Saturday, September 3, 2011

ದಡವಿರದ ಸಾಗರ


"ಹುಡುಗಿಯರು ಸಿಗರೇಟ್ ಥರಾ ಜೋಕೆಯಿಂದ ಇದ್ರೆ ನಾವು ಎಂಜಾಯ್ ಮಾಡಬಹುದು.ಸ್ವಲ್ಪ ಹುಶಾರು ತಪ್ಪಿದ್ರೆ ನಮ್ಮನ್ನೇ ಸುಟ್ಟು ಬಿಡ್ತಾರೆ , ಅದಕ್ಕೆ ಈ ಹುಡುಗಿಯರ ವಿಷಯದಲ್ಲಿ ನಾನು ತುಂಬಾ ಶಿಸ್ತು," ಬೆರಳುಗಳ ಸಂದಿಯಲ್ಲಿ ಒದ್ದಾಡುತ್ತಿದ್ದ ಸಿಗರೇಟ್ ನತ್ತಲೇ ಅಭಿಯ ದೃಷ್ಟಿ ನೆಟ್ಟಿತ್ತು.


ರವಿ ನಿಂತಲ್ಲೇ ಸಿಡಿಮಿಡಿಗುಟ್ಟಿದ


"ಅದಕ್ಕೇನೀಗ ? ಅಮ್ಮಿ ನಿನ್ನ ಬಂದು ಕೇಳಿಕೊಂಡ್ಳಾ ಪ್ರೀತಿ ಮಾಡು ಅಂತ?: ನೀನು ಹೀಗೆ ಮಾಡ್ತೀಯ ಅಂತ ನಾನಂದುಕೊಂಡಿರಲಿಲ್ಲ ಕಣೋ"


"ನಾನೇನು ಅವಳನ್ನ ಪ್ರೀತಿ ಮಾಡ್ತೀನಿ ಅಂದಿದ್ನಾ? ನಾನು ಹುಡುಗೀರ್ ವಿಷಯದಲ್ಲಿ ಶಿಸ್ತು ಅಂದನಲ್ಲ ಅದರ ಅರ್ಥಾನೆ ಇಲ್ಲಿಂದ ಒಳಗೆ ಯಾರಿಗೂ ಪ್ರವೇಶ ಇಲ್ಲ ಕಣೋ ." ಕೈನಲ್ಲಿದ್ದ ಸಿಗರೇಟ್ ಅನ್ನ ಬೂಟಲ್ಲಿ ಹೊಸೆದು ಬಲಗೈ ಅನ್ನು ಎದೆಯ ಮೇಲಿಟ್ಟು ಕೊಂಡ..".... ಯಾರನ್ನೂ ಹಚ್ಚಿಕೊಳ್ಳೋದು ಅದರಿಂದ ನೋವು ಪಡೆಯೋದು....... ನೆವರ್ ! ಲೈಫ್ಆಲ್ಲಿ ಅಂತ ತಪ್ಪು ಯಾವತ್ತೂ ಮಾಡಲ್ಲ "ಕಾರ್ ಡೋರ್ ಓಪೆನ್ ಮಾಡುತ್ತಾ ಮತ್ತೆ ನುಡಿದ ......


"ಅಮ್ಮಿನ ಕೇಳು ನಾನು ಲವ್ ಮಾಡ್ತಿದೀನಿ ಅವಳ ಹತ್ರ ಹೇಳಿದ್ನಾ ಯಾವತ್ತಾದರೂ ಅಂತ ?ಐ ಲವ್ ಯು ಗೂ ಐ ಲೈಕ್ ಯುಗೂ ತುಂಬಾ ವ್ಯತ್ಯಾಸ ಇದೆ"


