Monday, May 11, 2009

ಶ್ರುತಿಯಾದಳೇ ಅಪಶೃತಿ

ಅವಳು ನನಗಿಂತ ಸುಮಾರು ವರ್ಷ ಹಿರಿಯವಳಾದಳೂ ಮೊದಲಿನಿಂದ ಅಂದರೆ ಅವಳ ಶೃತಿ ಚಿತ್ರದ ನಂತರದಿಂದ ಅವಳೊಂಥರ ಪಕ್ಕದ ಮನೆ ಹುಡುಗಿಯಾಗಿಯೇ ನಾನು ಕಲ್ಪಿಸಿಕೊಂಡಿದ್ದೆ
ನನಗೆ ಮಾತ್ರವಲ್ಲ ನಮ್ಮನೆಯಲ್ಲಿ ಎಲ್ಲರಿಗೂ . ಆಸೆಗೊಬ್ಬ ಮೀಸೆಗೊಬ್ಬ ಚಿತ್ರ ಬಂದಿತ್ತು .ಶಿವಣ್ಣನ ತಂಗಿಯ ಪಾತ್ರ ಮಾಡಿದ್ದಳು ಈಕೆ. ಅವಳ ನಟನೆ ನೋಡಿ ಅಮ್ಮ ನಮ್ಮೊಡನೆ ಹೇಳಿದ್ದರು . ಇವಳು ತುಂಬಾ ಬೇಗ ಬೆಳೆಯುತ್ತಾಳೆ. ನಮಗೇನೂ ಅರ್ಥ ಆಗಿರಲಿಲ್ಲ.
ಆಮೇಲೆ ಶೃತಿ ನೋಡಿ ಸ್ನೇಹಕ್ಕಾಗಿ ಮದುವೆಯನ್ನು ಧಿಕ್ಕರಿಸುವ ಅವಳ ಪಾತ್ರದಿಂದ ತುಂಬಾ ಪ್ರಭಾವಿತಳಾಗಿದ್ದೆ.
ನಂತರ ಅವಳ ಪ್ರತಿಯೊಂದು ಚಿತ್ರದಲ್ಲೂ ಅವಳ ನಟನೆ ಮೆಚ್ಚುತ್ತಿದ್ದೆ
ನಂತರ ಸ್ತ್ರೀ ಚಿತ್ರ ನೋಡಿದಾಗ ಅವಳೂ ಕೇವಲ ಆ ಚಿತ್ರದ ಪಾತ್ರವಾಗದೆ ನನ್ನೊಳಗಿನ ಮನದ ತುಡಿತವಾದಳೋ ಕೆಲವೊಮ್ಮೆ ನಾನು ಆ ಪಾತ್ರವಾಗಿ ಬದಲಾಗುತ್ತಿದ್ದೇನೇನೋ ಅನ್ನಿಸುತ್ತಿತ್ತು.
ಕರ್ಪೂರದ ಗೊಂಬೆ ನೋಡಿದಾಗಲಂತೂ ಕಣ್ಣೀರು ಕರಗಿ ಕೋಡಿಯಾಗಿ ಹರಿದು ಹೋಗಿತ್ತು.
ನಂತರದ ಚಿತ್ರಗಳಲ್ಲಿಯೂ ಅಕ್ಕನಾಗಿ, ಅಮ್ಮನಾಗಿ, ತಂಗಿಯಾಗಿ ಅಭಿನಯಿಸುತ್ತಿದ್ದ ಅವಳಿಂದ ಇಂತಹ ಒಂದು ನಡೆ ನಿರಿಕ್ಷಿಸಿರಲಿಲ್ಲ . ನಿಜ ಒಬ್ಬರ ಖಾಸಗಿ ಜೀವನದಲ್ಲಿ ಇಣುಕಿ ನೋಡುವ , ಕಸ ಹುಡುಕುವ ಅಧಿಕಾರ ಯಾರಿಗೂ ಇಲ್ಲ . ಆದರೂ ಆದರೆ ನಮ್ಮ ಮನೆಯ ಹುಡುಗಿಯಂತೆ ನಮ್ಮ ಮನದಲ್ಲಿ ನೆಟ್ಟು ನಿಂತಿದ್ದ ಶೃತಿ ಡೈವೋರ್ಸ್ ಪಡೆಯುತ್ತಿದ್ದಾರೆಂದಾಗ ಸಹಜವಾಗಿಯೇ ಕೋಪ ಮಹೇಂದರ್ ಮೇಲೆ ತಿರುಗಿತು. ಶೃತಿ ಒಳ್ಳೆಯವಳು ಈ ಮಹೇಂದರ್ ಏನೋ ಮಾಡಿದ್ದಾನೆಂಬ ಮಾತು ಮನೆಯಲ್ಲಿ ಹರಿಯಿತು. ಹಿಂದೆಯೇ ಶೃತಿ ನೀಡಿದ್ದ ಕಾರಣ ಡೈವೋರ್ಸ್‌ಗೆ ಅಂಥ ಬಲವಾದ ಕಾರಣವಾಗಿರಲಾರದೆಂಬ ನುಡಿಯೂ ಕೇಳಿಬಂತು.
ಆದರೆ ಅದರ ನಂತರ ಮರು ಮದುವೆಯಾಗಲು ಈ ವಿಚ್ಚೇದನ ಅದೂಈಗಾಗಲೇ ಸಂಸಾರ ಹೊಂದಿರುವವನೊಂದಿಗೆ ಎಂದು ಕೇಳಿ ಬಂದಾಗ ಶೃತಿ ಎಂಬ ಆದರ್ಶ ಕುಸಿದುಬಿತ್ತು.
ಕೇವಲ ಆರ್ಥಿಕ ಪರಿಸ್ಥಿತಿ ಸರಿ ಇರಲಿಲ್ಲ ಎಂಬ ಕಾರಣ ಕೊಟ್ಟು ಗಂಡನಿಂದ ಬೇರೆಯಾಗಿ ಮತ್ತೊಂದು ಸಂಸಾರ ಒಡೆದು
ಮದುವೆಯಾಗುತ್ತಿರುವ ಶೃತಿ ಬಗ್ಗೆ ಇನ್ನಾವ ನವಿರು ಭಾವನೆಯೂ ಹುಟ್ಟುತ್ತಾ ಇಲ್ಲ. ಇನ್ನೆಂದು ಶ್ರುತಿ ಮನೆ ಮಗಳಾಗಿ ನಮ್ಮ ಕಲ್ಪನೆಯಲ್ಲಿಯೂ ಬರುವುದಿಲ್ಲ ಎಂದನಿಸುತ್ತದೆ.
ಸಿನಿಮಾ ಮಠಧೀಶರು ರಾಜಕೀಯದಲ್ಲಿರುವವರು, ಸಾರ್ವಜನಿಕರೊಂದಿಗೆ ಸದಾ ಒಡನಾಟದಲ್ಲಿರುವವರು ಯಾವಾಗಲೂ ಬಹಳ ಹುಷಾರಾಗಿ ಹೆಜ್ಜೆ ಇಡಬೇಕು . ಏಕೆಂದರೆ .ಇವರ ಹೆಜ್ಜೆಯನ್ನು ಗಮನಿಸಿತ್ತಿರುವವರ ಜೊತೆ ಅವರ ಹೆಜ್ಜೆಯ ಮೇಲೆ ಹೆಜ್ಜೆ ಇಡುವ ಜನರೂ ಇದ್ದಾರೆ. ಇದು ತಿಳಿಯದ ಸತ್ಯವೇನಲ್ಲ ಆದರೂ ಇದೇಕೆ ಹೀಗೆ ಎಂಬುದೇ ಪ್ರಶ್ನೆಯಾಗಿದೆ

