Tuesday, September 6, 2011

ದಡವಿರದ ಸಾಗರ ಭಾಗ ೨

ಅತ್ತ ಕಿರಣನ ಫೋನ್ ಆಫ್ ಆಗುತ್ತಿದ್ದಂತೆ ಇತ್ತ


ಅಭಿಯ ಫೇಸ್ ಬುಕ್ ಗೆ ಮೆಸೇಜ್ ಬಂದಿತ್ತು

"ಹಾಯ್"

ಅವನಿಗೆ ಹಾಯ್ ಮೆಸೇಜ್‍ಗಳಿಗೆ ಕೊರತೆ ಇದ್ದಿಲ್ಲವಾದರೂ ಹಾಯ್ ಹೇಳಿದ್ದ ಹುಡುಗಿಯ ಫೋಟೋ ಕಣ್ಸೆಳೆಯಿತು , ಭುಜದ ಒಂದು ಕಡೆ ಕೂದಲನ್ನೆಲ್ಲಾ ಒಗ್ಗೂಡಿಸಿ ಹರಡಿಕೊಂಡಿದ್ದಳು, ಎಳೆ ಎಳೆಯಾಗಿ ಹರಡಿದ್ದ ಕೇಶರಾಶಿಗೆ ಒತ್ತಿದಂತಿದ್ದ ದಂತದ ಬಣ್ಣದ ಮುಖ, ಅದಕ್ಕೊಪ್ಪುವ ನಗೆ, ಅರಳು ಕಂಗಳು,

ಒಂದೇ ನೋಟಕ್ಕೆ ನಿರ್ಧರಿಸಿದ , ಇವಳು ಬೇಕು ನನಗೆ

ಅಂದ ಹಾಗೆ ಆ ಹುಡುಗಿಯ ಹೆಸರು ಚಂದನಾ.............................

ಮೆಸೇಜ್ ಗೆ ರಿಪ್ಲೈ ಮಾಡಿದ

"ಹಾಯ್ ಹೌ ಆರ್ ಯು?"

********************************************************************************

ಸುಪ್ರೀತಾ ಎರೆಡನೇ ಬಾರಿಗೆ ಆ ಆಫೀಸಿಗೆ ಕಾಲಿಡುತ್ತಿದ್ದಳು

ಅಂದು ನಿರಾಕರಿಸಲ್ಪಟ್ಟಿದ್ದ ಅವಮಾನದೊಂದಿಗೆ ಹೊರಗೆ ಹೊರಟಿದ್ದಳು

ಇಂದು ಮತ್ತೆ ಒಳಗೆ ಆಹ್ವಾನಿಸಲ್ಪಟ್ಟಿದ್ದಳು

"ಸುಪ್ರೀತಾ ಎಷ್ಟು ಒಳ್ಳೆಯ ಹೆಸರು ...."ಅಮಿತಾ ತನ್ನ ಮುಂದೆ ಕೂತಿದ್ದವಳನ್ನೇ ದಿಟ್ಟಿಸುತ್ತಾ ನುಡಿದಳು

"ನಿಮ್ ನೇಮೂ ಚೆನ್ನಾಗಿದೆ ಮೇಡಮ್" ಸುಪ್ರೀತಾ ತಡವರಿಸದೇ ನುಡಿದಳು

"ಥ್ಯಾಂಕ್ಸ್. ಆದರೆ ನಾನು ನಿನ್ನಷ್ಟು ಕ್ಯೂಟ್ ಇಲ್ಲ...." ಅಮಿತಾ ಅವಳ ಮುಖವನ್ನೇ ದಿಟ್ಟಿಸುತ್ತಿದ್ದರೇ

ಸುಪ್ರೀತಾಗೆ ಮುಜುಗರ

ಏನು ಹೇಳುವುದು...

"ಮೇಡ ಮ್ ಹಾಗೇನಿಲ್ಲ......................."ನುಡಿದು ಕುತ್ತಿಗೆ ಬಗ್ಗಿಸಿದಳು .

