ಕಟ್ಟುಪಾಡುಗಳ ಗಾಳಿಗೆ ತೂರಿ
ನನ್ನ ಸರಿ ನಿನಗೆ ತಪ್ಪು
ನಿನ ಸರಿ ಎನಗೆ ಆಪತ್ತು
ಎಂಬೆಲ್ಲಾ ಗೋಳುಗಳ ಮಾಡಿ
ಸವಾರಿ
ಅಂಕೆ ಜಾಲಗಳಲಿ ಬೀಳದೆ
ಅನುಬಂಧಗಳ ನೆಲೆಗೆ ನಿಲ್ಲದೆ
ಶಂಕೆಗೆಡೆ ಮಾಡಡ ಎಡೆಗೆ
ನಾ ಪರಾರಿ
ಎಲ್ಲಿ ಹೋದರೂ ಜಗವೇ
ಎಲ್ಲಿ ಹೋದರೂ ಜನರೇ
ಶೂನ್ಯ ತಾಣವ ಕಂಡು ಹಿಡಿದು
ನಾನಾಗಲೇ ಕೋಲಂಬಸ್?
ಪ್ರೀತಿಗೆ ಒಮ್ಮೊಮ್ಮೆಒಂದೊಂದು ರೂಪ
ಒಮ್ಮೆ ಕಾಮ , ಒಮ್ಮೆ ನೆಲೆ ಒಮ್ಮೆ ಅಗತ್ಯ
ಒಮ್ಮೆ ಸಂಬಂಧ. ಪ್ರೀತಿಯೇ ಕಾಮರೂಪಿ
ಅದಕೇಕೇ ಇಂತಹ ಹಪಾಹಪಿ
ಪ್ರೀತಿ ಬಿಟ್ಟು ,,ಬಂಧವ ಸುಟ್ಟು
ಹೊರಡಲೇಬೇಕಿದೆ ಋಣಮುಕ್ತಳಾಗುವೆಡೆ
ಯಾರೂ ಇಲ್ಲದೆಡೆ, ಜಗವೆ ಕಾಣದ ಕಡೆ
ಮನದ ಶಾಂತಿಗೆ
ಕವಿತೆ ತುಂಬಾ ಚೆನ್ನಾಗಿದೆ..
ReplyDeleteನನ್ನ ಸರಿ ನಿನಗೆ ತಪ್ಪು..
ನಿನ್ನ ಸರಿ ನನಗೆ ಆಪತ್ತು...
ಎಲ್ಲಿ ಹೋದರು ಜಗವೇ
ಎಲ್ಲಿ ಹೋದರು ಜನರೇ..
ಸಾಲುಗಳು ಇಷ್ಟವಾದವು...
ವಿಭಿನ್ನವಾಗಿ ಆಲೋಚಿಸಬಲ್ಲ ಕವಿಯತ್ರಿ ನೀವು. ಒಲುಮೆಯ ಸಾಕ್ಷಾತ್ಕಾರ ಮಾಡಿಕೊಟ್ಟಿದ್ದೀರ ಇಲ್ಲಿ.
ReplyDelete