ಈ ಹಾಡಲಿ ನೂರು ವೀಣೆ ಮಿಡಿದಾ
ಈ ಬಾಳಲಿ ಪ್ರೇಮಿ ನೀನೆ ಕಡೆದ
ಶಿಲ್ಬವೂ ನಾನೆ , ರಾಗವೂ ನೀನೆ
ರಾಗ ಶಿಲ್ಪ ಬೆರೆತ
ಹೊಸ ಸೃಷ್ಟಿ ನಮ್ಮೀ ಜೀವನ,
ಭಾವ ಜೀವದ ಮಿಡಿತ
ನವ ದೃಷ್ಟಿ ನಮ್ಮೀ ಕವನ
ಬಾಳಿನ ತುಸು ದೂರಕೆ ಯಾತ್ರಿಕ ನೀ ಜೊತೆಗೆ
ಕನಸಿನ ಅಂಬರದ ಮಲ್ಲಿಗೆ ನೀ ಎನ್ನ ಮುಡಿಗೆ
ಕ್ಷಣ ಹುಟ್ಟಿ ಕರಗೋ ಆಸೆಗಳ ಮಾಲೆಗೆ
ಅನುಕ್ಷಣವೂ ನೆನೆಯೋ ಮೆರುಗ ತಂದೆ ಹಾಗೆ
ದೂರ ತೀರ ಯಾನಕೆ ಕರೆದೊಯ್ಯುವೆಯಾ ಎನ್ನ?
ಭಾವಗಳ ಲೋಕದಿ ಸೆಳೆದೊಯ್ಯುವೆಯಾ ಎನ್ನ?
ಹಾಡಾಗದೆ ಉಳಿದ ಎಷ್ಟೋ ಪದಗಳನ
ರಾಗವಾಗಿ ನುಡಿಸುವೆಯಾ ಮನವನ್ನ?
ನಮ್ಮ ಪ್ರೀತಿಯ ಜ್ಯೋತಿ ಅಗಲಿ ಮನ ಬೆಳಗೋ ಕಾಂತಿ
ಜ್ವಾಲೆಯಾಗದಿರಲಿ ನಮ್ಮೀ ಮನದ ಅನಭೂತಿ
ಜಗ ಸುಟ್ಟು ಬದುಕೋ ರೀತಿ ನಮಗೆ ಬೇಡ ಇರಲಿ ನೀತಿ
ಸಂತಸದ ಸಾಗರದ ಅಲೆಗಳ ಶಕ್ತಿ ತರಲಿ ಮನಕೆ ಸಂಪ್ರೀತಿ
best of luck !
ReplyDeletewonderful
ReplyDeleteThumba chennagide..
ReplyDeleteಫ಼ಾರ್ ಎ ಚೇಂಜಾ ...? ರೂಪಾ ಬಹಳ ಪ್ರಾಸ ಕೂಡ್ಸಿ ಬಂದಿರೋ ಸಾಲುಗಳು...ಆದ್ರೆ ಮೊದಲ ಚರಣ ..? ಡಿಫರೆಂಟು...
ReplyDelete