Wednesday, June 15, 2011

"ರಮ್ಯಾ ನಾನು ಹೇಳಿದ ಹುಡುಗ ಅವನೇ ಕಣೇ"ಅವಳ ಕಣ್ಣಲ್ಲಿ ಮಿಂಚು, ನಾಚಿಕೆ ಎಲ್ಲವೂ ಒಂದೆಡೆ ಮೇಳೈಸಿದ್ದವು
ಅದನ್ನೆ ನೋಡುತ್ತಾ ಬೆರಗಾದೆ ನಾನು.
ಅಬ್ಬಾ ಈಪ್ರೀತಿ ಎನ್ನೋದು ಇಷ್ಟೊಂದು ನೂತನ ಅನುಭವವೇ
ಎಂದಿಗೂ ಪ್ರ್ತೀತಿಯ ಬಲೆಯಲ್ಲಿ ಬಿದ್ದಿರದ ನನಗೆ ಅದೊಂದು ಹುಚ್ಚು ಎನಿಸಿದ್ದಿರಲಿಕ್ಕೂ ಸಾಕು

ಆದರೂ ಅಂದೇ ಪ್ರೀತಿಯ ಬಗ್ಗೆ ಗೌರವ ಬೆಳೆದಿತ್ತು. ಅಂಥ ಪ್ರೀತಿಯ ಅನ್ವೇಶಣೆ ಶುರುವಾಗಿದ್ದು ಅಂದೇ ಎನಿಸುತ್ತದೆ
ಒಮ್ಮೊಮ್ಮೆ ಆ ಪ್ರೀತಿಯ ಸವಿಯನ್ನು ಸವಿಯುವ ಆಸೆಯಾಗುತ್ತಿದ್ದರೂ , ಏಕೋ ಯಾವ ಪ್ರೀತಿಗೂ ಬೀಳಲು ಭಯವಾಗುತ್ತಿತ್ತು
ಆ ಕಿರಣ, ವಿಕಾಸ್ ನಮ್ಮ ಮ್ಯಾತ್ಸ್ ಸರ್ ಎಲ್ಲರೂ ತಮ್ಮ ಆಸೆಯನ್ನು ಹೇಳಿಕೊಂಡಿದ್ದರೂ ಓಡಿ ಹೋಗುತ್ತಿದ್ದೆ.

ಅಂತಹ ನನಗೆ ಆತ ಸಿಕ್ಕ ಮೇಲೆ ಪ್ರಪಂಚದ ಪ್ರೀತಿಗಳಲ್ಲವೂ ಅವನಲ್ಲೆ ಅಡಗಿವೆ ಎಂದನಿಸಲಾರಂಭಿಸಿತು
ನಾ ಬಯಸುತ್ತಿದ್ದೆ ಸೆಕ್ಯೂರ್ ಫೀಲಿಂಗ್,ಪ್ರೀತಿಯ ಅರಮನೆಯಲ್ಲಿ ನನ್ನ ಬಚ್ಚಿಡಬಲ್ಲಂತಹ ಅವನ ಗೆಳೆತನ, ಇಡೀ ಬದುಕನ್ನೇ ಅರಳಿಸಬಲ್ಲಂತಹ ಅವನ ನಗೆ ಅರಳು ಕಂಗಳಲ್ಲಿ ಕಾಣುತ್ತಿದ್ದ ಮೆಚ್ಚುಗೆ ನನ್ನನ್ನ ಬೇರೊಂದು ಭಾವನಾತ್ಮಕ ಪ್ರಪಂಚಕ್ಕೆ ಕೊಂಡೊಯ್ದಿತ್ತು.
ಅವನು ನನಗೇನಾಗಬೇಕು, ಹೇಗೆ ಪರಿಚಯವಾದ , ಅವನೂ ನನ್ನನ್ನ ಬಯಸುತ್ತಾನೆಯೇ? ಗೊತ್ತು ಮಾಡಿಕೊಳ್ಳುವ ಗೋಜ್ಗಿಗೂ ನಾ ಹೋಗಲಿಲ್ಲ
ಅವನೂ ಅಷ್ತೇ ಒಮ್ಮೆಯೂ ಬಾಯಿ ಬಿಟ್ಟು ನಾನು ನಿನ್ನನ್ನ ಪ್ರೀತಿಸುತ್ತೇನೆ ಎಂದು ಹೇಳಲಿಲ್ಲ. ನಾನೂ ಕೇಳಲಿಲ್ಲ...
ಅಂದು ರಾತ್ರಿ ಟ್ಯೂಷನ್ ಮುಗಿಸಿಹೊರಗೆ ಬರುತ್ತಿದ್ದ್ದಂತೆ ಇದ್ದಕ್ಕಿದ್ದಂತೆ ಸೆಳೆದುಕೊಂಡ ಆತ ಏನೆಂದು ಕೇಳುವ ಮುನ್ನವೇ ತುಟಿಯೊತ್ತಿದ್ದ ನನ್ನ ತುಟಿಗಳು ಏಕೋ ವಿರೋಧಿಸಲಿಲ್ಲ
ಹೇ ನಂಗೆ ನೀನು ತುಂಬಾ ಇಷ್ಟವಾಗಿದ್ದೀಯಾ ಎಂದ ಆತ ನಾನು ನಿನ್ನನ್ನ ಪ್ರೀತಿಸುತ್ತೇನೆ ಎಂದಿರಲಿಲ್ಲ

