Tuesday, April 27, 2010

ಫಲಿತಾಂಶ

ಪ್ರಣತಿಯನ್ನು ನೋಡುತ್ತಿರುವಂತೆ ನನ್ನ ಮನದಲ್ಲೇನೋ ಅಪರಾಧಿ ಪ್ರಜ್ನೆ ಹೀಗೇ ಧುಮ್ಮಿಕ್ಕುತ್ತಿದೆ. ಅವಳನ್ನು ಪ್ರೀತಿಸುತ್ತಿದ್ದೇನೆ ನಾನು ಆದರೆ ಅವಳು ನನ್ನನ್ನ ಪ್ರೀತಿಸುತ್ತಿದ್ದಾಳೇಯೇ. ಅವಳು "ಅನಿಲ್ ಐ ರಿಯಲ್ಲಿ ಐ ಲವ್ ಯು "ಅಂದಾಗಲೂ ಹೃದಯ ಹಿಗ್ಗಲಿಲ್ಲ ಬದಲಿಗೆ ಕುಗ್ಗಿತು. ಒಂದು ಹೆಣ್ಣನ್ನು ಪ್ರೀತಿಸಲು ಮುಖವಾಡ ಹಾಕ್ತೀಯಾ ಹೇಡಿ ಎಂದಿತ್ತು. ಆದರೂ ಭಂಡ ನಾನು .ಯಾವುದಕ್ಕೂ ಬಗ್ಗೋದಿಲ್ಲ. ಇನ್ನೂನನ್ನದೇ ಮಾತಿಗೆ ಬಗ್ಗುತ್ತೇನೆಯೇ. ಅದನ್ನ ಗದರಿದ್ದೆ.


ಈ ಪ್ರಣತಿ ನನ್ನನ್ನ ಈ ಒಂದು ಕೀಳು ಮಟ್ಟಕ್ಕೆ ಇಳಿಸಿಬಿಡುತ್ತಾಳೆ ಎಂದು ನಾನಾದರೂ ಯಾವಾಗ ತಿಳಿದಿದ್ದೆ.


ಪ್ರೀತಮ್ ನನ್ನ ಕಂಪೆನಿಯಲ್ಲಿ ಕೇವಲ ಕೆಲಸಗಾರನಾಗಿರಲಿಲ್ಲ ನನ್ನ ಜೀವದ ಗೆಳೆಯನಾಗಿದ್ದ. ಸ್ವಭಾವತ: ಚಿಪ್ಪಿನಲ್ಲಿ ಮುಳುಗಿ ಹೋಗುವ ಹುಡುಗ. ಅದು ಹೇಗೋ ಅವನು ನನ್ನ ಗೆಳೆತನದ ಪರಿಧಿಯಲ್ಲಿ ತೂರಿದ್ದ.