3 comments:

 1. ರೂಪಾರವರೇ,
  ಶೃತಿಯಾದಳೇ ಅಪಶೃತಿ...??? ಹೌದು ಶೃತಿಯನ್ನು ಏರಿಳಿತಗಳ ನಡುವೆ, ಏಳು ಬೀಳುಗಳ ನಡುವೆ ಕಾಪಾಡಿ ಕೊಳ್ಳುವುದು ಸಾಧಕರಿಗೇ ಸಾಧ್ಯವಾಗಿಲ್ಲ ಇನ್ನು ನಮ್ಮ ನಟೀಮಣಿ ಶೃತಿ ಇದಕ್ಕೆ ಅಪವಾದಅಲ್ಲವಲ್ಲವೇ? ನಿಮ್ಮ ಭಾವ ಮಂಥನದ ದಿಶೆಯ ಆವರಣಕ್ಕೆ ಶೃತಿಯೇ ಯೇಕೆ...ನಮ್ಮ ನವರಸ ನಾಯಕ ಜಗ್ಗೇಶರು...ಅಬ್ಬಬ್ಬಾ..!! ಕುರ್ಚಿ, ಅಧಿಕಾರ ಎನ್ನುವುದು ಏಕೋ ಬಹು ವಿಷಪೂರಿತ ಅಂಟು ಜಾಡ್ಯ... ಸಾಮಾನ್ಯರು ಬಫೂನುಗಳು ಎಂದುಕೊಂಡಿದ್ದಾರೆಯೇ..?? ಜಗ್ಗಾಟ ಮಾಡಿ ಗೆದ್ದ ಜಗ್ಗೇಶ್ ತನಗೆ ನೆಲೆ ಕೊಟ್ಟ (ಅದುಯಾವುದೇ ಪಕ್ಷ ಆಗಿರಲಿ..ಅದು ಅಪ್ರಸ್ತುತ) ಪಕ್ಷ ಮತ್ತು ಮತ ನೀಡಿದವರನ್ನು ಜೋಕರ್ ಗಳೆಂದು ಎಣಿಸಿ ರಾಜಿನಾಮೆ ಕೊಟ್ಟರು..ಮತ್ತೆ ಚುನಾವಣೆ ಅಂದ್ರೆ ಖರ್ಚು..ಯಾರಪ್ಪನ ಮನೇದು..?? ನಮ್ಮ ನಿಮ್ಮ ತೆರಿಗೆಯಿಂದ ಬಂದದ್ದಲ್ಲವೇ? ನಾಡೀನ ಅಭಿವೃದ್ಧಿಗೆ ಸೇರಬೇಕಾದ ಹಣ ದುಂದು ಎನ್ನುವಂತೆ ಈ ಹೇರಿಕೆ ಚುನಾವಣೆಗೆ ಖರ್ಚಾಗುತ್ತೆ...ವಿಪರ್ಯಾಸ ಅಲ್ಲವೇ..??/

