ಮೊಬೈಲ್ ಟ್ರಿಣ್ ಟ್ರಿಣ್ ಎಂದನ್ನುತ್ತಿದ್ದಂತೆಯೇ ವಿಕಾಸನ ಕಣ್ಣುಗಳು ಆ ಹೆಸರನ್ನು ಓದಿತು .ಶೈಲಾ .... ಇದು ಬೆಳಗಿನಿಂದ ಹತ್ತನೇ ಸಾರಿ.
"ಯಾಕೆ ಮತ್ತೆ ಮತ್ತೆ ಕಾಲ್ ಮಾಡುತ್ತಿದ್ದಾಳೆ . ಇವಳು?"ಪ್ರಶ್ನೆಸಿಕೊಂಡವನಿಗೆ ಉತ್ತರ ಸಿಗಲಿಲ್ಲ
ಕಾಲ್ ರಿಸೀವ್ ಮಾಡಿದ
"ಏನು ಶೈಲಾ?" ಅವನಿಗರಿವಿಲ್ಲ್ದದಂತೆಯೇ ಅವನ ದನಿಯಲ್ಲಿ ಬೇಸರ ಕಾಣಿಸಿತು
"ವಿಕಿ . ಊಟ ಆಯ್ತಾ"ಅಲ್ಲಿಂದ ಅವಳ ದನಿ ಏನೋ ಕೇಳಲೇ ಬೇಕೆ ಎಂಬುದಕ್ಕೆ ಕೇಳಿದ್ದು ವಿಕಾಸನಿಗೆ ರೇಗಿತು.
"ಹ್ಯಾವ್ ಯು ಗಾನ್ ಮ್ಯಾಡ್?. ಇದು ನಾಲ್ಕ್ಕು ಘಂಟೆ ಊಟದ ಸಮಯಾನಾ? ಸುಮ್ ಸುಮ್ನೆ ಕಾಲ್ ಮಾಡಿ ನನ್ನ ಡಿಸ್ಟರ್ಬ್ ಮಾಡಬೇಡ ಏನ್ ಬೇಕು ಅಂತ ಹೇಳು " ವಿಕಾಸ ದನಿಯನ್ನು ಏರಿಸಿದ್ದ ಪಕ್ಕದ ಕ್ಯಾಬಿನ್‌ನಿಂದ ಸಿಮಿ ಎದ್ದು ನಿಂತು ನೋಡಿದ್ದು ಕಾಣಿಸಿತು. ಮುಜುಗರವಾಯ್ತು.
"ಸಾರಿ ವಿಕಿ."
ಫೋನ್ ಆಫ್ ಮಾಡಿದ ಸದ್ದು ಕೇಳಿತು.
ಸಿಮಿ ನೋಡುತ್ತಲೇ ನಿಂತಿದ್ದಳು ಮೊದಲೇ ತನ್ನ ಜೀವನ ನಗೆ ಪಾಟಲಾಗಿದೆ. ಇನ್ನು ಇದು ಬೇರೆ.
ವಿಕಾಸ ತಲೆ ತಗ್ಗಿಸಿದ
ಇತ್ತ
ಶೈಲಾಳ ಕಣ್ಣಲ್ಲಿ ನೀರು ಮುತ್ತುಗಳಂತೆ ಉದುರುತ್ತಿತ್ತು. ಕಂಪ್ಯೂಟರ್ ಕೀ ಬೋರ್ಡ್ ಮೇಲೆ ಬೀಳುತ್ತಿದ್ದುದು ಅವಳ ಗಮನಕ್ಕೆ ಬರಲಿಲ್ಲ.
ಯಾಕೆ ಏನಾಗಿದೆ ತನಗೆ . ಇದು ಸರೀನಾ ? ಮತ್ತೆ ಮತ್ತೆ ಏಕೆ ಅವ ನೆನಪಾಗುತ್ತಿದ್ದಾನೆ . ಮರೆತೆ ಹೋಗುತ್ತೇನೆಂದು ಎದ್ದು ಬಂದಿದ್ದಲ್ಲವೇ ತಾನು ?. ಆ ಬಂಧ ಬೇಡವೆಂದು ತಾಳಿಯ ಸಮೇತ ಕಳಚಿಟ್ಟವಳಲ್ಲವೇ ತಾನು?