ಪ್ರೀತಿ ಇಷ್ಟ ಎರೆಡೂ ಒಂದೆ ಎಂಬ ಭಾವ ತುಂಬಿತ್ತು ಆ ಎಳೆ ಮನಸಲ್ಲಿ

ಅಂತಹ ಸನ್ನಿವೇಶಗಳು ಎಷ್ಟೊಂದು ಬಂದವು
ನಾನೂ ಆತನ ಅಪ್ಪುಗೆಗೆ, ಚುಂಬನಕ್ಕೆ ಬಾಯಾರಿ ಕುಳಿತಿರುತ್ತಿದ್ದೆ
ಮನಸ ತುಂಬಾ ಆತನದೆ ಚಿಂತೆ...

ಎಷ್ಟು ಹರಟಿದ್ದೆವು . ಆದರೂ ಒಮ್ಮೆಯೂ ಮದುವೆಯ ಬಗ್ಗೆ ಮಾತಾಡಿರಲಿಲ್ಲ ಆತ , ನನಗೋ ನಾಚಿಕೆ, ಆತನ ಕಣ್ಣಲ್ಲಿ ಕಣ್ಣಿಟ್ತು ನೋಡಿದ್ದರೆ ನಿಜ ತಿಳಿಯುತ್ತಿತ್ತೇನೋ ಆದರೆ ನೋಡಿರಲಿಲ್ಲ
ಇಂತಹ ಬುಗ್ಗೆ ಒಡೆದದ್ದು
ಅಂದು ಆತನ ಸ್ಕೂಟರ್‌ನಲ್ಲಿ ಕೂತಿದ್ದಾಗ
ಕೈನಲ್ಲಿ ಐ ಲವ್ ಯು ಎಂದು ಬರೆದುಕೊಂಡು ತೋರಿಸಿದ್ದೇ ಬಂತು
ಹಾವು ಕಂಡವನಂತೆ ಸ್ಕೂಟರ್ ನಿಲ್ಲಿಸಿ
"ನೀನು ತಪ್ಪು ತಿಳ್ಕೊಂಡಿದ್ದೀಯಾ
ಐ ನೆವರ್ ಲವ್ಛ್ ಯು"

