Monday, May 11, 2009

"ಆವರಣ " ಗೋ(ಘೋ)ರಿಗಳಲ್ಲಡಗಿದ ಸತ್ಯದ ಅನಾವರಣ

ಎಲ್ಲಿ ನೋಡಿದರೂ ಆವರಣ ಪುಸ್ತಕದ ಬಗ್ಗೆಯೇ ಚರ್ಚೆ . ಬಹಳ ದಿನದಿಂದ ಓದಬೇಕೆಂದು ಅನಿಸಿದ್ದರೂ ಸಮಯದ ಕೊರತೆಯಿಂದಲೋ ಅಥವ ಅದೊಂದು ಬಗೆಯ ಪೂರ್ವಗ್ರಹಪೀಡಿತ ಲೇಖನವಿರಬಹುದೆಂಬ ಭಾವನೆಯೋ ಅದನ್ನು ಅಲ್ಲಲ್ಲೇ ತಡೆಯುತ್ತಿತ್ತು.
ಭೈರಪ್ಪನವರ ಮಂದ್ರ ಓದಿದಾಗಿನಿಂದ ಅವರ ಲೇಖನದ ಬಗ್ಗೆ ಅಂತಹ ನಿರೀಕ್ಷೆ ಏನಿರಲಿಲ್ಲ.
ಹೀಗೆ ಶನಿವಾರ ಸಪ್ನ ಬುಕ್ ಸ್ಟಾಲ್‌ಗೆ ಹೋಗಿ ಬ್ರೌಸ್ ಮಾಡುತ್ತಿದ್ದಾಗ ಕಣ್ಣಿಗೆ ಬಿತ್ತು. ತೆಗೆದು ಮೊದಲೆರೆಡು ಪುಟಗಳನ್ನು ತೆರೆದು ಓದಿದೆ. ಅಮೀರನ ಮನಸ್ಥಿತಿಯಿಂದ ಶುರುವಾಗಿದ್ದು ರಜಿಯಾ ಮೂಲತ್: ಹಿಂದೂವಾಗಿದ್ದು ಕುತೂಹಲ ಹುಟ್ಟಿಸಿತು. ಕೊನೆಯ ಪುಟಗಳಲ್ಲಿ ಆಧಾರಿತ ಪುಸ್ತಕಗಳನ್ನು ಪಾತ್ರದ ಮೂಲಕವೇ ಹೇಳಿಸುವ ರೀತಿಯಂತೂ ಮನ ಸೆಳೆಯಿತು. ಆಗಲೆ ಕೊಂಡು ಕೊಂಡೆ
ಎರೆಡು ದಿನದಿಂದ ಎರೆಡೆರೆಡು ಸಲ ಓದಿದ್ದೇನೆ.
ಇನ್ನೂ ಅರ್ಥವಾಗದ ಸಂಗತಿಗಳಿವೆ.
ಮನಸಿಗ್ಗೆ ಆಘಾತಕಾರಿಯಾಗುವ ಸಂಗತಿಗಳನ್ನು ಭೈರಪ್ಪನವರು ತಮ್ಮ ಕಥಾನಾಯಕಿಯಿಂದ ಬರೆಸುವ ಕಾದಂಬರಿಯ ಕಥಾನಾಯಕನಿಂದ ಹೇಳಿಸುವ ರೀತಿಯಂತೂ ಅದ್ಭುತ
ಓದುತ್ತಿದ್ದಂತೆ ಕೆಲವೊಮ್ಮೆ ಕಣ್ಣಲ್ಲಿ ನೀರು ಬಂತು. ಜೊತೆಗೆ ಬುದ್ದಿ ಜೀವಿಗಳೆಂದು ಹೇಳಿಕೊಂಡು ಇತಿಹಾಸವನ್ನು ತಿರುಚಿ ವಿಕೃತ ವಾಗಿ ನಲಿಯುವ ಪ್ರೊಫೆಸರ್ ಶಾಸ್ತ್ರಿಗಳಂತಹವರು ಈಗ ಎಲ್ಲೆಡೆ ಕಾಣುತ್ತಿದ್ದಾರೆ ಎಂಬುದು ನೆನಪಿಗೆ ಬಂದರಂತೂ ಕೋಪ ಉಕ್ಕೇರುತ್ತದೆ.
ಮುಸ್ಲಿಂ ಮೂಲಭೂತವಾದಿಯಾದರೂ ಸತ್ಯದ ಬೆಳಕಿಗೆ ತಲೆಯೊಡ್ಡುವ ಅಮೀರ ಕೆಲವೊಮ್ಮೆ ಉತ್ತಮವಾಗಿ ಕಾಣುತ್ತಾನೆ.
ಎಲ್ಲಕ್ಕಿಂತಲೂ ರಜಿಯಾ ಆದ ಲಕ್ಷ್ಮಿಗೆ ತನ್ನ ಮೂಲ ಧರ್ಮದ ಅನ್ವೇಷಣೆಗೆ ತೊಡಗುವುದು ಅಚ್ಚರಿಯಾಗಿ ಕಾಣುತ್ತದೆ. ಕಾದಂಬರಿಯ ಉದ್ದಕ್ಕೂ ಆವರಿಸಿಕೊಂಡು ಲಕ್ಷ್ಮಿ ನನ್ನಲ್ಲಿ ಒಂದಾಗಿ ನಾನೇ ಈ ಎಲ್ಲ ಘಟನೆಗಳಿಗೆ ಸಾಕ್ಶಿಯಾದನೇನೋ ಅನ್ನಿಸುವಷ್ಟು ನೈಜವಾಗಿ ಭೈರಪ್ಪನವರು ಬರೆದಿದ್ದಾರೆ.
ಇತಿಹಾಸ ಕುರಿತ ಲೇಖನ ಎಂದರೆ ಅದು ಬೇಜಾರಿನ ಸರಕು ಎನ್ನುವ ನನ್ನನಿಸಿಕೆ ಆವರಣ ಓದಿ ಸುಳ್ಳಾಯಿತು. ಜೊತೆಗೆ ಇನ್ನಷ್ಟು ಈ ಬಗ್ಗೆ ಓದಬೇಕೆಂಬ ಹಂಬಲವೂ ತುಂಬಿಸಿತು
ಈ ಬಗ್ಗೆ ಇನ್ನೂ ಬರೆಯುವುದಿದೆ.
ಕಥಾವಸ್ತುವಿನ ಬಗ್ಗೆ. ಬಾದಶಾಹರ ಗುಲಾಮರ ಬಗ್ಗೆ.