ವಿಕಾಸನ ಜೊತೆಯಲ್ಲಿ ಜೀವನವೇ ಸ್ವರ್ಗವಾಗಿದೆ . ಮತ್ತೇಕೆ ಅವನ ನೆನಪು ಬೇಡವೆಂದರೂ ಒದ್ದೊದ್ದು ಬರುತಿದೆ?.
"ಪ್ಲೀಸ್ ಕಮ್ ಆನ್‌ಲೈನ್ " ಅದು ರಾಬರ್ಟನ ಮೇಲ್ ಟೊರೋಂಟೋದ ಕ್ಲೈಂಟ್ ಅವನು.
ಕೂಡಲೇ ಚಾಟಿಂಗ್‌ಗೆ ಸ್ವಿಚ್ ಮಾಡಿದಳು. ಕಣ್ಣಲ್ಲಿನ ನೀರಿನ್ನೂ ಆರಿರಲಿಲ್ಲ.
******************************
ಮೀಟಿಂಗ್ ಮುಗಿಸಿ ಬಂದು ಉಸ್ಸೆಂದು ಕುಳಿತ ವಿಕಾಸನ ದೃಷ್ಟಿ ಆಯಾಚಿತವಾಗಿ ಮೊಬೈಲ್ ಮೇಲೆ ಬಿತ್ತು.
ಆಗಿನಿಂದ ಯಾವುದೇ ಕಾಲ್ ಮಾಡಿಲ್ಲ. ಪಾಪ ಎನಿಸಿತು ಶೈಲಾ.ಛೆ ತಾನೇಕೆ ಇಷ್ಟೊಂದು ಗಡುಸಾಗಿ ವರ್ತಿಸಿದೆ. ಎಷ್ಟು ನೋವಾಯಿತೋ ಏನೋ
ಪಾಪ ಏನ್ ಹೇಳಬೇಕಿತ್ತೋ. ನನಗಾಗಿ ಎಲ್ಲವನ್ನೂ ಎಲ್ಲರನ್ನೂ ತೊರೆದು ಬಂದವಳು . ತನ್ನ ಪ್ರಾಣವ ನ್ನೇ ನನ್ನ ಪ್ರೀತಿಗೆ ಒತ್ತೆ ಇಟ್ಟವಳು. ನನಗಲ್ಲದೆ ಇನ್ನಾರಿಗೆ ಫೋನ್ ಮಾಡಬೇಕು ಅವಳು.
ಶೈಲಾಳಿಗೆ ಕಾಲ್ ಮಾಡಿದ.
ಫೋನ್ ರಿಸೀವ್ ಮಾಡಿದರೂ ಅತ್ತ ಕಡೆಯಿಂದ ಹಲೋ ಬರಲಿಲ್ಲ
"ಹಲೋ ಏಕೆ ಚಿನ್ನ? ಕೋಪಾನಾ. ಸಾರಿ ಕಣೋ ತುಂಬಾ ಬ್ಯುಸಿ ಇದ್ದೆ." ವಿಕಾಸನ ಮಾತಿಗೆ ಪ್ರತಿ ಉತ್ತರ ಬರಲಿಲ್ಲ.
ಬರೀ ನಿಟ್ಟುಸಿರು
ಆವನಿಗೆ ಗೊತ್ತು
ಅವಳು ಹಾಗೆಲ್ಲಾ ಸುಲಭಕ್ಕೆ ಕರಗುವಳಲ್ಲ ಎಂದು. ಆದರೂ ಅದು ಸ್ವಲ್ಪ ಹೊತ್ತು ಎಂಬುದೂ ಗೊತ್ತಿತ್ತು
ಫೋನ್ ಕಟ್ ಮಾಡಿದಳು.
ನಗುತ್ತಾ ಮತ್ತೆ ಫೋನ್ ಮಾಡಿದ.
ಈ ಸಲ ಶೈಲಾ ರಿಸೀವ್ ಮಾಡಲಿಲ್ಲ.
ಮನೆಗೆ ಹೋಗಿ ಮಾತಾಡೋಣ ಎನಿಸಿತು ವಿಕಾಸ್‌ಗೆ
ಮತ್ತೆ ಡಯಲ್ ಮಾಡುವ ಗೋಜಿಗೆ ಹೋಗಲಿಲ್ಲ.
