ಮನಸಿನ ಮಾತು ಹೊರಗೆ ಬಂದರೆ ಮನದ ದುಗುಡ ಕಡಿಮೆಯಾಗುತ್ತದೆ. ಸಂತೋಷ ಹೆಚ್ಚಾಗುತ್ತದೆ ಎಂದು ನಂಬಿರುವಳು ನಾನು ಹಾಗಾಗಿ ನನ್ನ ಮನದಲ್ಲಿ ಮೂಡಿದ ಭಾವನೆಗಳು ಇಲ್ಲಿ ಪ್ರತ್ಯಕ್ಷವಾಗುತ್ತವೆ
Friday, August 24, 2012
ಕಾಲದ ಮಹಿಮೆ
ಬದಲಾಗಿ ಹೋಯ್ತೇ ಕಾಲ ,
ಬದಲಾಗಿ ಹೋದೆನೇ ನಾನು
ಅಂದಿನ ಮುಗ್ಧತನ ಕಳೆದುಹೋಯ್ತೇ
ಅರಳು ಕಂಗಳ , ಅಚ್ಚರಿಯ ನೋಟವದು ಎಲ್ಲಿ ಹೋಯಿತು
ವರ್ಷಗಳುರುಳಿದಂತೆ ಮಾಯವಾಯಿತು
ಅದು ನಾನೇನಾ ಅಥವ ಇದು ನಿಜಾವೇ ನಾ?
ಅರಿಯದಾಗದ ಗೊಂದಲ
ಆಧುನಿಕತೆಯಡಿಯಲ್ಲಿ ಸಿಲುಕಿ ಕದಲಿರುವೆನೇ
ಇಲ್ಲ ಸಂಪ್ರದಾಯಕ್ಕೆ ಕನಲಿರುವೆನೇ?
ಹಳೆಯದೆಲ್ಲವೂ ಚಿನ್ನವೆಂದು ಹೇಳಿದರೂ
ಹಳೆಯದ ಹೊಸದಕ್ಕೆ ಬದಲಾಯಿಸಿಕೊಳ್ಳುವ
ಕೊಳ್ಳುವ ದ್ವಂದ್ವ ಮನಸ್ಥಿತಿಯೇ
ದೇವರಿದ್ದಾನೆಂದು ಶರಣಾಗುವ ಕಾಲದಲ್ಲಿ
ದೇವ ನೀನಿರುವೆಯಾ ನಿಜದಲ್ಲಿ?
ಎಂಬ ಭಾವ ಮನದಲ್ಲಿ
ಇದ್ದಾನೋ ಇಲ್ಲವೋ ಆ ದ್ವಂದ್ವದಲ್ಲಿ
ಮನಸದು ಬೀಳುತಿದೆ ಗೋಜಲಲ್ಲಿ
ಪತಿ ಪರದೈವ ಎಂದು ಭೀಮನಮಾವಾಸ್ಯೆಗೆ
ಪೂಜೆ ಗೈಯುವ ಹೊತ್ತಿನಲ್ಲಿಯೇ
ಹೊತ್ತಿಗಾತ ಬಾರದ ಸಿಟ್ಟಿನಲ್ಲಿ ಬೈಯ್ಯುವ ಸತಿಗೆ
ಪರ ಯೋಚನೆ ಕಾಡುದಿರುವುದೇ?
ರಾಮನನ್ನು ಪೂಜಿಸುವ ಪತಿಗೆ ಎದುರಲ್ಲಿ
ಸುಂದರಿಯ ನೋಡಲು
ರಾಧಾಲೋಲ ಮುರಳಿ ನೆನಪಾದಲ್ಲಿ
ಅಚ್ಚರಿಯೇನು
ಅಂದು ತಪ್ಪೆಂದು ನುಡಿದದ್ದು
ಇಂದು ಸರಿಯಾಗಿ ಕಂಡರೆ
ಕಾಲದ ಮಹಿಮೆಯೆಂದು
ಸುಮ್ಮನಾಗುವುದೇ?
Labels:
ಕವನ ಹಾಗು ಪದ್ಯಗಳು
Subscribe to:
Post Comments (Atom)
ಹೆಂಗೆಳೆಯರ ಮನೋ ತಾಕಲಾಟವೇ ಹಾಗೆ. ಯಾಕೆಂದರೆ ಅವರು ಪತ್ನಿಯಾಗುವ ಹೊತ್ತಿನಲ್ಲೇ ತಾಯಿಯೂ ಆಗಬೇಕಾದ ಅನಿವಾರ್ಯತೆ ಇದ್ದೇ ಇರುತ್ತದೆ.
ReplyDeleteಈ ನಡುವೆ ನಾನು ಓದಿದ ವಿಶಿಷ್ಟ ಕವನವಿದು.