"ಏ ಕತ್ತೆ ರಾಸ್ಕೆಲ್ ಅವಳನ್ನ ಮತ್ತೆ .....ಯಾಕೋ ಹಾಳು ಮಾಡಿದೆ?"ರವಿಯ ಕಂಠ ಗದ್ಗದಿತವಾಗಿತ್ತು


"ನಾನು ಅವಳನ್ನ ರೇಪ್ ಮಾಡಿದ್ನಾ ಕೇಳು?ಅವಳೂ ಒಪ್ಪಲಿಲ್ವಾ ಕೇಳು,ಅವಳು ಹಾಳಾದಳು ಅಂದ್ರೆ ನಾನೂ ಹಾಳಾದೆ ಅಂತ ಅನ್ಕೋ ,....................... ಮತ್ತೆ ಅವಳಿಗೆ ಬೇಸರ ಆಗಿದ್ರೆ ಸಾರಿ .... ನಿಂಗೂ ಅಷ್ಟೆ ಸಾರಿ................ ಈಗ ನಾನು ಹೋಗ್ಬೇಕು," ಕೈನಲ್ಲಿದ್ದ ಮೊಬೈಲ್ ನತ್ತ ನೋಡುತ್ತಾ ನುಡಿದ


"ಆದರೂ ಐ ಹ್ಯಾವ್ ಸಮ್ ಸಾಫ್ಟ್ ಕಾರ್ನರ್ ಆನ್ ದಿಸ್ ಅಮ್ಮಿ ಉರುಫ್ ಅಮಿತಾ, ಬಟ್ ನನ್ನ ಸ್ವಭಾವ ಹೀಗೆ ಅದು ಅವಳಿಗೂ ಗೊತ್ತು. ಆಸ್ಕ್ ಹರ್ ಟು ಫರ‍್ಗೆಟ್ ಮಿ, ಪ್ರೀತಿ ಅನ್ನೋದು ದೇಹಕ್ಕೆ ಸಂಬಂಧ ಪಟ್ಟಿದ್ದಲ್ಲ ಅಂತ ಹೇಳು,ಅವಳು ಬೋಲ್ಡ್ ಇದಾಳೆ , ಶಿ ನೋಸ್ ಹೌ ಟು ಮ್ಯಾನೇಜ್ ದ ಸಿಚ್ಯುಯೇಶನ್"