ಅವನಿಗೆ ಹೇಗೋ ಹತ್ತಿತ್ತು ಬ್ಲಾಗ್ ಹುಚ್ಚು. ಸದಾ ಒಂಟಿ ಆತ . ಕಲ್ಪನೆಯ ಸಾಗರದಲ್ಲಿ ಮುಳುಗಿರುತ್ತಿದ್ದ. ತನ್ನ ಮನಸಿನ ಭಾವನೆಗೆ ಮಾತಿನ ರೂಪ ಕೊಡಲಾಗದ ಆತ ಮೊರೆ ಹೊಕ್ಕಿದ್ದು ಈ ಬ್ಲಾಗೆಂಬ ಮಹಾಸಾಗರದಲ್ಲಿ. ಅದು ಗೊತ್ತಿದ್ದುದು ನನಗೆ ಮಾತ್ರ ."ಮಾತಿರದ ಅಕ್ಷರಗಳು" ಇದಲ್ಲವೇ ಆತನ ಬ್ಲಾಗಿನ ಶೀರ್ಷಿಕೆ . ತನ್ನ ಬದುಕಿನ ಕಥೆಯೆಲ್ಲವನ್ನೂ , ಭಾವನೆಯನ್ನೂ ಅಕ್ಶರದ ರೂಪದಲ್ಲಿರಿಸುತ್ತಿದ್ದ. ಎಲ್ಲೂ ತನ್ನ ಪರಿಚಯ ಮಾಡಿಕೊಂಡಿರಲಿಲ್ಲ. ’ಅಕ್ಷರಿಗ’ ಎಂಬ ಹೆಸರನ್ನೇ ತನ್ನ ಮೇಲ್‌ಗೆ ಇಟ್ಟಿದ್ದ . ಒಂದು ಚಿಪ್ಪಿನಲ್ಲಿಯೇ ಉಳಿದಿದ್ದ. ಅವನು ಈ ’ನಿರೀಕ್ಷೆ’ ಎಂಬ ಮುದ್ದು ಹುಡುಗಿಯ ಬಲೆಗೆ ಹೇಗೆ ಬಿದ್ದನೋ ಗೊತ್ತಿಲ್ಲ. ಆದರೆ ಅವಳನ್ನೇ ಆರಾಧಿಸಿದ ಮೊಗವನ್ನೂ ಕೂಡ ನೋಡದೆ. ಅವಳೂ ಅಷ್ಟೇ ಅವನ ಪ್ರೀತಿಗೆ ಬಿದ್ದಿದ್ದಳು. ಆದರೆ ತನ್ನ ಹೆಸರನ್ನೂ ಹೇಳಿರಲಿಲ್ಲ. ಅವಳೂ ಅಷ್ಟೆ ತನ್ನ ನಿಜ ಹೆಸರನ್ನು ತಿಳಿಸಿರಲಿಲ್ಲ. ನಿರೀಕ್ಷೆ ಎಂದು ಹೆಸರನ್ನಿಟ್ಟಿಕ್ಕೊಂಡಿದ್ದಳು.ಅದು ಅವರು ತಮ್ಮಪ್ರೇಮವನ್ನು ಪರೀಕ್ಷೈಸಿಕೊಳ್ಳುವ ಪರಿಯಂತೆ


ಇದೆಲ್ಲಾ ನನಗೆ ಮಾತ್ರ ಗೊತ್ತಿತ್ತು. ಎಷ್ಗ್ಟೊ ಬಾರಿ ನಾನೆ ಅವನಿಗೆ ಬೈದಿದ್ದೆ. ಈ ಥರಾ ಭ್ರಮಾಲೋಕದಲ್ಲಿ ಯಾಕೆ ಬದುಕುತೀಯಾ ಎಂದು. ಜೊತೆಗೆ ಕಂಪೆನೀಲಿ ಕೆಲ್ಸ ಮಾಡೋ ಅಂದ್ರೆ ಬ್ಲಾಗ್ಸ್ ಬರೆದು ಟೈಮ್ ವೇಸ್ಟ್ ಮಾಡ್ತಿಯಾ ಎಂದು ಕೀಟಲೆಮಾಡಿದ್ದೆ. ಆತ ನಗುತ್ತಿದ್ದ


ಆವತ್ತೂ ಅವಳ ಮೇಲ್ ಬಂದ ಖುಶಿಯಲ್ಲಿ ನನಗೆ ತೋರಿಸಿದ. ಇಬ್ಬರೂ ಭಾನುವಾರದ ಸಂಜೆ ಭೇಟಿಯಾಗುವ ಮನಸು ಮಾಡಿದ್ದರು. ಕೇವಲ ಬಟ್ಟೆಯ ಆಧಾರದ ಮೇಲೆ ಗುರುತಿಸುವುದು. ನನಗೋ ನಗು. ಕೊನೆಗೆ ಆಲ್ ದಿ ಬೆಸ್ಟ್ ಹೇಳಿ ಕ್ಯಾಬಿನ್‌ಗೆ ಬಂದು ಪ್ರೀತಿಗೆ ಇಂಥಾ ಶಕ್ತಿ ಇದ್ಯಾ ಎಂದು ಯೋಚಿಸಿದ್ದೇ ಬಂತು. ಏಕೆಂದರೆ ನನಗೇನೂ ಅದರ ಅನುಭವ ಆಗಿರಲಿಲ್ಲವಲ್ಲ.

