(ಪುಟ್ಟ ಪುಟ್ಟ ಹನಿಗಳು)
ನೆನಪು
ನಿನ್ನಿಂದ ನಾ ದೂರವಿದ್ದರೂ
ನೀ ದೂರವಿಲ್ಲ
ತುಟಿ ನಸು ಬಿರಿಯಲು
ನಿನ್ನ ನೆನಪಿದೆಯಲ್ಲ
**************************************
ಚಲನೆ -ಲಲನೆಯರು
ಕಣ್ಣ ಚಲಿಸದಿರು ಅತ್ತ ಇತ್ತ ಓ ಇನಿಯ
ಲಲನೆಯರು ಸುತ್ತಮುತ್ತ
,ಬೆದರುವುದು ಹೃದಯ ..................
**************************************
ಕಣ್ -ಕಣ್ ಸರಸ
ನೀ ಎದುರು ಕೂತಾಗೆಲ್ಲ
ನಾ ಮಾತನಾಡುವುದಿಲ್ಲ
ಎಂದೆಲ್ಲ ದೂರುವೆಯಲ್ಲ
ಕಣ್ ಕಣ್ ಜೊತೆಯಲಿ
ಸರಸವಾಡಲಿ
ಬಿಟ್ಟು ಬಿಡು ನಲ್ಲ
**************************************
ರಂಗೋಲಿ
ನೂರು ಚುಕ್ಕಿ ಇಟ್ಟರೂ ರಂಗೋಲಿ
ಪೂರ್ತಿಯಾಗಲು ಎಳೆ ಇರಲೇ ಬೇಕು
ನಾನು ಏನೇ ನುಡಿದರೂ ಮಾತಲಿ
ರಂಗು ಬರಲು ತುಂಟ ನಿನ್ನ ನವಿರಿರಬೇಕು
**************************************
ಸ್ವಪ್ನದಾರಿಯು ಸುಂದರವಾಗಿ ಮೂಡಿ ಬಂದಿದೆ ಮೇಡಂ..
ReplyDelete