ಸುನಂದಾಗೆ ಇತ್ತೀಚಿಗೆ ಕನ್ನಡಿ ನೋಡಿಕೊಂಡಾಗೆಲ್ಲಾ ಸಂತೋಷ. ಇತ್ತೀಚಿಗೆ ಅವಳ ಮುಖದ ಮೇಲಿನ ಕಲೆಗಳು, ಕಾಣಲಾರದವಾಗಿದ್ದವು. "ರೀ ನನ್ನಮುಖದಲ್ಲಿ ಕಲೆಗಳೆಲ್ಲಾ ಕಡಿಮೆ ಆಗ್ತಾ ಇವೆ" ಖುಷಿ ಇಂದಲೇ ಹೇಳುತ್ತಿದ್ದಳು. "ಅಬ್ಬಾ ಆ ಕಲೆಗಳು ಎಷ್ಟು ದೊಡ್ಡ ದೊಡ್ಡದವಾಗಿದ್ದವು ಕನ್ನಡಿ ನೋಡೋಕೆ ಬೇಜಾರಾಗುತ್ತಿತ್ತು. ಈಗ ನೋಡಿ ಎಲ್ಲಾ ಕಡಿಮೆಯಾಗಿ ಎಷ್ಟು ಚೆನ್ನಾಗಿ ಕಾಣಿಸ್ತಾ ಇದ್ದೇನೆ. "
ಗಂಡ ಹೌದೆಂದು ತಲೆಯಾಡಿಸುತ್ತಿದ್ದ. ಪುಟ್ಟ ಮಗನನ್ನೂ ಕೇಳಿ ಖಾತ್ರಿ ಪಡಿಸಿಕೊಳ್ಳುತ್ತಿದ್ದಳು. ಆದರೆ ತಾನೇನೂ ಹಚ್ಚಿಕೊಳ್ಳದೆ ಕಡಿಮೆಯಾಗ್ತಿರೋದು ಹೇಗೆ ಎಂಬುದೇ ಅವಳಿಗೆ ಗೊತ್ತಾಗುತ್ತಿರಲಿಲ್ಲ . ಆದರೂ ತಾನು ಬರ ಬರುತ್ತಾ ಸುಂದರವಾಗಿ ಕಾಣುತ್ತಿರುವುದು ಅವಳಿಗೆ ಅರಿವಾಯ್ತು
ಹೌದು ಆ ಕಲೆಗಳು ಇದ್ದುದುರಿಂದಲೇ ಅವಳ ಮದುವೆ ನಿಧಾನಕ್ಕೆ ಆಯ್ತು. ತಂಗಿಯರ ಮದುವೆ ಎಲ್ಲಾ ಆದ ಮೇಲೆ ಕಷ್ಟ ಪಟ್ಟು ಹೆತ್ತವರು ರವಿಯನ್ನು ಹುಡುಕಿ ಕಟ್ಟಿದ್ದರು. ಈಗಾಗಲೇ ಅವಳಿಗೆ ೩೫ ವರ್ಷ. ಆ ಕಲೆಗಳೆಂದರೆ ನರಕ. ಕನ್ನಡಿ ನೋಡಲೇ ಹೆದರಿಕೊಳ್ಳುತ್ತಿದ್ದಳು. ಆ ಕಲೆ ಹೇಗಾದರೂ ಮಾಯವಾಗಬಾರದೆ ಎಂದುಎಷ್ಟು ಸಲ ಬೇಡಿಕೊಂಡಿದ್ದಳೋ. ಈಗ ಅದಾಗಿಯೇ ಕಡಿಮೆ ಆಗುತ್ತಿರುವುದು ಸಂತಸವನೀಯತೊಡಗಿತು
ಕಾಲ ಹಾಗೆ ಇರೋದಿಲ್ಲ
ಹಾಗೆಯೇ ಅವಳಿಗೆ ಕಣ್ಣು ಮಸುಕು ಮಸುಕಾಗುತ್ತಿದ್ದೆ ಎಂದನಿಸಿತು ಬಸ್ಸಿನ ನಂಬರ್ ದೂರದಿಂದ ಕಾಣಿಸುತ್ತಿಲ್ಲ ಎಂದನಿಸಲಾರಂಭಿಸಿತು.ಆಫೀಸಿನ ಕಡತಗಳು ಅಕ್ಷರಗಳು ನಾಟ್ಯ ಮಾಡಲಾರಂಭಿಸಿದಾಗ
ನಾರಾಯಣ ನೇತ್ರಾಲಯಕ್ಕೆ ಹೋಗಿ ಬಂದಳು. ಎರೆಡು ದಿನದಲ್ಲಿ ಕಣ್ಣಿಗೆ ಕನ್ನಡಕ ಬಂದಿತು
ಕನ್ನಡಕ ಧರಿಸಿ ಕನ್ನಡಿಯ ಮುಂದೆ ನಿಂತಳು.ಅರೆ ಕಲೆಗಳು ಮತ್ತೆ ಕಾಣಿಸಲಾರಂಭಿಸಿದವು. ಸತ್ಯ ತಲೆಗೆ ಹೊಳೆಯಿತು. ಕೂಡಲೇ ಕನ್ನಡಕ ಬಿಚ್ಚಿದಳು
ಈಗ ಸುನಂದ ಕನ್ನಡಿಯ ಮುಂದೆ ನಿಂತಾಗೆಲ್ಲಾ ಕನ್ನಡಕ ತೆಗೆದೇ ನಿಲ್ಲುತ್ತಾಳೆ . ತನ್ನ ಮುಖದ ಕಲೆಗಳು ಕಾಣಬಾರದೆಂದು
ಮನಸಿನ ಮಾತು ಹೊರಗೆ ಬಂದರೆ ಮನದ ದುಗುಡ ಕಡಿಮೆಯಾಗುತ್ತದೆ. ಸಂತೋಷ ಹೆಚ್ಚಾಗುತ್ತದೆ ಎಂದು ನಂಬಿರುವಳು ನಾನು ಹಾಗಾಗಿ ನನ್ನ ಮನದಲ್ಲಿ ಮೂಡಿದ ಭಾವನೆಗಳು ಇಲ್ಲಿ ಪ್ರತ್ಯಕ್ಷವಾಗುತ್ತವೆ
Monday, June 28, 2010
Monday, May 24, 2010
ಪ್ರೇಮವೊಂದು ಹುಚ್ಚು ಹೊಳೆ-ಉತ್ತರ ಭಾಗ
ರಾಜೀವನ ಮನಸ್ಸು ಡೋಲಾಯಮಾನವಾಗಿತ್ತು. ಅಬ್ಬಾ ಈ ಐದು ವರ್ಷಗಳಲ್ಲಿ ಏನೇನಾಗಿ ಹೋಯಿತು?ಹರೀಶನೇನೋ ಜೈಲಿಗೆ ಹೋದ. ಜೀವಾವಧಿ ಶಿಕ್ಷೆ ಆಯ್ತು . ಆತ ಏನು ಮಾಡಿದರೂ ಜೈಲಿನಿಂದ ಹೊರಬರದಂತೆ ಎಲ್ಲಾ ವ್ಯವಸ್ಥೆ ಮಾಡಿದ್ದೂ ಆಯ್ತು.