"ಓಕೆ ರವಿ ನಾನು ಹೊರಡ್ತಿದ್ದೀನಿ ಬಾಯ್" ಅಭಿಜಿತ್ ಮಾತು ಮುಗಿಯಿತೆಂಬಂತೆ ಕಾರ್ ಹತ್ತಿದ


ಕಣ್ಣ ಮುಂದೆಯೇ ಹೊರಡುತ್ತಿದ್ದ ಕಾರ್ ಆನ್ನು ಅಸಹಾಯಕನಂತೆ ನೋಡುತ್ತಿದ್ದ ರವಿ


__________________________


"ಡ್ಯಾಡಿ ನನ್ನ ಮದುವೆಯಾಗೋನು ಹೇಗಿರಬೇಕು ಅಂತ ನನ್ನದೇ ಆದ ಕಲ್ಪನೆ ಇದೆ. ನೀವು ಸುಮ್ಮನೆ ರೆಕ್ಕೆ ಪುಕ್ಕ ಕಟ್ಟಿಕೊಂಡು ಆಕಾಶದಲ್ಲಿ ಹಾರಾಡಬೇಡಿ, ಅವನು ಕುಡುಕ ಆಗಿರ್ಬಾರದು, ಸಿಗರೇಟ್ ಸೇದಬಾರದು , ಶ್ರೀಮಂತ ಆಗಿರ್ಬೇಕು, ಅಪ್ಪಟ್ಟ ಬ್ಯಾಚಲರ್ ಆಗಿರ್ಬೇಕು , ಇವೆಲ್ಲಾ ನಂಗೆ ಬೇಕಿಲ್ಲ, ಏನಾದರೂ ಆಗಿರಲಿ ಮೊದಲು ನನ್ನ ಅರ್ಥ ಮಾಡಿಕೊಂಡು ಹೋಗೋನಿರಬೇಕು, ನನ್ನ ಫ್ರೀ ಲೈಫ್‍ಗೆ ಅಡ್ಡ ಬರಬಾರದು, ಈ ಟ್ರೆಡಿಶನಲ್ಸ್ ಸೀರೆ ಚೂಡಿದಾರ್ ಅದೂ ಇದೂ ತಲೆ ತಿನ್ಬಾರದು, ಮುಖ್ಯವಾಗಿ ನಂಗೆ ಅಡ್ಜಸ್ಟ್ ಆಗಬೇಕು, ಹಿಂಗಿದ್ರೆ ಅವನು ಕುಂಟ ಆಗಿರಲಿ ಕುರುಡ ಆಗಿರಲಿ ಅವನನ್ನ ನಾನೇ ಜೀವನ ಪರ್ಯಂತ ಸಾಕ್ತೀನಿ..............." ಮೊಬೈಲ್ ನಲ್ಲಿ ತೇಜ ಕಳಿಸಿದ್ದ ಮೆಸೇಜ್ ನೋಡಿ ಆಶ್ಚರ್ಯವೇನು ಆಗಲಿಲ್ಲ ಶ್ರೀಕಾಂತನಿಗೆ...... ಮೊದಲೇ ನಿರೀಕ್ಷಿಸಿದ್ದ ಉತ್ತರವದು....


ಮಕ್ಕಳಿಬ್ಬರಿಗೂ ಯಥೇಚ್ಚ ಸ್ವಾತಂತ್ರ್ಯ ಕೊಟ್ಟ ಪರಿಣಾಮವಿದು, ಆದರೆ ಅದಕ್ಕೆ ಶಾಕ್ ಆಗುವಂತಹ ವ್ಯಕ್ತಿ ಅಲ್ಲ ಶ್ರೀಕಾಂತ್ , ಅವನೂ ಇದನ್ನೇ ಬಯಸಿದ್ದ, ಮಕ್ಕಳು ಹೀಗೆ ಬೆಳೆಯಲ್ಲಿ ಎಂಬುದು ಅವನ ಇಷ್ಟವಾಗಿತ್ತು...


"ತೇಜು ಜೀವನ ಪರ್ಯಂತ ಸಾಕ್ತೀನಿ ಅನ್ನೋದಕ್ಕೆ ನಿನ್ನ ಹತ್ರ ಏನಿದೆ?" ತುಂಟ ಪ್ರಶ್ನೆ ಕಳಿಸಿದ ಮತ್ತೆ.....


ರೆಡಿಮೇಡ್ ಉತ್ತರ ಬಂತು


"ನಿನ್ನ್ ಆಸ್ತಿ ಅಂದರೆ ನಮ್ಮ ತಾತನ ಆಸ್ತಿ ಮೂರು ಜನ್ಮ ಕ್ಕೆ ಆಗೋ ಅಷ್ಟು ಇದೆ, ಅದರಲ್ಲಿ ನಂಗೂ ಸಮಪಾಲು ಬರಬೇಕು ...... ಒಂದುವರೆ ಜನ್ಮಕ್ಕಂತೂ ಗ್ಯಾರೆಂಟಿ ಆಗುತ್ತೆ , ನೀನೇನು ಯೋಚನೆ ,ಮಾಡ್ಬೇಡ ನಿನ್ನನ್ನೂ ನೋಡ್ಕೋತೀನಿ............"