  ReplyDelete
 2. ಜಗ್ಗೇಶ್‌ರವರನ್ನು ಸಿನಿಮಾದಲ್ಲೇ ಸಹಿಸಲಾಗಲಿಲ್ಲ . ಇನ್ನು ನಿಜಜೀವನದಲ್ಲಿ ನಾಯಕರಾಗೋದು ಇನ್ನ್ಯಾವ ರೀತಿಯಲ್ಲಿ ಹಿಡಿಸುತ್ತೆ. ಜಗ್ಗೇಶ್‌ನ ಎಂದಿಗೂ ಮೆಚ್ಚಲಿಲ್ಲ . ಆದರೆ ಶೃತಿಯ ರೀತಿ ಬೇರೆ ಅವರು ಅಭಿನಯಿಸಿದ ಪಾತ್ರಗಳಿಗೂ ಅವರ ನಿಜ ಜೀವನದ ನಡೆಗೂ ತಾಳೆಯೇ ಆಗುತ್ತಿಲ್ಲ.
  ಈ ಲೇಖನ ಬರೆದ ಮೇಲೆ ನನಗೇಕೆ ಅವರ ನಡೆಯ ಉಸಾಬರಿ ಎಂದನಿಸಿತಾದರೂ ಲೇಖನ ಅಳಿಸಲು ಮನಸ್ಸು ಬರಲಿಲ್ಲ.
  ಹಾಗೆಯೇ ಇಟ್ಟಿದ್ದೇನೆ.

  ReplyDelete
 3. ನೀವೂ ಸಾರ್ವಜನಿಕ ಜೀವನದ ವ್ಯಕ್ತಿಗಳ ನಡೆಯಿಂದ ಪ್ರಭಾವಿತರಾಗುತ್ತೀರಿ ಎನ್ನೋದಂತೂ ನಿಜ ಅಲ್ಲವೇ..?
  ಇಲ್ಲಿ ನಾನು ಜಗ್ಗೇಶ್ರನ್ನು ಇದೇ ಕಾರಣಕ್ಕೆ ಬಳಸಿದ್ದು ಉದಹರಿಸಲು, ಹೆಣ್ಣಾಗಿ ಶ್ರೂತಿ ನಿಮ್ಮಲ್ಲಿ ಪ್ರತಿಕ್ರಿಯೆಗೆ ಕಾರಣವಾಗಿರಬಹುದು..anyway, ನಾವು ತೆಗೆದುಕೊಳ್ಳಬೇಕಾದ್ದು ಇಷ್ಟೇ..ಸಿನಿಮಾಗೂ ನಿಜ ಜೀವನಕ್ಕೂ ಅಜ-ಗಜಾಂತರ...ನಿಮ್ಮ ಭಾವನಾ ತರಂಗಗಳ frequency ನನ್ನ್ ಅನ್ನಿಸಿಕೆಗೂ ಹೊಂದುತ್ತವೆ ಅದ್ಕ್ಕೇ ಮತ್ತೆ ಪ್ರಿತಿಕ್ರಿಯಿಸಿದೆ...
  ಜಲನಯನ ನನ್ನ ಬ್ಲಾಗ್..ಬನ್ನಿ ಒಮ್ಮೆ ನಮ್ಮ ಗೂಡಿಗೂ...

  ReplyDelete

ರವರು ನುಡಿಯುತ್ತಾರೆ