ಆರು ತಿಂಗಳಲ್ಲಿ ಮದುವೆ ಆಗುತ್ತೇನೆಂದ ಸ್ಮಿತ ಮದುವೆಯ ಮಾತೆತ್ತಿದರೆ ಮಾತು ಮುಂದುವರೆಸುವುದಿಲ್ಲ ಇನ್ನೂ ಗೆಲ್ಲುವ ಕುದುರೆಯೇ ಆದ್ದರಿಂದ ರಾಜೀವನೂ ಬಲವಂತ ಮಾಡಲು ಹೋಗುತ್ತಿರಲಿಲ್ಲ. ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಸ್ಮಿತಾಗೆ ಎದುರು ನಿಲ್ಲುವವರು ಯಾರೂ ಇರಲಿಲ್ಲ. ಆರು ವರ್ಷಗಳಿಂದ ಸತತವಾಗಿ ನಂ ೧ ಸ್ಥಾನದಲ್ಲಿಯೇ ಮುಂದುವರೆದಿದ್ದಳು. ಕೈ ತುಂಬಾ ಹಣ ಕಣ್ಣು ಕುಕ್ಕುವ ರೂಪ, ಹದಿನೆಂಟರಂತೇ ಇರುವ ಅದೇ ಪ್ರಾಯ, ಅವಳ ಕಣ್ಣನ್ನುನೆತ್ತಿಯ ಮೇಲೆ ಇಟ್ಟಿದ್ದವು. ಒಮ್ಮೊಮ್ಮೆ ತಾನು ಕಡೇಗಣಿಸಲ್ಪಡುತ್ತಿದ್ದೇನೆಯೇ ಎಂದೂ ಯೋಚಿಸುತ್ತಿದ್ದ ರಾಜೀವ.
ಆದರೂ ಸ್ಮಿತಾಳೇ ತನ್ನ ಜೀವ ಎಂದೇನೂ ಅವನೇನು ಅಂದುಕೊಂಡಿರಲಿಲ್ಲ. ಅಂತಹ ಪ್ರೀತಿಯೂ ಅವಳ ಮೇಲಿರಲಿಲ್ಲ
ಇದ್ದುದ್ದೆಲ್ಲಾ ಕೇವಲ ಎಷ್ಟು ಸವಿದರೂ ಮತ್ತಷ್ಟು ಸವಿಯಬೇಕೆನಿಸುವ ಅವಳ ದೇಹದ ಮೇಲಿನ ದಾಹ, ಹಾಗು ಅಮರ ಪಾಲ್ ನ ನೂರಾರು ಕೋಟಿ ರೂಗಳ ಆಸ್ತಿ ಅಷ್ಟೇ .
ಯಾವುದಾದರೂ ಸಮಯ ನೋಡಿ ಅಟ್ ಲೀಸ್ಟ್ ಅರ್ಧದಷ್ಟು ಆಸ್ತಿಯನ್ನ್ನಾದರೂ ತನ್ನ ಹೆಸರಿಗೆ ಮಾಡಿಕೊಂಡರೆ ಸಾಕು ಅದಕ್ಕೆ ಕಾಯುತ್ತಿದ್ದ ಆದರೆ ಅವಳೋ ತನ್ನ ನೆರಳನ್ನೂ ನಂಬದವಳು. ಇನ್ನೂ ರಾಜೀವನನ್ನು ನಂಬುತ್ತಾಳೆಯೇ. ಅದಕ್ಕೆ ಆಸ್ಪದವೇ ಕೊಡುತ್ತಿರಲಿಲ್ಲ.