ಯಾಕೋ ಯಾರೆ ನೀನು ಚೆಲುವೆ ಬೇಡಾವೆಂದರೂ ನೆನಪಾಗುತ್ತಿತ್ತು


ಆದರೆ ಅವರಿಬ್ಬರ ಮಿಲನಕ್ಕೆ ವಿಧಿಯ ಸಮ್ಮತಿ ಇರಲಿಲ್ಲವೇನೋ. ಮದ್ಯಾಹ್ನ ಬೇಗನೆ ಖುಷಿಯಲ್ಲಿ ಹೋಗುತ್ತಿದ್ದವ ಎದುರು ಯಮ ದೂತನಾಗಿದ್ದ ಲಾರಿಯನ್ನು ಗಮನಿಸಲಿಲ್ಲ. ಅವನನ್ನು ಜಜ್ಜ್ಜಿಹಾಕಿತ್ತು. ಇದೊಂದು ರೀತಿಯ ಆಘಾತ ನನಗೆ. ಆತ್ಮೀಯ ಮಿತ್ರನ ಮರಣ ನನ್ನನ್ನು ಮಂಕಾಗಿಸಿದರೂ ಅವನ ಪ್ರೀತಿಯ ಹುಡುಗಿಗೆ ಈ ವಿಷಯ ತಿಳಿಸಲೇಬೇಕಿತ್ತು. ಅಂದು ಭಾನುವಾರ ಪ್ರೀತಮ್‍ನ ಮೇಲ್ನಲ್ಲಿ ಇದ್ದಂತೆ ಹಳದಿ ಹಾಗು ಕೆಂಪು ಚೌಕಳಿ ಇರುವ ಶರ್ಟ್ ಹಾಕಿಕೊಂಡು ಆ ’ನಿರೀಕ್ಷೆ’ಯನ್ನು ಮೀಟ್ ಮಾಡಲೆಂದು ಬಂದೆ.


ಅವಳಿಗೆ ಹೇಗೆ ಸಮಾಧಾನ ಮಾಡಬೇಕೆಂಬ ಯೋಚನೆಯಲ್ಲಿ ನಿಂತವನ ಎದುರಿಗೆ ಬಂದು ನಿಂತ ಆ ಅಪ್ಸರೆ ಮನಸನ್ನು ಸೂರೆ ಮಾಡಿಬಿಟ್ಟಳು. ತಾನೇ ಆ ’ನಿರೀಕ್ಷೆ’ ಎಂದವಳ ಮಾತಿಗೆ ಅವಳ ನಿನಾದಕ್ಕೆ ,ಕೊರಳು ಕೊಂಕಿಸುವ ರೀತಿಗೆ ನಗುವ ಮೋಡಿಗೆ ಬಲಿಯಾಗಿಬಿಟ್ಟೆ. ಅವಳಿಗೆ ನಾನ್ಯಾರು ಎಂದು ಹೇಳಬೇಕೆಂಬ ಯೋಚನೆಯೂ ಬರಲಿಲ್ಲ ನನ್ನನ್ನೆ ಅವಳು ’ಅಕ್ಷರಿಗ’ ಎಂದುಕೊಂಡಳು. ನಾನು ಇಲ್ಲವೆನ್ನಲಿಲ್ಲ. ನನ್ನಹೆಸರನ್ನು ಹೇಳಿಕೊಂಡೆ . ಅನಿಲ್’


ಆಗಲೆ ಆ ಸುಂದರ ಹೆಣ್ಣಿನ ಹೆಸರೂ ಇನ್ನೂ ಸುಂದರ .’ ಪ್ರಣತಿ ’ಎಂದು ತಿಳಿಯಿತು

ಅಂತಹ ಸುಂದರಿ ನನ್ನನ್ನು ಎಷ್ಟೊಂದು ಹಚ್ಚಿಕೊಂಡು ಬಿಟ್ಟಿದ್ದಾಳೆ.