**********************
ಶೈಲಾಗೆ ನಿಜಕ್ಕೂ ವಿಕಾಸನ ಮೇಲೆ ಕೋಪವಿರಲಿಲ್ಲ ಇದ್ದುದೆಲ್ಲಾ ತನ್ನ ಮೇಲೇಯೇ. ತನ್ನ ಬದಲಾಗುತ್ತಿರುವ ಮನಸಿನ ಮೇಲೆ. ತನ್ನ ಭಾವನೆಗಳ ಮೇಲೆ. ತನ್ನ ವರ್ತನೆಯ ಮೇಲೆಯೇ.
ಇದನ್ನು ಯಾರಿಗಾದರೂ ಹೇಳಿದರೆ ಒಂದೋ ಹುಚ್ಚಿ ಎನ್ನುತ್ತಾರೆ ಅಥವ ಬೇರಿನ್ನಾದರೂ ರೋಗದ ಹೆಸರು ಹೇಳಬಹುದು .
ತಲೆಯಮೇಲೆ ಹೊಡೆದುಕೊಂಡು ಮತ್ತೆ ಕೆಲಸದಲ್ಲೀ ತಲ್ಲೀನಳಾದಳು . ಆದರೂ ಆಗಾಗ ಅವನು ಮನು ಮತ್ತೆ ಮತ್ತೆ ನೆನಪಿಗೆ ಬರುತ್ತಿದ್ದಾನೆ.
************************************
ಕಂಪನಿ ಬಿಟ್ಟೊಡನೆ ಓಡೋಡಿ ಶೈಲಾಳನ್ನು ನೋಡುವ ಆಸೆ ಅಧಿಕವಾಗಿತ್ತು. ವಿಕಾಸ್ ಬೈಕ್ ಸ್ಟಾರ್ಟ್ ಮಾಡುತ್ತಿದ್ದಂತೆ ಪಕ್ಕದಲ್ಲಿದ್ದ ಕಾರ್ನಲ್ಲಿ ಮನು ಕಾಣಿಸಿದ . ಅವನು ವಿಕಾಸನೆಡೆಗೆ ನೋಡುತ್ತಲೇ ಇದ್ದಂತೆ ಕಾರ್ ಮುಂದೆ ಹೋಗಿ ಮರೆಯಾಯಿತು. ತಲೆ ಎತ್ತುವ ಧೈರ್ಯವಾಗಲಿಲ್ಲ ವಿಕಾಸ್‌ಗೆ. ಒಂದು ರೀತಿಯ ಅಪರಾಧಿ ಪ್ರಜ್ನೆ ಕಾಡತೊಡಗಿತು. ಮನುವಿನ ನೋಟ ಇವನನ್ನು ಇರಿದಂತೆ ನೋವಾಗತೊಡಗಿತು. ಹೃದಯ ಗೊತ್ತಿಲ್ಲದಂತೆ ಅಧೀರವಾಗತೊಡಗಿತು. ಹಾಗೆಯೇ ಬೈಕ್ ಓಡಿಸುತ್ತಾ ಬಂದಂತೆ ಮನೆಗೆ ಹೋಗುವ ಮನಸು ದೂರ ಹೋಯಿತು. ಪಕ್ಕದಲ್ಲಿ ಕಂಡ ಕಾಫಿ ಡೇಗೆ ನುಗ್ಗಿ ನಿಟ್ಟುಸಿರು ಬಿಡುತ್ತಾ ಕೂತ. ತಲೆ ಧಿಮ್ಮೆಂದಿತು. ಹಾಗೆ ತಲೆ ಒತ್ತಿ ಹಿಡಿದು ಕಣ್ಣು ಮುಚ್ಚಿ ಕುಳಿತ . ಕಣ್ಣ ಮುಂದೆ ನೂರೆಂಟು ಚಿತ್ರಗಳು ತಲೆಯಲ್ಲಿ ನೂರಾರು ಭಾವಗಳು ಕುಣಿಯತೊಡಗಿದವು.
******************************
ಕಾರ್ ಮುಂದೆ ಹೋಗುತ್ತಿದ್ದರೂ ಮನುವಿನ ನೋಟ ಹಿಂದೇಯೇ ಇತ್ತು .