:"ಯು ನೋ ? ನಾನು ನಿನ್ನನ್ನ ಕರೆಸಿದ್ದೇ ನಿನ್ನ ಈ ರೂಪಕ್ಕೋಸ್ಕರ, ಮುಗ್ಧತೆಗೋಸ್ಕರ ......................." ಅಮಿತಾ ನುಡಿದು ಎದ್ದುನಿಂತು ಮೇಜಿಗೆ ಒರಗಿ ಕೂತಳು

ಸುಪ್ರೀತಾ ಕಾಲುಗಳಲ್ಲಿ ನಡುಕ ಶುರುವಾಯ್ತು . ಇದೇ ಮಾತನ್ನು ಯಾವುದಾದರೂ ಗಂಡಸು ನುಡಿದಿದ್ದರೆ ಸಂತೋಷ ಪಡುತ್ತಿದ್ದಳೇನೋ

ಆದರೆ ಇಲ್ಲಿ

".........ಹೆ ಹೆ ಹೆ " ಎಂದು ಬೆಪ್ಪು ನಗೆ ತೋರಿದಳು

"ಸುಪ್ರೀತಾ ನೀನು ನಂಗೆ ಎಲ್ಲಾ ಆಗಬೇಕು ನನ್ನ ಗೆಳತಿ ನನ್ನ ಅಮ್ಮ, ನನ್ನ ಅಕ್ಕ ಜೊತೆಗೆ ನನ್ನ ಪಿ ಎ. ..........................ಆಗ್ತೀಯಾ?"

ನಗಬೇಕೋ ಅಳಬೇಕೋ ತಿಳಿಯದಾಯ್ತು ಸುಪ್ರೀತಾಗೆ

"ಸುಪ್ರೀತಾ, ನಿಂಗೊತ್ತಾ ನಾನು ಚಿಕ್ಕೋಳಿದ್ದಾಗ ಅಮ್ಮ ಸತ್ತು ಹೋದಳು , ಆಗಿಂದ ಅಪ್ಪಾನೆ ನೋಡ್ಕೋತಿದ್ದರು . ಈಗ ಒನ್ ಇಯರ್ ಬ್ಯಾಕ್ ಅವರೂ ಹೊರಟುಹೋದರು . ಅಪ್ಪ ಹಾರ್ಟ್ ಪೇಷೆಂಟ್" ಅಮಿತಾ ನಿರ್ಭಾವುಕಳಾಗಿ ಹೇಳುತ್ತಿದ್ದರೆ ಸುಪ್ರೀತಾಗೆ ಕಣ್ಣು ತುಂಬಿ ಬಂತು

"ಈಗ ನಾನು ಒಬ್ಬಂಟಿ ಒಬ್ಬಂಟಿ. ,ಮನೆ ತುಂಬಾ ಆಳುಗಳಿದ್ದಾರೆ ಆದರೆ ಅವರೆಲ್ಲಾ ಆಳಿನ ಗೆರೆಯಿಂದ ಮೇಲಕ್ಕೇರಲಾರರು. ಈಗ ನಂಗೆ ಒಬ್ಬ ಗೆಳತಿ ಬೇಕಿದೆ ನನ್ನ ನೋವನ್ನೆಲ್ಲಾ ತೋಡಿಕೊಳ್ಳೋಕೆ . ಅದೂ ಒಬ್ಬ ಮುಗ್ಧ ಗೆಳತಿ ಥೇಟ್ ನಿನ್ನ ಹಾಗೆ, "

ಸುಪ್ರೀತಾ ತಲೆ ಆಡಿಸಿದಳಷ್ಟೇ.....................

****************************************

ಆ ಚೆಲುವೆ ಕಾರಿನಿಂದ ಇಳಿಯುತ್ತಿದ್ದಂತೆ ಸುತ್ತಾ ಮುತ್ತಲ್ಲಿದ್ದ ಗಂಡಸರ ನೋಟವೆಲ್ಲಾ ಅವಳ ಮೇಲೆ,ಆ ಮೊಗದ ಮೇಲಿದ್ದ ಗತ್ತಿಗೆ ಸುತ್ತಲಿದ್ದವರೆಲ್ಲಾ ಬೆರಗಾಗಿ ನೋಡುತ್ತಿದ್ದರು

ಅವಳು ತೇಜಸ್ವಿನಿ.

ಪಿ ವಿ ಆರ್ ಗೆ ಎಂಟ್ರಿ ಕೊಟ್ಟದ್ದಳು , ಇಡೀ ಕ್ಲಾಸಿಕ್ ಸಿನಿಮಾದ ಶೋನಲ್ಲಿ ಕೇವಲ ಅವಳು ಮತ್ತವಳ ಗೆಳತಿಯರು.