ನಾಳೆ ನಮ್ಮ ಎಂಗೇಜ್ ಮೆಂಟ್ . ನನ್ನ ಅಲ್ಲಲ್ಲ ’ಅಕ್ಷರಿಗ’ ಹಾಗು ’ನಿರೀಕ್ಶೆ’ಯ ಎಂಗೇಜ ಮೆಂಟ್. ನಾನು ’ಅಕ್ಷರಿ’ಗನ ವೇಷದಲ್ಲಿರುವ ವಂಚಕ ಎಂದು ತಿಳಿದರೆ ಅವಳ ಮನಸಿಗೆ ಎಷ್ಟು ನೋವಾದೀತು. ಆದರೆ ನಾನು ಅವಳು ನನ್ನನ್ನು ಪ್ರೀತಿಸಲಿ ಎಂದು ಬಯಸುತ್ತೇನೆ. ಜೀವನವೆಲ್ಲಾ ’ಪ್ರೀತಮ‌’ನ ಹಂಗಲ್ಲಿ ಇರುವುದು ಯಾಕೋ ಬೇಡವೆನ್ನುತ್ತಿದೆ ಮನಸು. ಒಂದೊಮ್ಮೆ ಅವಳು ಒಪ್ಪದೇ ಹೋದರೆ

ಇಲ್ಲಾ ಹೇಳಿಬಿಡುವುದೇ ಒಳ್ಳೇಯದು. ಅವಳ ನಿರ್ಧಾರ ಏನೆ ಆಗಲಿ

ಗಟ್ಟಿ ಮನಸು ಮಾಡಿಕೊಂಡೆ ಪ್ರಣತಿಗೆ ಫೋನ್ ಮಾಡಿದೆ.

ಹೋಟೆಲ್ ವುಡ್‌ಲ್ಯಾಂಡ್ಸ್ನ ಎದುರಲ್ಲಿದ್ದ ಲಾನ್‍ ನಮ್ಮ ಮುಂದಿನ ಮಾತುಕತೆಗೆ ಸಾಕ್ಷಿಯಾಗುವುದರಲ್ಲಿತ್ತು. ಪ್ರಣತಿ ಬಂದಳು. ಮಂಜಿನಲ್ಲಿ ಮುಳುಗೆದ್ದ ಹೂವಿನ ಸೌಂದರ್ಯ ಅವಳದು.

ಈ ಸೌಂದರ್ಯವೇ ತನ್ನನ್ನು ವಂಚಕನನ್ನಾಗಿ ಮಾಡಿದ್ದೆ. ಕಣ್ಣು ಮುಚ್ಚಿದೆ ಮತ್ತೆ ಕರಗಬಾರದೆಂದು

ಬಂದು ಕೂತಳು

ನನ್ನ ಕೈ ಅವಳ ಕೈನಲ್ಲಿ ಬಂಧಿಯಾಯ್ತು.

ನಿಧಾನವಾಗಿ ಕೈ ಬಿಡಿಸಿಕೊಂಡು ಎದ್ದು ನಿಂತೆ ಅವಳತ್ತ ಬೆನ್ನು ಮಾಡಿ

ಎಲ್ಲವನ್ನೂ ಹೇಳಿಬಿಟ್ಟೆ. ಮುಖ ನೋಡಲು ಧೈರ್ಯ ಸಾಲಲಿಲ್ಲ.

ಸ್ವಲ್ಪ ಹೊತ್ತು ಮೌನ

ಇದೇನು ಅವಳಿಂದ ಮಾತಿಲ್ಲ ಎಂದು ಅವಳತ್ತ ತಿರುಗಿದೆ

ಅವಳ ಕಣ್ಣಲ್ಲಿ ನೀರು.

ಕೊಂಚ ಹೊತ್ತು ಹಾಗೆ ನಿಂತವಳು .

