Thursday, May 14, 2009

ಬದುಕು: ವಯೋಮಾನಕ್ಕೆ ತಕ್ಕ ಹಾಗೆ ಬದಲಾಗುವ ವಿವರಣೆಗಳು

ಹೀಗೆ ಅನ್ನಿಸುತ್ತಿತ್ತು
ಚಿಕ್ಕವಳಿದ್ದಾಗ ಕಣ್ಣಿಗೆ ಕಂಡದ್ದೆಲ್ಲಾ ಸಿಕ್ಕರೆ ಅದೇ ಜೀವನ
ಎಂಟನೇ ತರಗತಿಯಲ್ಲಿ ಮೊದಲು ಸ್ಕೂಲಿಗೆ ಹೋಗಿ ಎಸ್.ಎಸ್.ಎಲ್.ಸಿ ಮುಗಿಸಿದರೆ ಅದುವೇ ಜೀವನ
ಎಸ್.ಎಸ್.ಎಲ್.ಸಿ ಮುಗಿದ ಮೇಲೆ ಪಿಯುಸಿ ಮುಗಿಸಿದರೆ ಬದುಕು ನಡೆಯುತ್ತದೆ ಅಂದುಕೊಳ್ಳುತ್ತಿದ್ದೆ
ಪಿ.ಯು.ಸಿಯ ನಂತರ ಇಂಜಿನಿಯರಿಂಗೇ ಜೀವನ ಅದು ಮಾಡಿದರೆ ಸಾಕು ಎಲ್ಲಾ ಸಿಗುತ್ತೆ ಅಂತನ್ನಿಸುತ್ತಿತ್ತು
ವಿದ್ಯಾಭ್ಯಾಸದ ನಂತರ ಕೆಲಸ ಸಿಕ್ಕು ಹೊಟ್ಟೆ ಬಟ್ಟೆಗೆ ಆದರೆ ಸಾಕು ಬದುಕು ಹೇಗೋ ನಡೆಯುತ್ತೆ ಅಂತಂದುಕೊಳ್ಳುತ್ತಿದ್ದೆ
ಕೆಲಸ ಸಿಕ್ಕ ಮೇಲೆ ಸ್ವಂತ ಮನೆ, ಮದುವೆ, ಮಕ್ಕಳು,ಕಾರು ಸಾಕು ಜೀವನದಲ್ಲಿ ಗೆದ್ದ ಹಾಗೆ
ಮದುವೆ,ಮಕ್ಕಳು,ಕಾರು, ಮನೆ ಎಲ್ಲಾವು ಆದ ಮೇಲೆ ಬದುಕಿನಲ್ಲಿ ಮುಂದೇನು ?
ಹತ್ತು ಜನ ಸೈ ಎನ್ನುವಂತೆ ನಡೆಯುವುದಾದರೆ ಅದು ಜನ್ಮ ತಾಳಿದ್ದಕ್ಕೆ ಸಾರ್ಥಕವಾಗುತ್ತದೆ ಎಂದುಕೊಳ್ಳುತ್ತಿದ್ದೆ
ರೂಪ ಪರವಾಗಿಲ್ಲ ಎನಿಸಿಕೊಂಡ ಮೇಲೆ ಬದುಕಿನಲ್ಲಿ ಹತ್ತು ಜನಕ್ಕೆ ಮಾದರಿಯಾಗಿ ನಡೆಯುವುದಾದರೆ ಅದೇ ಜೀವನ
ಈಗ ಬದುಕಿನ ಅರ್ಥ ತಿಳಿಯುವುದೇ ಜೀವನ ಅನ್ನಿಸುತ್ತಾ ಇದೆ
ಅದಕ್ಕಾಗಿಯೇ ಅನ್ನೋದು ನಮ್ಮ ಜೀವನದ ಗುರಿ ಎಂದೂ ಒಂದೆಡೆ ನಿಲ್ಲುವುದೇ ಇಲ್ಲ . ನಾವದನ್ನು ಬೆನ್ನಟ್ಟುತ್ತಿದ್ದಂತೆ ಅದೂ ಮುಂದೆ ಮುಂದೆ ಓಡುತ್ತಿರುತ್ತದೆ.

1 comment:

  1. ರೂಪಾ,

    ನಿಮ್ಮ ಅನಿಸಿಕೆ ಸರಿ. ಒಂದು ಪಡೆದ ಮೇಲೆ ಇನ್ನೊಂದು ಬೇಕು ಎಂದು ಮನಸು ಬಯಸುವುದರಿಂದಲೇ ಅಲ್ಲವೇ ಜೀವನ ದಿನನಿತ್ಯದ ಏಕತಾನತೆಯ ನಡುವೆಯೂ ಬೇಸರವಾಗದೆ ಇರುವುದು. ಇರುವುದೆಲ್ಲವ ಬಿಟ್ಟು ಇರದಿರುವುದರ ಕಡೆಗೆ ತುಡಿಯುವುದೇ ಜೀವನ, ಅಲ್ಲವೇ?

    ಚಿಕ್ಕ, ಚೊಕ್ಕ ಬರಹ, ಇಷ್ಟವಾಯಿತು :)

    -ಉಮೇಶ್

    ReplyDelete

ರವರು ನುಡಿಯುತ್ತಾರೆ