ಆಗಿನಿಂದಲೂ ರಾಜೀವ ಪಿ ಎ ಆಗಿದ್ದಷ್ಟೇ ಅವನ ಭಾಗ್ಯ. ಅವಳ ಕೆಲಸ ಮಾಡಿ ಮಾಡಿ ಬಳಲಿದ್ದ. ಆಗಲೇ ಅನ್ನಿಸಿದ್ದು ತನಗೊಬ್ಬ ಅಸಿಸ್ಟೆಂಟ್ ಬೇಕೆಂದು. ಆದರೆ ಬರುವವರು ನಂಬಿಕಸ್ತರಾಗಿರಬೇಕು . ಮುಗ್ದರಾಗಿರಬೇಕು. ತಮ್ಮಷ್ಟಕ್ಕೆ ತಾವು ಇರಬೇಕು. ಹೆಚ್ಚು ಓದಿರಬಾರದು .ಇಂಗ್ಲೀಷ ಮತ್ತು ಕಂಪ್ಯೂಟರ್ ಗೊತ್ತಿದ್ದರೆ ಸಾಕು. ಬಡವರಾಗಿರಬೇಕು. ಅಂತಹವರು ಯಾರಿದ್ದಾರೆ ?
ಗೌರಿ ನೆನಪಾಯ್ತು. ಹೌದು ಗೌರಿ ಅಂತಹವಳೇ . ಅವಳ ಪರಿಚಯವಾಗಿದ್ದೂ ಆಕಸ್ಮಿಕವೇ. ಅಂದು ಸ್ಮಿತಾಳ ಅನಾಥೆ ಚಿತ್ರದ ಶೂಟಿಂಗ್ ಇದ್ದುದ್ದು ರಾಜಾಜಿ ನಗರದ ಅಬಲಾಶ್ರಮದಲ್ಲಿ . ಅಲ್ಲಿಯೇ ಆ ಹದಿನೆಂಟರ ಹುಡುಗಿಯ ಪರಿಚಯವಾಗಿತ್ತು. ಗೌರಿ ಅಪ್ಪ ಅಮ್ಮ ಯಾರೆಂದು ಗೊತ್ತಿರದ ಪಾಪದ ಹುಡುಗಿ. ಸಾಧಾರಣ ರೂಪಿನವಳು ನೋಡಿದರೆ ಮುಗ್ದೆ ಎಂದು ತಿಳಿಯುತಿತ್ತು. ಮೊದಲು ಬಳ್ಳಾರಿಯ ಆಶ್ರಮದಲ್ಲಿ ಇದ್ದವಳು ಹದಿನೆಂಟು ವಯಸಾದ ಮೇಲೆ ಅವರೇ ಇಲ್ಲಿ ಅವಳನ್ನು ಕಳಿಸಿದ್ದರು ಅಶ್ರಮಕ್ಕೆ ಬಂದು ಒಂದು ತಿಂಗಳಾಗಿತ್ತಷ್ಟೇ. ಎಲ್ಲಾದರೂಕೆಲಸ ಇದ್ದರೆ ಹೇಳಿ ಎಂದು ಅತ್ತುಕೊಂಡಿದ್ದಳು. ಸಿನಿಮಾದಲ್ಲಿ ಸೈಡ್ ಆಕ್ಟ್ ಮಾಡ್ತೀಯ ಎಂದು ಕೇಳಿದ್ದಳು ಸ್ಮಿತಾ. ಇಲ್ಲ ಎಂದು ತಲೆ ಆಡಿಸಿದ್ದಳು . ತನ್ನ ಈ ರೂಪಿಗೆ ಸಿನಿಮಾ ಸರಿಯಾದ ಫೀಲ್ಡ್ ಅಲ್ಲ ಎಂದಿದ್ದಳು. ಪಿ ಯು ಸಿ ಮಾಡಿದ್ದಾಳೆ .ಜೊತೆಗೆ ಇಂಗ್ಲೀಷ್ ಜ್ನಾನವೂ ಇತ್ತು. ಕಂಪ್ಯೂಟರ್ ಮಾತ್ರ ಹೇಳಿಕೊಟ್ಟರೆ ಆಗುತ್ತದೆ
ಇದಾಗಿ ಎರೆಡು ವರ್ಷಗಳೇ ಕಳೆದಿವೆ . ಅವಳೇನು ಅಲ್ಲೇ ಇದ್ದಾಳ ಇಲ್ಲವಾ ಅದು ಗೊತ್ತಿಲ್ಲ . ಆಫೀಸಿನಿಂದ ಅಬಲಾಶ್ರಮಕ್ಕೆ ಕಾಲ್ ಮಾಡಲು ಹೇಳಿದ.
ಎರೆಡೇ ನಿಮಿಷದಲ್ಲಿ ಉತ್ತರ ಬಂತು
ಗೌರಿ ಯಾವುದ್ ಕಂಪೆನಿಯಲ್ಲಿ ಕೆಲ್ಸ ಮಾಡುತ್ತಿದ್ದಾಳೆ. ಅಬಲಾಶ್ರಮದಲ್ಲಿ ಇಲ್ಲ.
ಆ ಕಂಪನಿಯ ಫೋನ್ ನಂ ತೆಗೆದುಕೊಂಡು ಅವಳನ್ನು ಸಂಪರ್ಕಿಸಿದರು.
ಕೊನೆಗೂ ಗೌರಿ ಬಂದಳು . ಅದೇ ಸಾಧಾರಣ ರೂಪ ಅದೇ ಮುಗ್ಧತೆ , ಅದೇ ಮಾತು. ಬೆಂಗಳೂರಿನ ಬೆಡಗು ಅವಳನ್ನು ಎಳ್ಳಷ್ಟೂ ಬದಲಾಯಿಸಿರಲಿಲ್ಲ. ಮೇಕ್ ಅಪ್ ಇಲ್ಲದ ಮುಖ . ರಾಜೀವನಿಗೂ ಅದೇ ಬೇಕಾಗಿತ್ತು. ಹಾಗಿದ್ದಲ್ಲಿ ತಮ್ಮೆಲ್ಲಾ ವಿಷಯಗಳಿಗೂ ತಲೆಹಾಕುವುದಿಲ್ಲ
ರಾಜೀವನ ಅಸಿಸ್ಟೆಂಟ್ ಆಗಿರಲು ಒಪ್ಪಿದಳು. ಸ್ಮಿತಾ ಕೂಡ ಈ ಎಣ್ಣೆಗೆಂಪಿನ ಸಾಧಾರಣ ಹುಡುಗಿಯನ್ನು ಯಾವುದೇ ಮಾತ್ಸರ್ಯವಿಲ್ಲದೇ ಒಪ್ಪಿದಳು.