ಎಲ್ಲಾದರೂ ಶೈಲಾ ಕಾಣಬಹುದೆನ್ನುವ ಕಾತುರತೆ ಅದು. ಆದರೆ ಗೊತ್ತು ಅವಳು ಈಗಾಗಲೇ ಈ ಕಂಪನಿ ಬಿಟ್ಟು ಬೇರೊಂದು ಕಡೆ ಸೇರಿದ್ದಾಳೆಂದು. ಅವಳು ಮಾಡಿದ ಅಪಮಾನ ಅವನಿಗೆಂದೂ ಅಪಮಾನವೆನಿಸಲೇ ಇಲ್ಲ. ಸಣ್ಣ ಮಗುವು ಚಂಡಿ ಹಿಡಿದಂತೆ ಬಾಲಿಷ ವರ್ತನೆ ಅದು.
ಬಳಿಯಲ್ಲಿದ್ದ ಸಿರಿಯನ್ನು ಅಪ್ಪಿ ಹಿಡಿದ . ಪುಟ್ಟ ಮಗು ಅಮ್ಮನ ಬಳಿಯಲ್ಲಿ ಇರಬೇಕಾದ್ದು. ಆದರೆ ಮಗುವಿನಂತಹ ಅಮ್ಮ ರಚ್ಚೆ ಹಿಡಿದು ಗೊಂಬೆ ಬದಲಾಯಿಸಿದಂತೆ ಸಂಗಾತಿಯನ್ನು ಬದಲಿಸಿಕೊಂಡಾಗ ಸಿರಿ ತಾನೆ ಏನು ಮಾಡುತ್ತಾಳೆ? ಅರಿವಿಲ್ಲದಂತೆ ಕಣ್ಣು ಒದ್ದೆಯಾಯ್ತು
ಸಿರಿ ತನ್ನ ಪುಟ್ಟಬೆರಳಿನಿಂದ ಅಪ್ಪನ ಕೆನ್ನೆಯ ಮೇಲೆ ಜಿನುಗಿದ್ದ ಹನಿಯನ್ನು ಒರೆಸಿತು.
ಅವಳ ಹಣೆಗೊಂದು ಹೂಮುತು ಕೊಟ್ಟು ಎದೆಗೊರಗಿಸಿಕೊಂಡ.
ಕನ್ನಡಿಯಲ್ಲಿ ಈ ದೃಶ್ಯ ನೋಡಿ ಡ್ರೈವರ್ ರಾಮುವಿನ ಕಂಗಳು ತುಂಬಿದವು.
****************************************************
ಶೈಲಾ ಮನುವಿಗೆ ಸೋದರತ್ತೆಯ ಮಗಳು ಇಬ್ಬರ ವಯಸಿನ ಅಂತರ ಹನ್ನೆರೆಡು ವರ್ಷಗಳು . ಶೈಲಾ ಮನುವಿನ ಮಡಿಲಲ್ಲಿಯೇ ಬೆಳೆದವಳು. ತಾಯಿ ಇಲ್ಲದ ಮಗುವೆಂದು ಸೋದರತ್ತೆ ಬಹಳ ಪ್ರೀತಿಯಿಂದ ನೋಡಿಕೊಂಡಿದ್ದರು. ಅದಕ್ಕಿಂತ ಹೆಚ್ಚಾಗಿ ಮನು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದ.
ರೆಪ್ಪೆಯಂತೆ ಕಣ್ಣಿನಂತೆ ಜೋಪಾನ ಮಾಡಿದ್ದ. ಅವಳೂ ಅಷ್ಟೇ ಮನುವಿನ ಸಾಂಗತ್ಯದಲ್ಲಿ ತನ್ನ ತಾಯಿ ಇಲ್ಲದ ನೋವನ್ನು ಮರೆಯುತ್ತಿದ್ದಳು
*********************************** ಇನ್ನೂ ಇದೆ .*********************
ಸ್ವಾರಸ್ಯಕರವಾಗಿದೆ; ಮುಂದುವರೆಯಲಿ.
ReplyDeleteಕುತೂಹಲಕಾರಿಯಾಗಿದೆ....
ReplyDeleteಮುಂದುವರೆಸಿರಿ....
ಅಭಿನಂದನೆಗಳು...
ನನಗೆ ಎಳೆಗಳನ್ನು ಬಿಡಿಸಿ ಹಿಡಿದು ವಿಮರ್ಶಿಸಲಾಗುತ್ತಿಲ್ಲ, ಎಕಾಗ್ರತೆಯ ಕೊರತೆಯೇನೋ..?? ಇನ್ನೂ ಮುಂದುವರೆಸಿ..ಬಹುಶಃ ನಂತರ ಎಲ್ಲ ಸ್ಪಷ್ಠವಾಗಬಹುದು.
ReplyDelete