ಮನಸಿನ ಮಾತು ಹೊರಗೆ ಬಂದರೆ ಮನದ ದುಗುಡ ಕಡಿಮೆಯಾಗುತ್ತದೆ. ಸಂತೋಷ ಹೆಚ್ಚಾಗುತ್ತದೆ ಎಂದು ನಂಬಿರುವಳು ನಾನು ಹಾಗಾಗಿ ನನ್ನ ಮನದಲ್ಲಿ ಮೂಡಿದ ಭಾವನೆಗಳು ಇಲ್ಲಿ ಪ್ರತ್ಯಕ್ಷವಾಗುತ್ತವೆ
Saturday, November 24, 2012
ಮೀರಾ
ಮದುವೆ ಮೆರವಣಿಗೆ ಜೋರಾಗಿ ನಡೆಯುತ್ತಿತ್ತು.
ಅರಮನೆಯ ಪುಟ್ಟ ಬಾಲೆ ಮೀರಾ ಅಂತ: ಪುರದ ಸಖಿ ವೀಣಾಳನ್ನ ಕೇಳಿದಳು . "ಇದು ಏನು?" " ಅದು ಮದುವೆ"
"ಮದುವೆ ಅಂದ್ರೆ ಏನು?"
"ಒಬ್ಬ ವರನಿಗೆ ಒಬ್ಬ ವಧು ಜೊತೆಯಾಗಿ ಜೀವನ ಪೂರ್ತಿ ಇರೋದು. "
"ಅದು ಎಲ್ಲರೂ ಮಾಡಿಕೊಳ್ಳೋದು. ನೀನು ಸಹಾ" ಅವಳ ಪುಟ್ಟ ಕೆನ್ನೆ ಹಿಂಡಿ ನುಡಿದಳು
" ನನ್ನ ವರ ಯಾರು" ಮುದ್ದು ಮೊಗವನ್ನು ಇನ್ನೂ ಮುದ್ದಾಗಿ ಮಾಡಿಕೊಳ್ಳುತ್ತಾ ಕೇಳಿದಳು
ವೀಣಾಗೆ ಪೇಚಾಟಕಿಟ್ಟುಕೊಂಡಿತು
ತಾನೆ ಉಡುಗೊರೆಯಾಗಿ ನೀಡಿದ್ದ ಕೃಷ್ಣನ ವಿಗ್ರಹವೊಂದನ್ನು ತೋರಿಸಿ "ಇವನೇ ನಿನ್ನ ಗಂಡ" ಎಂದು ನುಡಿದಳು
ಆ ವಿಗ್ರಹ ಮೀರಾ ಮನಸಲ್ಲಿ ನಿಂತು ಬಿಟ್ಟಿತು. ಯಾವುದೋ ಜನ್ಮ ಜನ್ಮಾಂತರದ ನಂಟಿನಂತೆ ಭಾಸವಾಗಿ. ಆಕೆ ಅವನನ್ನ ಆರಾಧಿಸಲು ಶುರು ಮಾಡಿದಳು
ಮುಂದೆ ಮೀರಾಳ ತಾಯಿ ಮೃತ್ಯು ಹೊಂದಿದಳು ಮೀರಾಗೆ ಐದಾರು ವರ್ಷವಿರಬೇಕು. ಇತ್ತ ಮೀರಾ ತಂದೆ ರತನ್ ಸಿಂಗ್ ರಾಜಾಸ್ಥಾನದ ಮೇರತ್‍ನ ದೊರೆ , ರಾಜಕಾರ್ಯಗಳಲ್ಲಿ ತೊಡಗಿದ, ಆದರೆ ಕೃಷ್ಣನ ಆರಾದನೆಯಲ್ಲಿ ತೊಡಗಿದ ಮೀರಾಗೆ ತಾನೆಂದೂ ಒಂಟಿ ಎಂದನಿಸಲಿಲ್ಲ.
ಅಲ್ಲಿಂದ ತಾತನ ಮನೆಯಲ್ಲಿ ಬೆಳೆಯಲಾರಂಭಿಸಿದಳು ಮೀರ, ಕೃಷ್ಣನ ವಿಗ್ರಹಕ್ಕೆ ಸ್ನಾನ , ಅಲಂಕಾರ, ಅದರ ಜೊತೆಯಲ್ಲಿಯೇ ನಿದಿರೆ ಹೀಗೆ ಅವಳ ದಿನಚರಿ ಸಾಗುತ್ತಿತ್ತು.
ಹೀಗೆ ಬೆಳೆದು ವಯಸ್ಕಳಾದ ಮೇಲೆ ಒಮ್ಮೆ ಒಂದು ರಾತ್ರಿ ಕೃಷ್ಣನ ಜೊತೆಯಲ್ಲಿ ಮದುವೆಯಾದಂತೆ ಕನಸು ಕಂಡಳು
(ಇನ್ನೂ ಇದೆ...)
Subscribe to:
Post Comments (Atom)
ಮುಂದುವರಿಸಿ ಮೇಡಂ... ಚೆನ್ನಾಗಿದೆ..
ReplyDelete