ಗೌರಿ ನಿಜಕ್ಕೂ ಮೌನ ಗೌರಿಯೇ ತಾನಾಯ್ತು ತನ್ನ ಕೆಲಸವಾಯ್ತು. ಎಲ್ಲರ ಜೀವನದಲ್ಲೂ ಇದ್ದಂತೆ ಅವಳ ಜೀವನಕ್ಕೂ ಒಂದು ಗುರಿ ಇತ್ತು . ಬೇರೆಡೆ ಕೆಲಸ ಮಾಡಿ ತಾನಂದುಕೊಂಡದ್ದನ್ನು ಪಡೆಯಲಾಗುವುದಿಲ್ಲ ಎಂದು ತಿಳಿದಿತ್ತು. ಇಲ್ಲಿ ಕೈ ತುಂಬಾ ಸಂಬಳ . ತನ್ನಾಸೆ ಇಲ್ಲಿ ಖಂಡಿತಾ ಈಡೇರುತ್ತದೆ ಎಂಬ ನಂಬಿಕೆ ಬಂತು .ಜೊತೆಗೆ ಪ್ರತ್ಯೇಕ ಕೋಣೆ . ಊಟ ಉಪಚಾರ ಎಲ್ಲಾ ಸ್ಮಿತಾ ಮನೆಯಲ್ಲೇ.
ಗೌರಿಯ ಕೆಲಸ ಸ್ಮಿತಾಳ ದಿನಚರಿಯನ್ನು ಸಿದ್ದಗೊಳಿಸುವುದು. ಅವಳ ಮಿಂಚಂಚೆಗೆ ಉತ್ತರಿಸುವುದು. ಲೆಟರ್ ಕರೆಸ್ಪಾಂಡೆನ್ಸ್ ಮಾಡುವುದು. ಜೊತೆಗೆ ಸ್ಮಿತಾ ಹೊಸತೊಂದು ಬಿಸಿನೆಸ್ ಆರಂಭಿಸಿದ್ದಳು . ಅದರ ಮೇಲುಸ್ತುವಾರಿ ನೋಡಿಕೊಳ್ಳುವುದು.
ರಾಜೀವನಿಗೆ ಈಗ ಪ್ರಯಾಸ ಕಡಿಮೆಯಾಗಿತ್ತು. ಎಲ್ಲಾ ಕೆಲಸಗಳನ್ನೂಗೌರಿ ಒಂದಿನಿತೂ ಬೇಸರಿಸಿಕೊಳ್ಳದೇ ಮಾಡುತ್ತಿದ್ದಳು. ಹುಡುಗಿಯರು ಇಷ್ಟು ಸಾಫ್ಟ್ ,ಟ್ರೆಡಿಷನಲ್ , ಗಂಭೀರವಾಗಿರುತ್ತಾರ ? ಎಂದು ಅಚ್ಚರಿ ಪಡುತ್ತಿದ್ದ. ಸ್ಮಿತಾಳೂ ಗೌರಿಯನ್ನ ರೇಗಿಸುತ್ತಿದ್ದಳು
"ಗೌರಿ ಸ್ವಲ್ಪವಾದರೂ ಚೇಂಜ್ ಇರಬೇಕು . ಹೀಗಿದ್ದಲ್ಲಿ ಮುಂದೆ ಯಾರೇ ನಿನ್ನನ್ನ ಮದುವೆ ಆಗ್ತಾರೆ? "
"ಮೇಡಮ್ ನನಗೆ ಅಂತ ಯಾರನ್ನೋ ಭಗವಂತ ಸೃಷ್ಟಿ ಮಾಡಿರುತ್ತಾನೆ ಸಮಯ ಬಂದಾಗ ಅವನೇ ನನ್ನ ಮುಂದೆ ಬರ್ತಾನೆ.ನನ್ನನ್ನ ಹೇಗಿದ್ದೀನೋ ಹಾಗೆ ಒಪ್ಪಿಕೊಳ್ಳೋ ಅಂತಹ ಗಂಡು "ಮುಗ್ದ ಉತ್ತರ
"ಅಕಸ್ಮಾತ್ ಯಾರೂ ಬರಲಿಲ್ಲಾಂದರೆ"ಸ್ಮಿತಾ ನಗುತ್ತಿದ್ದಳು
"ನನ್ನ ಹಣೇಲಿ ಮದುವೆ ಅನ್ನೋ ಪದ ಇಲ್ಲಾ ಅನ್ಕೋತೀನಿ" ಬೇಜಾರಾಗುತ್ತಿತ್ತೇನೋ ಗೌರಿ ಎದ್ದು ಹೋಗಿಬಿಡುತ್ತಿದ್ದಳು.
