ಥಿತಿಯಲ್ಲಿ ನಾನಿದ್ದೇನೆ .
ಯಾಕೊ ಒಮ್ಮೆ ಎಲ್ಲ ನೆನಪಾಗಿದೆ. ಹಾಗಾಗಿ ಈ ಪತ್ರ ಬರೆಯುತಿದ್ದೇನೆ
ಅವತ್ತು ನಾನಿನ್ನೂ ಆಗ ತಾನೆ ಅರಳಿದ ಹೂವಿನಂತೆ ಇದ್ದೆ. ಅಂದು ಆ ಅಂಗಡಿಯಲ್ಲಿ ನೀನು ನನ್ನನ್ನು ನಿನ್ನ ಹಸ್ತದಿಂದ ಬಂಧಿಸಿ ಮುತ್ತಿಟ್ಟು " ಇನ್ನು ಮೇಲೆ ನೀನೆ ನನ್ನ ಜೀವ ನನಗಿದು ಮೊದಲ ಅನುಭವ "ಎಂದುಸಿರಿದ್ದೆ. ನಾನು ಆಕಾಶವೇ ಕೈಗೆಟುಕಿದಷ್ಟು ಹಗುರಾಗಿದ್ದೆ.
ಅಬ್ಬ ಅಲ್ಲಿಂದ ಶುರುವಾಯಿತು ನಮ್ಮಿಬ್ಬರ ಪ್ರೀತಿ . ನೀನೆಲ್ಲೋ ನಾನಲ್ಲೆ. ನಾನಿಲ್ಲದೇ ನೀನಿಲ್ಲ ಎಂಬಂತೆ ಇದ್ದೆವಲ್ಲ. ದಿನವಿಡೀ ನೀ ನನ್ನ ನಾ ನಿನ್ನ ನೋಡುತ್ತ ಕಾಲ ಕಳೆಯುತ್ತಿದ್ದೆವಲ್ಲ. ನಾನಂತು ನಿನ್ನ ಎದೆಯ ಮೇಲೆ ಮಲಗಿರುತ್ತಿದ್ದೆ.
ನನ್ನನ್ನು ವಿಧವಿದ್ಜ ವಾಗಿ ಹಾಡಲು ಹೇಳುತಿದ್ದೆ . ವಿಧ ವಿಧ ಬಟ್ಟೆ ಗಳನ್ನು ಹಾಕುತ್ತಿದ್ದೆ . ಖುಶಿ ಪಡುತ್ತಿದ್ದೆ
ನಮ್ಮಿಬ್ಬರ ಪ್ರೀತಿ ಬ್ರಹ್ಮನಿಗೆ ಹಿಡಿಸಲಿಲ್ಲವೇನೊ ಅದೇನೊ ನನ್ನನ್ನು ಬಳಸಿ ನಿನಗೆ ಬೇಸರ ವಾಯಿತೇನೊ. ಬೇರೆ ಮಾಯಾಂಗನೆಯರು ನಿನ್ನನು ಸೆಳೆಯತೊಡಗಿದರು. ಹಾಗಾಗಿ ನಿನ್ನ ಗಮನ ಅಲ್ಲಿ ಹರಿಯತೊಡಗಿತು .
ಕೊನೆಗೆ ನಿನ್ನ ಪ್ರೀತಿಯನ್ನು ನೀನೆ ಮಾರಿಕೊಂಡೆ.
ನೀನೇನೊ ನನ್ನನ್ನು ಇತರರಿಗೆ ಬಿಟ್ಟು ಹಾಯಾಗಿದ್ದೆ. ಆದರೆ ನಾನು ಎಲ್ಲರಿಂದಲೂ ಮುಟ್ಟಿಸಿಕೊಂಡು. ಮುದ್ದಿಸಿಕೊಂಡೂ ಅವರಿಗೆ ಬೇಸರವಾದರೆ ಇನ್ನೊಬ್ಬರ ಹತ್ತಿರ ಹೋಗಿ ಕಾಲ ಕಳೆಯುತ್ತಿದ್ದೆ. ಇತ್ತೀಚಿಗೆ ಒಬ್ಬ ಬೀದಿ ಬದಿಯ ಹುಡುಗನಿಗೂ ನಾನು ಬೇಡವಾಗಿ ಇಲ್ಲಿ ಬಂದಿದ್ದೇನೆ ನಿಮ್ಮ ಮನೆಯ ಮುಂದೆ ಇರುವ ಗುಜರಿ ಅಂಗಡಿಗೆ
ಆದರೆ ಒಮ್ಮೆ ಬಂದು ನನ್ನನ್ನು ನೋಡು
ನಿನ್ನ ಮೊದಲ ಮೊಬೈl
Nokia 10101
ha ha ha...
ReplyDeletechannagide..
haa haa,,
ReplyDeleteಏನೋ ಅನ್ಕೊಂಡೆ,,,,,,ಚೆನ್ನಾಗಿ ಇದೆ.....
ha ha ha ha ......very nice!
ReplyDeleteಚುಟುಕಾಗಲೀ -ಮೊಟಕಾಗಲೀ, ಕಥೆಯಾಗಲೀ ವ್ಯಥೆಯಾಗಲೀ..ರೂಪಾ ಅವರೇ...ನಿಮಗೇ ನೀವೇ ಸಾಟಿ...ಕೊನೆವರೆಗೂ ಸಾಲುಗಳಲ್ಲಿ ಮುಂದಿರುವುದೇನು ಎನ್ನುವ ಕುತೂಹಲ...ಚನ್ನಾಗಿದೆ...ನನಗೆ ಥಟ್ಟನೇ ನಿಮ್ಮ ಹಿಂದಿನ ಬ್ಲಾಗ್ ಪೋಸ್ಟ್ ನೆನಪಾಯಿತು..
ReplyDeleteಹ ಹ ಹ... ಚೆನ್ನಾಗಿದೆ ಅದಕ್ಕೆ ನಾನು ವಾಣಿ ಅಂತ ಹೆಸರಿಟ್ಟು ಕರೆಯುತ್ತೇನೆ... :)
ReplyDeleteಕುತೂಹಲ + ಚೆನ್ನಾಗಿದೆ.
ReplyDeletehay.... ha ha ha....
ReplyDeleteಉಫ್.....
ReplyDeleteಬೆಸ್ತು ಬಿಳಿಸಿ ಬಿಟ್ರಿ....
ಚೆನ್ನಾಗಿತ್ತು....
ಹ್ಹ್ಯಾ...ಹ್ಹಾ...
Chennagide...
ReplyDelete