6 comments:

  1. Thanks for joining my blog. keep visiting. your write-up on Avarana is realistic. keep it up

    ReplyDelete
  2. nimma maatu aksharasaha nija....bhairappanavara aavarana nanage tumbaa hidisitu...

    ReplyDelete
  3. ರೂಪವೇ ನನ್ನೀ ತೆರೆದ ಮನ
    ಮನಸಿನ ಮಾತು ಹೊರಗೆ ಬಂದರೆ ಮನದ ದುಗುಡ ಕಡಿಮೆಯಾಗುತ್ತದೆ. ಸಂತೋಷ ಹೆಚ್ಚಾಗುತ್ತದೆ ಎಂದು ನಂಬಿರುವಳು ನಾನು ಹಾಗಾಗಿ ನನ್ನ ಮನದಲ್ಲಿ ಮೂಡಿದ ಭಾವನೆಗಳು ಇಲ್ಲಿ ಪ್ರತ್ಯಕ್ಷವಾಗುತ್ತವೆ

    ರೂಪ ಅವರೇ
    ನಿಮ್ಮ ಗೃಹಪುಟದ ಮೇಲಿನ ಸಾಲುಗಳು ಹಿನ್ನೆಲೆ ಕಾರಣ ಕಾಣುವುದಿಲ್ಲ, ಬದಲಿಸಿ...
    ನನ್ನ ಸಲಹೆ

    ReplyDelete
  4. ರೂಪರವರೇ,
    ನಿಮ್ಮ ಬ್ಲಾಗಿನ ಪುಟಗಲನ್ನು ತಿರುವುತ್ತಿದ್ದೆ...ಚನ್ನಾಗಿ ಬರೆಯಿತ್ತೀರಿ, ಬರೆಯುತ್ತಿರಿ ಎಂದೇ ನನ್ನ ಹಾರೈಕೆ
    ಹಲವಾರು ವೈಚಾರಿಕ ವಿಷಯಗಳಿಗೆ ಅಯಾಮಗಳನ್ನು ಕೊಟ್ಟಿದ್ದೀರಿ, ಕೆಲವು ನವಿರು ಕಚಗುಳಿಗಳು, ಕೆಲವು ನಿದ್ದೆಯನ್ನೋಡಿಸುವ ಗುದ್ದುಗಳು, ಕೆಲವು ನಮ್ಮ ಕೂದಲನ್ನು ನಾವೇ ಕಿತ್ತುಕೊಳ್ಳುವಂತೆ ಮಾಡುವ ಪೋಸ್ಟ ಗಳು....ನಿಮಗೆ ಬರವಣಿಗೆ ಚನ್ನಾಗಿ ಹತ್ತಿದೆ...

    ಈ ಕೆಳಕಂಡ ವಿಷಯಯದ ಬಗ್ಗೆ ನನ್ನ ಅನಿಸಿಕೆ ತಿಳಿಸಬೇಕು ಅನ್ನಿಸ್ತು ತಿಳಿಸ್ತಿದ್ದೀನಿ.