ಹೀಗೆ ದಿನಗಳು ಕಳೆಯುತ್ತಿದ್ದವು
ಅರಿವಿಲ್ಲದೆ ಸ್ಮಿತಾಗೆ ಗೌರಿ ತುಂಬಾ ಹತ್ತಿರದವಳಾಗಿದ್ದಳು. ರಾಜೀವನಿಗೂ ಸಹಾ . ಗೌರಿ ಅವಕಾಶ ಕೊಟ್ಟರೆ ಗೌರಿಯನ್ನ ವಶಪಡಿಸಿಕೊಳ್ಳಲು ರಾಜೀವನೂ ತಯಾರಿದ್ದ. ಆದರೆ ಗೌರಿಯೇ ಅಂತಹವಳು ಬೆಂಕಿ ಚೆಂಡಿನಂತಹವಳು. ರಾಜೀವನಷ್ಟೆ ಅಲ್ಲಾ ಎಲ್ಲಾ ಗಂಡಸರನ್ನೂ ಮೂರು ಅಡಿ ದೂರದಲ್ಲೇ ಇರಿಸಿ ಮಾತಾಡುತ್ತಿದ್ದಳು. ಅಲ್ಲದೇ ಗೌರಿ ಸ್ಮಿತಾಗೆ ತುಂಬಾ ಬೇಕಾದವಳಾದ್ದರಿಂದ ರಾಜೀವನೂ ಹೆದರುತ್ತಿದ್ದ.
ಇಂತಹ ಗೌರಿಯ ಜೀವನವನ್ನೇ ಬದಲಾಯಿಸುವಂತಹ ಘಟನೆ ನಡೆಯುತ್ತದೆ ಎಂದೂ ರಾಜೀವನೇಕೆ ಗೌರಿಯೂ ಊಹಿಸಿರಲಿಲ್ಲ.
(ಮುಂದುವರೆಯುತ್ತದೆ)
[ ಎಲ್ಲೋ ಒಂದು ಕಡೆ ಪ್ರೇಮವೊಂದು ಹುಚ್ಚು ಹೊಳೆ ಅಪೂರ್ಣ ಎನಿಸಿದ್ದರಿಂದ ಅದನ್ನ ಮುಂದುವರೆಸುತಿದ್ದೇನೆ. ’ಗಮ್ಯ’ಕ್ಕೂ ಅಂತ್ಯ ಕಾಣಿಸಬೇಕೆಂದಿದ್ದೇನೆ. ಎಲ್ಲಕ್ಕೂ ಸಮಯದ ತೊಂದರೆ. ಓದುಗರು ದಯವಿಟ್ಟು ಸಹಿಸಿಕೊಳ್ಳಿ-ರೂಪ)

Tuesday, April 27, 2010
ಫಲಿತಾಂಶ
ಪ್ರಣತಿಯನ್ನು ನೋಡುತ್ತಿರುವಂತೆ ನನ್ನ ಮನದಲ್ಲೇನೋ ಅಪರಾಧಿ ಪ್ರಜ್ನೆ ಹೀಗೇ ಧುಮ್ಮಿಕ್ಕುತ್ತಿದೆ. ಅವಳನ್ನು ಪ್ರೀತಿಸುತ್ತಿದ್ದೇನೆ ನಾನು ಆದರೆ ಅವಳು ನನ್ನನ್ನ ಪ್ರೀತಿಸುತ್ತಿದ್ದಾಳೇಯೇ. ಅವಳು "ಅನಿಲ್ ಐ ರಿಯಲ್ಲಿ ಐ ಲವ್ ಯು "ಅಂದಾಗಲೂ ಹೃದಯ ಹಿಗ್ಗಲಿಲ್ಲ ಬದಲಿಗೆ ಕುಗ್ಗಿತು. ಒಂದು ಹೆಣ್ಣನ್ನು ಪ್ರೀತಿಸಲು ಮುಖವಾಡ ಹಾಕ್ತೀಯಾ ಹೇಡಿ ಎಂದಿತ್ತು. ಆದರೂ ಭಂಡ ನಾನು .ಯಾವುದಕ್ಕೂ ಬಗ್ಗೋದಿಲ್ಲ. ಇನ್ನೂನನ್ನದೇ ಮಾತಿಗೆ ಬಗ್ಗುತ್ತೇನೆಯೇ. ಅದನ್ನ ಗದರಿದ್ದೆ.
ಈ ಪ್ರಣತಿ ನನ್ನನ್ನ ಈ ಒಂದು ಕೀಳು ಮಟ್ಟಕ್ಕೆ ಇಳಿಸಿಬಿಡುತ್ತಾಳೆ ಎಂದು ನಾನಾದರೂ ಯಾವಾಗ ತಿಳಿದಿದ್ದೆ.
ಪ್ರೀತಮ್ ನನ್ನ ಕಂಪೆನಿಯಲ್ಲಿ ಕೇವಲ ಕೆಲಸಗಾರನಾಗಿರಲಿಲ್ಲ ನನ್ನ ಜೀವದ ಗೆಳೆಯನಾಗಿದ್ದ. ಸ್ವಭಾವತ: ಚಿಪ್ಪಿನಲ್ಲಿ ಮುಳುಗಿ ಹೋಗುವ ಹುಡುಗ. ಅದು ಹೇಗೋ ಅವನು ನನ್ನ ಗೆಳೆತನದ ಪರಿಧಿಯಲ್ಲಿ ತೂರಿದ್ದ.