ಪೂರ್ತಿ ಶೋ ಅನ್ನು ಬುಕ್ ಮಾಡಿದ್ದಳು,

ಅವಳು ಖರ್ಚಿಗೆ ಐಶಾರಾಮಿ ಜೀವನಕ್ಕೆ ಮತ್ತೊಂದು ಹೆಸರು

ಅವಳು ಕಾರಿನಿಂದ ಇಳಿದಾಗಿನಿಂದ ಪಿ ವಿ ಆರ್ ಒಳಗೆ ಹೋಗುವವರೆಗೂ ಕಣ್ಣೆರೆಡು ಹಿಂಬಾಲಿಸುತ್ತಿದ್ದವು. ಅದನ್ನು ತೇಜಾ ಸಹ ಗಮನಿಸಿದ್ದಳು...............

ನೆನ್ನೆ ಸಾಯಂಕಾಲ ಸಹ ಮನೆಯ ಮುಂದೆ ಆ ಬೈಕ್ ನಿಂತಿದ್ದನ್ನೂ ನೆನಪು ಮಾಡಿಕೊಳ್ಳುತ್ತಿದ್ದಂತೆ ಮಿಕವೊಂದು ಸಿಕ್ಕ ಸಂತೋಷ ಅವಳ ತುಟಿಯಲ್ಲಿ ಕಾಣಿಸಿತು,

****************************************************

"ಐ ಅಮ್ ಫ಼ೈನ್ ,ಕ್ಯಾನ್ ಯು ಅಕ್ಸೆಪ್ಟ್ ಮೈ ಫ್ರೆಂಡ್ ರಿಕ್ವೆಸ್ಟ್?"ಅತ್ತಲಿಂದ ಚಂದನ ಮತ್ತೆ ಕಳಿಸಿದಳು

"ಶ್ಯೂರ್" ಮೆಸೇಜ್ ಟೈಪ್ ಮಾಡಿ ಅವಳ ಫ್ರೆಂಡ್ ರಿಕ್ವೆಸ್ಟ್ ಅನ್ನು ಅಕ್ಸೆಪ್ಟ್ ಮಾಡಿದ

" ಥ್ಯಾಂಕ್ಸ್ ಫಾರ್ ಅಕ್ಸೆಪ್ಟಿಂಗ್ ... ನೀವು ಕನ್ನಡದವರಾ?" ಅತ್ತಲಿಂದ .....

"ಯೆಸ್"ಮತ್ತೆ ಟೈಪ್ ಮಾಡಿದ

"ಮತ್ಯಾಕೆ ಕನ್ನಡದಲ್ಲಿ ಉತ್ತರಿಸಲ್ಲ"

ಇದ್ಯಾವುದೋ ವಾಟಾಳ್ ನಾಗರಾಜ್ ಮೊಮ್ಮಗಳಿರಬೇಕೆಂದು ಕೊಂಡ

ಹಾಗೆ ನೋಡಿದರೆ ಅವನ ಕನ್ನಡಪೂರ್ತಿ ಇಂಗ್ಲೀಷ್ ಮಯ

ಥತ್ ಇವಳಿಗಾಗಿ ಕನ್ನಡ ಯೂಸ್ ಮಾಡ್ಬೇಕಾ ಎಂದುಕೊಂಡನಾದರೂ ಮತ್ತೆ ಸ್ವಲ್ಪ ದಿನ ಮಾತ್ರ ತಾನೆ ಪರ್ವಾಗಿಲ್ಲ ಅಡ್ಜಸ್ಟ್ ಮಾಡಿಕೊಳ್ಳೋದು ಅಷ್ಟೆ

"ಕ್ಷಮಿಸು ಸುಂದರಿ, ನಿನಗಾಗಿ ಕನ್ನಡವನ್ನೇ ಬಳಸುತ್ತೇನೆ ಸರಿಯೇ?"