"ನೀವು ನನ್ನನ್ನ ಅಂಧಾಕಾರದಲ್ಲಿಟ್ರಿ ಇಷ್ಗ್ಟು ದಿನಾ. ನಾನು ಪ್ರೀತಿಸಿದ್ದು ’ಅಕ್ಷರಿಗ’ನನ್ನ . ಅವರ ಮುಖ ನೋಡದೆ ಅವರ ಹೆಸರು ಕೇಳದೆ ಕೇವಲ ಅವರ ಬರಹವನ್ನೇ ಪ್ರೀತಿಸಿದೆ, ಆದರೆ ನೀವು ಹೀಗೆ ಮಾಡಬಾರದಿತ್ತು . ನಿಮ್ಮ ಪ್ರಾಣ ಸ್ನೇಹಿತನ ಪ್ರಿಯತಮೆಯನ್ನ ಮೋಸ ಮಾಡಿಬಿಟ್ರಿ"

ನಾನು ಸುಮ್ಮನಾಗಿಬಿಟ್ಟೆ. ಇದೆಲ್ಲಾ ಬೇಕಾಗಿತ್ತು ನನಗೆ ಎಂದುಕೊಂಡೆ

"ಆದರೆ ನಿಜ ವಿಷಯ ಹೇಳಿ ನನ್ನನ್ನ ಗೆದ್ದುಬಿಟ್ರಿ " ಆಕೆಯ ಮಾತು ಮುಂದುವರೆಯುತ್ತಿದ್ದಂತೆ

ನಾನು ಚಕಿತನಾದೆ

ನಾನು ನಿಮ್ಮನ್ನ ಮುಟ್ಟಲು ಬಂದಾಗಲೆಲ್ಲಾ ನೀವು ದೂರ ಹೋಗುತ್ತಿದ್ದುದ್ದನ್ನ ಕಂಡು ಸಂಕೋಚವಿರಬಹುದು ಎಂದುಕೊಂಡಿದ್ದೆ ಆದರೆ ನಿಮ್ಮ ಮನಸಲ್ಲಿ ಇಂತಾ ತುಮುಲವಿತ್ತು ಎಂದು ಈಗ ತಿಳಿಯುತ್ತಿದೆ . ನಿಮ್ಮ ಹೃದಯದಲ್ಲಿ ಎಂತಾ ಬಿರುಗಾಳಿ ಎದ್ದಿರಬಹುದು ಎಂದೂ ನಾನು ಊಹಿಸಬಲ್ಲೆ. ನೀವು ಒಳ್ಳೆಯವರೇ ನಿಜ ಆದರೆ ನಾನು ಈಗಲೇ ಯಾವುದನ್ನೂ ನಿರ್ಧರಿಸಲು ಅಶಕ್ಯೆ. ನಮ್ಮ ಎಂಗೇಜ್‌ಮೆಂಟ್ ನಾಳೆ ನಡೆಯಲೂ ಬಹುದು ಅಥವ ಇಲ್ಲದೇ ಇರಬಹುದು ಏನೆ ಆಗಲಿ ನಾನಂತೂ ನಿಮ್ಮ ಗೆಳತಿಯಾಗಿರಲು ಬಯಸುತ್ತೇನೆ "

ಅವಳು ನುಡಿದು ಭಾವನೆಗಳ ತೀವ್ರತೆ ತಾಳಲಾರದವಳಂತೆ ಕಾರಿನತ್ತ ಓಡಿದಳು

ಅವಳ ಮಾತು ಸಂತಸ ತಂದಿತು. ಅವಳು ನನಗೆ ದಕ್ಕುತ್ತಾಳೋ ಇಲ್ಲವೋ ಎಂಬ ಯೋಚನೆಗಿಂತ ಅವಳ ದೃಷ್ಟಿಯಲ್ಲಿ ನಾನು ಬೀಳಲಿಲ್ಲವಲ್ಲ ಎಂಬುದೇ ಹೆಮ್ಮಯ ವಿಷಯವಾಗಿತ್ತು