ಅವನಿಗೆ ಹೇಗೋ ಹತ್ತಿತ್ತು ಬ್ಲಾಗ್ ಹುಚ್ಚು. ಸದಾ ಒಂಟಿ ಆತ . ಕಲ್ಪನೆಯ ಸಾಗರದಲ್ಲಿ ಮುಳುಗಿರುತ್ತಿದ್ದ. ತನ್ನ ಮನಸಿನ ಭಾವನೆಗೆ ಮಾತಿನ ರೂಪ ಕೊಡಲಾಗದ ಆತ ಮೊರೆ ಹೊಕ್ಕಿದ್ದು ಈ ಬ್ಲಾಗೆಂಬ ಮಹಾಸಾಗರದಲ್ಲಿ. ಅದು ಗೊತ್ತಿದ್ದುದು ನನಗೆ ಮಾತ್ರ ."ಮಾತಿರದ ಅಕ್ಷರಗಳು" ಇದಲ್ಲವೇ ಆತನ ಬ್ಲಾಗಿನ ಶೀರ್ಷಿಕೆ . ತನ್ನ ಬದುಕಿನ ಕಥೆಯೆಲ್ಲವನ್ನೂ , ಭಾವನೆಯನ್ನೂ ಅಕ್ಶರದ ರೂಪದಲ್ಲಿರಿಸುತ್ತಿದ್ದ. ಎಲ್ಲೂ ತನ್ನ ಪರಿಚಯ ಮಾಡಿಕೊಂಡಿರಲಿಲ್ಲ. ’ಅಕ್ಷರಿಗ’ ಎಂಬ ಹೆಸರನ್ನೇ ತನ್ನ ಮೇಲ್‌ಗೆ ಇಟ್ಟಿದ್ದ . ಒಂದು ಚಿಪ್ಪಿನಲ್ಲಿಯೇ ಉಳಿದಿದ್ದ. ಅವನು ಈ ’ನಿರೀಕ್ಷೆ’ ಎಂಬ ಮುದ್ದು ಹುಡುಗಿಯ ಬಲೆಗೆ ಹೇಗೆ ಬಿದ್ದನೋ ಗೊತ್ತಿಲ್ಲ. ಆದರೆ ಅವಳನ್ನೇ ಆರಾಧಿಸಿದ ಮೊಗವನ್ನೂ ಕೂಡ ನೋಡದೆ. ಅವಳೂ ಅಷ್ಟೇ ಅವನ ಪ್ರೀತಿಗೆ ಬಿದ್ದಿದ್ದಳು. ಆದರೆ ತನ್ನ ಹೆಸರನ್ನೂ ಹೇಳಿರಲಿಲ್ಲ. ಅವಳೂ ಅಷ್ಟೆ ತನ್ನ ನಿಜ ಹೆಸರನ್ನು ತಿಳಿಸಿರಲಿಲ್ಲ. ನಿರೀಕ್ಷೆ ಎಂದು ಹೆಸರನ್ನಿಟ್ಟಿಕ್ಕೊಂಡಿದ್ದಳು.ಅದು ಅವರು ತಮ್ಮಪ್ರೇಮವನ್ನು ಪರೀಕ್ಷೈಸಿಕೊಳ್ಳುವ ಪರಿಯಂತೆ
ಇದೆಲ್ಲಾ ನನಗೆ ಮಾತ್ರ ಗೊತ್ತಿತ್ತು. ಎಷ್ಗ್ಟೊ ಬಾರಿ ನಾನೆ ಅವನಿಗೆ ಬೈದಿದ್ದೆ. ಈ ಥರಾ ಭ್ರಮಾಲೋಕದಲ್ಲಿ ಯಾಕೆ ಬದುಕುತೀಯಾ ಎಂದು. ಜೊತೆಗೆ ಕಂಪೆನೀಲಿ ಕೆಲ್ಸ ಮಾಡೋ ಅಂದ್ರೆ ಬ್ಲಾಗ್ಸ್ ಬರೆದು ಟೈಮ್ ವೇಸ್ಟ್ ಮಾಡ್ತಿಯಾ ಎಂದು ಕೀಟಲೆಮಾಡಿದ್ದೆ. ಆತ ನಗುತ್ತಿದ್ದ
ಆವತ್ತೂ ಅವಳ ಮೇಲ್ ಬಂದ ಖುಶಿಯಲ್ಲಿ ನನಗೆ ತೋರಿಸಿದ. ಇಬ್ಬರೂ ಭಾನುವಾರದ ಸಂಜೆ ಭೇಟಿಯಾಗುವ ಮನಸು ಮಾಡಿದ್ದರು. ಕೇವಲ ಬಟ್ಟೆಯ ಆಧಾರದ ಮೇಲೆ ಗುರುತಿಸುವುದು. ನನಗೋ ನಗು. ಕೊನೆಗೆ ಆಲ್ ದಿ ಬೆಸ್ಟ್ ಹೇಳಿ ಕ್ಯಾಬಿನ್‌ಗೆ ಬಂದು ಪ್ರೀತಿಗೆ ಇಂಥಾ ಶಕ್ತಿ ಇದ್ಯಾ ಎಂದು ಯೋಚಿಸಿದ್ದೇ ಬಂತು. ಏಕೆಂದರೆ ನನಗೇನೂ ಅದರ ಅನುಭವ ಆಗಿರಲಿಲ್ಲವಲ್ಲ.
ಯಾಕೋ ಯಾರೆ ನೀನು ಚೆಲುವೆ ಬೇಡಾವೆಂದರೂ ನೆನಪಾಗುತ್ತಿತ್ತು
ಆದರೆ ಅವರಿಬ್ಬರ ಮಿಲನಕ್ಕೆ ವಿಧಿಯ ಸಮ್ಮತಿ ಇರಲಿಲ್ಲವೇನೋ. ಮದ್ಯಾಹ್ನ ಬೇಗನೆ ಖುಷಿಯಲ್ಲಿ ಹೋಗುತ್ತಿದ್ದವ ಎದುರು ಯಮ ದೂತನಾಗಿದ್ದ ಲಾರಿಯನ್ನು ಗಮನಿಸಲಿಲ್ಲ. ಅವನನ್ನು ಜಜ್ಜ್ಜಿಹಾಕಿತ್ತು. ಇದೊಂದು ರೀತಿಯ ಆಘಾತ ನನಗೆ. ಆತ್ಮೀಯ ಮಿತ್ರನ ಮರಣ ನನ್ನನ್ನು ಮಂಕಾಗಿಸಿದರೂ ಅವನ ಪ್ರೀತಿಯ ಹುಡುಗಿಗೆ ಈ ವಿಷಯ ತಿಳಿಸಲೇಬೇಕಿತ್ತು. ಅಂದು ಭಾನುವಾರ ಪ್ರೀತಮ್‍ನ ಮೇಲ್ನಲ್ಲಿ ಇದ್ದಂತೆ ಹಳದಿ ಹಾಗು ಕೆಂಪು ಚೌಕಳಿ ಇರುವ ಶರ್ಟ್ ಹಾಕಿಕೊಂಡು ಆ ’ನಿರೀಕ್ಷೆ’ಯನ್ನು ಮೀಟ್ ಮಾಡಲೆಂದು ಬಂದೆ.
