Monday, December 17, 2012

ಪ್ರೇಮ ಕಾವ್ಯ

ಗೆಲ್ಲುವೆನೆಂದರೂ ಗೆಲ್ಲಲಾಗದ 
ಸೋಲುವೆನೆಂದರೂ ಸೋಲಲಾಗದ
ನಿಲ್ಲಿಸುವೆನೆಂದರೂ ನಿಲ್ಲಿಸಲಾಗದ
ಸುಂದರ ಪಂದ್ಯ
ನನ್ನ ನಿನ್ನ ಪ್ರೇಮ ಕಾವ್ಯ

ನಂಬೆನೆಂದರೂ ನಂಬುವ
ನೆಚ್ಚೆನೆಂದರೂ ನೆಚ್ಚುವ
ಮೆಚ್ಚೆನೆಂದರೂ ಮೆಚ್ಚುವ
ಚಿತ್ತಾಪಹಾರಿ ಬಾಣಗಳು
ನಿನ್ನ ಚೇತೋಹಾರಿ ಕಂಗಳು

ಸುಳ್ಳೆಂದರೂ ಸುಳ್ಳೆನಿಸದ
ಹುಚ್ಚೆಂದರೂ ಹುಚ್ಚೆನಿಸದ
ಕೇಳೆನೆಂದರೂ ಕೇಳಬೇಕೆನಿಸುವ
ಸುಂದರ ಶ್ರಾವ್ಯ ಕಾವ್ಯಗಳು
ನಿನ್ನ ಕಿವಿಗಿಂಪಾದ ಮಾತುಗಳು

ಹೋಗೆಂದರೂ ಹೋಗಲಾಗದ
ಬಿಡು ಎಂದರೂ ಬಿಡಲಾಗದ
ಸುಡು ಎಂದರೂ ಸುಡಲಾಗದ
ಅಮೃತಧಾರೆಯ ಸ್ವಪ್ನಗಳು
ನನ್ನ ಅನುಪಮ ಭಾವಗಳು

1 comment:

  1. ಹೀಗೆ ಕಾಡಿದಾಗಲೇ ಅವಳ ಚೆಲುವಿಗೂ ಅರ್ಥ. ತುಂಬಾ ಇಷ್ಟವಾಯಿತು.

    ReplyDelete

ರವರು ನುಡಿಯುತ್ತಾರೆ