"ಧನ್ಯವಾದಗಳು, ನಾನ್ಯಾರು ಅಂತ ನಿಮಗೆ ಗೊತ್ತಾ?" ಅತ್ತಲಿಂದ ಮತ್ತೆ

"ಹ್ಮ್ಮ್ ಗೊತ್ತಿಲ್ಲ .ನೀವು ಹಾಯ್ ಅಂದ್ರಿ ನಾನು ಹಾಯ್ ಅಂದೆ . ಗೊತ್ತಿಲ್ಲದವರ ಹತ್ರ ಮಾತಾಡಬಾರದಾ?"

"ಹಾಗಲ್ಲ ನಾನ್ಯಾರು ಅಂತ ಗೊತ್ತಿಲ್ಲ . ಆದರೆ ನೀವ್ಯಾರು ಅಂತ ಗೊತ್ತಿದೆ ನನಗೆ"ಅಲ್ಲಿಂದ ಬಂದ ಉತ್ತರ ಕ್ಷಣಕಾರ ವಿಚಲಿತನನ್ನಾಗಿಸಿತು

ತನಗೆ ಗೊತ್ತಿದ್ದ ಹುಡುಗಿಯರ ಮುಖಗಳನ್ನೆಲ್ಲಾ ನೆನಪಿಸಿಕೊಳ್ಳಲಾರಂಭಿಸಿದ...

"ಅಯ್ಯೊ ಸ್ವಲ್ಪ ಇರಿ, ಆಗಲೆ ನಿಮ್ಮ ಹುಡುಗಿಯರನ್ನೆಲ್ಲಾ ನೆನೆಸಿಕೊಂಡು ನನ್ನನ್ನ ಆ ಲಿಸ್ಟಿಗೆ ಹಾಕಬೇಡಿ . ನಾನು ಆ ಲಿಸ್ಟಲ್ಲಿ ಇಲ್ಲ, ಬರೋದು ಇಲ್ಲ...." ಅಲ್ಲಿ ಮೂಡುತ್ತಿದ್ದ ಅಕ್ಷರಗಳನ್ನೇ ಓದುತ್ತಿದ್ದಂತೆ ಮತ್ತೆ ಆಶ್ಚರ್ಯದಿಂದ ಕಣ್ಣರಳಿದವು



"ಹಾಗಿದ್ರೆ ನೀವು ಯಾರು ಮತ್ತೆ ಯಾಕೆ ಫ್ರೆಂಡ್ ರಿಕ್ವೆಸ್ಟ್ ಕಳಿಸಿದಿರಿ?" ಸ್ವಲ್ಪ ಖಾರವಾಗಿಯೇ ಕೇಳಿದ

"ಅದು ಮುಂದೆ ಗೊತ್ತಾಗುತ್ತೆ. ಅಲ್ಲಿವರೆಗೆ ಬಾಯ್" ಅವಳ ಸ್ಟೇಟಸ್ ಆಫ್ ಲೈನ್ ಆಯಿತು

ತಲೆಯಲ್ಲಿ ಹುಳ ಬಿಟ್ಟಂತಾಗಿತ್ತು ..............

ಯಾರು ಆ ಹುಡುಗಿ? ಅಥವ ಹುಡುಗಿಯ ಹೆಸರಿನ ಹುಡುಗನೇ?

***********************************************************************************

"ಅಮ್ಮಿ , ಆ ಹುಡುಗೀನ ಯಾಕೆ ಕೆಲಸಕ್ಕೆ ತಗೊಂಡೆ, ಅವಳನ್ನ ಬಾಣವಾಗಿ ಬಿಡ್ತೀಯಾ ಅಭಿ ಮೇಲೆ?" ಅತ್ತ ಸುಪ್ರೀತಾ ಮೆಟ್ಟಿಲಳಿಯುತ್ತಿದ್ದಂತೆ ಇತ್ತ ರವಿ ಫೋನ್ ಮಾಡಿದ್ದ