ಶ್ರೀಕಾಂತನ ಮೊಗದಲ್ಲಿ ಕಿರು ನಗೆ ಮತ್ತೆ ಆಫೀಸಿನ ಚೇರ್‌ಗೆ ಒರಗಿದ


ಅಂದ ಹಾಗೆ ತೇಜ ಆಲಿಯಾಸ್ ತೇಜಸ್ವಿನಿ ಅಭಿಜಿತ್‌ನ ತಂಗಿ


---------------------------------------------------------------------------------------------------------


"ರವಿ . ಇಟ್ ಈಸ್ ಟೂ ಮಚ್ ...................ನೀನ್ಯಾಕೆ ಆ ಅಭಿ ಹತ್ರ ಕೇಳ್ಕೊಳ್ಳೋದಿಕ್ಕೆ ಹೋಗಿದ್ದೆ? ನಾನು ನಿನ್ಹತ್ರ ಹೇಳ್ಕೊಂಡಿದ್ದೇ ತಪ್ಪಾಗಿ ಹೋಯ್ತು. " ತನ್ನ ಐಶಾರಾಮಿ ಚೇರಿನಲ್ಲಿ ಕುಳಿತು ಹಲುಬುತ್ತಿದ್ದಳು ಅಮಿತಾ..............


ಕಣ್ಣಲ್ಲಿ ನೀರಿನ ಪಸೆಗಿಂತ ಕೋಪದ ಕಿಡಿ ಕಾಣುತ್ತಿತ್ತು


"ಸಾರಿ ಅಮ್ಮಿ ನೆನ್ನೆ ನೀನು ಅತ್ತಿದ್ದು ತುಂಬಾ ಬೇಜಾರಾಗಿ ಹೋಯ್ತು , ನಾನು ನಿನ್ನ್ ಕ್ಲೋಸ್ ಫ್ರೆಂಡ್ . ನನ್ ಫ್ರೆಂಡ್‌ಗೆ ಅನ್ಯಾಯ ಆದ್ರೆ ಹೋಗಿ ಕೇಳೋ ಅಧಿಕಾರ ನಂಗಿಲ್ವಾ?" ರವಿ ಆ ಕೋಪದ ಕಿಡಿಯನ್ನೇ ದೃಷ್ಟಿಸಿ ನೋಡುತ್ತಿದ್ದ


"ಅನ್ಯಾಯ ಆಗಲಿಲ್ಲ ಕಣೋ , ಹಿ ನೆವರ್ ಟೋಲ್ಡ್ ಮಿ ಹಿ ಲವ್ಸ್ ಮಿ ಅಂತ ಗೊತ್ತಾ ?, ಮತ್ತೆ ಹೆಚ್ಚಾಗಿ ನಂಗೆ ಗೊತ್ತಿತ್ತು ನಮ್ಮಿಬ್ಬರ ರಿಲೇಶನ್ ಕೇವಲ ಫನ್‌ಗಾಗಿ ಮಾತ್ರ ಅಂತ..............................ಬಟ್ ಸ್ಟಿಲ್ ಐ ಲವ್ಡ್ ಹಿಮ್"


"ಆದರೆ ಅವನ ಜೊತೆ ಯಾಕೆ ......................?" ಮುಂದುವರೆಸಲಾಗದೆ ನೆಲ ನೋಡಿದ



"ಕೇಳು ಪೂರ್ತಿ.... ಯಾಕೆ ಹೋಗಿದ್ದೆ ಅಂತ ಅಲ್ವಾ?"ಕೆರಳಿದವಳಂತೆ ತಲೆ ಆಡಿಸಿದಳು


ನಿಂಗೆ ಗೊತ್ತಾ ರವಿ .. ? ........ಹೆಣ್ಣು ಪ್ರೀತಿಗೋಸ್ಕರ ಸೆಕ್ಸ್ ಕೊಡ್ತಾಳೆ ಆದರೆ ಗಂಡು ಸೆಕ್ಸ್ ಗಾಗಿ ಪ್ರೀತಿ ತೋರಿಸ್ತಾನೆ, ...........ನಾನು ಪ್ರೀತಿಗೋಸ್ಕರ ಅವನ ಜೊತೆ ಫಿಸಿಕಲ್ ಕಾಂಟ್ಯಾಕ್ಟ್ ಇಟ್ಕೊಂಡೆ ಇವತ್ತಲ್ಲ ನಾಳೆ ಅವನು ನನ್ನ ಲವ್ ಮಾಡಬಹುದು ಅಂತ , ಆದರೆ ಅದು ಆಗಲಿಲ್ಲ, ಇಲ್ಲ ಅವನು ಮಾಡಲಿಲ್ಲ ಅವನಿಗೆ ನನ್ನ ಪ್ರೀತಿ ಅರ್ಥ ಆಗಲಿಲ್ಲ"