ನಾಳೆಯ ಫಲಿತಾಂಶ ಏನೆ ಆಗಲಿ ನಾನು ನಾನಾಗಿದ್ದೆ. ಅವಳು ನಿರಾಕರಿಸಲಿ ಅಥವ ಬಯಸಲಿ ಅದು ನಾನೇ, ಅನಿಲ್ ಆಗಿರುತ್ತೇನೆ . ಇದು ಅನಿಲ್‌ನ ಫಲಿತಾಂಶ

ನಾಳೆಗಾಗಿ ಕಾಯತೊಡಗಿದೆ

**************************************

8 comments:

  1. ವಾಹ್!!! ಎಂತಾ ಕಥೆ ಸೂಪರ್ ರೂಪ ತುಂಬಾ ಇಷ್ಟವಾಯಿತು........ ಅನಿಲ್ ಮಾಡಿದ್ದು ಒಳ್ಳೆಯ ಕೆಲಸವೇ ಸರಿ....

    ReplyDelete
  2. ರೂಪಾ,
    ಎಷ್ಟೆಲ್ಲ suspense ಕತೆಯನ್ನು ಹೆಣೆಯುತ್ತೀರಲ್ಲ!
    ತುಂಬ ಚೆನ್ನಾಗಿದೆ.

    ReplyDelete
  3. ರೂಪಾ
    ಕಥೆ ತುಂಬಾ ತುಂಬಾ ಚೆನ್ನಾಗಿದೆ
    ನಿಮ್ಮ ಶೈಲಿ ಸೂಪರ್

    ReplyDelete
  4. ರೂಪಾ...

    ನಿಮ್ಮ ಕಥೆ ತುಂಬಾ ಚೆನ್ನಾಗಿದೆ
    ಲವಲವಿಕೆಯಿಂದ ಓದಿಸಿಕೊಂಡು ಹೋಯಿತು...
    ಕಥೆ ಮತ್ತು ಬರೆದ ಶೈಲಿ ತುಂಬಾ ಸೊಗಸಾಗಿದೆ..


    ಅನಿಲ್ ಇಷ್ಟವಾದ..

    ಚಂದದ ಕಥೆಗೆ ಅಭಿನಂದನೆಗಳು..

    ಇನಷ್ಟು ಕಥೆ ಬರಲಿ...

    ReplyDelete
  5. ತು೦ಬಾ ರೋಚಕವಾಗಿ ಕಥೆ ಹೆಣೆದಿದ್ದಿರಾ!
    ಬಹಳ ಇಷ್ಟವಾಯಿತು.

    ReplyDelete
  6. ಮೆಚ್ಚಿದ ಎಲ್ಲಾರಿಗೂ ಧನ್ಯವಾದಗಳು

    ReplyDelete
  7. ರೂಪಾ..ನನ್ನ ಸರ್ಟಿಫಿಕೇಟ್ ಮೊದಲೇ ಸಿಕ್ಕಾಗಿದೆ ನಿಮಗೆ..ನಿಮ್ಮ ಕಥೆ ಬರೆಯುವ ಶೈಲಿಗೆ...ಹ್ಯಾಟ್ಸ ಆಫ್....
    ಇನ್ನೂ ಇದೆಯಾ...ಅಥ್ವಾ ಕಥೆಗೆ ಬೇರೆ "ರೂಪ" ಕೊಡ್ತೀರೋ..?

    ReplyDelete
  8. ನೀವು ಕಥೆ ಹೇಳುವ ರೀತಿ ತುಂಬಾ ಸುಂದರ ವಾಗಿದೆ..ನಿಮ್ಮ ಎಲ್ಲಾ ಕಥೆಗಳನ್ನು ಓದಿದ್ದೇನೆ..ಒಳ್ಳೆ ಕಥೆಗಾರರು ನೀವು..ಬಿಡುವಿನಲ್ಲೋಮ್ಮೆ ಇಲ್ಲಿ ಭೇಟಿ ನೀಡಿ..
    www.vanishrihs.blogspot.com

    ReplyDelete

ರವರು ನುಡಿಯುತ್ತಾರೆ