Wednesday, May 18, 2011

ನೀನಿಲ್ಲದಿದ್ದಲ್ಲಿ

ಗೆಳೆಯಾ
ನೀ ಸಿಗದಿದ್ದರೆ ಬಾಳೇನೂ ಬಾಡುತ್ತಿರಲಿಲ್ಲ
ಆದರೂ ಬದುಕಿನಾಸೆ ಇಷ್ಟೊಂದು ಇರುತ್ತಿರಲಿಲ್ಲ

ಗೆಳೆಯಾ
ನೀ ನನ್ನ ನೋಡದಿದ್ದಲ್ಲಿ ಈ ರೂಪವೇನೂ ಮುದುಡುತ್ತಿರಲಿಲ್ಲ
ಆದರೂ ಈ ತುಟಿಯ ಮಿಂಚಿನ ನಗೆ ಕಾಣುತ್ತಿರಲ್ಲಿಲ್ಲ

ಗೆಳೆಯಾ
ನೀ ನನ್ನ ಜೊತೆಗೆ ಮಾತಾಡಿರದಿದ್ದಲಿ, ನಾನೇನೂ ಮೂಕಿಯಾಗುತ್ತಿರಲಿಲ್ಲ
ಆದರೂ ಮಾತಿಗೆ ಇಷ್ಟೊಂದು ಶಕ್ತಿ ಇರುತ್ತಿರಲಿಲ್ಲ............

ಗೆಳೆಯಾ
ನೀ ನನ್ನ ಜೊತೆ ಹೆಜ್ಜೆ ಹಾಕದಿದ್ದಲ್ಲಿ , ನಾನೇನು ಮುಂದೆ ಸಾಗದಿರುತ್ತಿರಲಿಲ್ಲ
ಆದರೂ ಆ ನಡೆಗೆ ಇಂತಹ ಗುರಿ ಇದ್ದಿರಲಿಕ್ಕಿಲ್ಲ

ಗೆಳೆಯಾ
ನೀನಿಲ್ಲದೆಯೂ ನಿಜವಾಗಿಯೂ ನಡೆದೀತು ಜೀವನ
ಆದರೆ ಆ ಜೀವನಕೆ ಇಂತಹದೊಂದು ನೆಲೆ ಸಿಗುವುದಿಲ್ಲ



6 comments:

  1. ಇದ್ದಿದ್ದರೆ ನೀನು
    ಹೀಗಿರುತಿರಲಿಲ್ಲ ನಾನು...
    ನಿಜ ಹಾಗಿದ್ದಿದ್ದರೆ ಹೀಗಿರುತ್ತಿರಲಿಲ್ಲ ಎನ್ನುವ ಸಿದ್ಧಾಂತ ಒಪ್ಪುವಂತಹುದೇ...ರೂಪಾ..ಚನ್ನಾಗಿವೆ ಸಾಲುಗಳು
    ಅದರಲ್ಲೂ ಮೊದಲೆರ್ಡು ಸಾಲುಗಳು ಸಾರಾಂಶವಾಗಿವೆ...

    ReplyDelete
  2. ರೂಪಾ...

    ಸಂಗಾತಿಯ ಸಾಂಗತ್ಯ ಬಾಳಿನಲ್ಲಿ ತರುವ ಮಧುರ ಭಾವನೆಗಳನ್ನು ಅತ್ಯಂತ ನವಿರಾಗಿ ಹೇಳಿದ್ದೀರಿ.... ಅಭಿನಂದನೆಗಳು :)

    ReplyDelete
  3. ರೂಪಾರವರೆ...

    ಬಹಳ ಸುಂದರ ಸಾಲುಗಳು..

    ಅನಿವಾರ್ಯವಲ್ಲದಿದ್ದರೂ...
    ಬದುಕಿಗೊಂದು ನೋಟ ಬದಲಿಸಿದ ಗೆಳೆಯ ಇಷ್ಟವಾಗಿದ್ದಾನೆ..

    ಧನ್ಯವಾದಗಳು..

    ReplyDelete
  4. ನಿಜ. ಯಾರಿಲ್ಲದಿದ್ದರೂ ಏನೂ ವ್ಯತ್ಯಯವಾಗುತ್ತಿರಲಿಲ್ಲ
    ಆದರೆ ನಾವು ಹೀಗಿರುತ್ತಿರಲಿಲ್ಲ :)

    ReplyDelete
  5. ಇನಿಯನ ಸಾಂಗತ್ಯದಲ್ಲಿ ಬದುಕಿನ ಸಾರ್ಥಕತೆ ಕಂಡುಕೊಳ್ಳುವ ಪ್ರಯತ್ನದಂತಿವೆ ನಿಮ್ಮ ಸಾಲುಗಳು..
    ಸೊಗಸಾದ ಕವನ

    ReplyDelete

ರವರು ನುಡಿಯುತ್ತಾರೆ