ಶಾಕ್ ಆಗಿತ್ತು
"ಮತ್ತೆ ಇಲ್ಲಿವರೆಗೆ ನಡೆದದ್ದೆಲ್ಲಾ?" ದಿಗ್ಭ್ರಮೆಗೊಂಡು ಕೇಳಿದ್ದೆ

"ಇಬ್ಬರಿಗೂ ಬೇಕಿತ್ತು, ನೀನು ಎಂಜಾಯ್ ಮಾಡಲಿಲ್ಲವಾ? "ಅದೆಷ್ಟು ಕ್ಯಾಶುಯಲ್ ಆಗಿ ಹೇಳಿದ ಆತ
"ನಾನು ನಿಮ್ಮನ್ನ ಪ್ರೀತಿಸಿದೆ" ನಿಧಾನವಾಗಿ ಚೇತರಿಸಿಕೊಂಡು ಹೇಳಿದೆ
"ಆದರೆ ನಾನು ನಿನ್ನನ್ನ ಪ್ರೀತಿಸಿಲ್ಲ"
"ಮರೆತುಬಿಡು ಇಲ್ಲೀವರೆಗೆ ನಡೆದದ್ದನ್ನೆಲ್ಲಾ .ಆಷ್ಟಕ್ಕೂ ಏನೂ ಆಗಿಲ್ಲ"
ಸ್ಕೂಟರ್ ಹತ್ತು ಬಸ್ ಸ್ಟಾಪ್ ವರೆಗೆ ಡ್ರಾಪ್ ಮಾಡುತ್ತ್ನೇನೆ"

ಮಾತಾಡದೆ ಸ್ಕೂಟರ್ ಹತ್ತಿದೆ. ಹೌದು ನನ್ನ ಅವನ ಅವನ ನಡುವೆ ಶಾರೀರಿಕ ನಂಟು ಬೆಳೆದಿರಲಿಲ್ಲ. ಆದರೆ ಮಾನಸಿಕವಾಗಿ ಅವನನ್ನ ಹಚ್ಚಿಕೊಂಡಿದ್ದೆ
ಕನಸಿನ ಪಾತ್ರೆ ಗಾಜೆಂದು ತಿಳಿದದು ಒಡೆದಾಗ.

ಅವನು ಬಾಳಿನಿಂದ ಹೋದ ಮೇಲೆ ಜಾಗರೂಕಳಾದೆ
ಯಾರನ್ನೂ ಕಣ್ಣೆತ್ತಿಯೂ ನೋಡಲಿಲ್ಲ
ಇನ್ನು ಮದುವೆಯಾದವನೊಡನೆಯೇ ಪ್ರೀತಿ ಎಂಬ ಭಾವನೆ,
ಹಾಗಿದ್ದಾಗಲೆ ಅಪ್ಪ ಇವನನ್ನು ನೋಡಿ ಮದುವೆ ಮಾಡಿದರು.

ಈತನೋ ಪ್ರೀತಿಯ ಪ್ರತಿರೂಪ ಎಂದೆನಿಸಿದ್ದು ಮೊದಲ ರಾತ್ರಿಯಲ್ಲಿ
"ನಿನ್ನ ಹೆಂಡತಿ ಥರ ನೋಡಿಕೊಳ್ಳೋದಿಲ್ಲ ನನ್ನೆದೆಯ ಚಿಪ್ಪಿನಲ್ಲಿ ಮುತ್ತಿನ್ಸಂತೆ ನೋಡಿಕೊಳ್ಳುತ್ತೇನೆ"ಎಂದು ಅಪ್ಪಿಕೊಂಡಿದ್ದ
ಸ್ವರ್ಗವೇ ಧರೆಗಿಳಿದಂತಿತ್ತು ಹನಿಮೂನಿನ ದಿನಗಳು

