Saturday, August 13, 2011

ಚೊಚ್ಚಿಲ ಪುಸ್ತಕದ ಲೋಕಾರ್ಪಣೆಯ ಸಂಭ್ರಮ ನಿಮಗೆಲ್ಲರಿಗೂ ಆತ್ಮೀಯ ಆಹ್ವಾನ






ಪ್ರಿಯ ಸ್ನೇಹಿತರೇ/ಸ್ನೇಹಿತೆಯರೇ




ತುಂಬಾ ದಿನದ ಕನಸೊಂದು ನನಸಾಗುವ ದಿನ ಹತ್ತಿರವಾಗುತ್ತಿದೆ. ಮನದಾಳದಲ್ಲಿ ಎಲ್ಲೋ ಅವ್ಯಕ್ತ ವಾಗಿದ್ದ ಆಸೆ ಒಂದು ಇದೀಗ ಆಕಾರವನ್ನು ತಳೆದಿದೆ,




ತುಂಬಾ ದಿನದಿಂದ ಕೇಳುತ್ತಿದ್ದರು ನನ್ನ ಮಿತ್ರರು ನೀವೇಕೆ ನಿಮ್ಮ ಪುಸ್ತಕ ಬಿಡುಗಡೆ ಮಾಡಬಾರದು ? ಆಗೆಲ್ಲಾ ಮಟ್ಟಕ್ಕ್ಕೆ ಏರಬಲ್ಲೆನಾ ಅಂದುಕೊಂಡು ಸುಮ್ಮನಾಗುತ್ತಿದ್ದೆ . ಬ್ಲಾಗ್ ಸ್ನೇಹಿತರು , ಆನ್ಲೈನ್ ಸ್ನೇಹಿತರು ಆಗಾಗ ಆಸೆಯನ್ನು ಕೆದಕುತ್ತಿದ್ದರು . ಹೋದ ತಿಂಗಳಲ್ಲಿ ಮತ್ತೇಕೋ ಆಸೆ ಮತ್ತೆ ಧುತ್ತೆಂದು ಮುಂದೆ ನಿಂತಿತು . ಇಂತಹ ಒಂದು ಯೋಚನೆ ಬಂತೆಂದು ಜಲನಯನ ಬ್ಲಾಗಿನ ಆಜಾದ್ ಅವರ ಬಳಿ ಹೇಳಿದ್ದೇ ತಡ ಮತ್ತೆಲ್ಲಾ ಮಿಂಚಿನಂತೆ ನಡೆದವು.


ನನ್ನ ಊಹೆಗೂ ಮೀರಿದ ವೇಗದಲ್ಲಿ ಪುಸ್ತಕದ ಲೋಕಾರ್ಪಣೆಯ ಹೊಣೆ ಹೊತ್ತ ಛಾಯಕನ್ನಡಿಯ ಬ್ಲಾಗಿನ ಶಿವುರವರು ಆಗಬೇಕಾದ ಕೆಲಸಗಳನ್ನು ಮುಂದೆ ನಡೆಸಿದರು.


ನನ್ನ ಯೂನಿಕೋಡ್ ಬರಹಗಳನ್ನು ಬರಹಕ್ಕೆ ಇಳಿಸಿ ಅದನ್ನು ಅಂದವಾಗಿ ಪುಸ್ತಕ ವಿನ್ಯಾಸಕ್ಕೆ ಇಳಿಸಿದರು ಬಿ ಆರ್ ಸತ್ಯನಾರಾಯಣ್ ರವರು. ಸುಂದರ ಮುಖ ಪುಟ ವಿನ್ಯಾಸ ಮಾಡಿಕೊಟ್ಟ ಸುಗುಣಾರವರು, ಪುಸ್ತಕ ಪ್ರಕಾಶನದ ಹೊಣೆ ಹೊತ್ತ ಸೃಷ್ಟಿ ನಾಗೇಶ್ ರವರು ಎಲ್ಲರಿಗೂ ನನ್ನ ಮನದಾಳದ ಕೃತಜ್ನತೆಗಳು.




ನನ್ನ ಪುಸ್ತಕಕ್ಕೆ ನಲ್ಮೆಯಿಂದ ಮುನ್ನುಡಿ ಬರೆದು ಕೊಟ್ಟ ಸುನಾಥ್ ಕಾಕಗೂ, ಅಂದವಾದ ಬೆನ್ನುಡಿ ಬರೆದ ಆಜಾದರವರಿಗೆ ,ಪುಸ್ತಕದ ಬಗ್ಗೆ ತಮ್ಮ ಮಾತನ್ನು ಹೇಳಿದ್ದಲ್ಲದೇ ಪುಸ್ತಕ ಬಿಡುಗಡೆ ಮಾಡಲು ಒಪ್ಪಿಕೊಂಡ ಡಾ ರಮೇಶ್ ಕಾಮತ್ ರವರಿಗೂ ನನ್ನ ಅನಂತ ಧನ್ಯವಾದಗಳು



ಸುಧೇಶ್ ಶೆಟ್ಟಿ ರವರ ಹೆಜ್ಜೆ ಮೂಡದ ಹಾದಿ, ದೊಡ್ಮನಿ ಮಂಜು ಅವರ ಮಂಜು ಕರಗುವ ಮುನ್ನ ಇವುಗಳ ಜೊತೆಯಲ್ಲಿ ನನ್ನದೂ ಒಂದು ಪುಸ್ತಕ


ಪುಸ್ತಕದ ಹೆಸರು : ಪ್ರೀತಿ ಏನೆನ್ನಲಿ ನಿನ್ನ


ಲೋಕಾರ್ಪಣೆಯಾಗುತ್ತಿದ್ದೆ ಎಂದು ಹೇಳಿಕೊಳ್ಳಲು ಸಂತಸವಾಗುತ್ತಿದೆ, ದಯವಿಟ್ಟು ಎಲ್ಲರೂ ತಪ್ಪದೇ ಬರಬೇಕು, ಹೆಚ್ಚಿನ ಸಂಖ್ಯೆಯಲ್ಲಿ ಬಂದು ನಮಗೆಲ್ಲರಿಗೂ ಶುಭ ಹಾರೈಸಬೇಕೆಂದು ಕೋರಿಕೊಳ್ಳುತ್ತೇನೆ.





2 comments:

  1. ಶುಭ ಹಾರೈಕೆಗಳು ರೂಪ... ಒಳ್ಳೆಯದಾಗಲಿ... :-)...

    ಶ್ಯಾಮಲ

    ReplyDelete

ರವರು ನುಡಿಯುತ್ತಾರೆ