ಅವಳಿಗೆ ಹೇಗೆ ಸಮಾಧಾನ ಮಾಡಬೇಕೆಂಬ ಯೋಚನೆಯಲ್ಲಿ ನಿಂತವನ ಎದುರಿಗೆ ಬಂದು ನಿಂತ ಆ ಅಪ್ಸರೆ ಮನಸನ್ನು ಸೂರೆ ಮಾಡಿಬಿಟ್ಟಳು. ತಾನೇ ಆ ’ನಿರೀಕ್ಷೆ’ ಎಂದವಳ ಮಾತಿಗೆ ಅವಳ ನಿನಾದಕ್ಕೆ ,ಕೊರಳು ಕೊಂಕಿಸುವ ರೀತಿಗೆ ನಗುವ ಮೋಡಿಗೆ ಬಲಿಯಾಗಿಬಿಟ್ಟೆ. ಅವಳಿಗೆ ನಾನ್ಯಾರು ಎಂದು ಹೇಳಬೇಕೆಂಬ ಯೋಚನೆಯೂ ಬರಲಿಲ್ಲ ನನ್ನನ್ನೆ ಅವಳು ’ಅಕ್ಷರಿಗ’ ಎಂದುಕೊಂಡಳು. ನಾನು ಇಲ್ಲವೆನ್ನಲಿಲ್ಲ. ನನ್ನಹೆಸರನ್ನು ಹೇಳಿಕೊಂಡೆ . ಅನಿಲ್’
ಆಗಲೆ ಆ ಸುಂದರ ಹೆಣ್ಣಿನ ಹೆಸರೂ ಇನ್ನೂ ಸುಂದರ .’ ಪ್ರಣತಿ ’ಎಂದು ತಿಳಿಯಿತು
ಅಂತಹ ಸುಂದರಿ ನನ್ನನ್ನು ಎಷ್ಟೊಂದು ಹಚ್ಚಿಕೊಂಡು ಬಿಟ್ಟಿದ್ದಾಳೆ.
ನಾಳೆ ನಮ್ಮ ಎಂಗೇಜ್ ಮೆಂಟ್ . ನನ್ನ ಅಲ್ಲಲ್ಲ ’ಅಕ್ಷರಿಗ’ ಹಾಗು ’ನಿರೀಕ್ಶೆ’ಯ ಎಂಗೇಜ ಮೆಂಟ್. ನಾನು ’ಅಕ್ಷರಿ’ಗನ ವೇಷದಲ್ಲಿರುವ ವಂಚಕ ಎಂದು ತಿಳಿದರೆ ಅವಳ ಮನಸಿಗೆ ಎಷ್ಟು ನೋವಾದೀತು. ಆದರೆ ನಾನು ಅವಳು ನನ್ನನ್ನು ಪ್ರೀತಿಸಲಿ ಎಂದು ಬಯಸುತ್ತೇನೆ. ಜೀವನವೆಲ್ಲಾ ’ಪ್ರೀತಮ’ನ ಹಂಗಲ್ಲಿ ಇರುವುದು ಯಾಕೋ ಬೇಡವೆನ್ನುತ್ತಿದೆ ಮನಸು. ಒಂದೊಮ್ಮೆ ಅವಳು ಒಪ್ಪದೇ ಹೋದರೆ
ಇಲ್ಲಾ ಹೇಳಿಬಿಡುವುದೇ ಒಳ್ಳೇಯದು. ಅವಳ ನಿರ್ಧಾರ ಏನೆ ಆಗಲಿ
ಗಟ್ಟಿ ಮನಸು ಮಾಡಿಕೊಂಡೆ ಪ್ರಣತಿಗೆ ಫೋನ್ ಮಾಡಿದೆ.
ಹೋಟೆಲ್ ವುಡ್‌ಲ್ಯಾಂಡ್ಸ್ನ ಎದುರಲ್ಲಿದ್ದ ಲಾನ್ ನಮ್ಮ ಮುಂದಿನ ಮಾತುಕತೆಗೆ ಸಾಕ್ಷಿಯಾಗುವುದರಲ್ಲಿತ್ತು. ಪ್ರಣತಿ ಬಂದಳು. ಮಂಜಿನಲ್ಲಿ ಮುಳುಗೆದ್ದ ಹೂವಿನ ಸೌಂದರ್ಯ ಅವಳದು.
ಈ ಸೌಂದರ್ಯವೇ ತನ್ನನ್ನು ವಂಚಕನನ್ನಾಗಿ ಮಾಡಿದ್ದೆ. ಕಣ್ಣು ಮುಚ್ಚಿದೆ ಮತ್ತೆ ಕರಗಬಾರದೆಂದು
ಬಂದು ಕೂತಳು
ನನ್ನ ಕೈ ಅವಳ ಕೈನಲ್ಲಿ ಬಂಧಿಯಾಯ್ತು.