    ಅತ್ಯಾಚಾರಕ್ಕೆ ಕಾರಣಗಳು- ಹೆಣ್ಣಾಗಿ ಸ್ವವಿಶ್ಲೇಷಣೆ ಹಲವು ಹೆಣ್ನುಗಳಿಗೆ ಮಾರ್ಗದರ್ಶನವಾಗುವುದಂತೂ ಸತ್ಯ, ಮನಬಿಚ್ಚಿ ವಾಸ್ತವಗಳನ್ನು ವಿವರಿಸಿದ್ದೀರಿ. ನಮ್ಮ ಆಚಾರ, ವಿಚಾರ, ಹೆಣ್ಣಿನ ಬಗ್ಗೆ ಬೆಳೆದು ಬಂದಿರುವ ಮನೋಭಾವಗಳು, ಗಂಡಿನ ಮನಸ್ಥಿತಿ ಇತ್ಯಾದಿ ನಿಮ್ಮ ಕಾರಣಗಳಿಗೆ ಪೂರಕವಗುವ ಸಾಧ್ಯತೆ ಹೆಚ್ಚು. ನಿಮ್ಮ ಮಾತು ಸತ್ಯ, ಹೆಣ್ಣು ಮನಬಿಚ್ಚಿ ಮಾತನಾಡಿದರೆ ಅಹ್ವಾನ- ಎನ್ನುವುದು ಮನಸ್ಥಿತಿಗನುಗುಣವಾಗಿರುತ್ತದೆ, ಬಹುಶಃ ಈ ಮನಸ್ಥಿತಿ ಶೇ.ಎಂಭತ್ತು ಗಂಡಸರಲ್ಲಿ ಇರುತ್ತದೆ ಎನ್ನುವುದು ನನ್ನ ಅನ್ನಿಸಿಕೆ, ಈ ಮನಸ್ಥಿತಿಯ ರೂಪಾಂತರ ಸಭ್ಯತೆಯತ್ತ ತಿರುಗುವುದಕ್ಕೆ ಹೆಚ್ಚು ಸಮಯ ಹಿಡಿಯಲಾರದು, ಅಂತಹ ಆವರಣಕ್ಕೆ ಬಹುಶಃ ಆ ಎಂಭತ್ತರಲ್ಲಿ ಮತ್ತೆ ಎಂಭತ್ತರಷ್ಟು ಗಂಡಸರು ಬಂದುಬಿಡುತ್ತಾರೆ...ಅಂದರೆ ಅತ್ಯಾಚಾರದ ಭಯ ಆ ಉಳಿದ ಹದಿನಾರು ಗಂಡಸರಿಂದ. ಅವರಲ್ಲಿ ಸುಮಾರು ಅರ್ಧದಷ್ಟು ಹೆಣ್ಣು ಸಶಕ್ತಳು ಅಥವಾ ಬುದ್ಧಿವಂತೆಯಾದರೆ ಹಿಮ್ಮೆಟ್ಟುತ್ತಾರೆ, ಬಹುಶಃ ಇಂತಹ ಮಂದಿಯನ್ನು ಹೆಣ್ಣು ಸ್ವಾಭಾವಿಕವಾಗಿಯೇ ಬೇಗ ಗುರುತಿಸಬಲ್ಲಳು, ಹಾಗಾಗಿ ಮುಂಜಾಗರೂಕಳಾಗನಹುದು. ಅತಿ ಕಾಮುಕರು, ಬಲಾತ್ಕಾರಿಗಳು ಬಹಳ ವಿರಳ, ಇಂತಹವರಿಂದಲೇ ಬಲಾತ್ಕಾರ ಅತ್ಯಾಚಾರಗಳು ನಡೆಯುವ ಸಾಧ್ಯತೆ ಹೆಚ್ಚು.
    ಚನ್ನಾಗಿದೆ ನಿಮ್ಮ ಸಮ್ಯೋಚಿತ ಬರಹ ರೂಪಾರವರೇ, ಮುಂದುವರೆಸಿ ಭಾವ ಮಂಥನ

    ReplyDelete
  5. ಧನ್ಯವಾದಗಳು ರೂಪ ನಿಮ್ಮ ಈ ಲೇಖನ ಬಹಳ ಚೆನ್ನಾಗಿದೆ ಕೆಲವೊಮ್ಮೆ ನಾವು ಯಾವುದು ಚೆನ್ನಾಗಿಲ್ಲ ಓದಲು ಅರ್ಥವಾಗುವುದಿಲ್ಲವೆಂದು ಕೊಳ್ಳುತ್ತೇವೋ ಅಂತಹ ಪುಸ್ತಕಗಳು ಮನದಲ್ಲೇ ಉಳಿಯುವಂತ ಅರ್ಥ ಕಲ್ಪಿಸುತ್ತವೆ.
    ಒಳ್ಳೆಯ ಬರಹ ಹೀಗೆ ಮುಂದುವರಿಸಿ.

    ReplyDelete

ರವರು ನುಡಿಯುತ್ತಾರೆ