ನಂತರದ ದಿನಗಳು ಆರಂಭವಾದವು
ಅವನ ಅತೀ ಪ್ರೀತಿ ರೇಜಿಗೆ ಹುಟ್ಟಿಸಲಾರಂಭಿಸಿತು. ಮಾತು ಮಾತಿಗೂ ಕಾಸು, ಕಡಿವಾಣ, ಅತೀ ಶಿಸ್ತು ಬೇಸರಗೊಳಿಸಲಾರಂಭಿಸಿತು
ಎಲ್ಲಿ ಹೋದರೂ ನಿನ್ನ ಜೊತೆ ನಾನಿರುತ್ತೇನೆ ಎಂದವನ ಮಾತು ನನ್ನ ಸ್ವಾತಂತ್ರಕ್ಕೆ ಕಡಿವಾಣ ಹಾಕುವುದು ಎಂದು ತಿಳಿಯಿತು.
ನನ್ನ ಇರುವಿಕೆಯೇ ಅವನಿಗೆ ಬೇಕಾದ ಸಂಗತಿಯಾಗಿರಲಿಲ್ಲ
ಸದಾ ಫೋನು ಲ್ಯಾಪ್ಟಾಪ್
ಆಗಾಗ ನಾನು,
ಮನೆಯಿಂದ ಒಬ್ಬಳೆ ಹೊರಗೆ ಬರಲು ಬಿಡುತ್ತಿರಲಿಲ್ಲ. ಇನ್ನುಕೆಲಸಕ್ಕೆ ಹೋಗುವುದು ಸಾಧ್ಯವೇ ಇರದ ಮಾತಾಗಿತ್ತು
ದೊಡ್ಡ ಮನೆಯಲ್ಲಿ ಒಬ್ಬಂಟಿಯಾಗಿದ್ದೆ
ಬೆಳಗಿನಿಂದ ಸಂಜೆವರೆಗೂ
ಅಡುಗೆ ಮಾಡಿ ಟಿವಿ ನೋಡಿಕೊಂಡು ಕೂರುವುದು ಅಸಹನೀಯವಾಗಿತ್ತು, ಮಾಡಲೇನು ಕೆಲಸವಿಲ್ಲದೆ ಬೇಸರಗೊಂಡಿತ್ತು ಮನಸು

ಆಗಲೇ ಕಂಡದ್ದು ಎದುರು ಅಪಾರ್ಟ್ಮೆಂಟಿನ ರಮಾ
ಅವಳು ಮನೆಯಲ್ಲಿಯೇ ಇರುತ್ತಿದ್ದಳು
ಈಗ ತಾನೆ ಕಾಲೇಜು ಮುಗಿಸಿದ್ದಳು
ನನ್ನೊಂದಿಗೆ ಕುಳಿತು ಮಾತಾಡುತ್ತಿದ್ದಳು
ನನ್ನ ಅರ್ಧ ಬೇಸರ ಕಳೆಯುತ್ತಿತ್ತು.

ಅವಳ ಅಣ್ಣನೂ ಅವಳೊಂದಿಗೆ ಒಮ್ಮೊಮ್ಮೆ ಬರುತ್ತಿದ್ದ
ನನಗಿಂತ ಎರೆಡು ವರ್ಷಕ್ಕೆ ಚಿಕ್ಕವನು
ಶ್ರೀಧರ್
ಚುರುಕು ಕಣ್ಣಿನ, ಚಟಪಟ ಮಾತಿನ ಹುಡುಗ, ನನ್ನ ಕಥೆಗೆ ಕಿವಿಯಾಗಿದ್ದ
ನನ್ನ ಬಗೆಗಿನ ಅವನ ಆಸಕ್ತಿ ಅಗತ್ಯಕ್ಕಿಂತ ಹೆಚ್ಚಿನದಾಗಿತ್ತು ಎನ್ನುವುದು ತಿಳಿದರೂ ತಿಳಿಯದವಳಂತೆ ಇದ್ದೆ
ಪ್ರೀತಿಯ ಬಗ್ಗೆ ನನ್ನ ಆಸಕ್ತಿ ಬತ್ತಿ ಹೋಗಿತ್ತು
ಪ್ರೀತಿ ಹುಡುಕಿ ಎರೆಡು ಬಾರಿ ಮೋಸ ಹೋಗಿದ್ದೆ
ಇನ್ನು ಹಾಗಾಗಬಾರದೆಂದು ನಿರ್ಧರಿಸಿದ್ದ
ಶ್ರೀಧರ್ ನನ್ನನ್ನ ಸಮೀಪಿಸಲು ಬಹಳವೇ ಪ್ರಯತ್ನಿಸಿದ
ಆದರೆ ನಾನು ದೂರ ದೂರ ಹೋಗುತ್ತಿದ್ದೆ

