Thursday, May 14, 2009

ಹೆಗ್ಗಣಗಳು ಹಾವುಗಳು ಕುರಿಗಳು

ಆತ ಭಾರತದ ಪ್ರಖ್ಯಾತ ಹೆಗ್ಗಣ ಇಲಿ ನಿರ್ಮೂಲನ ಕಂಪನಿಯ ಮೇಲಾಧಿಕಾರಿಯಾಗಿ ನೇಮಕಗೊಂಡ.
ಅದು ಕೇಂದ್ರ ಸರಕಾರದ ಅಧೀನದ ಕಂಪನಿ
ಅವನಿಗೋ ಎಲ್ಲಾ ಹೆಗ್ಗಣ ಇಲಿಗಳನ್ನೂ ಹೇಳ ಹೆಸರಿಲ್ಲದಂತೆ ಮಾಡಿ ತಾನು ಹೆಸರುವಾಸಿಯಾಗುವ ಮಹದಾಸೆ.
ಸರಕಾರದಿಂದ ಸುತ್ತೋಲೆ ಬಂದಿತ್ತು"ಎಲ್ಲಾ ಹೆಗ್ಗಣಗಳನ್ನೂ ಈಗಿಂದೀಗಲೆ ನಿರ್ಮೂಲನ ಮಾಡುವ ಅಧಿಕಾರ ನಿಮಗೆ ವಹಿಸಲಾಗಿದೆ"
ಸರಿ ಆತನ ದಂಡಯಾತ್ರೆ ಶುರುವಾಯ್ತುಮೊದಲು ಚಿಕ್ಕ ಪುಟ್ಟ ಕಛೇರಿಗಳಲ್ಲಿ ಕಾಣಸಿಗುತ್ತಿದ್ದ ಎಲ್ಲಾ ಇಲಿಗಳನ್ನು ಹಿಡಿದು ಹಾಕಿದ.ನಂತರ ದೊಡ್ಡ ಕಚೇರಿಗಳಲ್ಲಿ ಶಿಳ್ಳೇ ಹೊಡೆಯುತ್ತಿದ್ದ ಇಲಿಗಳನ್ನುಬಲೆಗೆ ಹಾಕಿಕೊಂಡ.
ಪೇಪರ್‌ನಲ್ಲಿ ಈತನ ಬಗ್ಗೆ ಬಹು ಮೆಚ್ಚುಗೆಯ ಮಾತುಗಳು ಕಾಣಲಾರಂಭಿಸಿದವು. ಎಲ್ಲೆಲ್ಲೂ ಅವನದೇ ಮಾತು.ಬಹಳ ಬೇಗ ಪ್ರಸಿದ್ದಿಯಾದ ಆತ ಮತ್ತಷ್ಟು ಹುರುಪುಗೊಂಡ.
ಹೆಗ್ಗಣಗಳ ಬೇಟೆಗೆ ಸಂಚು ಹಾಕಲಾರಂಭಿಸಿದ.ಸಾಧ್ಯವಿದ್ದ ಕಡೆ ಎಲ್ಲಾ ಅಡಗು ಕ್ಯಾಮೆರಾ ಅಳವಡಿಸಿದ.ಒಮ್ಮೆ ಒಂದು ಕಛೇರಿಯಲ್ಲಿ ಹೆಗ್ಗಣವೊಂದನ್ನು ಸ್ವತ: ಅಲ್ಲಿನ ಮೇಲಾಧಿಕಾರಿಯೊಬ್ಬರೇ ತಮ್ಮ ಬ್ಯಾಗಿನಿಂದ ತೆಗೆದು ಟೇಬಲ್ ಕೆಳಗೆ ಹಾಕುತ್ತಿದ್ದುದು ಕಂಡು ದಂಗಾದ.
ಮೊದಲು ಆ ಹೆಗ್ಗಣವನ್ನು ಹಿಡಿಯಲು ಯಾತ್ರೆ ಶುರು ಮಾಡಿದ ಜೊತೆಗೆ ಮಾಧ್ಯಮದವರೆಲ್ಲಾ . ಮೇಲಾಧಿಕಾರಿ ಹೆಗ್ಗಣದ ಸಮೇತ ಸಿಕ್ಕಿಹಾಕಿಕೊಂಡ.ಹೀಗೆ ಹಲವರು ಹೆಗ್ಗಣಗಳ ಸಂಸಾರ ಬೆಳೆಯಲೆಂದೇ ತಮ್ಮ ಕಛೇರಿಯ ಎಲ್ಲಾ ಸಮಯವನ್ನು ಬಳಸಿಕೊಳ್ಳುತ್ತಿದ್ದುದ್ದನ್ನು ಗಮನಿಸಿದ
ನಂತರ ಒಂದೊಂದು ಕಛೇರಿಯನ್ನೂ ಜಾಲಾಡಿ ಹೆಗ್ಗಣಗಳನ್ನೂ ಅವುಗಳ ಜೊತೆ ನೌಕರರನ್ನೂ ಪತ್ತೆ ಹಚ್ಚಲಾರಂಭಿಸಿದ. ಇಲಿಗಳು ಹೆಗ್ಗಣಗಳು ಇವನಿಗೆ ಹೆದರತೊಡಗಿದವು ಬಿಲದಿಂದ ಹೊರಗೆ ಬರಲಿಲ್ಲ. ಇಲಿ ಹೆಗ್ಗಣಗಳಿಂದಲೇ ಬದುಕುತ್ತಿದ್ದ ಹಾವುಗಳು ಸೊರಗತೊಡಗಿದವು
