ಸುರ್ ಚಿತ್ರದ ಒಂದು ಹಾಡಿನ ಅನುಕರಣೆ
ಬಾನಲ್ಲಿ ರಂಗು ಬಂದಾಗ ನೀ ಬಾರ
ಬಾಳಲ್ಲಿ ಚಂದ್ರ ನೀನಾಗು ನೀ ಬಾರ
ಬಂದವ ನೀ ಮತ್ತೆ ನನ್ನ ಬಿಟ್ಟು ದೂರ ಹೋಗಬೇಡ
ಜೊತೆಯಲ್ಲಿ ಇರದಿರೂ ಜೊತೆಯಲೇ ಇರುವೆ ನೀ
ಆಡುವ ಮಾತದು ನಿನ್ನದೇ ಕಲಿಕೆಯೋ
ನೀನೇ ನನ್ನ ಒಳಗಿರುವೆ ನೀನೆ ನನ್ನ ಹೊರಗಿರುವೆ
ನಿನ್ನ ಕಂಡ ಕ್ಷಣದಿಂದ ನನ್ನ ನಾನೆ ಮರೆತಿರುವೆ
ಬಂದವ ನೀ ಮತ್ತೆ ನನ್ನ ಬಿಟ್ಟು ದೂರ ಸಾಗಬೇಡಾ
ದಿನವಿಡೀ ಹೃದಯದ ಬಡಿತವೂ ನಿನ್ನದೇ
ಜೀವದ ಆಣೆಗೂ ಜೀವವೂ ನಿನ್ನದೇ
ನೀನೆ ನನ್ನ ಕಣ್ಣಾಗಿರುವೆ ಒಂಟಿ ಬಾಳ ಪಯಣದಲಿ
ದೂರ ಏನೇ ಆಗಿರಲಿ ನಿನ್ನ ಜೊತೆಯೇ ನನಗಿರಲಿ
ಬಂದವ ನೀ ಮತ್ತೆ ನನ್ನ ಬಿಟ್ಟು ದೂರ ಸಾಗಬೇಡ
ಮುಂದಿನ ಬಾರಿ ಮೂಲ ಗೀತೆಯ ವಿಡಿಯೋವನ್ನೂ ಅಪ್ ಲೋಡ್ ಮಾಡಿ ರೂಪಾ ಅವರೇ.
ReplyDeleteನಿಮ್ಮ ಈ ಗೀತೆ ಚೆನ್ನಾಗಿದೆ. ಆಮೇಲೆ ಹಾಡಿ ನೋಡುವೆ.
ನಮಸ್ತೆ ರೂಪಕ್ಕ. ಪದ ಮತ್ತು ಭಾವಗಳ ಬಿಗಿತ ಸಾಲಲಿಲ್ಲ .ಅವಸರವಾಯಿತೋ ಅಂತ ಅನ್ನಿಸುತ್ತಿದೆ.ಸ್ವಲ್ಪ ಆಲೋಚನೆಗೆ ಸ್ಪೇಸ್ ಕೊಡಬೇಕಿತ್ತು. ಅವಸರ ಮಾಡಬೇಡಿ. ಚೆಂದ ಬರೆಯಬಲ್ಲೀರಿ ನೀವು.
ReplyDelete