Wednesday, August 5, 2009

ಕಳಂಕಿತೆಯನ್ನು ಮುಂದುವರೆಸಲು ಮನಸು ಬರುತ್ತಿಲ್ಲ ಕ್ಷಮಿಸಿ

ಆತ್ಮೀಯ ಸ್ನೇಹಿತರೆ
ಇಲ್ಲಿಯವರೆಗೂ ಕಳಂಕಿತೆಗೆ ಒಂದು ಅಂತ್ಯ ಬರೆಯಲಾಗುತ್ತಿಲ್ಲ. ಇದು ನನ್ನ ಆತ್ಮೀಯ ಸ್ನೇಹಿತೆಯೊಬ್ಬಳ ಬಾಳಿನ ಭಾಗಶ: ಚರಿತ್ರೆ. ಅವಳನ್ನು ನೆನಪಿಟ್ಟುಕೊಂಡು ಇದನ್ನ ಬರೆದೆ ಆದರೆ ಅವಳಾಗಲೇ ಗಂಡನಿಂದ ಕಳಂಕಿತೆ ಎಂದು ಪರಿತ್ಯಕ್ತಳಾಗಿದ್ದಾಳೆಂದು ತಿಳಿದ ಮೇಲೂ ನನ್ನ ಕಥೆಯನ್ನು ಸುಖಾಂತ್ಯ ಗೊಳಿಸಲು ಮನಸಾಗಲಿಲ್ಲ. ಹಾಗೆಂದು ವಿಪರ್ಯಾಸದ ಅಂತ್ಯ ತೋರಿಸುವುದು ಉತ್ತಮವಲ್ಲ ಅನ್ನಿಸಿತು. ಹಾಗಾಗಿ ಮನಸು ಗೊಂದಲದ ಗೂಡಾಗಿತ್ತು .
ಕೊನೆಗೂ ನಿರ್ಧರಿಸಿದೆ ಇದರ ಅಂತ್ಯ ಮಾಡಲೇಬಾರದೆಂದು
ಮುಂದೆಂದಾದರೂ ಬಾಳಿನಲ್ಲಿ ಇಂತಹ ಸಂದರ್ಭದಲ್ಲೂ ಹೆಂಡತಿಯನ್ನುಹೆಂಡತಿಯನ್ನಾಗಿಯೇ ಸ್ವೀಕರಿಸುವವರನ್ನು ಕಂಡರೆ ಇದನ್ನು ಸುಖಾಂತ್ಯಗೊಳಿಸುತ್ತೇನೆ . ಈ ನಡುವೆ ನಿಮಗಾರಿಗಾದರೂ ಇದರ ಅಂತ್ಯ ಭಿನ್ನವಾಗಿ ಹೇಳುವ ಕಲ್ಪನೆ ಇದ್ದರೆ ಅದಕ್ಕೆ ಸ್ವಾಗತ
ನನ್ನ ಮೇಲ್ ಐಡಿ roopablrao@nobleeducation.org

4 comments:

  1. ರೂಪ ಮೇಡಂ, ಲೇಖನವನ್ನು ಇ‌ಲ್ಲಿಗೇ ನಿಲ್ಲಿಸಲು ನಿರ್ಧರಿಸಿದ್ದು ಸರಿಯಾಗಿಯೇ ಇದೆ. ಇದರಿಂದ ನಿಮಗೂ ಹಾಗೂ ಯಾರಿಗೂ ನೋವಾಗದಂತೆ ಆಗುವುದು.

    ReplyDelete
  2. ಅಕ್ಕ ನಿಜವಾಗ್ಲು ಇದು ತುಂಬಾ ಕೆಟ್ಟ ನಿರ್ಧಾರ .
    ನಾ ನಿಮ್ಮಿಂದ ಈ ತರದ ಪ್ರತಿಕ್ರಿಯೆಯನ್ನು ನಿರೀಕ್ಷಿಸಿರಲಿಲ್ಲ.
    ಕಥಾವಸ್ತುವೇ ಹಾಗಿರುವಾಗ ಇಲ್ಲಿ ಸುಖಾಂತ್ಯವೇ ಆಗಬೇಕು ಅಥವಾ ದುಃಖವೆ ಇರಬೇಕು ಅಂತ ಮೊದಲೇ ನಿರ್ಧರಿಸೋ ಬದಲು ಸುಮ್ಮನೆ ಮುಂದುವರೆಸಿದ್ದರೆ ನಿಮಗೆ ಈ ಗೊಂದಲ ಉಂಟಾಗುತ್ತಿರಲಿಲ್ಲ.
    ಮನಸ್ಸು ಬದಲಾಯಿಸಿ , ಮುಂದುವರೆಸಿ.

    ಇಂತಿ
    ನಿಮ್ಮ ಆತ್ಮೀಯ ತಮ್ಮ
    ವಿನಯ

    ReplyDelete
  3. ರೂಪಾ ಅವರೆ,
    ಈ ಕತೆಯ ಎರಡೂ ಭಾಗಗಳು ತುಂಬಾ ಚೆನ್ನಾಗಿವೆ. ಈ ಕತೆಯನ್ನು ನೀವು ಮುಗಿಸಲೇ ಬೇಕು. ನಿಮ್ಮ ಆತ್ಮೀಯ ಸ್ನೇಹಿತೆಯ ಬಾಳು ನಿಮ್ಮ ಕಣ್ಣೆದುರಿಗೆ ಕಟ್ಟಿರುವದರಿಂದ ನಿಮಗೆ ಅದಕ್ಕಿಂತ ಬೇರೆಯ ಅಂತ್ಯ ಕೊಡುವದು ಕಷ್ಟಕರ ಎಂದು ಅನಿಸುತ್ತಿರಬಹುದು.
    ಆದರೆ ನನಗೆ ಅನಿಸುವದೇನೆಂದರೆ, please give a message of courage in the next part.

    ReplyDelete
  4. ಕಥೆ ಅಂದ ಮೇಲೆ ಕಲ್ಪನೆ, ವಾಸ್ತವಕ್ಕೆ ಹತ್ತಿರವಾಗಿರಲೇಬೇಕೆಂದೇನಿಲ್ಲ, ಹೊಸ ಅಂತ್ಯ ಕೊಡಬಹುದಿತ್ತು, ಆದರೆ ನಿಮಗಿಷ್ಟವಿಲ್ಲದಿದ್ದರೆ ಬೇಡ ಬಿಡಿ.

    ReplyDelete

ರವರು ನುಡಿಯುತ್ತಾರೆ