"ರವಿ ...............ಅಭಿ ಎಲ್ಲಿ? ಪಾಪದ ಈ ಹುಡುಗಿ ಎಲ್ಲಿ?, ಅಷ್ಟಕ್ಕೂ ನಾನು ನೆನ್ನೆ ಕೋಪದಲ್ಲಿ ಹೇಳಿದ್ದು , ಅಭಿ ನಾನು ಪ್ರೀತಿಸಿರೋ ಹುಡುಗ ಅವನ ಮೇಲೆ ನಾನು ರಿವೇಂಜ್ ತಗೋಳೋದೆಲ್ಲಾ ಇಲ್ಲ ಕಣೋ, ಜಸ್ಟ್ ಆವೇಶದಲ್ಲಿ ಹೇಳಿದ್ದು, ನನಗೆ ಈ ಹುಡುಗಿ ತುಂಬಾ ಇಷ್ಟ ಆದಳು ಒಳ್ಳೆ ಹೋಮ್ ಲಿ ಗರ್ಲ್, ಮನೇನ ಮೈಂಟೇನ್ ಮಾಡೋಕೆ ಅಂತ ಅವಳನ್ನ ಸೆಕ್ರೆಟರಿ ಪೋಸ್ಟಿಗೆ ರಿಜೆಕ್ಟ್ ಮಾಡಿದಾಗಲೇ ಅನ್ಕೊಂಡಿದ್ದೆ. ಸೋ ಐ ಕಾಲ್ಡ್ ಹರ್, ಅಷ್ಟೇ"ಅವಳ ತಣ್ಣಗಿನ ಮಾತುಗಳು ರವಿಯನ್ನ ಆಶ್ಚರ್ಯಕ್ಕೀಡು ಮಾಡಿದವು

"ಮತ್ತೆ ನೆನ್ನೆ ಎಲ್ಲಾ ಹಾಗೆ ಮಾಡ್ತೀನಿ ಹೀಗೆ ಮಾಡ್ತೀನಿ ಅಂತ ಕಿರುಚಾಡಿದೆ. ಈಗ ಇದೇನು ಸಡನ್ ಚೇಂಜ್?"

"ರವಿ ಸ್ಟಾಪ್ ಇಟ್ . ಅದು ಕೋಪದಲ್ಲಿ ಹೇಳಿದ್ದು, ಹೆಣ್ಣಿಗೆ ಮನಸಲ್ಲಿ ಇರೋದನ್ನ ಜೋರಾಗಿ ಕೂಗಿ ಹೊರಗಡೆ ಹಾಕಿದ್ರೆ ಅವಳ ಮನಸಲ್ಲಿ ಏನೂ ಇರಲ್ಲ , ಹಾಗಾಗೇ ನಾನೂ ಕೋಪದಲ್ಲಿ ಎಲ್ಲಾ ಕಕ್ಕಿಬಿಟ್ಟೆ, ಮನಸಲ್ಲಿ ಏನೂ ಇಲ್ಲ ಈಗ ನಾನು ಮತ್ತದೇ ತಿಳಿಕೊಳ...................................ಅಭಿನ ಕ್ಷಮಿಸಿಬಿಟ್ಟಿದ್ದೀನಿ.............."ಕರುಣಾಮಯಿಯ ದ್ವನಿ ಕೇಳಿ ರವಿಗೆ ಒಮ್ಮೆಗೇ ಗೊಂದಲವಾಯ್ತು

ನೆನ್ನೆ ಚಂಡಿಯ ಅವತಾರ ಇಂದು ಭುವಿಯ ಅವತಾರ....

ಹೆಣ್ಣಿನ ಮನಸನ್ನು ತಿಳಿಯೋಕೆ ಸಾಧ್ಯಾನೆ ಇಲ್ಲ ಎಂದನಿಸಿತು

"ಓಕೆ ಅಮ್ಮಿ ಬಾಯ್"

"ಬಾಯ್"

ಎಂದು ಮೊಬೈಲ್ ಆರಿಸಿದವಳ ಮೊಗದಲ್ಲಿ ನಗೆಯೊಂದು ಮೂಡಿತು

"ನಾನು ಯಾರನ್ನೂ ನಂಬಲ್ಲ ರವಿ ಸಾರಿ, ಎಷ್ಟೇ ಕ್ಲೋಸ್ ಆಗಿದ್ದರೂ" ಮನಸಲ್ಲಿ ಹೇಳಿಕೊಂಡಳು

ಅವಳ ಬಾಣ ಯಾರು ?

ಗುರಿ ಯಾರತ್ತ?

ಬಾಣವನ್ನಾಗಲೇ ಆರಿಸಿದ್ದಾಗಿತ್ತು

ಗುರಿಯೂ ಸ್ಪಷ್ಟವಾಗಿತ್ತು............