ಇಂತಹ ಸಮಯದಲ್ಲೇ ಮಂತ್ರಿಯೊಬ್ಬರಿಂದ ಬುಲಾವ್ ಬಂತು.
"ಬರೀ ಇಲಿಗಳನ್ನು ಹಿಡಿಯಿರಿ ಸಾಕು ..ಹೆಗ್ಗಣಗಳ ತಂಟೆ ನಿಮಗೇಕೆ . "ಎಂದರು
"ತಾನು ಬಂದಿರುವುದೇ ಹೆಗ್ಗಣಗಳ ನಿರ್ಮೂಲನೆಗಾಗಿ " ಎಂದು ಸಮರ್ಥಿಸಿಕೊಂಡ"ಹೆಗ್ಗಣಗಳ ನಿರ್ಮೂಲನೆ ಸಾಧ್ಯಾನೆ ಇಲ್ಲಾರಿ. ಇಲಿಗಳಿರೋವರೆಗೆ ಹೆಗ್ಗಣಗಳಿರುತ್ತವೆ. ಹೆಗ್ಗಣಗಳಿದ್ದರೆ ತಾನೆ ಹಾವುಗಳಿಗೆ ಹಬ್ಬ?" ಮಂತ್ರಿ ತನ್ನ ಕನ್ನಡಕದಿಂದ ಕಣ್ಣರಳಿಸಿದ
"ಸಾರ್ ಆ ಜವಾಬ್ದಾರಿ ನಾನು ತಗೋತೀನಿ" ಆತ್ಮ ವಿಶ್ವಾಸದಿಂದ ನುಡಿದ"ಇಲ್ಲವಯ್ಯ ಆಗೊಲ್ಲ ನಿಂಗೆ ಜವಾಬುದಾರಿ ಕೊಡೋಕೆ ಇಲ್ಲಿ ಯಾರೂ ಕಾದು ನಿಂತಿಲ್ಲ . ಬೇಕಿದ್ದರೆ ನೀವು ಹೆಗ್ಗಣಗಳ ರಾಜನೆನಿಸಿಕೊಳ್ಳಿ. ಈಗಾಗಲೇ ಇಲಿಗಳನ್ನು ಹಿಡಿಗು ಬಹಳಪ್ರಸಿದ್ದರಾಗಿದ್ದೀರಾ" ಎಂದು ಅವನೆಡೆ ಸೂಟ್‌ಕೇಸ್ ಒಂದನ್ನು ಎಸೆದರು.
ಅದಕ್ಕಾಗಿಯೇ ಕಾದುನಿಂತಿದ್ದವನಂತೆ ಅವನು ಸೂಟ್‌ಕೇಸ್ ತೆಗೆದುಕೊಂಡ. ಮಂತ್ರಿಯ ಮನೆಯಲ್ಲಿ ತುಂಬಾ ಹೆಗ್ಗಣಗಳು ಓಡಾಡುತ್ತಿದ್ದವು ಜೊತೆಗೆ ಇಲಿಗಳು ಅವುಗಳನ್ನೆಲ್ಲಾನುಂಗುವ ಹಾವಾಗಿ ಮಂತ್ರಿ ಕಂಡ."
"ನಾನು ಯಾವಾಗ ಹೆಗ್ಗಣಗಳ ರಾಜ ಆಗೋದು ಸಾರ್?" ಸೂಟಕೇಸ್ ತೆಗೆಯುತ್ತಾ ಕೇಳಿದ
"ಈಗಲೇ ......... ಮುಂದಿನ ಹೆಗ್ಗಣಗಳ ಎಲೆಕ್ಷನ್‌ನಲ್ಲಿ ನೀವೂ ನಿಲ್ಲಿ. ಟಿಕೆಟ್ ನಮ್ಮ ಹಾವುಗಳ ಪಾರ್ಟಿಯಿಂದ ಕೊಡಿಸ್ತೇನೆ"
ವಾರವೊಂದು ಕಳೆದಿತ್ತು
ಆ ಹೆಗ್ಗಣ ನಿರ್ಮೂಲನಾಧಿಕಾರಿ ಹೆಗ್ಗಣಗಳ ಜೊತೆ ಮೆರವಣಿಗೆ ಹೊರಟಿದ್ದ ವೋಟು ಕೇಳಲು. ಎಲ್ಲೆಲ್ಲೂ ಹೆಗ್ಗಣಗಳು ಹಾವುಗಳು ಇಲಿಗಳು
ಇಕ್ಕೆಲಗಳಲ್ಲಿ ಆ ಹೆಗ್ಗಣಗಳ ಜಾತ್ರೆಯನ್ನು ಕುರಿಗಳು ಅಚ್ಚರಿಯ ಕಣ್ಣಿಂದ ನೋಡುತ್ತಿದ್ದವು