ಆವೇಶದಲ್ಲಿ ಶುರುವಾದ ಮಾತುಗಳು ಕೊನೆಯ ವಾಕ್ಯಕ್ಕೆ ಬರುತ್ತಿದ್ದಂತೆ ಅಳುವಾಗಿ ಬದಲಾಯ್ತು.


ಕಿಟಕಿಯತ್ತ ತಿರುಗಿದ್ದ ಅಮಿತ ಮತ್ತೆ ರವಿಯತ್ತ ನೋಡಿದಳು,


"

ಆದರೆ ಆ ಅಭಿಗೆ ಪ್ರೀತಿಯ ಅರ್ಥ ಗೊತ್ತಾಗಬೇಕು ಕಣೋ . ಪ್ರೀತಿ ಕಳೆದುಕೊಳ್ಳುವ ನೋವು ಅವನಿಗೆ ಅರ್ಥ ಆಗಬೇಕು ಆಗಲೆ ಈ ಮನಸಿಗೆ ನೆಮ್ಮದಿ , ಕೂತರೆ ಪ್ರೀತಿ ನಿಂತರೆ ಪ್ರೀತಿ ಅಂತ ಒದ್ದಾಡಬೇಕು ಆಗ ನೋಡು ನಾನು ಗಹ ಗಹಿಸಿ ನಗಬೇಕು,................... ಹಾಗೆ ಮಾಡ್ತೀನಿ ನಾನು..... ಹುಡುಗಿಯರು ಸಿಗರೇಟ್ ಇದ್ದ ಹಾಗಲ್ಲ ಕಣೋ ಬೆಂಕಿ ,ಬೆಂಕಿ ಇದ್ದಹಾಗೆ , ಬದುಕು ಕೊಟ್ಟರೆ ಬೆಳಕು ನೀಡುವವರು, ಬದುಕನ್ನು ಕಿತ್ತುಕೊಂಡರೆ ಇಡೀ ದೇಹವನ್ನಲ್ಲ ಬದುಕನ್ನೇ ಸುಟ್ಟು ಬಿಡುವಂತಹವರು ಅಂತ ನಾನು ಅವನ ಮುಂದೇ ಕಿರುಚಿ ಕುಣಿಯಬೇಕು"



ಅವಳ ಮಾತು ಅರ್ಥವಾಗದವನಂತೆ ಅವಳನ್ನೇ ನೋಡಿದ ರವಿ

.

ಕೈನಲ್ಲಿದ್ದ ಮೊಬೈಲ್ ಎತ್ತಿ ನಂಬರ್ ಒಂದಕ್ಕೆ ಕಾಲ್ ಮಾಡಿದಳು


"

ಹಲೋ ಕಿರಣ್ , ಲಾಸ್ಟ್ ವೀಕ್ ನನ್ನ ಪಿ ಎ ಪೋಸ್ಟ್ ಗೆ ಫೈನಲ್ ರೌಂಡ್‍ನಲ್ಲಿ ರಿಜೆಕ್ಟ್ ಮಾಡಿದೆನಲ್ಲ ಒಬ್ಬ ಹುಡುಗಿ ಏನವಳ ಹೆಸರು ಸುಪ್ರೀತ ಅಂತ ಅಲ್ವಾ

?"


