Monday, January 28, 2013

ಮುವತ್ತು


ಮುವತ್ತು
***********************************
ಅತ್ತ ಇಪ್ಪತ್ತಲ್ಲ ಇತ್ತ ನಲವತ್ತಲ್ಲ .
ಎರೆಡಕ್ಕೂ ನಡುವಿನ ಈ
ಮುವತ್ತಿದೆಯಲ್ಲ ಇದು
ತರುವುದು ನೋಡಿ ನಾನಾ ಅಪತ್ತು

ತಂಟೆಮಾಡದ ವಯಸಲ್ಲ
ಆದರೂ ವಯಸಾಗಿದೆ
 ಸುಮ್ಮನಿರೆಂದು ಹೇಳುವರೆಲ್ಲ
ಸುಮ್ಮನಿರುವ ವಯಸಲ್ಲ
ಸುಮ್ಮನಾಗಿರಲೇಬೇಕಲ್ಲ

ಮೊಗದ ಮೇಲೊಂದು ಗೆರೆ ಕಾಣಿಸಿತು
ಅಯ್ಯೋ ನನಗೂ ವಯಸಾಯ್ತು
ಎಂಬ ಭೀತಿಯ ಜೊತೆಯಲ್ಲಿಯೇ
ನೆನ್ನೆ ಅಕ್ಕ ಎನ್ನುತ್ತಿದ್ದ
ಹುಡುಗ ಆಂಟಿ ಎಂದುಬಿಟ್ಟರೆಂಬ
ಯೋಚನೆ

ಇಪ್ಪತ್ತರಲ್ಲಿ ಎಲ್ಲಕ್ಕೂ ರಾಯರಪ್ಪಣೆ ಕೇಳುತ್ತಾ
ಕೇಳುತ್ತಾ  ಸುಸ್ತಾಗಿದ್ದವಳಿಗೀಗ
ಇದ್ದಕಿದ್ದಂತೆ ಜವಾಬ್ದಾರಿಯ ನೊಗ
ಎಲ್ಲರೂ ತನ್ನಡಿಯಲ್ಲಿ ಎಂಬ
ಖುಷಿಯ ಸೊಗಸು

ಬೆಳ್ಳಿ ಗೆರೆ ಕಾಣಿಸಿತು ತಲೆಯಲ್ಲಿ.
ಅಜ್ಜಿಯಾಗಿಬಿಟ್ಟೆನೇ ..
ಯೋಚನೆ

ಆ ಕಾಲೇಜು ಹುಡುಗ ನೋಡುತ್ತಿದ್ದಾನೆ
ನೋಡು ತಿನ್ನುವ ಹಾಗೆ
ನಾನಿಲ್ಲವೇ ಅವನಮ್ಮನ ಹಾಗೆ

ಈಗಲೂ ನೋಡುವವರ ಕಣ್ಣಲ್ಲಿದೆಯಲ್ಲ ಮೆಚ್ಚುಗೆ
ಓ ಹಾಗಿದ್ದರೆ ವಯಸಾಗಿಲ್ಲ ಇನ್ನು ನನಗೆ
ಆ ಐಶ್ ,ವಿದ್ಯಾಬಾಲನ್, ಕರೀನಾ
ಬಿಪಾಶ ಎಲ್ಲರೂ ಮುವತ್ತು ದಾಟಿದವರೇ
ಇಲ್ಲವೇ ಇನ್ನೂ ಹುಡುಗಿಯರಂತೆ

ವಯಸು ಮುವತ್ತು ದಾಟಿತು ಮನಸು
ಇಪ್ಪತ್ತನ್ನು ಬಿಟ್ಟು ಬರುತಿಲ್ಲ
ಇನ್ನು ನಲವತ್ತನ್ನು ಸ್ವಾಗತಿಸಬೇಕಿದೆಯೇ
ಕನ್ನಡಿ ನಕ್ಕು ನುಡಿಯುತ್ತಿದೆ
ಅಯ್ಯೋ ಮರುಳೆ
ಇದುವೇ ಜೀವನ
ನೆನ್ನೆ ನಿನ್ನಮ್ಮ ಇಂದು ನೀನು
ನಾಳೆ ನಿನ್ನ ಮಗಳು

4 comments:

  1. ಚೆಂದವಿದೆ...ಈ ತೊಳಲಾಟ ಎಲ್ಲರಲ್ಲೂ ಇದ್ದೇ ಇರುತ್ತೆ. ಒಂಥರಾ ಆ ಅನುಭವ ಕೂಡಾ ಮಜಾ :-) ನಲವತ್ತು ದಾಟಿದರೆ ಮತ್ತೆ ಹರೆಯ ಬಂದಂತೆ ಅಂತಾರೆ. ಅಲ್ಲಿಗೆ ನಿಮಗೆ ಹರೆಯ ಬರ್ಲಿಕ್ಕೆ ಇನ್ನೂ ಹತ್ತು ವರುಷವಿದೆ...:-D. ನನಗೀಗ ಹರೆಯ ...ದೇಹಕ್ಕೆ ಮುಪ್ಪಾದರೇನು? ಮನಸು ಸದಾ ಹಸಿರಾಗಿರಲಿ...ಹದಿಹರೆಯದಲ್ಲೇ ಇರಲಿ :-)

    ReplyDelete
  2. but its true allva you got accept and move forward

    ReplyDelete
  3. ತಮ್ಮ ನಿಜವಾದ ವಯಸನ್ನು ಬಹಿರಂಗವಾಗಿ ಘೋಷಣೆ ಮಾಡಿದ ಜಗತ್ತಿನ ಏಕೈಕ ಮಹಿಳೆ ನೀವು. ನಿಮ್ಮ ಪ್ರಾಮಾಣಿಕತೆಗೆ ಈ ಬಾಲಕನ ನಮನಗಳು.

    ReplyDelete
  4. ಇದು ಎಲ್ಲ ಸ್ರ್ತ್ರೀಗು ಇರುವ ಸಾಮಾನ್ಯವಾದ ತುಂಬಾ ಕಾಡುವ ಚಿಂತೆ ಕೂಡ. ನಿಮ್ಮ ತುಂಟತನದಲ್ಲಿ ನಾಚುತ್ತಾ , ಅಭಿಮಾನಿಸುತ್ತ , ಅಳುಕಿನ ವಿಷಯವ ಅರುಹಿದ ಪರಿ ಚೆನ್ನಾಗಿದೆ

    ReplyDelete

ರವರು ನುಡಿಯುತ್ತಾರೆ