ನಿಧಾನವಾಗಿ ಕೈ ಬಿಡಿಸಿಕೊಂಡು ಎದ್ದು ನಿಂತೆ ಅವಳತ್ತ ಬೆನ್ನು ಮಾಡಿ
ಎಲ್ಲವನ್ನೂ ಹೇಳಿಬಿಟ್ಟೆ. ಮುಖ ನೋಡಲು ಧೈರ್ಯ ಸಾಲಲಿಲ್ಲ.
ಸ್ವಲ್ಪ ಹೊತ್ತು ಮೌನ
ಇದೇನು ಅವಳಿಂದ ಮಾತಿಲ್ಲ ಎಂದು ಅವಳತ್ತ ತಿರುಗಿದೆ
ಅವಳ ಕಣ್ಣಲ್ಲಿ ನೀರು.
ಕೊಂಚ ಹೊತ್ತು ಹಾಗೆ ನಿಂತವಳು .
"ನೀವು ನನ್ನನ್ನ ಅಂಧಾಕಾರದಲ್ಲಿಟ್ರಿ ಇಷ್ಗ್ಟು ದಿನಾ. ನಾನು ಪ್ರೀತಿಸಿದ್ದು ’ಅಕ್ಷರಿಗ’ನನ್ನ . ಅವರ ಮುಖ ನೋಡದೆ ಅವರ ಹೆಸರು ಕೇಳದೆ ಕೇವಲ ಅವರ ಬರಹವನ್ನೇ ಪ್ರೀತಿಸಿದೆ, ಆದರೆ ನೀವು ಹೀಗೆ ಮಾಡಬಾರದಿತ್ತು . ನಿಮ್ಮ ಪ್ರಾಣ ಸ್ನೇಹಿತನ ಪ್ರಿಯತಮೆಯನ್ನ ಮೋಸ ಮಾಡಿಬಿಟ್ರಿ"
ನಾನು ಸುಮ್ಮನಾಗಿಬಿಟ್ಟೆ. ಇದೆಲ್ಲಾ ಬೇಕಾಗಿತ್ತು ನನಗೆ ಎಂದುಕೊಂಡೆ
"ಆದರೆ ನಿಜ ವಿಷಯ ಹೇಳಿ ನನ್ನನ್ನ ಗೆದ್ದುಬಿಟ್ರಿ " ಆಕೆಯ ಮಾತು ಮುಂದುವರೆಯುತ್ತಿದ್ದಂತೆ
ನಾನು ಚಕಿತನಾದೆ
ನಾನು ನಿಮ್ಮನ್ನ ಮುಟ್ಟಲು ಬಂದಾಗಲೆಲ್ಲಾ ನೀವು ದೂರ ಹೋಗುತ್ತಿದ್ದುದ್ದನ್ನ ಕಂಡು ಸಂಕೋಚವಿರಬಹುದು ಎಂದುಕೊಂಡಿದ್ದೆ ಆದರೆ ನಿಮ್ಮ ಮನಸಲ್ಲಿ ಇಂತಾ ತುಮುಲವಿತ್ತು ಎಂದು ಈಗ ತಿಳಿಯುತ್ತಿದೆ . ನಿಮ್ಮ ಹೃದಯದಲ್ಲಿ ಎಂತಾ ಬಿರುಗಾಳಿ ಎದ್ದಿರಬಹುದು ಎಂದೂ ನಾನು ಊಹಿಸಬಲ್ಲೆ. ನೀವು ಒಳ್ಳೆಯವರೇ ನಿಜ ಆದರೆ ನಾನು ಈಗಲೇ ಯಾವುದನ್ನೂ ನಿರ್ಧರಿಸಲು ಅಶಕ್ಯೆ. ನಮ್ಮ ಎಂಗೇಜ್‌ಮೆಂಟ್ ನಾಳೆ ನಡೆಯಲೂ ಬಹುದು ಅಥವ ಇಲ್ಲದೇ ಇರಬಹುದು ಏನೆ ಆಗಲಿ ನಾನಂತೂ ನಿಮ್ಮ ಗೆಳತಿಯಾಗಿರಲು ಬಯಸುತ್ತೇನೆ "
ಅವಳು ನುಡಿದು ಭಾವನೆಗಳ ತೀವ್ರತೆ ತಾಳಲಾರದವಳಂತೆ ಕಾರಿನತ್ತ ಓಡಿದಳು
ಅವಳ ಮಾತು ಸಂತಸ ತಂದಿತು. ಅವಳು ನನಗೆ ದಕ್ಕುತ್ತಾಳೋ ಇಲ್ಲವೋ ಎಂಬ ಯೋಚನೆಗಿಂತ ಅವಳ ದೃಷ್ಟಿಯಲ್ಲಿ ನಾನು ಬೀಳಲಿಲ್ಲವಲ್ಲ ಎಂಬುದೇ ಹೆಮ್ಮಯ ವಿಷಯವಾಗಿತ್ತು
ನಾಳೆಯ ಫಲಿತಾಂಶ ಏನೆ ಆಗಲಿ ನಾನು ನಾನಾಗಿದ್ದೆ. ಅವಳು ನಿರಾಕರಿಸಲಿ ಅಥವ ಬಯಸಲಿ ಅದು ನಾನೇ, ಅನಿಲ್ ಆಗಿರುತ್ತೇನೆ . ಇದು ಅನಿಲ್‌ನ ಫಲಿತಾಂಶ
ನಾಳೆಗಾಗಿ ಕಾಯತೊಡಗಿದೆ
**************************************
Subscribe to:
Posts (Atom)