"

ಯೆಸ್ ಮೇಡಮ್

"


"

ಅವಳನ್ನ ಕರೆಯಿರಿ, ನಂಗೆ ಮನೆಗೆ ಒಬ್ಬ ಪಿಎ ಬೇಕು .ಈ ಹೌಸ್ ಕೀಪಿಂಗ್ ಗಾರ್ಡನಿಂಗ್ ನನ್ನ ಡೈಲಿ ಹೌಸ್ ರೊಟೀನ್ಸ್ ಮೆಂಟೇನ್ ಮಾಡೋಕೆ. ಇಫ್ ಶಿ ಹ್ಯಾಸ್ ಇಂಟರೆಸ್ಟ್ ಲೆಟ್ ಅಸ್ ಟೇಕ್ ಹರ್

"


"

ಓಕೆ ಮೇಡಮ್"ಅತ್ತಲಿಂದ ಅಗತ್ಯಕ್ಕಿಂತ ಹೆಚ್ಚು ಉತ್ಸಾಹವಿದ್ದಂತೆ ತೋರಿತು ,

ಆದರೆ ಅದನ್ನು ಗಮನಿಸದವಳಂತೆ ಫೋನ್ ಆಫ್ ಮಾಡಿದಳು


ರವಿ ಅವಳನ್ನೆ ನೋಡುತ್ತಾ ಬೆಪ್ಪಾದ

,

ಹೆಂಗಸರ ಭಾವನೆಗಳು ಕ್ಷಣಕ್ಕೊಂದು ರೀತಿ ಬದಲಾಗುತ್ತದೆ ಎಂಬುದನ್ನು ಓದಿದ್ದ ಆದರೆ ಇಲ್ಲಿ ಪ್ರತ್ಯಕ್ಷ ನೋಡಿದ್ದ


ಕೋಪ , ದೈನ್ಯತೆ, ದ್ವೇಷ, ಅಳು, ಸೇಡು ಬುದ್ದಿವಂತಿಕೆ , ಇನ್ನೂ ಏನೇನೋ ಅರ್ಥವಾಗಲಿಲ್ಲ


--------------------------------------------------------------------------


ಇತ್ತ ಕಿರಣ ಸುಪ್ರೀತಾಗೆ ಕಾಲ್ ಮಾಡುತ್ತಿದ್ದ


"

ಸುಪ್ಪಿ, ಮೇಡಮ್ ಮನೆಗೆ ಒಬ್ಬ ಅಸಿಸ್ಟೆಂಟ್ ಬೇಕಂತೆ , ನಿನ್ನನ್ನೆ ಸೆಲೆಕ್ಟ್ ಮಾಡಿದಾರೆ ಒಪ್ಪಿಕೊಂಡುಬಿಡು.. ,,ಬೆಂಗಳೂರಲ್ಲಿ ಕೆಲಸ ಇಲ್ಲದೆ ಬದುಕೋದು ತುಂಬಾ ಕಷ್ಟ ಆಗುತ್ತೆ, ಎಷ್ಟು ದಿನಾಂತ ಅಲ್ಲಿ ಇಲ್ಲಿ ಇಂಟರ್ ವ್ಯೂಗೆ ಓಡಾಡ್ತಾ ಇರ್ತೀಯಾ

"


"

ಕಿರಣ್ ಆಫೀಸ್ ಆದರೆ ಪರ್ವಾಗಿಲ್ಲ ಆದರೆ ಮನೆಲಿ ಹೇಗೆ ಕೆಲಸಮಾಡೋದು? ನಾನು ಮಾಡಿರೋ ಬಿ ಎಗೆ ಏನೂ ವ್ಯಾಲ್ಯೂ ಇಲ್ವಾ?"

