ಅರೆ ನಿಮಿಲೀತ ಕಂಗಳಲ್ಲಿ ಚಿತ್ತಾರದ ಸುಳಿವು
ನಿದ್ದೆ ಇದ್ದರೂ ಇರದಂತಹ ಚೆಂದದ ಅರಿವು
ಸ್ವಪ್ನದಾರಿಯಲ್ಲಿ ನೀನಿತ್ತ ಮುತ್ತುಗಳ ಹರಿವು
ಸುಪ್ತಮನಸಿನಲ್ಲೂ ನಿನ್ನದೆ ನೆನಪಿನ ಕಸುವು
ಸೊಗಸೆನ್ನಲೇ ಮನದಕ್ಯಾನ್ವಾಸಿನ ನಿನ್ನ ಚಿತ್ರವಾ?
ಬೊಗಸೆಯೊಳೆತ್ತಿ ಕೊಡಲೇ ನಿನಗೆ ನನ್ನೀ ಮನವಾ?
ರಭಸದಿಂ ಸದ್ದಿಲ್ಲದೆ ಹರಿವ ಈ ಪರಿಯೇ ನೀರವ
ಸುಮನಸು ಬಿರಿದಂತೆ ನಗುವ ನಗೆ ಎನಗೆ ಅಮೃತ
ಇರಲಿ ಈ ಮೂರ್ತ ಭಾವ ಮನದಲಿ, ಆಗಲೇ ಸಂಸಾರ ನೊಗವು ಹಗುರ ಹಗುರ...
ReplyDelete