ನನಗೂ ಆತ ಇಷ್ತವಾಗಿದ್ದ ಆದರೆ
ಮನದಲ್ಲಿ ನನ್ನನ್ನ ಕಟ್ಟಿಕೊಂಡವನಿಗೆ ಮೋಸ ಮಾಡಬಾರದೆಂಬ ಯೋಚನೆ ಕಾಡುತ್ತಿತ್ತು
ಹಾಗಾಗಿ
ಮನದಾಸೆಯನ್ನ ಬಿಗಿದು ಕಟ್ತಿ ಅಟ್ಟ್ಕಕ್ಕ್ಸೆಸೆದಿದ್ದೆ
ಇತ್ತ ಮಾತ್ರ ಅವನ ಮುಂದೆ ನಟಿಸುತ್ತಿದ್ದೆ , ನಾನು ನಿರ್ಭಾವುಕಳೆಂದು
ಆತ ನನ್ನಿಂದ ಏನು ಬಯಸುತ್ತಿದ್ದಾನೆಂಬುದು ತಿಳಿಯುತ್ತಿದ್ದರೂ ತಿಳಿಯದವಳಂತೆ ಹಿರಿಯಳ ಮುಖವಾಡ ಹಾಕಿ ಮಾತಾಡುತ್ತಿದ್ದೆ

"ಎಷ್ಟು ದಿನಾ ಅಂತ ಈ ಮುಖವಾಡ ಚಿನ್ನಾ?" ಎಂದವ ಒಮ್ಮೆ ಕೇಳಿದಾಗ ಮಾತ್ರ ಬಿಚ್ಚಿ ಬಿದ್ದೆ ನನ್ನ ಬಣ್ಣ ತಿಳಿದುಹೋಯ್ತು ಎಂದನಿಸಿ
ಆತ ಬಳಿ ಬಂದು ಸಾಂತ್ವಾನ ಗೈದ. ಕಣ್ಣ್ಣೀರ ಕಟ್ಟೆ ಒಡೆದಿತ್ತು. ನನ್ನ ಪ್ರೀತಿಯ ಅನ್ವೇಷಣೆಗೆ ಹೊಸದೊಂದು ತಿರುವು ಸಿಕ್ಕಿತೆಂದನಿಸಿತು
ಅಪ್ಪಿಕೊಂಡು ಹಣೆಯ ಮೇಲೆ ಹೂ ಮುತ್ತನಿಟ್ಟ.
ಮುತ್ತು ಮುತ್ತು ಹನಿ ಹನಿಯಾಗಿ ಮೈ ಮೇಲೆ ಸುರಿದವು
ಪ್ರೀತಿಯೋ ಬಯಕೆಯೋ ಅಂತೂ ಒಂದಾಗಿದ್ದೆವು ನಾವಿಬ್ಬರೂ

ಕಟ್ಟಿಕೊಂಡವ ಮಾತ್ರ ಇದಾವುದರ ಅರಿವೇ ಇಲ್ಲದಷ್ಟು ಹೊರಗಿನಕೆಲಸದಲ್ಲಿ ವ್ಯಸ್ತನಾಗಿದ್ದ
ನನ್ನಪ್ರೀತಿಗೆ ದಿಕ್ಕು ಬದಲಾಗಿತ್ತು
ಪ್ರೀತಿ ಎಂದರೇನೆಂದು ಈ ಶ್ರೀಧರ ತೋರಿಸುತ್ತಿದ್ದ.

ಬಾಳಲ್ಲಿ ಮತ್ತೆ ಶ್ರಾವಣ ಬಂದಿತ್ತು

ಆದರೆ ಶ್ರಾವಣ ಹಿಂದೆ ಆಷಾಡ ವಿರುತ್ತದೆ ಎಂಬುದನ್ನ ಮರೆತಿದ್ದೆ ನಾನು

ಶ್ರೀಧರ ನನ್ನನ್ನು ಮರೆತು ಬೇರೆಯವಳನ್ನಮದುವೆಯಾದ, ಮನೆಯವರ ಬಲವಂತಕ್ಕೆ ಆದೆ ಎಂಬುದು ಅವನ ನೆಪವಾಗಿತ್ತು
ಬೇಡ ಎಂದೆನಲು ನನಗಾವ ಅಧಿಕಾರವಿತ್ತು?
ಕಣ್ಣೀರು ಮತ್ತೆ ಕಣ್ಣೊಳಗೆ ಸೇರಿತು
ಈ ನಡುವೆ
ಒಡಲಲ್ಲಿ ಜೀವವೊಂದು ಸೇರಿತ್ತು