ಸುಪ್ರೀತಾ ನುಗ್ಗಿ ಬರುತ್ತಿದ್ದ ಅಳುವನ್ನು ತಡೆದುಕೊಳ್ಳುವ ಪ್ರಯತ್ನ ಮಾಡುತ್ತಿದ್ದಳು


"ಸುಪ್ರೀತಾ ಸ್ವಲ್ಪ ದಿನ...........ಅಷ್ಟೆ ............... ನಿನ್ ಇಂಗ್ಲೀಷ್ ಇಂಪ್ರೂವ್ ಮಾಡ್ಕೋ . ನಮ್ ಮೇಡಮ್ ತುಂಬಾ ಒಳ್ಳೆಯವರು . ಇಷ್ಟ ಆದರೆ ತುಂಬಾ ಸಹಾಯ ಮಾಡ್ತಾರೆ..............ಅದೂ ಇಷ್ಟು ದೊಡ್ಡ ಕಂಪೆನಿ ಬಾಸ್ ಪರ್ಸನಲ್ ಅಸಿಸ್ಟೆಂಟ್ ಅಂದ್ರೆ ಅದೂ ದೊಡ್ಡ ಗೌರವಾನೆ....................." ಕಿರಣ್ ಅವಳನ್ನು ಒಪ್ಪಿಸುತ್ತಿದ್ದ


""ಆಯ್ತು ನಾಳೆ ಎಷ್ಟು ಹೊತ್ತಿಗೆ ಬರಬೇಕು?" ನಿರ್ಧಾರಕ್ಕೆ ಬಂದವಳಂತೆ ಕೇಳಿದಳು


"ನಾಳೆ ಅರೌಂಡ್ ೧೦ಗೆ ಆಫೀಸ್‌ಗೆ ಬಾ. ಅಪ್ಪಿ ತಪ್ಪಿನೂ ನಾನು ನಿಂಗೆ ಗೊತ್ತಿರೋನು ಅಂತ ಹೇಳ್ಬೇಡ . ಮೇಡಮ್ ರೆಫರೆನ್ಸ್ ಇಷ್ಟ ಪಡಲ್ಲ..............ಸರೀನಾ?"


"ಆಯ್ತು ಕಿರಣ್ ಬಾಯ್"


"ಬಾಯ್ ಬಾಯ್"


ಮೊಬೈಲ್ ಆಫ್ ಮಾಡುತ್ತಿದ್ದಂತೆ ಸುಪ್ರೀತಾಳ ಮನಸು ಹಾರಾಡತೊಡಗಿತು


ತಾನೆಂತಹ ಬಲೆಗೆ ಸಿಲುಕುತ್ತಿದ್ದೇನೆಂಬ ಅರಿವು ಅವಳಿಗೆ ಒಂದಿನಿತಾದರೂ ಇದ್ದಿದ್ದಲ್ಲಿ...............................


ಈ ಕಥೆ ಮುಂದುವರೆಯುತ್ತಿರಲಿಲ್ಲ..................................................................................


6 comments:

  1. ೧. ಅಮಿತಾಳ ಗೈರು ಹಾಜರಿಯಲ್ಲಿ ಅಭಿಜಿತ್ ಬಗ್ಗೆ ಯಾವುದೇ ಅಭಿಪ್ರಾಯಕ್ಕೆ ಬರಲು ಅಶಕ್ಯ ಅಲ್ಲವೇ!

    ೨. ನೀವೆ ಹೇಳಿದಂತೆ ಮೊದಲೇ ಯತೇಚ್ಛ ಸ್ವಾತಂತ್ರ್ಯ ಕೊಟ್ಟು ಸಾಕಿದ ಮಕ್ಕಳಿಬ್ಬರು. ಶ್ರೀಕಾಂತ್ ಭವಿಷ್ಯ ಅಸ್ಪಷ್ಟ ಅನಿಸಿತು.

    ೩. ಅಮಿತಾ ಏನೇ ಆಧುನಿಕ ವಿಚಾರವಂತಳಾದರೂ. ದೈಹಿಕ ಸ್ವಾತಮ್ತ್ರ್ಯದ ಬಗ್ಗೆ ಚಿಂತಿಸಿದರೂ ಅವಳೂ ಹೆಣ್ಣು ಅದಕ್ಕೆ ಅತ್ತಳು. ಸೇಡಿನ ಬಹಾವಕ್ಕೆ ತಿರುಗಿದ ಅವಳ ಕಿಡಿ ನುಡಿ, ವಿಚಿತ್ರ ಅನಿಸಿ ಬಿಡುತ್ತದೆ! ಕಿರಣಳನ್ನೇ ಆಯ್ದುಕೊಂಡು ಸೇಡು ತೀರಿಸಿಕೊಳ್ಳುತ್ತಾಳೆ.