ಮುಂದಿನ ಹೆಜ್ಜೆ




ಬಾಣಕ್ಕೆ ತಕ್ಕ ಬಿಲ್ಲನ್ನು ಹುಡುಕುವುದು

ಬಿಲ್ಲೆಂದರೆ ಎಳೆದಷ್ಟೂ ಬಗ್ಗುವ ಆದರೆ ಎಲ್ಲೂ ಮುರಿಯದಂತಹುದು

******************************************* ***************************** *******************************

5 comments:

  1. ರೂಪಾ ಮೇಡಂ,
    ಕತೆಯ ಮುಂದುವರೆದ ಭಾಗ ಚನ್ನಾಗಿದೆ. ಕುತೂಹಲ ಇಮ್ಮುಡಿಯಾಗುತ್ತಿದೆ.

    ReplyDelete
  2. ಕಥನ ಶೈಲಿಯಲ್ಲೇ ಕುತೂಹಲಕರ ಅಂಶಗಳಿವೆ. ಮುಂದುವರೆಸಿ ಮೇಡಂ.
    ಬಿಡುವು ಮಾಡಿಕೊಂಡು ನನ್ನ ಬ್ಲಾಗುಗಳಿಗೂ ಬನ್ನಿರಿ:
    www.badari-poems.blogspot.com
    www.badari-notes.blogspot.com
    www.badaripoems.wordpress.com

    Face book Profile : Badarinath Palavalli

    ನಿಮ್ಮ ಓದಿಗೆ ನನ್ನ ಕವನಗಳು ಕಾದಿವೆ ಮತ್ತು ನಿಮ್ಮ ಅಭಿಪ್ರಾಯದ ಕಾಮೆಂಟುಗಳು ನನಗೆ ದಾರಿ ದೀಪ.

    ReplyDelete
  3. ತುಂಬಾ ಚೆನ್ನಾಗಿದೆ ಮೇಡಂ.. ಏನು ಬರೆದಿದ್ದೀರಾ..! ಹಾಗಂತ ನಾನು ಉದ್ಘಾರವೆತ್ತಬೇಕು.ಆದರೆ ನಾನು ಹಾಗೆ ಎತ್ತುವುದೇ ಇಲ್ಲ.ಏಕೆಂದರೆ, ಮುಂದೆ ನೀವು ಬರೆಯುವ ಕಥೆ ಭಾವಸ್ವಾಧವನ್ನು ಕಳೆದುಕೊಳ್ಳಬಹುದು. ಚೆನ್ನಾಗಿದೆ ಅಷ್ಟೇ ಸಾಕು.ಕಥೆ ಕಲ್ಪನೆಯ ಮೂಸೆಯಲ್ಲಿ ಬೆಳೆದು ವಾಸ್ತವದ ತೀವ್ರತೆಯಲ್ಲಿ ಹಚ್ಚಿ ಹೊತ್ತಿಸುವುದನ್ನು ನಾನು ಎದುರು ನೋಡುತ್ತೇನೆ.ಮಾನ್ಯ ಅಬ್ದುಲ್‍ ರಷೀದರ ಕಥೆಯನ್ನೂ ನಾನು ತಪ್ಪು ಹೆಕ್ಕದೆ ಬಿಟ್ಟವನಲ್ಲ.ಕಥೆ ಯಾವತ್ತೂ ಬರೆದವರು ಬರೆದಂತೆ ಕಥೆಯಾಗಬೇಕು, ಅದೇ ರೀತಿ ಓದುವ ಓದುಗರು ಓದುತ್ತಿದ್ದಂತೇ ಅದರೊಳಗೆ ಕಥೆಯಾಗಬೇಕು.ನಿಮಗೆ ಶುಭವಾಗಲಿ.

    ReplyDelete
  4. ರೂಪಾ...ಕಥೆಗೆ ಈಗೀಗ ದಿಶೆ ಸಿಕ್ತಾ ಇದೆ ಅನ್ಸುತ್ತೆ...ಮುಂದುವರೀಲಿ...ನಿಮ್ಮ ಕರಾಮತ್ತು....

    ReplyDelete
  5. ರೂಪರವರೆ,

    ಕತೆ ಚೆನ್ನಾಗಿ ಬರೆಯುತ್ತಿದ್ದೀರಿ...ಮುಂದುವರಿಸಿ...

    ReplyDelete

ರವರು ನುಡಿಯುತ್ತಾರೆ