ಅದು ಯಾರದು ಎಂಬ ಪ್ರಶ್ನ್ಗೆಗೆ ಉತ್ತರ ಹುಡುಕುವ ಧೈರ್ಯ ನನಗಿರಲಿಲ್ಲವಾದ್ದರಿಂದ
ಪ್ರಶ್ನೆಯನ್ನ ಹಾಕಿಕೊಳ್ಳಲಿಲ್ಲ
ಕೊನೆಗೂ ನನ್ನ ಒಡಲ ಜೀವ ಮಡಿಲನ್ನ ಸೇರಿತು
ಮುದ್ದು ಮುದ್ದು ಶಶಾಂಕ್
ನನ್ನ ಪ್ರೀತಿಯ ಆಶಾ ಕಿರಣವಾದ.
ಮನೆಯಾತನೂ ಬದಲಾದನೇನೋ
ಮಗುವಿಗಾಗಿ...
ನನ್ನ ಪ್ರೀತಿಯ ಅನ್ಚೇಷಣೆ ಕೊನೆಗೊಂಡಿತ್ತು ಎಂದೆನಿಸಿತು
ಮಗು ನನ್ನನ್ನು ಪ್ರ್ಟೀತಿಸುತ್ತಿತ್ತು
ಎಲ್ಲಕ್ಕೂ ನನ್ನನ್ನೇ ಕೇಳುತ್ತಿತ್ತು
ಇನ್ನೂ ಜೀವನವೆಂದರೇ ಇಷ್ಟೊಂದು ಮಧುರವೆಂದೆನಿಸಿತ್ತು
(ಮುಂದುವರೆಯುವುದು)



2 comments:

  1. ಎಂದಿನಂತೆ ನಿಮ್ಮ ಬರಹ ಇಷ್ಟವಾಯಿತು. ಪ್ರೀತಿಯ ಹಿಂದೆ ಬೀಳುವುದರ ಪರಿಣಾಮಗಳಲ್ಲಿ ಇದು ಒಂದು. ಹಾಗಂತ ಪ್ರೀತಿ ಹಿಂದೆ ಬಿಲೋಕು ಆಗುವುದಿಲ್ಲ. :-) ಇದುವೇ ಜೀವನ..

    ReplyDelete
  2. ರೂಪಾ ನಿಮ್ಮ ಕಥೆ ಓದಿ (ನೀವು ಬರೆದಿರೋದು..) ನನಗೆ ಹಿಂದಿ ಹಾಡೊಂದು ನೆನಪಾಯ್ತು..ಎಹ್ ಜೀವನ್ ಹೈ..ಇಸ್ ಜೀವನ್ ಕಾ ಎಹೀ ಹೈ ಎಹೀ ಹೈ ಎಹೀ ಹೈ ರಂಗ್ ರೂಪ್..... ಎಷ್ಟು ನಿಜ ಮತ್ತು ಎಷ್ಟು ಹೊಂದುತ್ತೆ ನಿಮ್ಮ ಕಥೆಗೆ..
    ಮುಂದುವರೀಲಿ ನಿಮ್ಮ ಲೇಖನ ಅಭಿಯಾನ ಹೀಗೆಯೇ...ನೀವು ಕಥಾ ಸಂಕಲ ಯಾಕೆ ಪುಸ್ತಕ ರೂಪದಲ್ಲಿ ಬಿಡುಗಡೆ ಮಾಡಬಾರದು? ಪ್ರಯತ್ನ ನಡೀತಿದೆಯಾ??

    ReplyDelete

ರವರು ನುಡಿಯುತ್ತಾರೆ