    ೪. ಕೊನೆಯ ಹಂತದಲ್ಲಿ ಸುಪ್ರೀತಳು ಎಡವಿದಳೇನೋ ಅನಿಸಿತು.

    ಒಟ್ಟಾರೆ ಒಳ್ಳೆ ಕಥನ ಶೈಲಿ.

    ನೀವೇ ಬರೆದಂತೆ :

    ತಾನೆಂತಹ ಬಲೆಗೆ ಸಿಲುಕುತ್ತಿದ್ದೇನೆಂಬ ಅರಿವು ಅವಳಿಗೆ ಒಂದಿನಿತಾದರೂ ಇದ್ದಿದ್ದಲ್ಲಿ...............................


    ಈ ಕಥೆ ಮುಂದುವರೆಯುತ್ತಿರಲಿಲ್ಲ............................................................


    ಬಿಡುವು ಮಾಡಿಕೊಂಡು ನನ್ನ ಬ್ಲಾಗುಗಳಿಗೂ ಬನ್ನಿರಿ:
    www.badari-poems.blogspot.com
    www.badari-notes.blogspot.com
    www.badaripoems.wordpress.com

    Face book Profile : Badarinath Palavalli

    ನಿಮ್ಮ ಓದಿಗೆ ನನ್ನ ಕವನಗಳು ಕಾದಿವೆ ಮತ್ತು ನಿಮ್ಮ ಅಭಿಪ್ರಾಯದ ಕಾಮೆಂಟುಗಳು ನನಗೆ ದಾರಿ ದೀಪ.

    ReplyDelete
  2. ರೂಪಾ ಅವರೇ,
    ಕತೆ ಕುತೂಹಲ ಕೆರಳಿಸಿ ಸಾಗುತ್ತಿದೆ,
    ಜೊತೆಗೇ ನಿಮ್ಮ ಮೇಲೆ ಕೋಪ ಕೂಡಾ ಬರ್ತಾ ಇದೆ,
    ಯಾಕಂದ್ರೆ,
    ಮಧ್ಯದಲ್ಲೇ ನಿಲ್ಲಿಸಿಬಿಟ್ರಲ್ಲಾ.............!!!!

    ReplyDelete
  3. ಮುಂದಿನ ಭಾಗಕ್ಕೆ ಕಾಯುತ್ತಾ...

    ReplyDelete
  4. "ಹೆಣ್ಣು ಪ್ರೀತಿಗೋಸ್ಕರ ಸೆಕ್ಸ್ ಕೊಡ್ತಾಳೆ ಆದರೆ ಗಂಡು ಸೆಕ್ಸ್ ಗಾಗಿ ಪ್ರೀತಿ ತೋರಿಸ್ತಾನೆ"
    ...ಇದು ವಸ್ತುಸ್ಥಿತಿ!

    ReplyDelete
  5. ಯಾವಾಗ ಮುಂದುವರಿಸುತ್ತಿರ :D
    ಎಂದಿನಂತೆ ಚೆನ್ನಾಗಿದೆ ರೂಪಾ ಮೇಡಂ..

    ReplyDelete
  6. ರೂಪಾ, ಚಂದ್ ಬರ್ತಾ ಐತಿ ತೊಗರಿ...
    ಇದು ಏನು ಶಾರ್ಟೋ ಅಥವಾ ಕಾದಂಬರಿ ಮಾಡೋ ಇರಾದೆನೋ...??

    ReplyDelete

ರವರು ನುಡಿಯುತ್ತಾರೆ