ಮನಸಿನ ಮಾತು ಹೊರಗೆ ಬಂದರೆ ಮನದ ದುಗುಡ ಕಡಿಮೆಯಾಗುತ್ತದೆ. ಸಂತೋಷ ಹೆಚ್ಚಾಗುತ್ತದೆ ಎಂದು ನಂಬಿರುವಳು ನಾನು ಹಾಗಾಗಿ ನನ್ನ ಮನದಲ್ಲಿ ಮೂಡಿದ ಭಾವನೆಗಳು ಇಲ್ಲಿ ಪ್ರತ್ಯಕ್ಷವಾಗುತ್ತವೆ
Saturday, November 24, 2012
ಲಲಿತಾ-ಮೀರಾ
ಆ ಬಾಲೆ ಚಿಕ್ಕ ವಯಸಿಗೇ ಮದುವೆಯಾಗಿ ಬೃಂದಾವನಕ್ಕೆ ಬಂದಿದ್ದಳು, ಗೆಳತಿಯರೆಲ್ಲಾ ಹೇಳಿದ್ದರು. "
"ಹೇ ಲಲಿತಾ ಅಲ್ಲಿ ಒಬ್ಬ ಮುದ್ದು ಮುದ್ದು ನೀಲಿ ಹುಡುಗ ಇದ್ದಾನೆ. ಅವನಿಗೆ ಮನ ಸೋಲಬಹುದು ಹುಶಾರು"
ಲಲಿತಾ ನಕ್ಕಿದ್ದಳು
’ ಹೇ ಹೋಗ್ರೇ. ನಾನು ಎಲ್ಲರಹಾಗಲ್ಲ"
ಹಾಗೂ ಹೀಗೂ ಆ ದಿನ ಬಂದೇ ಬಿಟ್ಟಿತು. ಗಾಡಿಯಲ್ಲಿ ಹತ್ತಿ ಗಂಡನ ಮನೆಯತ್ತ ಬರುತ್ತಿದ್ದಾಕೆಗೆ ಕಂಡದ್ದು ಬಿದ್ದು ಹೋದ ಮನೆಗಳು. ಜನರಿರದ ಬೀದಿಗಳು.
ಬಿರುಗಾಳಿಯಂತೆ ದೋ ಎಂದು ಸುರಿಯುತ್ತಿದ್ದ ಮಳೆ. ಒಂದು ಸಣ್ಣ ಜೀವಿಯೂ ಕಾಣಲಿಲ್ಲ, ಗಾಡಿ ಬಿಟ್ಟು ಗಾಡಿ ಹೊಡೆಯುವಾತ ಓಡಿ ಹೋದ. ಮಳೆಯಲ್ಲಿಯೇ ನೆನೆದುಕೊಂಡು ಗೊತ್ತಿರದ ಆ ಸ್ಥಳದಲ್ಲಿ ಅಲೆದಾಡುತಿದ್ದ ಆ ಕಿಶೋರಿಯ ಕಂಗಳಿಗೆ ಆ ದೃಶ್ಯ ಬಿತ್ತು.
ಕಡು ನೀಲಿ ಬಣ್ಣದ ಹುಡುಗ, ಕಪ್ಪುಕಂಗಳು, ತಲೆಯಲ್ಲಿ ನವಿಲುಗರಿ, ಹಳದಿ ಬಣ್ಣದ ಉಡುಗೆ ತೊಟ್ಟ, ಚಂದದ ಬಾಲಕ ಒಂದಿಡೀ ಪರ್ವತವನ್ನೇ ತನ್ನ ಕಿರುಬೆರಳಲ್ಲಿ ಅನಾಯಾಸವಾಗಿ ಎತ್ತಿ ಹಿಡಿದಿದ್ದಾನೆ.
ಅಷ್ಟೇ ಲಲಿತೆ ಸೋತು ಹೋದಳು..................... ಆ ಹುಡುಗನಿಗೆ, ಪ್ರೀತಿ ಉಕ್ಕಿಹರಿಯಿತು . ಆಗಲೆ ಅವಳ ಅರಿವಿಗೆ ಬಂದಿದ್ದು ಆ ಪರ್ವತದ ಕೆಳಗೆ ಬೃಂದಾವನದ ಅಷ್ಟೂ ಜನ ತಂಗಿದ್ದಾರೆ. ಆ ಪರ್ವತದ ಹೆಸರು ಗೋವರ್ಧನ ಗಿರಿ
ಆ ಹುಡುಗ ಗೋವರ್ಧನ ಗಿರಿಧಾರಿ ಎಂದಷ್ಟೇ ಅವಳ ಮನಸಿಗೆ ಬಂತು. ಅವನು ಜನ್ಮ ಜನ್ಮಾಂತರದ ಪ್ರೇಮಿ ಎಂದನಿಸಿಬಿಟ್ಟಿತು ಆಕೆಗೆ
ಮೂಕಳಾಗಿ ಹೋದ ಲಲಿತೆಯನ್ನ ಆ ನೀಲಿ ಹುಡುಗ ನೋಡಿ ಒಮ್ಮೆ ನಕ್ಕ, ಕಂಗಳಲ್ಲೇ ಬಾ ಎಂದು ಕರೆದ. ಆ ಕರೆಗೆ ಸ್ಪಂದಿಸುವ ಮುನ್ನವೇ ವಿಧಿ ಅವಳನ್ನ ತನ್ನ ಬಳಿ ಸಿಡಿಲಿನ ರೂಪದಲ್ಲಿ ಬಲಿಯಾಗಿ ಕರೆದುಕೊಂಡಿತು.
ಆದರೆ ಆ ಗೋವರ್ಧನ ಗಿರಿಧಾರಿಯನ್ನ ಮಾತ್ರ ಆಕೆ ಮರೆಯಲಿಲ್ಲ
ಆಕೆಯೇ ಮೀರಾ................... ಮೀರಾ ಬಾಯಿ
Subscribe to:
Post Comments (Atom)
No comments:
Post a Comment
ರವರು ನುಡಿಯುತ್ತಾರೆ