4 comments:

  1. ಇಲಿ, ಹೆಗ್ಗಣ, ಹಾವು, ಮೇಲೆ ಹದ್ದು ಹದ್ದಿಗೂ ಕೊಡುವವರುಂಟು ಗುದ್ದು
    ಹೀಗೆ ಒಂದೆರಡು ಸಾಲುಗಳು ನನ್ನ ಕವನದಲ್ಲಿದ್ದುದು ನಿಮ್ಮ ವೈಚಾರಿಕತೆ ವಾಸ್ತವವನ್ನು ಹಾಸ್ಯ-ವ್ಯಂಗದ ಲೇಪನ ಹಚ್ಚಿ ಬಹು ವೇದ್ಯವಾಗುವಂತೆ ವಿವರಿಸಿದ್ದೀರಿ,
    ಹೆಗ್ಗಣ ನಿವಾರಣೆಗೆ ಪರವಾನಗಿ ಕೊಟ್ಟವರೇ ಹಾವು ಸಂರಕ್ಷಣೆ ಮಾಡುವದು ಹದ್ದುಗಳ ವಂಚನೆಯನ್ನು ಕಾಪಾಡಲು ಅಲ್ಲವೇ....

    ReplyDelete
  2. ರೂಪ ಮೇಡಮ್,

    ನೀವು ನನ್ನ ಬ್ಲಾಗಿಗೆ ಬಂದಿದ್ದಕ್ಕೆ ಸಂತೋಷ. ಹಾಗೆ ನಿಮ್ಮ ಬ್ಲಾಗಿಗೆ ಬಂದೆ...ನಿಮ್ಮ ಇಲಿ ಹೆಗ್ಗಣಗಳ ಕತೆ ಚೆನ್ನಾಗಿದೆ...ಪ್ರಸ್ತುತ ವಾಸ್ತವ ವ್ಯವಸ್ಥೆಯನ್ನು ತುಂಬಾ ಚೆನ್ನಾಗಿ ವಿವರಿಸಿದ್ದೀರಿ...ಬರಹ ಇಷ್ಟವಾಯಿತು...ನಿಮ್ಮ ಬ್ಲಾಗನ್ನು ಲಿಂಕಿಸಿಕೊಳ್ಳುತ್ತೇನೆ...
    ನೀವು ನನ್ನ ಬ್ಲಾಗಿಗೆ ಬರುತ್ತಿರಿ...

    ಧನ್ಯವಾದಗಳು...

    ReplyDelete
  3. ಭ್ರಷ್ಟಾಚಾರ ವ್ಯವಸ್ಥೆಗೆ ಕನ್ನಡಿ ಹಿಡಿದ೦ತಿದೆ ನಿಮ್ಮ ಇಲಿ-ಹೆಗ್ಗಣ ಕಥೆ, ಚೆನ್ನಾಗಿದೆ.

    ReplyDelete
  4. ಹಾಗೆ ಎಲ್ಲೊ ನಿಮ್ಮ ಪ್ರತಿಕ್ರಿಯೆ ನೋಡುತ ನಿಮ್ಮ ಬ್ಲಾಗಿಗೆ ಬಂದೆ.... ಎಲ್ಲ ಬರಹಗಳು ತುಂಬ ಚೆನ್ನಾಗಿ ಇದೆ....ಪ್ರಸ್ತುತ ಭ್ರಸ್ಟಾಚಾರದ ರಾಜಕಾರಣವನ್ನು ಇಲಿ ಹೆಗ್ಗಣಗಳ ಕಥೆ ಮೂಲಕ ಚೆನ್ನಾಗಿ ವಿವರಿಸಿದ್ದೀರ.... ಹಾಗೆ ಶ್ರುತಿ ಬಗೆಗಿನ ಲೇಖನ ಚೆನ್ನಾಗಿದೆ....
    ಬಿಡುವಿದ್ದಾಗ ನಮ್ಮ ಬ್ಲಾಗಿನ ಲೋಕಕ್ಕೂ ಒಮ್ಮೆ ಬಂದು ಹೋಗಿ
    ಗುರು

    ReplyDelete

ರವರು ನುಡಿಯುತ್ತಾರೆ